ಸದಸ್ಯ:Desai Gururaj

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುರುರಾಜ ದೇಸಾಯಿ ಎಪ್ರಿಲ್ 16 ರಂದು 1985ರಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ‌ ತಲ್ಲೂರು ಗ್ರಾಮದಲ್ಲಿ ಜನಸಿದರು. ಸ್ವಾತಂತ್ರ್ಯ ಹೋರಾಟಗಾರ ರಾಮಚಂದ್ರರಾವ್ ದೇಸಾಯಿ ಗುರುರಾಜ ದೇಸಾಯಿವರ ಅಜ್ಜ. ನರಸುಬಾಯಿ ದೇಸಾಯಿ ಅಜ್ಜಿ, ತಂದೆ ನಾರಾಯಣರಾವ್ ದೇಸಾಯಿ, ತಾಯಿ ಮಧುಮತಿ ದೇಸಾಯಿ, ಅಣ್ಣಂದಿರು ಶ್ರೀನಿವಾಸ ದೇಸಾಯಿ, ಗೋಪಾಲ ದೇಸಾಯಿ, ಅಕ್ಕ ಸುಧಾ ಇವರ ಪ್ರೀತಿಯಲ್ಲಿ ಬೆಳೆದರು.

ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮ ತಲ್ಲೂರಿನಲ್ಲಿ ಪೋರೈಸಿದರು. ಹಿರಿಯ ಪ್ರಾಥಮಿಕ ಶಾಲೆ ಇಲ್ಲದ ಕಾರಣ ಅವರ ಅಜ್ಜಿಯ ಸಹೋದರನ ಮನೆಯಲ್ಲಿ 5ರಿಂದ 7 ನೇ ತರಗತಿಯವರೆಗೆ ಓದಿದರು.ಗುರುರಾಜ ರಾವ್ ಕುಲಕರ್ಣಿ ಹಾಗೂ ಪದ್ಮಾವತಿ ಕುಲಕರ್ಣಿ ಇವರ ಅಕ್ಕರೆಯಲ್ಲಿ ಬೆಳೆದರು. ನಂತರ ಪ್ರೌಢ ಶಾಲಾ ಶಿಕ್ಷಣವನ್ನು ಕುಷ್ಟಿಗಿಯಲ್ಲಿ ಇವರ ಮಾವ ಭೀಮರಾವ್ ಕುಲಕರ್ಣಿ, ಅತ್ತೆ ರೇಣುಕಾ ಇವರ ಆಶ್ರಯದಲ್ಲಿ ಬೆಳೆದರು.