ಸದಸ್ಯ:Divyashree 123456/sandbox
ಅರೆವಾಹಕಗಳು
ಲೋಹಗಳು ಒಳ್ಳೆಯ ವಿದ್ಯುದ್ವಾಹಕಗಳೆಂದು ನೀವು ತಿಳಿದಿರುವಿರಿ. ಗಾಜು, ಪ್ಲಾಸ್ಟಿಕ್, ಪಿಂಗಾಣಿ ಮುಂತಾದ ವಸ್ತುಗಳು ನಿರೋಧಕಗಳು. ಜರ್ಮೇನಿಯಂ ಮತ್ತು ಸಿಲಿಕಾನ್ ನಂತಹ ಕೆಲವು ವಸ್ತುಗಳು ಒಳ್ಳೆಯ ವಾಹಕಗಳೂ ಅಲ್ಲ ಮತ್ತು ನಿರೋಧಕಗಳೂ ಅಲ್ಲ. ಅವುಗಳ ವಾಹಕತೆಯು ವಾಹಕಗಳ ಮತ್ತು ನಿರೋಧಕಗಳ ನಡುವೆ ಇರುತ್ತದೆ. ಇಂತಹ ವಸ್ತುಗಳನ್ನು ಅರೆವಾಹಕಗಳೆಂದು ಕರೆಯುತ್ತಾರೆ.
ಅರೆವಾಹಕಗಳ ವಾಹಕತೆ : ಸಿಲಿಕಾನ್ ಮತ್ತು ಜರ್ಮೇನಿಯಂ ಪರಮಾಣುಗಳ ಅತಿಹೊರಗಿನ ಕವಚದಲ್ಲಿ ನಾಲ್ಕು ಇಲೆಕ್ಟ್ರಾನ್ ಇರುವುದು ನಿಮಗೆ ತಿಳಿದಿದೆ. ಈ ಎಲ್ಲ ಇಲೆಕ್ಟ್ರಾನುಗಳು ಕೋವೇಲೆಂಟ್ ಬಂಧಗಳಿಗೆ ಒಅಳಪಟ್ಟಿರುವುದರಿಂದ ಸ್ವತಂತ್ರವಾಗಿಲ್ಲ. ಆದ್ದರಿಂದ ಈ ಧಾತುಗಳು ನಿರೋಧಕಗಳಂತೆ ವರ್ತಿಸಬೇಕು.
ಆದರೂ ಇಂತಹ ಸಂದರ್ಭದಲ್ಲಿ ಬೆಳಕು ಅಥವಾ ಶಾಖದಂತಹ ಶಕ್ತಿಯ ಅಲ್ಪಪ್ರಮಾಣವು ಕೋವೇಲೆಂಟ್ ಬಂಧಗಳನ್ನು ಒಡೆದು ಇಲೆಕ್ಟ್ರಾನನ್ನು ಚಲಿಸಲು ಬಿಡುಗಡೆ ಮಾಡಬಹುದು. ಹೀಗೆ ಸಾಮಾನ್ಯ ತಾಪದಲ್ಲಿಯೂ ಸಾಕಷ್ಟು ಸಂಖ್ಯೆಯ ಇಲೆಕ್ಟ್ರಾನುಗಳು ಪರಮಾಣುಗಳಿಂದ ವಿಯೋಜಿಸಲ್ಪಡುತ್ತವೆ. ತಾಪದ ಹೆಚ್ಚಳದೊಂದಿಗೆ ಇವುಗಳ ಸಂಖ್ಯೆಯೂ ಹೆಚ್ಚುತ್ತದೆ. ಈ ಕಾರಣದಿಂದ ಇವು ವಾಹಕತ್ವವನ್ನು ತೋರಿಸುತ್ತವೆ.
ಒಂದು ಕೋವೇಲೆಂಟ್ ಬಂಧದಿಂದ ಒಂದು ಇಲೆಕ್ಟ್ರಾನನ್ನು ಬೇರ್ಪಡಿಸಿದಾಗ, ಧನಾವೇಶಕ್ಕೆ ಸಮನಾದ ಖಾಲಿ ಅವಕಾಶ ಏರ್ಪಡುತ್ತದೆ. ನೆರೆಯ ಪರಮಾಣುನಿಂದ ಒಂದು ಎಲೆಕ್ಟ್ರಾನು ಈ ಖಾಲಿ ಅವಕಾಶಕ್ಕೆ ಬಿದ್ದು, ನೆರೆಯ ಪರಮಾಣುನಿಂದ ಒಂದು ಇಲೆಕ್ಟ್ರಾನು ಈ ಖಾಲಿ ಅವಕಾಶಕ್ಕೆ ಬಿದ್ದು, ನೆರೆಯ ಪರಮಾಣುವಿನಲ್ಲಿ ಖಾಲಿ ಅವಕಾಶವೇರ್ಪಡಿಸಬಹುದು. ಈ ರೀತಿ ಖಾಲಿ ಅವಕಾಶವು ಚಲಿಸಬಲ್ಲದು ಮತ್ತು ಒಂದು ಅಧಿಕ ಆವೇಶ ವಾಹಕವಾಗಿ ಕೆಲಸ ಮಾಡಬಲ್ಲದು ಇದನ್ನು ರಂಧ್ರ ಎನ್ನುತ್ತಾರೆ.
ಅರೆವಾಹಕಗಳ ವಿಧಗಳು : ಒಂದು ಶುದ್ಧ ಅರೆವಾಹಕದಲ್ಲಿ ರಂಧ್ರ ಗಳು ಮತ್ತು ಇಲೆಕ್ಟ್ರಾನ್ ಗಳು ಸಮಾನ ಸಂಖ್ಯೆಯಲ್ಲಿರುತ್ತವೆ. ಇದರಿಂದುಂಟಾಗಿವ ವಾಹಕ್ತೆಯನ್ನು ಸಹಜ ವಾಹಕತೆ ಎನ್ನುತ್ತಾರೆ. ಶುದ್ಧ ಅರೆವಾಹಕಗಳು ಸಹಜ ಅರೆವಾಹಕಗಳು. ಅರೆವಾಹಕಗಳ ವಾಹಕತೆಯನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೆರಕೆ ಮಾಡಿ ಹೆಚ್ಚಿಸಬಹುದು. ಈ ಬೆರಕೆಗಳಿಗೆ ಡೋಪೆಂಟ್ ಎಂದು ಹೆಸರು. ಇದರಿಂದ ಲಭಿಸುವ ಅರೆವಾಹಕವನ್ನು ಅಸಹಜ ಅರೆವಾಹಕವೆಂದೂ ಕರೆಯುತ್ತಾರೆ.
೧) ಎನ್ ರೀತಿಯ ಅರೆವಾಹಕಗಳು ೨) ಪಿ ರೀತಿಯ ಅರೆವಾಹಕಗಳು