ಸದಸ್ಯ:Deekshith Devaiah K J
ನನ್ನ ಹೆಸರು ದೀಕ್ಷಿತ್ ದೇವಯ್ಯ ಕೆ.ಜೆ.ನನ್ನ ಹುಟ್ಟಿದ ದಿನಾಂಕ ೩೦ ಮೇ ೨೦೦೦. ನನ್ನ ಜನ್ಮ ಭಾರತ ದೇಶದ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯಲ್ಲಿ ಆಯಿತು.'ಕೊಡಗು' - ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ.
ಕುಟುಂಬ
ನನ್ನ ತಂದೆಯ ಹೆಸರು ಜಗದೀಶ್ ಮತ್ತೆ ತಾಯಿ ಹೆಸರು ಸುನೀತಾ.ನನ್ನ ತಂದೆ ಒಬ್ಬ ಕಾಫಿ ಬೆಳಗಾರ.ನನ್ನ ತಾಯಿ ಗೃಹಣಿ.ನನೆಗೆ ಒಬ್ಬ ಅಕ್ಕ ಇದ್ದಾಳೆ.
ಶಿಕ್ಷಣ
ನಾನು ೧೨ನೇ ತರಗತಿವರಗೆ ಕೊಡಗಿನಲ್ಲಿಯೇ ಓದಿದ್ದು.ನಾನು ನನ್ನ ಮದ್ಯಮ ಶಿಕ್ಷಣವನ್ನು ಲಿಟ್ಲ್ ಫ್ಲವರ್ಸ್ ಶಾಲೆಯಲ್ಲಿ ಮುಗಿಸಿದೆ. ನಾನು ನನ್ನ ಹೈಸ್ಕೂಲ್ ವಿದ್ಯಾಭ್ಯಾಸ ಸಾಯಿ ಶಂಕರ್ ಸ್ಕೂಲನಲ್ಲಿ ಮುಗಿಸಿದೆ.ನನ್ನ ಪದವಿ ಪೂರ್ವ ಶಿಕ್ಷಣ ವಿದ್ಯಾನಿಕೇತನ ಕಾಲೇಜುನಲ್ಲಿ ಪೂರ್ಣಗೊಳಿಸಿದೆ.ನಾನು ನನ್ನ ಪದವಿ ಶಿಕ್ಷಣವನ್ನು ಬೆಂಗಳೂರು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಮಾಡಬೇಕೆಂದು ಬಯಸಿದೆ ಹಾಗಾಗಿ ಪದವಿ ಪೂರ್ವದಲ್ಲಿ ಒಳ್ಳೆಯ ಅಂಕ ಗಳಿಸಿ ಕ್ರೈಸ್ಟ್ ವಿದ್ಯಾಲಯದಲ್ಲಿ ಸೇರಿಕೊಂಡೇನು.
ಹವ್ಯಾಸಗಳು
ನಾನು ನನ್ನ ರಜ ದಿನದಲ್ಲಿ ಹಾಕಿ ಆಟವನ್ನು ಆಡುತ್ತೇನೆ. ನನ್ನ ಬೇರೆ ಹವಸ್ಯಗಳೆದಂದರೆ ಕ್ರಿಕೆಟ್ , ವಾಲಿಬಾಲ್ ಆಡುವುದು, ಚಾರಣಕ್ಕೆ ಹೋಗುವುದು, ಹಾಡು ಕೇಳುವುದು,. ನನಗೆ ದೂರದ ಊರಿಗೆ ಪ್ರಯಾಣಿಸುವುದು ಬಹಳ ಇಷ್ಟ. ನನಗೆ ಬೈಕಿನಲ್ಲಿ ದೂರದ ಪ್ರಯಾಣ ಮಾಡುವುದೆಂದರೆ ಬಹಳ ಒಲವು. ನಾನು ನನ್ನ ರಜೆ ಸಮಯದಲ್ಲಿ ನನ್ನ ಸ್ನೇಹಿತರು ಹಾಗೂ ಕುಟುಂಬದೊಡನೆ ಕಳೆಯಲು ಬಯಸುತ್ತೇನೆ. ನನಗೆ ರಾಜಕೀಯದಲ್ಲಿ ಬಹಳ ಆಸಕ್ತಿ ಇದೆ. ನನಗೆ ಸಾಕು ಪ್ರಾಣಿಗಳೆಂದರೆ ಇಷ್ಟ.
ಆದರ್ಶ ಗುರು
ನನ್ನ ಆದರ್ಶ ಗುರು ಅಬ್ದುಲ್ ಕಲಾಂ ಅವರು. ನನಗೆ ವಿವೇಕಾನಂದರವರ ಈ ಸ್ವದೇಶ್ ಮಂತ್ರ ತುಂಬಾ ಇಷ್ಟ ಅದು ಇದು:ಮರೆಯದಿರಿ, ನಿಮ್ಮ ಸಾಮಾಜಿಕ ರಚನೆ ಅನಂತ ವಿಶ್ವವ್ಯಾಪಿ ಜಗಜ್ಜನನಿಯ ಕಾಂತಿಯನ್ನು ಪ್ರತಿಬಿಂಬಿಸುವುದಕ್ಕಾಗಿ ಇರುವುದು. *ಮರೆಯದಿರಿ, ಅಂತ್ಯಜರು, ಮೂಢರು, ದರಿದ್ರರು, ನಿರಕ್ಷರಕುಕ್ಷಿಗಳು, ಚಂಡಾಲರು ಮತ್ತು ಚಮ್ಮಾರರು - ಎಲ್ಲರೂ ನಿಮ್ಮ ರಕ್ತಬಂಧುಗಳಾದ ಸಹೋದರರು ! ವೀರಾತ್ಮರೇ, ಧೀರರಾಗಿ, ನೆಚ್ಚುಗೆಡದಿರಿ. ಭಾರತೀಯರು ನಾವು ಎಂದು ಹೆಮ್ಮೆ ತಾಳಿ. ಸಾರಿ ಹೇಳಿ, ಭಾರತೀಯರು ನಾವು, ಭಾರತೀಯರೆಲ್ಲ ನಮ್ಮ ಸಹೋದರರು.ಇಷ್ಟು ನನ್ನ ಬಗ್ಗೆ ನಾನು ಹೇಳಲು ಬಯಸುತ್ತೆನೆ ಮತ್ತು ನಾನು ಮುಂದೆ ಇನ್ನು ಜಾಸ್ತಿ ಓದಿ ನನ್ನ ದೇಶಕ್ಕೆ ಸೇವೆ ಮಾಡಲು ಬಯಸುತ್ತೆನೆ.
ಜೈ ಹಿಂದ್ ಜೈ ಕರ್ನಾಟಕ ಮಾತೆ
'