ಸದಸ್ಯ:Deepak k s
ಪರಿಚಯ
[ಬದಲಾಯಿಸಿ]ಆಳ್ವಾಸ್ ಸ೦ಸ್ಥೆಯ ಸ೦ಸ್ಥಾಪಕರಾದ ಡಾ. ಮೋಹನ್ ಆಳ್ವರವರು ೩೧ ಮೇ ೧೯೫೨ರ೦ದು ಜನಿಸಿದರು. ಇವರು ಮೂಡಬಿದಿರೆಯ ಮಿಜಾರು ಗ್ರಾಮದಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಮಿಜಾರುಗುತ್ತು ಮೋಹನ್ ಆಳ್ವ. ಇವರು ಪ್ರಾಥಮಿಕ ಶಿಕ್ಷಣವನ್ನು ತಮ್ಮ ಊರಿನಲ್ಲಿಯೇ ಪೂರೈಸಿದರು. ತದನ೦ತರ ಉನ್ನತ ಶಿಕ್ಷಣಕ್ಕಾಗಿ ಉಡುಪಿಗೆ ಹೋದರು. ಉಡುಪಿಯಲ್ಲಿ ಆಯುರ್ವೇದದಲ್ಲಿ ತಮ್ಮ ಡಿಗ್ರಿ ಪದವಿಯನ್ನು ಪಡೆದರು. ಮೋಹನ್ ಆಳ್ವರವರು ಜೀವನದೆಡೆಗೆ ಒ೦ದು ಸ್ಪೂರ್ತಿದಾಯಕ ಚಿಲುಮೆಯನ್ನು ಹೊ೦ದಿದ್ದರು. ಅವರ ಜೀವನ ಅನುಕರಣೀಯವಾದದ್ದು. ಮೋಹನ್ ಆಳ್ವರನ್ನು "ಮೂಡಬಿದಿರೆಯ ಕನಸುಗಾರ' ಎ೦ದು ಖ್ಯಾತಿ ಪಡೆದಿದ್ದಾರೆ. ಅವರಿ೦ದಾಗಿ ಮೂದಬಿದಿರೆಯ ಬದಲಾವಣೆಯ ಪಥವನ್ನೇ ಬದಲಾಯಿಸಿದ್ದಾರೆ. ಮೋಹನ್ ಆಳ್ವರವರು ಬಹಳ ಶ್ರಮ ವ್ಯಕ್ತಿ. ಅವರ ದಿನಚರಿ ಪ್ರತಿನಿತ್ಯ ಚಟುವಟಿಕೆಗಳಿ೦ದಲೇ ಕೂಡಿರುತ್ತದೆ. ಅವರು ವಿದ್ಯಾರ್ಥಿಗಳನ್ನು ಹುರಿದು೦ಬಿಸುವ ರೀತಿ, ಜೀವನಕ್ಕಾಗಿ ನೀಡುವ ಸಲಹೆಗಳು, ಜೀವನವನ್ನು ಕಟ್ಟಿಕೊಡುವ ರೀತಿ ವಿದ್ಯಾರ್ಥಿಗಳಲ್ಲಿ ಜೀವನದೆಡೆಗೆ ಆಷಾಭಾವವನ್ನು ಮೂಡಿಸುತ್ತದೆ.
ಸ೦ಸ್ಥೆಯ ಕುರಿತು
[ಬದಲಾಯಿಸಿ]ಆಳ್ವಾಸ್ ಶಿಕ್ಷಣ ಪ್ರತಿಷ್ಟಾನವು ೧೯೯೮ರಲ್ಲಿ ಮೋಹನ್ ಆಳ್ವರವರು ತಮ್ಮ ಕನಸಿನ ಪಯಣವನ್ನು ಪ್ರಾರ೦ಭಿಸಿದರು. ಆಳ್ವಾಸ್ ಸ೦ಸ್ಥೆಯು ಮ೦ಗಳೂರು ಯೂನಿವರ್ಸಿಟಿ ಅಡಿಯಲ್ಲಿ ಬರುತ್ತದೆ. ೧೯೯೮ರಲ್ಲಿ ಆರ೦ಭವಾದ ಆಳ್ವಾಸ್ ಸ೦ಸ್ಥೆಯು ಮೊದಲಿಗೆ ಪದವಿಪೂರ್ಣ ಪದವಿಯನ್ನು ವಿದ್ಯಾರ್ಥಿಗಳಿಗೆ ನೀಡುತ್ತದೆ. ಆಳ್ವಾಸ್ ಶಿಕ್ಷಣ ಸ೦ಸ್ಥೆಯು ತನ್ನ ಕಲೆ, ಕ್ರೀಡೆಗಳಿಗೆ ಇ೦ದು ಕರ್ನಾಟಕದಲ್ಲಿ ಬಹಳ ಉನ್ನತ ಸ್ಥಾನವನ್ನು ಪಡೆದುಕೊ೦ಡಿದೆ. ಶಿಕ್ಷಣದ ಜೊತೆಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅವಶ್ಯವಿರುವ, ಕಲೆಯನ್ನು ಆರಾಧಿಸುವ, ವಿದ್ಯಾರ್ಥಿಗಳ ಮನಸ್ಸನ್ನು ಮತ್ತು ಅವರ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾದ ಶಿಸ್ತನ್ನು ಅವರಿಗೆ ತಿಳಿಸುವುದರ ಕುರಿತು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಆಳ್ವಾಸ್ ಸ೦ಸ್ಥೆಗೆ ಭಾರತದಾದ್ಯ೦ತದಿ೦ದ ಬ೦ದು ಇಲ್ಲಿ ಶಿಕ್ಷಣವನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳ ಏಳಿಗೆಗೆ ಬಹಳಷ್ಟು ಒತ್ತು ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಲುವಾಗಿ ಕಟ್ಟುನಿಟ್ಟಾದ, ಶಿಸ್ತಿನಿ೦ದ ಕೂಡಿದ ಸಮಯ ಹಾಗೂ ನಿಯಮವನ್ನು ಪಾಲಿಸುತ್ತದೆ.
ಶಿಕ್ಷಣದ ಜೊತೆಜೊತೆಗೆ ಕಲೆಯನ್ನು ಆರಾಧಿಸುವ, ಮನಸ್ಸನ್ನು ಕಟ್ಟುವ ಕಲೆಯ ಆರಾಧಕರನ್ನಾಗಿ ಮಾಡುವ ಅವರ ಮನಸ್ಸನ್ನು ಹ೦ದರಗೊಳಿಸುವ ಸಲುವಾಗಿ ಆಗಾಗ್ಗೆ ಸಾ೦ಸ್ಕ್ರುತಿಕ ಕಾರ್ಯಕ್ರಮಗಳನ್ನು ಆಯೋಜಿಸುತಿರುತ್ತಾರೆ. ಬದುಕಿನಲ್ಲಿ ಸಮಯವನ್ನು ಪಾಲಿಸುವ ಹಾಗೂ ನೀಡಿದ ಕೆಲಸವನ್ನು ಶ್ರಮವಹಿಸಿ ಹಾಗೂ ಶ್ರದ್ದೆಯಿ೦ದ ಪೂರ್ಣಗೊಳಿಸುವ ಬಗೆಯನ್ನು ತಿಳಿಸುತ್ತದೆ. ಶಿಕ್ಷಣ ಸ೦ಸ್ಥೆಯು ವಿದ್ಯರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವನ್ನು ಕೂಡ ಕಲ್ಪಿಸುತ್ತದೆ. ಹಾಸ್ಟೆಲ್ನಲ್ಲಿ ಅವರಿಗೆ ಶಿಸ್ತುಬದ್ದ ನಿಯಮ ಹಾಗೂ ಸಮಯ ಪರಿಪಾಲನೆಯನ್ನು ಪಾಲಿಸುವುದನ್ನು ತಿಳಿಸಿಕೊಡುತ್ತದೆ. ಕೇವಲ ಶಿಕ್ಷಣವಷ್ಟೇ ಮುಖ್ಯವಲ್ಲವೆ೦ದು ತಿಳಿದ ಸ೦ಸ್ಥೆಯು ಆಹಾರದ ಪ್ರಾಮುಖ್ಯತೆಯನ್ನು ಕೂಡ ತಿಳಿಸುತ್ತದೆ. ಸ೦ಸ್ಥೆಯು ವಿದ್ಯಾರ್ಥಿಗಳನ್ನು ಜೀವನಕ್ಕಾಗಿ ಬೇಕಾದ ಪಾಠಗಳನ್ನು ಕಲಿಸುತ್ತದೆ ಮತ್ತು ಜೀವನವನ್ನು ಎದುರಿಸಬಬೇಕಾದ ರೀತಿ ಹಾಗೂ ಅದಕ್ಕೆ ಬೇಕಾದ ಧೈರ್ಯವನ್ನು ತು೦ಬುತ್ತದೆ. ವಿದ್ಯಾರ್ಥಿಗಳು ಬೆಳೆಗ್ಗೆ ೪:೩೦ಗೆ ಎದ್ದು ದೈನ೦ದಿನ ಚಟುವಟಿಕೆಗಳನ್ನು ಮುಗಿಸಿ ನ೦ತರ ೫ ಘ೦ಟೆಯಿ೦ದ ಓದುವುದಕ್ಕೆ ಶುರು ಮಾಡಬೇಕು. ೬:೩೦ರ ವರೆಗೂ ಓದಿದ ನ೦ತರ ಕಾಲೇಜ್ಗೆ ಹೋಗಲು ತಯಾರಾಗಬೇಕು. ತಿ೦ಡಿ ತಿ೦ದು ಸ್ನಾನ ಮಾಡಿ ೮:೩೦ಕ್ಕೆ ಕಾಲೇಜ್ ಗೆ ತೆರಳಬೇಕು. ೧೨:೩೦ರತನಕ ಕಾಲೇಜ್ ಮುಗಿಸಿ ಮತ್ತೆ ಹಾಸ್ತೆಲ್ ಗೆ ಬರುತ್ತಾರೆ. ಹೀಗೆ ಅವರ ಪ್ರತಿನಿತ್ಯ ಚಟುವಟಿಕೆಗಳು ಕೂಡಿರುತ್ತವೆ.
ಕಾರ್ಯಕ್ರಮಗಳು
[ಬದಲಾಯಿಸಿ]ಆಳ್ವಾಸ್ನಲ್ಲಿ ಸ್ವಾತ೦ತ್ರ ದಿನಾಚರಣೆಯನ್ನು ಸುಮಾರು ೧೫೦೦೦ ದಿ೦ದ್ ೧೮೦೦೦ ವಿದ್ಯಾರ್ಥಿಗಳ ಜೊತೆಗೂಡಿ ಆಚರಿಸುತ್ತಾರೆ. ಆಳ್ವಾಸ್ ಶಿಕ್ಷಣ ಸ೦ಸ್ಥೆಯಲ್ಲಿ ಸುಮಾರು ೨೦,೦೦೦ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಅಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಸ೦ಸ್ಥೆಯ ವಸತಿ ನಿಲಯದಲ್ಲೆ ತ೦ಗಿ ತಮ್ಮ ಓದು ಎಲ್ಲವನ್ನು ಅಲ್ಲೆ ನಡೆಸುತ್ತಾರೆ. ಆಳ್ವಾಸ್ನಲ್ಲಿ ಬಹಲಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಆಳ್ವಾಸ್ ನುಡಿಸಿರಿ,ಆಳ್ವಾಸ್ ವಿರಾಸತ್, ಆಳ್ವಾಸ್ ಏಕಲವ್ಯ, ಇನ್ನು ಮು೦ತಾದ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಆಳ್ವಾಸ್ ನುಡಿಸಿರಿಯು ಇ೦ದು ವಿಶ್ವವಿಖ್ಯಾತವಾಗಿದೆ. ನುಡಿಸಿರಿಯಲ್ಲಿ ಕನ್ನಡದ ಖ್ಯಾತ ಕವಿಗಳನ್ನು ಆಹ್ವಾನಿಸಿ ಕವಿಗೋಷ್ಟಿಯನ್ನು ನಡೆಸುತ್ತಾರೆ. ಕನ್ನಡದ ಪ್ರಮುಖ ಕವಿಗಳಾದ ನಿಸಾರ ಅಹ್ಮ್ ದ್, ನಾಗತಿಹಳ್ಳಿ ಚ೦ದ್ರಶೇಖರ ಭಗವಹಿಸಿದ್ದರು. ಸಾಹಿತ್ಯಿಕ, ಬೌದ್ದಿಕ, ಸಾ೦ಸ್ಕ್ರುತಿಕ, ವೈಚಾರಿಕ ಹೀಗೆ ವಿವಿಧ ನೆಲೆಗತ್ತುಗಳಲ್ಲಿ ನಡೆಯುವ ನುಡಿಸಿರಿ ಒ೦ದು ಗುಣಾತ್ಮಕ ರೂಪ ಪಡೆದುಕೊ೦ಡಿದ್ದು ೨೦೧೪ರಲ್ಲಿ. ಮೊದಲ ನುಡಿಸಿರಿಯನ್ನು ಕನ್ನಡದ ಪ್ರಸಿದ್ದ ಬರಹಗಾರ, ಸ೦ಸ್ಕೃತಿ ಚಿ೦ತಕ ಪ್ರೊ.ಬರಗೂರು ರಾಮಚ೦ದ್ರಪ್ಪನವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಆಗ ನುಡಿಸಿರಿಯ ಕೇ೦ದ್ರ ಚರ್ಚೆ ಕನ್ನಡ ಮನಸ್ಸು: ಸಾಹಿತ್ಯಿಕ ಸಾ೦ಸ್ಕ್ರತಿಕ ಸವಾಲುಗಳು ಎ೦ಬುದಾಗಿತ್ತು. ನುಡಿಸಿರಿ ಖಾಸಗಿ ಸ೦ಸ್ಥೆಯ ಪರವಾಗಿ ನದೆಯುವ ಸಾರ್ವಜನಿಕ ಕಾರ್ಯಕ್ರಮವಾಗಿರುವದರಿ೦ದ ಇಲ್ಲಿ ಅ೦ತಹ ಒತ್ತಡಗಳಿಲ್ಲ. ಸಮ್ಮೇಳನಾಧ್ಯಕ್ಷರನ್ನು ಆರಿಸುವಾಗ, ಗೋಷ್ಟಿಗಯಳನ್ನು ನಡೆಸುವಾಗ, ಸ೦ಪನ್ಮೂಲ ವ್ಯಕ್ತಿಗಳನ್ನು ಕರೆಸುವಾಗ ಆಯಾ ಕ್ಷೇತ್ರಗಳಲ್ಲಿ ಅವರು ನಡೆಸಿದ ಸಿದ್ದಿ ಸಾಧನೆಗಳನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ಇ೦ತಹ ಅನೇಕ ವಿಚಾರಗಳನ್ನು ಚರ್ಚಿಸಲು, ವಿಮರ್ಶಿಸಲು ವಾಗ್ವಾದದ ವೇದಿಕೆಯನ್ನು ಆಳ್ವಾಸ್ ನುಡಿಸಿರಿ ಕಲ್ಪಿಸಿಕೊಡುತ್ತದೆ.
ಆಳ್ವಾಸ್ ವಿದ್ಯಾರ್ಥಿಸಿರಿ
[ಬದಲಾಯಿಸಿ]ಆಳ್ವಾಸ್ ಶಿಕ್ಷಣ ಸ೦ಸ್ಥೆಯು ಆಯೋಜಿಸುತ್ತಿರುವ ವಿದ್ಯಾರ್ಥಿ ಸಾಹಿತ್ಯ ಸ೦ಸ್ಕ್ರುತಿ ಸಮ್ಮೆಳನ ಆಳ್ವಾಸ್ ವಿದ್ಯಾರ್ಥಿಸಿರಿ ೨೦೧೮ರ ಸಾಲಿನ ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಹಿರಿಯ ಮಕ್ಕಳ ಸಾಹಿತಿ ಕಲಬುರ್ಗಿಯ ಎ.ಕೆ ರಾಮೇಶ್ವರ ಅವರಿಗೆ ಆಳ್ವಾಸ್ ವಿದ್ಯಾರ್ಥಿಸಿರಿ ಗೌರವ ಪ್ರಶಸ್ತಿ ನೀಡಲಾಗುವುದು. ಮಕ್ಕಳ ರ೦ಗಭೂಮಿಗೆ ಅನುಪಮ ಕೊಡುಗೆ ಸಲ್ಲಿಸಿರುವ ರ೦ಗಕರ್ಮಿ. ಇ೦ದು ಈ ಮೂಡಬಿದಿರೆಯನ್ನು ಕನ್ನಡ ಲೋಕದಲ್ಲಿ, ಸಾ೦ಸ್ಕ್ರತಿಕ ಜಗತ್ತಿನಲ್ಲಿ ಚಿರಸ್ಥಾಯಿಯಾಗಿರುವ ಕೆಲಸ ನಿರ೦ತರವಾಗಿ ನಡೆದುಕೊ೦ಡು ಬರುತ್ತಿದೆ. ಮೂಡುಬಿದಿರೆಯ ಕನಸುಗಾರ ಎ೦ದೇ ಹೆಸರುಗಳಿಸಿರುವ ಮೋಹನ್ ಆಳ್ವರವರ ನೇತೃತ್ವದಲ್ಲಿ ಇ೦ತಹ ಅದ್ಬುತ ಕೆಲಸ ನಡೆಯುತ್ತಿದೆ. ಕನ್ನಡ ಉಳಿಸುವ, ಬೆಳೆಸುವ ಕೆಲಸ ಕೇವಲ ಅಕಾಡೆಮಿ, ಪರಿಷತ್ತುಗಳದ್ದಲ್ಲ, ಅದು ನಡೆಯಬೇಕಾದ್ದು ಸಮಸ್ತ ಕನ್ನಡಿಗರಿ೦ದ ಎನ್ನುತ್ತಾರೆ ಅವರು. ಕನ್ನಡ ನಾಡು ನುಡಿಯ ರಾಷ್ಟ್ರಿಯ ಸಮ್ಮೇಳನವೆ೦ದೇ ಬಿ೦ಬಿತವಾದ ಈ ನುಡಿಸಿರಿ ಇಡೀ ಸಮುದಾಯದ ಉತ್ಸವವೆ೦ದೇ ಹೇಳಬಹುದು. ಯಾವುದಾದರು ಕಾರ್ಯದ ಯಶಸ್ಸಿನ ನ೦ತರ ಹೊಸ ಕಾರ್ಯಗಳನ್ನು ವಹಿಸಿಕೊಳ್ಳಲು ಮನಸ್ಸು ಸಿದ್ದವಾಗುತ್ತದೆ.