ಸದಸ್ಯ:Deekshith

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಡ್ವರ್ಡ್ ಎಂಥೋನಿ ಜೆನ್ನರ್

ಎಡ್ವರ್ಡ್ ಎಂಥೋನಿ ಜೆನ್ನರ್ (17 ಮೇ 1749 - 26 ಜನೆವರಿ 1823) ಒಬ್ಬ ಆಂಗ್ಲ ವಿಜ್ಞಾನಿಯಾಗಿದ್ದು, ಅವರು ಬರ್ಕ್ಲಿ, ಗ್ಲೌಸೆಸ್ಟರ್‌ಶೈರ್‌ನಲ್ಲಿ ತಮ್ಮ ಸುತ್ತಮುತ್ತಣ ನೈಸರ್ಗಿಕ ಪರಿಸರವನ್ನು ಅಭ್ಯಸಿಸಿದರು. ಜೆನ್ನರ್ ಅವರು ಸಿಡುಬಿನ ಲಸಿಕೆಯ ಅನ್ವೇಷಣೆಯಿಂದಾಗಿ ಹೆಚ್ಚು ಪ್ರಸಿದ್ಧಿಯಾಗಿದ್ದಾರೆ. ಕೆಲವೊಮ್ಮೆ 'ಪ್ರತಿರೋಧಶಾಸ್ತ್ರದ ಪಿತಾಮಹ’ ಎಂದೂ ಕರೆಯಲ್ಪಡುವರು. ಜೆನ್ನರ್ ಅವರ ಸಂಶೋಧನೆಯು, ಬೇರೆ ಯಾರಿಂದಲೂ ಸಾಧ್ಯವಾಗದಷ್ಟು ಅಧಿಕ ಜೀವಗಳನ್ನು ಉಳಿಸಿದೆ