ಸದಸ್ಯ:Disha Shetty123/sandbox
ಗೋಚರ
ವಿಮೆ
ಮನುಷ್ಯನ ಜೀವ ಮತ್ತು ಸೊತ್ತುಗಳು ಹಲವು ಬಗೆಯ ಅನಿಶ್ಚಿತತೆಗಳಿಗೆ ಒಳಪಟ್ಟಿವೆ. ಸಾವು,ಅನಾರೋಗ್ಯ,ಬೆಂಕಿ,ದರೋಡೆ, ವಯ್ಯಕ್ತಿಕ ಅಪಘಾತ,ಅವಘಡ,ಭೂಕಂಪ,ನೆರೆ,ಬರ, ಭಯೋತ್ಪಾದನೆ,ಸಾಗರದ ಮಧ್ಯೆ ಎದುರಾಗಬಹುದಾದ ನಾನಾ ಬಗೆಯ ಗಂಡಾಂತರ, ಸುನಾಮಿ ಅಲೆ ಇತ್ಯಾದಿ ಊಹಿಸಲು ಸಾಧ್ಯವಿಲ್ಲದಷ್ಟು ಎಷ್ಟೋ ಬಗೆಯ ದುಘ೯ಟನೆಗಳಿಗೆ ನಮ್ಮ ದೈನಂದಿನ ಜೀವನ ಒಳಪಟ್ತಿದೆ.ನಾವು ವಾಸಿಸುತ್ತಿರುವ ಮನೆಯಾಗಲಿ,ಪ್ರಯಾಣಿಸುತ್ತಿರುವ ವಾಹನವಾಗಲಿ,ಅವುಗಳು ಸುರಕ್ಷಿತವಾಗಿರುವವರೆಗೆ ಮಾತ್ರ ಅವುಗಳಿಂದ ನಮಗೆ ಪ್ರಯೋಜನಸಿಗುತ್ತದೆ. ಯಾವುದೇ ಒಂದು ನಿಶ್ಚಿತ ಅಥವಾ ಅನಿಶ್ಚಿತ ಘಟನೆಯಿಂದ ಅದಕ್ಕೆ ಹಾನಿಯಾದರೆ ಅಥವಾ ಅದು ನಾಶಗೊಂಡಲ್ಲಿ ಅವುಗಳಿಗೆ ಯಾವುದೇ ಬಗೆಯ ಆಥಿ೯ಕ ಮೌಲ್ಯವಿರುವುದಿಲ್ಲ.ನಮಗೆ ಆ ಸಂದಭ೯ದಲ್ಲಿ ಯಾವುದೇ ಹೆಚ್ಚುವರಿ ಖಚಿ೯ಲ್ಲದೆ ನಷ್ಟವಾದ ಸರಕಿನ ಅಥವಾ ಸೊತ್ತಿನ ಮರುಸ್ಥಾಪನೆಯಾಗಬೇಕಾಗುತ್ತದೆ. ಈ ರೀತಿಯ ಒಂದು ಹಣಕಾಸಿನ ಭದ್ರತೆಯನ್ನು ನೀಡುವ ವಾಣಿಜ್ಯದ ಒಂದು ಪ್ರಮುಖ ಕಾಯಕವೇ "ವಿಮೆ"ಯಾಗಿರುತ್ತದೆ. ಮನುಷ್ಯನು ತಾನು ಒಳಗಾಗಲಿರುವ ಕೆಲವು ಅಪಾಯಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಇರುವ ಸಾಧನವೇ ವಿಮೆ.ಒಬ್ಬ ವ್ಯಕ್ತಿ ತನ್ನ ಅಪಾಯಗಳ ಸಂಭಾವ್ಯತೆಯನ್ನು ಇನ್ನೊಬ್ಬರಿಗೆ ವಗಾ೯ಯಿಸಿ ತನಗಾಗುವ ಸಂಭವನೀಯ ನಷ್ಟ ಅಥವಾ ಹಾನಿಗಳಿಗೆ ಪರಿಹಾರವನ್ನು ಪಡೆದು ಸುರಕ್ಷತೆಯನ್ನು ಹೊಂದಬಹುದಾದ ಸಾಧನವೇ ವಿಮೆ.ವಿಮೆಯನ್ನು "ಓವ೯ ವ್ಯಕ್ತಿಯು(ವಿಮಾಕತೃ೯) ಇನ್ನೊಬ್ಬ ವ್ಯಕ್ತಿಯಿಂದ(ವಿಮಾದಾರ) ಪ್ರತಿಫಲ ರೂಪದಲ್ಲಿ ವಿಮಾ ಕಂತನ್ನು ಪಡೆದು ಯಾವುದೇ ಒಂದು ನಿದಿ೯ಷ್ಟ ಘಟನೆಯು ಸಂಭವಿಸಿದಾಗ ನಿಗದಿತ ಮೊತ್ತವನ್ನು ಕೊಡುವ ಅಥವಾ ಒಂದು ಅನಿರೀಕ್ಷಿತ ಘಟನೆಯಿಂದಾದ ನಷ್ಟವನ್ನು ಭರಿಸುವುದಾಗಿ ಮಾಡಿಕೊಂಡ ಕರಾರು" ಎಂದು ವಿಮೆಯನ್ನು ವ್ಯಾಖ್ಯಾನಿಸಬಹುದು.ಮುಂದೆ ಸಂಭವಿಸಬಹುದಾದ ಅನಾಹುತ ಅಥವಾ ಅನಿಶ್ಚಿತತೆಗಳ ನಷ್ಟ ಪರಿಹಾರಕ್ಕಾಗಿ ಮಾಡಿರುವಂತಹ ಮುನ್ನೆಚ್ಚರಿಕೆಯ ವಿಧಾನವೇ ವಿಮೆಯಾಗಿರುತ್ತದೆ.