ಸದಸ್ಯ:Disha1940460/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

.

ಸಿರಸಿಯ ಮಧುಕೇಶ್ವರ ದೇವಸ್ಥಾನ
ಸುಂದರ ಕಿನಾರೆಯ ಕಾರವಾರ ಕಡಲತೀರ
ನಯನಮನೊಹರ ತಾಣ ಯಾಣ
ಸಾಥೋಡಿ ಜಲಪಾತದ ದೃಶ್ಯ
ಮುರುಡೇಶ್ವರದ ಶಿವನ ಗಂಭೀರ ನೋಟ

ನನ್ನ ಹೆಸರು ದಿಶಾ.ನನ್ನ ತಂದೆ ಮೊಹನ, ತಾಯಿ ಸುಜಾತ.ಇಬ್ಬರೂ ಸರ್ಕಾರಿ ನೌಕರರು.ನನ್ನ ತಮ್ಮನ ಹೆಸರು ಸಾತ್ವಿಕ. ನಮ್ಮದು ಕರಾವಳಿಯ .ಸುಂದರ ಜಲಪಾತಗಳ,ಸಮುದ್ರ ಕಿನಾರೆಗಳ,ಉತ್ತರ ಕನ್ನಡ ನಮ್ಮ ಜಿಲ್ಲೆ.ನನ್ನ ಊರು ಮೂಲತಃ 'ಕರ್ನಾಟಕದ ಬಾರ್ಡೊಲಿ' ಎಂದೇ ಕರೆಯಲ್ಪಡುವ ಅಂಕೋಲಾ, ಆದರೆ ಪ್ರಸ್ತುತ ವಾಸಿಸುತ್ತಿರುವುದು ಹೊನ್ನಾವರದಲ್ಲಿ.ಬಾಲ್ಯದ ಎಲ್ಲಾ ನೆನಪುಗಳು ಇರುವುದು ನನ್ನ ಕಾರವಾರದಲ್ಲೇ.ನಮ್ಮದು ಅನುಕೂಲಸ್ಥ ಕುಟುಂಬವಾದರೂ ನನ್ನ ಅಪ್ಪ ಅಮ್ಮ ತಮ್ಮ ಹಿಂದಿನ ದಿನಗಳನ್ನು ಮರೆತಿಲ್ಲ.ಬೇರೆಯವರ ಗದ್ದೆಗಳಲ್ಲಿ ದುಡಿದು ನಮ್ಮ ಅಜ್ಜಿ ನಮ್ಮಪ್ಪನನ್ನು ಸಾಕಿದ್ದು,ನಮ್ಮ ಅಜ್ಜ ಗಾರ್ಡ್ ಆಗಿದ್ದಾಗ ನನ್ನ ಅಮ್ಮನನ್ನು ಸಮಾಜ ನಡೆಸಿಕೊಂಡ ರೀತಿಯನ್ನು ಹೇಳುತ್ತಾ ಬೆಳೆಸಿದ್ದರಿಂದ ಸ್ವಲ್ಪ ಮಟ್ಟಿಗಿನ ಸರಳತೆ ಬೆಳೆಸಿಕೊಂಡಿದ್ದೇನೆ.ಅಮ್ಮನಿಗೆ ನಾನು ಎರಡನೇ ಇಯತ್ತೆಯಲ್ಲಿ ಇರುವಾಗ ಕೆಲಸ ಸಿಕ್ಕಾಗ ಶಿವಮೊಗ್ಗಕ್ಕೆ ಹೊಗಬೇಕಾಗಿ ಬಂತು, ಆವಾಗ ನಮ್ಮನ್ನು ತಾಯಿಯಂತೆ ಸಲಹಿದವರು ನನ್ನ ಅಜ್ಜ,ತಾಯಿಯ ತಂದೆ.ಅವರು ನನಗೆ ಜಡೆ ಹಾಕಿಕೊಡುತ್ತಿದ್ದ ದಿನಗಳ ನೆನಪು ಇನ್ನೂ ಹಸಿಯಾಗಿದೆ.

ನಾನು ಚಿಕ್ಕವಳಿದ್ದಾಗ ನಮ್ಮ ಗಣಪತಿ ಸರ್ ಅಂದ್ರೆ ನನಗೆ ತುಂಬಾ ಪ್ರೀತಿ.ಆರನೇ ಕ್ಲಾಸಿಗೆ ಬಂದಾಗ ಹೊಸಾ ಶಾಲೆಯಲ್ಲಿ ಸಿಕ್ಕಿದವ್ರು ಗಣೇಶ ಸರ್.ನಮ್ಮಲ್ಲಿ ದೇಶದ ಬಗ್ಗೆ ಅಭಿಮಾನ ತುಂಬಿದವರೆ ಅವರು.ಹತ್ತನೆ ತರಗತಿಯಲ್ಲಿ ಜಯನ್ಥ್ ಸರ್ ಗಣಿತವನ್ನು ಸುಂದರವಾಗಿ ಪಾಠ ಮಾಡುತ್ತಿದ್ದರು. ಪಿಯುಸಿಯಲ್ಲಿ ಚಕ್ರವರ್ತಿ ಸೂಲಿಬೆಲೆಯವರ ಮಾತು ಕೇಳಿ ಸ್ವಾಮಿ ವಿವೇಕಾನಂದರ ಆದರ್ಶಗಳತ್ತ ಆಕರ್ಶಿತಳಾದೆ,ಯೂಟ್ಯೂಬಿನಲ್ಲಿ ಸದ್ಗುರು ವಿಚಾರಧಾರೆ ಹಿಡಿಸಿತು.ಈ ಎಲ್ಲ ಗುರುಗಳಿಂದ ನನ್ನ ಜೀವನದ ಗುರಿ ಹಂತ ಹಂತವಾಗಿ ಬದಲಾಗಿದೆ. ಬಾಲ್ಯದಲ್ಲಿ ನಾನೊನ್ದು ದಿನ ಪ್ರಸಿದ್ದ ವ್ಯಕ್ತಿ ಯಾಗಬೆಕೆಂಬ ಗುರಿ ಇತ್ತು. ಆದರೆ ನನ್ನ ಸುತ್ತಮುತ್ತಲೇ ಎಲೆ ಮರೆಯ ಕಾಯಿಯ ಹಾಗೆ ಸಮಾಜದ ಸೇವೆ ಮಾಡುತ್ತಿರುವವರನ್ನು ನೋಡಿದೆ.ಆಗ ನಾನು ಸಮಜಕ್ಕೊಸ್ಕರ ಏನಾದರು ಮಾಡಬೇಕೆಂಬ ಆಸೆ ಹುಟ್ಟಿತು. ಅದೆಲ್ಲಾ ತುಂಬಾ ಕಶ್ಟದ ಕೆಲಸ ಎಂಬ ವಿಚಾರ ಬಂದಾಗ,೨೪ನೇ ವಯಸ್ಸಿಗೇ ಮುಖದಲ್ಲಿ ಮಿನುಗುವ ಮಂದಹಾಸದೊಂದಿಗೆ ಗಲ್ಲಿಗೇರಿದ ಭಗಥ್ ಸಿಂಘ್ ನೆನಪಾದ,ತಮ್ಮ ಇಡೀಜೀವನವನ್ನು ಮಾನಸಿಕ ಅಸ್ವಸ್ಥರ ಕಲ್ಯಾಣಕ್ಕೆ ಶ್ರಮಿಸಿದ ನೋಬೆಲ್ ಶಾಂತಿ ಪುರಸ್ಕ್ರತ ಭರತ್ ವಟವಾನಿಯ ಬಗ್ಗೆ ತಿಳಿದೆ,ಸಾವಿರಾರು ಮರಗಳನ್ನು ಮಕ್ಕಳಂತೆ ಬೆಳೆಸಿದ ಸಾಲು ಮರದ ತಿಮ್ಮಕ್ಕ ಕಣ್ಣ ಮುಂದೆ ಬಂದಳು.ಆಗ ವಿವೇಕಾನಂದರ ನುಡಿ ಗುನುಗುನಿಸಿತು'ನಮ್ಮ ದೇಶದ ಆದರ್ಶ ತ್ಯಾಗ ಮತ್ತು ಸೇವೆ. ನಮ್ಮದು ಭೊಗಭೂಮಿಯಲ್ಲ, ತ್ಯಾಗಭೂಮಿ.' ನನ್ನ ಪ್ರಕಾರ ಪ್ರತಿ ಗಳಿಗೆಯನ್ನು ಅನಂದದಿಂದ ಕಳೆಯುವುದು ಮುಖ್ಯ.ನಮ್ಮಲ್ಲಿ ಸಕಲ ಸಂಪತ್ತಿದೆ ಅದರೆ ಶಾಂತಿ,ಸಮಾಧಾನ ಇಲ್ಲವೆಂದರೆ ಅದು ನಿರರ್ಥಕ ಬದುಕು.ನಾನು ಉಡುಪಿಯಲ್ಲಿ ಕಾಲೇಜಿಗೆ ಹೊಗುವಾಗ,ಅನೇಕ ಜನರನ್ನು ಭೇಟಿ ಮಾಡಿ ಸ್ಪೂರ್ತಿ ಪಡೆದಿದ್ದೇನೆ. ಅವರಲ್ಲಿ ಶೋಧಾ ಅಕ್ಕನೂ ಒಬ್ಬರು.ಮದುವೆಯಾಗಿ ಐದೇ ವಸಂತಗಳಲ್ಲಿ ಪ್ರೀತಿಯ ಗಂಡನನ್ನು ಕಳೆದುಕೊಂಡರೂ ಎಲ್ಲಾ ನೋವನ್ನು ಮನದಲ್ಲೇ ಸಹಿಸಿಕೊಂಡು,ತಮ್ಮ ಮಕ್ಕಳಲ್ಲಿ ತಂದೆ ಇಲ್ಲ ಎಂಬ ಭಾವನೆ ಬರದಂತೆ ಬೆಳೆಸುತ್ತಿದ್ದಾರೆ.ಅವರ ಮುಖದಲ್ಲಿ ನಗು ಇರದ ದಿನವನ್ನೇ ನಾನು ನೊಡಿಲ್ಲ.ಸದಾ ಚೈತನ್ಯದ ಚಿಲುಮೆಯಂತಿರುವ ಅವರನ್ನು ನೋಡಿದಾಗಲೆಲ್ಲಾ ಮೈಯಲ್ಲಿ ಶಕ್ತಿ ತುಂಬುತ್ತದೆ.ಯಾವ ತೊಂದರೆ ಬಂದರೂ ಎದರಿಸುವ ಧೈರ್ಯ ಬರುತ್ತದೆ.ಅನೇಕ ತೊಂದರೆಗಳನ್ನು ದಾಟಿ ಬಂದ ನನ್ನ ಕೆಲವು ಸ್ನೇಹಿತರನ್ನು ಕಂಡಾಗ ನನ್ನ ಮುಂದಿರುವ ಸವಾಲುಗಳೆಲ್ಲಾ ನಗಣ್ಯವೆನಿಸುತ್ತದೆ.

ಸದ್ಯದ ಮಟ್ಟಿಗೆ ನನ್ನ ಗುರಿಯೆಂದರೆ,ನಮ್ಮ ದೇಶ, ನಮ್ಮ ಸಂಸ್ಕೃತಿಯ ಬಗ್ಗೆ ಹೆಚ್ಚು ತಿಳಿಯುವುದು,ಪ್ರಕೃತಿ ಮಾತೆಯ ಉಳಿವಿಗೆ ಏನನ್ನಾದರು ಮಾಡುವುದು,ಸಮಾಜಕ್ಕೆ ಏನನ್ನಾದರು ಅಳಿಲು ಸೇವೆ ಮಾಡಲು ಯತ್ನಿಸುವುದು. ಸ್ವಾಮಿ ವಿವೇಕಾನಂದರ ಮಾತಿನಿಂದ ಈ ಲೇಖನ ಮುಗಿಸುತ್ತೇನೆ,'ತುಕ್ಕು ಹಿಡಿದು ನಾಶವಾಗುವುದಕ್ಕಿಂತ, ಸವೆದು ಹೋಗುವುದೇ ಲೇಸು....'


ನನ್ನ ಊರು:

ಉಂಚಳ್ಳಿ ಜಲಪಾತದ ಭೋರ್ಗರೆತ
ಕೊಂಕಣ ರೈಲ್ವೇ,

ನನ್ನ ಊರು ಹಸಿರಿನ ತವರು....ನನ್ನ ಊರು ಜಲಪಾತಗಳ ಆಗರ.....ಸಮುದ್ರದ ಅಲೆಗಳ ನಾದ ನಮಗೆ ತುಂಬಾ ಆಪ್ತ...

ಆದರೆ ಅಭಿವೃದ್ಧಿಯ ನೆಪದಲ್ಲಿ ಈ ಪ್ರಕೃತಿಯ ಚೆಲುವು ನಾಶವಾಗುತ್ತಲಿದೆ...

ಇದ್ದನ್ನು ಉಳಿಸಿಕೊಳ್ಳಲು ನನಗೆ ಸಾಧ್ಯವಾದಷ್ಟು ಪ್ರಯತ್ನಿಸುವೆ....

ಓಮ್ ಬೀಚ್
ಶರಾವತಿ ನದಿ.
ಶ್ರಿ ರಾಮಚಂದ್ರ ಚಿಟ್ಟಾಣಿ
ಚಿಟ್ಟಾಣಿಯವರ ಭಾವಪರವಶಗೊಳಿಸುವ ನೋಟ
ದಿನಕರ ದೇಸಾಯಿ
ಯಶವಂತ ಚಿತ್ತಾಲರು
ಶಂಕರ್ ನಾಗ್





ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿರುವ ಜಗತ್ತಿನ ಎರಡನೇ ಅತಿ ದೊಡ್ಡ ಶಂಕರನ ಪ್ರತಿಮೆ......






ಉನ್ಛಳ್ಳಿ ಜಲಪಾತ......







ಕೊಂಕಣ ರೈಲ್ವೇಯಲ್ಲಿಯ ಪಯಣ....ಆಹಾ ಪ್ರಕೃತಿಯ ಬೆಡಗು ಬಿನ್ನಾಣ......







ಓಂಕಾರದ ಆಕಾರದಲ್ಲಿರುವ ಗೋಕರ್ಣದ ಕಡಲ ಕಿನಾರೆ

ಸುಕ್ರಜ್ಜಿ.....








ಜೋಗದ ಹಿಂದಿನ ಶಕುತಿ....ಜೀವನದಿ ಶರಾವತಿ.....








ಉತ್ತರಕನ್ನಡದ ಪ್ರಮುಖ ವ್ಯಕ್ತಿತ್ವಗಳು:



ಚಿಟ್ಟಾಣಿ ರಾಮಚಂದ್ರ ಹೆಗಡೆ ಯಕ್ಷಗಾನವೆಂಬ ಗಂಡುಗಲೆಯನ್ನು ಉಸಿರಾಗಿಸಿಕೊಂಡ ಅಪರೂಪದ ಸಾಧಕ....












ಚುಟುಕು ಬ್ರಹ್ಮ ಎಂದೇ ಖ್ಯಾತಿ ಪಡೆದ ಅಂಕೋಲೆಯ ದಿನಕರ ದೇಸಾಯಿ.....



ಕರ್ನಾತಕದ ಬಾರ್ಡೊಲಿ


ಕದಂಬ ಸಾಮ್ರಾಜ್ಯ








ಕರ್ನಾಟಕದ ಪ್ರಮುಖ ಚಿಂತಕರಾಗಿ ಬೆಳೆದ ಕುಮಟೆಯ ಯಶವಂತ ಚಿತ್ತಾಲರು.......








ಹೊನ್ನಾವರದಲ್ಲಿ ಹುಟ್ಟಿ ಬೆಳೆದ ನಮ್ಮ ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಪ್ರತಿಭೆ ಆಟೊರಾಜ ಶಂಕರ್ ನಾಗ್.....

ಕನ್ನಡದ ಶ್ರಿಮಂತ ಜನಪದ ಸಂಸ್ಕ್ರತಿಯನ್ನು ಮುನ್ನಲೆಗೆ ತಂದ ಸುಕ್ರಿ ಬೊಮ್ಮ ಗ್ಉಡ













ನಮ್ಮ ಜಿಲ್ಲೆಯ ಬಗೆಗಿನ ಹೆಮ್ಮೆಯ ಸಂಗತಿಗಳು:

ಮಹಾತ್ಮ ಗಾಂಧಿಯವರು ಅಂಕೋಲಾದಲ್ಲಿ ನಡೆಸಿದ ಉಪ್ಪಿನ ಸತ್ಯಾಗ್ರಹದಿಂದ ಅಂಕೋಲೆಯನ್ನು

ಕರ್ನಾಟಕದ ಬಾರ್ಡೋಲಿ ಎನ್ನುತ್ತಾರೆ





ಪ್ರಥಮ ಕನ್ನಡದ ವಂಶವಾದ ಕದಂಬ ವಂಶದ ಸಂಸ್ಥಾಪಕ ಮಯೂರ ವರ್ಮ ಈಗಿನ ಸಿರಸಿಯ ಬನವಾಸಿಯನ್ನು

ತನ್ನ ರಾಜಧಾನಿಯಾಗಿಸಿದ್ದ