ಸದಸ್ಯ:Deepa.bellatti/sandbox

ವಿಕಿಪೀಡಿಯ ಇಂದ
Jump to navigation Jump to search

[೧]

ಮೇರಿ ಇಮ್ಯಾಕುಲೇಟ್ ಶಾಲೆ[ಬದಲಾಯಿಸಿ]

ಮೇರಿ ಇಮ್ಯಾಕುಲೇಟ್ ಶಾಲೆ ೧೫ನೇ ಅಡ್ಡರಸ್ತೆ ವಿಲ್ಸನ್ ಗಾರ್ಡನ್, ಬೆಂಗಳೂರು,ಕರ್ನಾಟಕದಲ್ಲಿದೆ.ವಿಲ್ಸನ್ ಗಾರ್ಡನ್ ನ ಪ್ರಸಿದ್ಧವಾದ ಬಾಲಕಿಯರ ಶಾಲೆ.ಈ ಶಾಲೆ ಸತತ ೫೦ಕ್ಕೂ ಹೆಚ್ಚು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಶಾಲೆಯ "ಗುರಿ ಪ್ರೀತಿ ಮತ್ತು ಕರ್ತವ್ಯ".
ಶಾಲೆ ಗೀತೆ:
 Love and our duty
 Let this be our creed
 Love for our neighbour and aid in his need
 Faithful when duty upon us doth call
 Strong in our service though trials be tall.
 Hail Alma Mater, our School fond and dear 
 Mother who showed us, the pathway all clear 
 Where we should walk when afar we may rove
 Hail Alma Mater the School that we love.
 True to our colours held high in our pride
 True to our houses what'er betide
 Marching together to keep thy fair name
 Mary Immaculate we'll strive for thy fame
 Hail Alma Mater our School that we love.

೧೯೫೮ ಜೂನ್ ೧೧ ರಂದು, ಅಪೋಸ್ಟೋಲಿಕ್ ಕಾರ್ಮಲ್ ಮೂರು ಸನ್ಯಾಸಿಗಳಾದ ಕೊರೊನ ಗಾನ್ಜ಼ಾಗಾ ಮತ್ತು ಸೆಬಾಸ್ಟೀಯನ್ ರವರು ಬೆಂಗಳೂರಿನಲ್ಲಿ ಇರಲು ಬಂದರು.ವಿಲ್ಸನ್ ಗಾರ್ಡನ್ ನಲ್ಲಿ ಒಂದು ಮನೆಯನ್ನು ಬಾಡಿಗೆಗೆ ಪಡೆದುಕೊಂಡುರು.ಅಂದಿನ ಬೆಂಗಳೂರಿನ ಪ್ರಧಾನ ಬಿಷಪ್ ಆದ ಪೊತಕುಮರ್ ರವರು ಮೊದಲೇ ಈವರನ್ನು ಬೆಂಗಳೂರಿನಲ್ಲಿ ಕಾಲೇಜು ಪ್ರಾರಂಭಿಸಲು ಆಹ್ವಾನ ನೀಡಿದ್ದರು,ಸಿಬ್ಬಂದಿ ಇಲ್ಲದ ಕಾರಣ ಅವರು ಅದನ್ನು ನಿರಾಕರಿಸಿದರು.ಮಂಗಳೂರಿನಲ್ಲಿದ್ದ ಸನ್ಯಾಸಿಗಳು ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕೆಲಸಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದರು ಆದುದರಿಂದ ಸ್ವಂತ ಮನೆ ಪಡೆಯಲು ಮುಂದಾದರು. 
೧೯೫೮ ಜುಲೈ ೧ ರಂದು ನರ್ಸರಿ ಶಾಲೆಯನ್ನು ಪ್ರಾರಂಭಿಸಿದರು.ನಂತರ ೧೯೫೯ರಲ್ಲಿ ಮೂರು ಪ್ಲಾಟ್ಗಳನ್ನು ಜಯನಗರದಲ್ಲಿ ಖರೀದಿಸಿದರು.ಸೆಪ್ಟೆಂಬರ್ ೩೦ ರಂದು ವಿಲ್ಸನ್ ಗಾರ್ಡನ್ ನ ಡಾ.ಕದಂಬಿಯವರ ಮನೆಯನ್ನು ಬಾಡಿಗೆಗೆ ಪಡೆದು ನರ್ಸರಿ ಮತ್ತು ಪ್ರಾಥಮಿಕ ಶಾಲೆ ನಡೆಸಿದರು.೧೯೬೦ ರಿಂದ ೧೯೭೦ ರವರೆಗೂ ಶಾಲೆ ಇಲ್ಲಿತ್ತು. ಮುಂದಿನ ತರಗತಿಗಳು ಜಯನಗರ ಶಾಲೆಯಲ್ಲಿತ್ತು.ಸ್ವಲ್ಪ ಸಮಯದಲ್ಲೇ ಈ ಶಾಲೆ ಬೆಳೆಯಿತು.ನಂತರ ಜಯನಗರದ ಶಾಲೆಯನ್ನು ಮಾರಿ ಅದನ್ನು ವಿಲ್ಸನ್ ಗಾರ್ಡನ್ ಗೆ ವರ್ಗಾಯಿಸಲಾಯಿತು.
೧೯೬೧ ರಲ್ಲಿ,ಫಿಲೊಮೆನ ರವರು ಆಡಳಿತ ವಹಿಸಿದರು. ಸ್ವಂತ ಶಾಲೆ ಪ್ರಾರಂಭಿಸುವ ಉದ್ದೇಶದಿಂದ ಲೌರೆಂಟಿಯ ರವರು ಶ್ರೀಮತಿ ಠಾಕೂರ್ ರವರ ಸಹಾಯದಿಂದ ಲಕ್ಕಸಂದ್ರದಲ್ಲಿ ಜಾಗ ಖರೀದಿಸಿದರು.ಈ ಪ್ರದೇಶದ ಸುತ್ತ ಮುತ್ತಲಿನವರು ಮಧ್ಯಮ ವರ್ಗದವರು ಹಾಗೂ ವಿದ್ಯಾವಂತರಾಗಿದ್ದರು.ಈ ಹೊಸ ಶಾಲೆಯು ೧೭ ನವೆಂಬರ್ ೧೯೬೨ ರಲ್ಲಿ ಅಂದಿನ ಡಿ.ಡಿ.ಪಿ.ಐ ಆದ ಶ್ರೀ ಎ.ಸಿ.ದೇವೇ ಗೌಡ ರವರು ಯುರೋಪಿಯನ್ ಶಾಲೆ ಯೋಜನೆಯ ಕೆಳಗೆ ಮಂಜೂರಾಯಿತು.ಲೌರ್ಡೆಸ್ ಹೆಸರಿನಿಂದ ಬಹಳ ಶಾಲೆಗಳು ಮಂಜೂರಾದ ಕಾರಣ ಶಾಲೆಯ ಹೆಸರನ್ನು ಬದಲಯಿಸಲು ಡಿ.ಡಿ.ಪಿ.ಐ ಕಛೇರಿಯಿಂದ ಆದೇಶ ಬಂತು.ಆಗ ಶಾಲೆಗೆ ಹೊಸ ನಾಮಕರಣವಾಯಿತು ಅದೇ "ಮೇರಿ ಇಮ್ಯಾಕುಲೇಟ್ ಶಾಲೆ".ಬಹಳ ಜನ ತಮ್ಮ ಮಕ್ಕಳ್ಳನ್ನು ಈ ಶಾಲೆಗೆ ಸೇರಿಸಲು ಬಯಸಿದ್ದ ಕಾರಣ ಬೇಡಿಕೆ ಹೆಚ್ಚಾಯಿತು ಆದುದರಿಂದ ಎರಡನೇ ವರ್ಗ ಪ್ರಾರಂಭಿಸಲು ಅನುಮತಿ ಪಡೆದರು.೧೯೬೩ ರಲ್ಲಿ ಲೌರೆಂಟಿಯ ರವರು ಮುಖ್ಯೋಪಾಧ್ಯಾಯಿನಿಯಾದರು.
೧೯೬೫ ರಲ್ಲಿ ೬ನೇ ತರಗತಿಯವರೆಗೂ ಅನುಮತಿ ಮಂಜೂರಾಯಿತು.ಇದೇ ವರ್ಷದ ಆಗಸ್ಟ್ ನಲ್ಲಿ ಮೊದಲನೆಯ ಬಾರಿಗೆ ಶಾಲೆಯ ತಪಸಣೆಯಾಯಿತು. ಈ ತಪಸಣೆಯ ವರದಿ ತುಂಬ ಚೆನ್ನಾಗಿತ್ತು.೧೯೬೬ ರಲ್ಲಿ ಫಿಲೊಮೆನರವರು ಆಡಳಿತ ವಹಿಸಿದರು ಮತ್ತು ಜಯನಗರದಲ್ಲಿದ್ದ ತರಗತಿಗಳನ್ನು ವಿಲ್ಸನ್ ಗಾರ್ಡನ್ ಗೆ ವರ್ಗಸಲಾಯಿತು.ಈಗಾಗಲೇ ಶಾಲೆಯಲ್ಲಿ ೧ನೇ ತರಗತಿಯಿಂದ ೭ನೇ ತರಗತಿಯವರೆಗಿತ್ತು.ಇದೇ ವರ್ಷದ ಆಗಸ್ಟ್ ೩೦ ರಂದು ಜಿ.ಓ.ರವರು ಆಂಗ್ಲೋ ಇಂಡಿಯನ್ ಶಾಲೆ ಯೋಜನೆಯಿಂದ ಎಸ್.ಎಸ್.ಎಲ್.ಸಿ. ಇಂಗ್ಲೀಷ್ ಮಾಧ್ಯಮಕ್ಕೆ ವರ್ಗಾಯಿಸುವುದಾಗಿ ಹೇಳಿದ್ದರು.೧೯೬೭ ರ ಫೆಬ್ರವರಿ ೧೬ ರಂದು ೮ನೇ ತರಗತಿ ಪ್ರಾರಂಭವಾಯಿತು.ಗೇಬ್ರಿಲ್ ರವರು ಶಾಲೆ ಗೀತೆಯನ್ನು ರಚಿಸಿದರು.ಈ ಗೀತೆಯ ರಾಗವು ರಷ್ಯಾದ ರಾಷ್ಟ್ರಗೀತೆಯ ಮೇಲೆ ಆಧರಿತವಾಗಿದೆ.
೪ನೇ ತರಗತಿಯವರೆಗೂ ಹುಡುಗರಿದ್ದರು ನಂತರ ಅವರನ್ನು ಸೆಂಟ್ ಜೋಸೆಫ್ ಬಾಲಕರ ಶಾಲೆಗೆ ಸೇರಿಕೊಳ್ಳುತ್ತಿದ್ದರು.ನಂತರ ೮ ಡಿಸೆಂಬರ್ ೧೯೬೬ ರಲ್ಲಿ ಅನಂತರಾಮಯ್ಯ ನವರ ಸಹಾಯದಿಂದ ಗ್ರಾನೈಟ್ ಕ್ವಾರಿಯ ಬಳಿ ಭೂಮಿ ಖರೀದಿಸಿದರು.ಆದರೆ ಈ ಭೂಮಿ ಆಗಲೇ ಬೇರೆ ಯಾರೋ ಖರೀದಿಸಿದ್ದರು. ಹೊಸ ಆಸೆ ಇಟ್ಟು ಖರೀದಿಸಿದ್ದ ಭೂಮಿ ಅವರನ್ನು ಗೊಂದಲಕ್ಕೆ ಒಳಗೊಳಿಸಿತು.ಬಹಳ ತೊಂದರೆಯ ನಂತರ,ಮುಖ್ಯ ನ್ಯಾಯಮೂರ್ತಿಯಾದ ಹೊಂಬೇಗೌಡರವರ ಸಹಾಯದಿಂದ ಎಲ್ಲವೂ ಶಾಲೆಗೆ ಸಹಾಯವಾಗುವಂತೆಯಾಯಿತು.೧೫ ಆಗಸ್ಟ್ ೧೯೬೮ ರಲ್ಲಿ ಫಾದರ್ ಜೋಸೆಫ್ ರವರ ಆಶೀರ್ವಾದದಿಂದ ಶಾಲೆಯ ನಿರ್ಮಾಣ ಪ್ರಾರಂಭವಾಯಿತು.ನಿರ್ಮಾಣದ ಕಾರ್ಯವನ್ನು ಶ್ರೀ.ಶೇಷಾದ್ರಿಯವರು ವಹಿಸಿಕೊಂಡರು.೧೯೬೯ ರ ಮಾರ್ಚ್ ನ್ನಲ್ಲಿ ಕಟ್ಟಡದ ಉದ್ಘಾಟನೆಯಾಯಿತು. ಸೆಪ್ಟೆಂಬರ್ ೧೯೬೯ ರಲ್ಲಿ ಎಲ್ಲ ತರಗತಿಗಳು ಹೊಸ ಕಟ್ಟಡಕ್ಕೆ ವರ್ಗಾಯಿಸಲಾಯಿತು.ಮುಖ್ಯ ನಾಯ್ಯಮೂರ್ತಿಯಾದ ಹೊಂಬೇಗೌಡರ ಆಕಸ್ಮಿಕ ಸಾವು ಆಘಾತ ತಂದಿತು ಏಕೆಂದರೆ ಅವರು ಶಾಲೆಗೆ ಬಹಳ ಸಹಾಯ ಮಾಡಿದ್ದರು.೧೯೭೧ ರಲ್ಲಿ ಎಸ್.ಎಸ್.ಎಲ್.ಸಿ.ಯ ಮೊದಲನೆಯ ಬ್ಯಾಚ್ ಪರೇಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಬಂತು.
೧೯೭೬ ರಲ್ಲಿ ಇನ್ನೊಂದು ಬ್ಲಾಕ್ ನ ಉದ್ಘಾಟನೆಯಾಯಿತು.ಈ ಬ್ಲಾಕ್ ನಲ್ಲಿ ನರ್ಸರಿ ಹಾಗೂ ವಿಶಾಲವಾದ ಸಭಾಂಗಣವಿತ್ತು.ಅವರಿಗೆ ಶಾಲೆ ಆವರಣದಲ್ಲಿ ಏನೋ ಕಡಿಮೆಯಿದೆ ಅನಿಸುತಿತ್ತು.ನಂತರ ಶಾಲೆಯಲ್ಲಿ ಮೇರಿ ಮಾತೆಯ ಪ್ರತಿಮೆ ಸ್ಥಾಪಿಸಲು ನಿರ್ಧಾರ ಮಾಡಿದರು.೧೯೮೫ ರಲ್ಲಿ ರಾಮಸ್ವಾಮಿಯವರು ಮಾಡಿದ್ದ ಮೇರಿ ಮಾತೆಯ ಪ್ರತಿಮೆಯನ್ನು ಸ್ಥಾಪಿಸಿದರು.ಇದರಿಂದ ಎಲ್ಲರಿಗೂ ಮೇರಿ ಮಾತೆ ಅವರೊಡನೆಯೇ ಇದ್ದು ಎಲ್ಲರನ್ನು ಕಾಪಾಡುತ್ತಾರೆಂದು ನಂಬಿದರು. 
೧೯೯೧ ರಲ್ಲಿ ಯುನಾ ರವರು ಮುಖ್ಯೋಪಾಧ್ಯಾಯಿನಿಯಾದರು ಅವರು ಕ್ವಾರಿಯ ಇನ್ನಷ್ಟು ಭಾಗವನ್ನು ಶಾಲೆಯ ಮೈದಾನಕ್ಕಾಗಿ ವಿಸ್ತರಿಸಲು ಮುಂದಾದರು.ಆದರೆ ಇದರದಿಂದ ಬಹಳ ತೊಂದರೆಗಳು ಪ್ರಾರಂಭವಾಯಿತು.ಕೆಲವರು ಹೆದರಿಸದರೆ ಇನ್ನೂ ಕೆಲವರು ಶಾಲೆಯ ದಾರಿಗೆ ಅಡ್ಡಗಟ್ಟುಗಳನ್ನು ಹಾಕಿದರು.೧೦ ದಿನಗಳ ನಿರಂತರ ಪ್ರಯತ್ನದಿಂದ ಅಧಿಕಾರಿಗಳು ಅಡ್ಡಗಟ್ಟುಗಳನ್ನು ತೆಗೆಯಲು ಆದೇಶಿಸಿದರು.ಒಂದುವರೆ ವರ್ಷದ ಕೆಲಸದ ನಂತರ ಶಾಲೆಗೆ ವಿಶಾಲವದ ಆಟದ ಮೈದಾನ ದೊರಕಿತು.
೧೯೯೮ ರಲ್ಲಿ ವಿಯೊಲೇಟ್ ರವರು ಮುಖ್ಯೋಪಾಧ್ಯಾಯಿನಿಯಾದರು ನಂತರ ೨೦೦೨ ರಲ್ಲಿ ಮರಿಯ ಲೈಲಾರವರು ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಅಧ್ಯಕ್ಷದಲ್ಲಿ ಶಾಲೆಗೆ ಇನ್ನಷ್ಟು ಬದಲಾವಣೆ ಮಾಡಲಾಯಿತು ಇದರಿಂದ ಶಾಲೆ ಹೊಸ ರೂಪ ಕಂಡುಕೊಂಡಿದೆ.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸತತವಾಗಿ ಶೇ.೧೦೦ರಷ್ಟು ಫಲಿತಾಂಶವನ್ನು ಪಡೆಯುತಿದೆ.ಕೇವಲ ಶೈಕ್ಷಣಿಕವಾಗಿ ಮುಂದುವರಿಯದೇ ಕ್ರೀಡೆ ಯಲ್ಲೂ ಬಹಳ ಸಾಧನೆ ಮಾಡಿದ್ದಾರೆ ಈ ಶಾಲೆಯ ವಿದ್ಯಾರ್ಥಿನಿಗಳು.

[೨]

 1. Mary Immaculate School Magazine 2008
 2. mary immaculate school magazine