ಸದಸ್ಯ:Deekshavishwakarma/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ಬೆಲನೋಗ್ಲೋಸಸ್ ಹೆಮಿಕಾರ್ಡೇಟಾ ಪ್ರಭೇದಕ್ಕೆ ಸೇರಿದ ಸಮುದ್ರ ಜೀವಿ.

ಸಂಶೋಧನೆ[ಬದಲಾಯಿಸಿ]

೧೮೨೫ರಲ್ಲಿ ಜೆ.ಎಫ್.ಎಸ್ಚ್ಸ್ಚಾಲ್ಟ್ಜ್ ಅವರು ಮಶೈಲ್ ದ್ವೀಪದಲ್ಲಿ ಬೆಲನೋಗ್ಲೋಸಸ್ ಅನ್ನು ಹುಳುವಿನ ತರಹದ ಜೀವಿ ಎಂದು ಗುರುತಿಸಿದರು. ಕೋವೆಲ್ವಿಸ್ಕಿ ಪ್ರಾರಂಭಿಸಿದ,ಇದರ ಗಿಲ್ ಸ್ಲಿಟ್ನ ಶೋಧನೆಯು ಎಂಟೆರೋಪ್ನ್ಯೂಸ್ಟ ಎಂಬ ಹೊಸ ವರ್ಗದ ಸೃಷ್ಟಿಗೆ ನಾಂದಿಯಾಯಿತು. ೧೮೮೫ರಲ್ಲಿ ಅದನ್ನು ಬೇಟ್‍ಸನ್ ಅವರು ಫೈಲಮ್ ಕಾರ್ಡೇಟಾಗೆ ಸೇರ್ಪಡಿಸಿದರು.

ಆವಾಸಸ್ಥಾನ[ಬದಲಾಯಿಸಿ]

ಬೆಲನೋಗ್ಲೋಸಸ್ ಸಮುದ್ರ ಪ್ರಾಣಿ. ಬೆಚ್ಚಗಿನ ಮತ್ತು ಸಮಶೀತೋಷ್ಣ ಸಾಗರಗಳ ಉಬ್ಬರವಿಳಿತದ ಗುರುತುಗಳ ನಡುವೆ ಆಳವಿಲ್ಲದ ನೀರಿನಲ್ಲಿ ಕಂಡುಬರುತ್ತದೆ.

ಬಿಲ[ಬದಲಾಯಿಸಿ]

ಬೆಲನೊಗ್ಲೋಸಸ್ ಮರಳಿನ ಕೆಳಭಾಗದಲ್ಲಿ U-ಆಕಾರದ ಕೊಳವೆಯಲ್ಲಿ ಕಾಣಸಿಗುತ್ತದೆ.

ಸಂಬಂಧಗಳು[ಬದಲಾಯಿಸಿ]

ಅನೆಲಿಡಾದ ಜೊತೆ ಸಂಬಂಧ[ಬದಲಾಯಿಸಿ]

೧.ಸಾಮ್ಯತೆಗಳು

 • ದೇಹದ ಆಕಾರ.
 • ಬಲಾನೊಗ್ಲೋಸ್ನ ಪ್ರೊಬೋಸ್ಸಿಸ್ ಮಣ್ಣಿನ ಹುಳದ ಪ್ರೊಸ್ಟೊಮಿಯಮ್ ಅನ್ನು ಹೋಲುತ್ತದೆ.
 • ವೆಂಟ್ರಲ್ ನರ ಬಳ್ಳಿ.
 • ಡಾರ್ಸಲ್ ಮತ್ತು ವೆಂಟ್ರಲ್ ರಕ್ತನಾಳ.
 • ರಕ್ತದ ಹರಿವಿನ ನಿರ್ದೇಶನ.

೨.ವ್ಯತ್ಯಾಸಗಳು

 • ಮೂಳೆಗಳ ನರಬಳ್ಳಿ ಮತ್ತು ಗಿಲ್-ಸ್ಲಿಟ್ ಅನೆಲಿಡಾಗಳಲ್ಲಿ ಕಂಡುಬರುವುದಿಲ್ಲ.
 • ಅನೆಲಿಡಾದಲ್ಲಿ ವ್ಯವಸ್ಥಿತವಾಗಿ ಜೋಡಿತವಾದ ನೆಫ್ರೀಡಿಯಾ, ಬೆಲನೋಗ್ಲೋಸಸ್ನಲ್ಲಿ ಇಲ್ಲ.
 • ಗ್ಯಾಸ್ಟ್ರುಲೇಷನ್ ಕ್ರಿಯೆಯು ಅನೆಲಿಡಾದಲ್ಲಿ ಎಪಿಬೊಲಿ ಮತ್ತು ಬೆಲನೊಗ್ಲೋಸಸ್ನಲ್ಲಿ ಎಂಬಲಿ ಮೂಲಕ ಸಂಭವಿಸುತ್ತದೆ.
 • ಅನೆಲಿಡಾದಲ್ಲಿ ಸೀಲೋಮ್ ಸ್ಕಿಜೋಸಲಿಕ್ ಆಗಿದೆ, ಬೆಲನೋಗ್ಲೋಸಸ್ನಲ್ಲಿ ಎಂಡೋಸೀಲಿಕ್ ಆಗಿದೆ.
 • ಬ್ಲಾಸ್ಟೊಪೋರ್ ಅನೆಲಿಡಾ ಲಾರ್ವಾಗಳಲ್ಲಿ ಬಾಯಿ ಆಗಿ ಮಾರ್ಪಡುತ್ತದೆ ಮತ್ತು ಬೆಲನೊಗ್ಲೋಸಸ್ನಲ್ಲಿ ಗುದದ್ವಾರವಾಗಿ ಮಾರ್ಪಡುತ್ತದೆ.
 • ಟ್ರೋಕೊಫೋರ್ನಲ್ಲಿರುವ ಸರಳ ಮೂತ್ರಪಿಂಡಗಳು ಟಾರ್ನೇರಿಯಾದಲ್ಲಿ ಇರುವುದಿಲ್ಲ.

ಕಂಟಕಚರ್ಮಿಗಳ ಜೊತೆ ಸಂಬಂಧ[ಬದಲಾಯಿಸಿ]

 1. .ಟಾರ್ನೇರಿಯಾ ಲಾರ್ವ,ಬೈಫಿನ್ನೇರಿಯಾ ಲಾರ್ವ ಹಾಗೂ ಕಂಟಕಚರ್ಮಿಗಳ ಇತರೆ ಲಾರ್ವಾಗಳ ನಡುವಿನ ಸಾಮ್ಯತೆಗಳು
 • ಅವುಗಳು ಪಾರದರ್ಶಕ
 • ಬ್ಲಾಸ್ಟೋಪೋರ್ಗಳು ಗುದದ್ವಾರವಾಗಿ ಪರಿವರ್ತನೆಯಅಗುತ್ತದೆ.
 • ಜೀರ್ಣಾಂಗವ್ಯೂಹವು ಅನ್ನನಾಳ,ಉದರ ಹಾಗೂ ಕರುಳು ಎಂಬ ಮೂರು ಭಾಗಗಳನ್ನು ಹೊಂದಿದೆ.
 1. .ವ್ಯತ್ಯಾಸಗಳು
 • ಕಂಟಕಚರ್ಮಿಗಳಿಗೆ ಎಪಿಕಲ್ ಪ್ಲೇಟ್ ಹಾಗೂ ಕಣ್ಣುಗಳು ಇಲ್ಲ.

ಗೋಧಿ ಜೀರುಂಡೆ[ಬದಲಾಯಿಸಿ]

ಗೋಧಿ ಜೀರುಂಡೆ
Capturing-Natural-Colour-3D-Models-of-Insects-for-Species-Discovery-and-Diagnostics-pone.0094346.g001.jpg
Sitophilus.granarius.jpg
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: ಪ್ರಾಣಿ
ವಂಶ: ಆರ್ತ್ರೋಪೋಡ
ವರ್ಗ: ಇನ್ಸೆಕ್ಟಾ
ಗಣ: ಕೊಲಿಯಾಪ್ಟೆರ
ಕುಟುಂಬ: ಕುರ್ಕುಲಿಯೊನಿಡೆ
ಉಪಕುಟುಂಬ: ಡ್ರಯೋಫ್ಥೊರಿನೆ
ಬುಡಕಟ್ಟು: ಲಿಟೊಸೊಮಿನಿ
ಕುಲ: ಸಿಟೊಫಿಲಸ್
ಪ್ರಭೇದ: S. granarius
ದ್ವಿಪದ ಹೆಸರು
ಸಿಟೊಫಿಲಸ್ ಗ್ರಾನೇರಿಯಸ್
(Linnaeus, 1758[೧]

ಗೋಧಿ ಜೀರುಂಡೆಯು ಸಾಮಾನ್ಯವಾಗಿ ಎಲ್ಲಾ ಕಡೆಗಳಲ್ಲಿಯೂ ಕಂಡುಬರುತ್ತದೆ. ಇದರ ವೈಜ್ಞಾನಿಕ ಹೆಸರು ಸಿಟೊಫಿಲಸ್ ಗ್ರಾನೇರಿಯಸ್.[೨] ಇವುಗಳು ಧಾನ್ಯಗಳಿಗೆ ಹಾನಿಯುಂಟುಮಾಡುತ್ತದೆ ಮತ್ತು ಬೆಳೆಯ ಇಳುವರಿಯನ್ನು ಕಡಿಮೆಮಾಡುತ್ತದೆ. ಹೆಣ್ಣು ಜೀರುಂಡೆಯು ಇಡುವ ಮೊಟ್ಟೆಯಿಂದ ಹೊರಬರುವ ಮರಿಯು ಧಾನ್ಯದ ತಿರುಳನ್ನು ತಿನ್ನುತ್ತದೆ.

ಜೀವನಚಕ್ರ[ಬದಲಾಯಿಸಿ]

ಕಂದು ಬಣ್ಣದ ಸಣ್ಣ ಜೀರುಂಡೆಯು ೩ರಿಂದ೪ ಮಿ.ಮೀ.ಉದ್ದವಿರುತ್ತದೆ.[೩] ಹೆಣ್ಣು ಗೋಧಿ ಜೀರುಂಡೆಗಳು ಸುಮಾರು ೩೬ರಿಂದ ೨೫೪ ಮೊಟ್ಟೆಗಳನ್ನು ಇಡುತ್ತವೆ. ಜೀವನ ಚಕ್ರವು ಬೇಸಿಗೆಯಲ್ಲಿ ಸುಮಾರು 5 ವಾರಗಳನ್ನು ತೆಗೆದುಕೊಳ್ಳುತ್ತದೆ, ಆದರೆ ತಂಪಾದ ತಾಪಮಾನದಲ್ಲಿ 20 ವಾರಗಳವರೆಗೆ ತೆಗೆದುಕೊಳ್ಳಬಹುದು. ವಯಸ್ಕ ಗೋಧಿ ಜೀರುಂಡೆಯು ಕೆಂಪು-ಕಂದು ಬಣ್ಣವನ್ನು ಹೊಂದಿದೆ.ಅವುಗಳಿಗೆ ಹಾರಲು ಆಗುವುದಿಲ್ಲ. ಲಾರ್ವಾಗಳಿಗೆ ಕಾಲುಗಳು ಇಲ್ಲ. ಉದ್ದವಾದ ಮುಖ ಹಾಗೂ ಬಾಯಿಯಲ್ಲಿ ಜಗಿಯುವ ಭಾಗಗಳನ್ನು ಹೊಂದಿದೆ.

ವರ್ತನೆ[ಬದಲಾಯಿಸಿ]

ಹೆಣ್ಣು ಜೀರುಂಡೆಯು ಧಾನ್ಯವನ್ನು ಕೊರೆದು ತೂತನ್ನು ಮಾಡಿ ಅದರಲ್ಲಿ ಮೊಟ್ಟೆಯನ್ನು ಇಡುತ್ತದೆ. ನಂತರ ಆ ತೂತನ್ನು ಜಿಲೆಟಿನ್ ಸ್ರವಿಸುವಿಕೆಯ ಮೂಲಕ ಮುಚ್ಚುತ್ತದೆ.[೪] ಇದರಿಂದ ಇತರೆ ಹೆಣ್ಣು ಜೀರುಂಡೆಗಳಿಗೆ ಅದರಲ್ಲಿ ಈಗಾಗಲೆ ಮೊಟ್ಟೆ ಇದೆ ಎಂದು ತಿಳುಯುತ್ತದೆ. ತೊಂದರೆ ಅಥವಾ ಹೆದರಿಕೆಗೆ ಒಳಗಾದಾಗ ಅವುಗಳು ಕಾಲುಗಳನ್ನು ದೇಹದ ಹತ್ತಿರಕ್ಕೆ ಎಳೆದುಕೊಳ್ಳುತ್ತದೆ. ಒಂದು ವರ್ಷದಲ್ಲಿ ಸುಮಾರು ೬,೦೦೦ ಸಂತತಿಯನ್ನು ಉತ್ಪತ್ತಿ ಮಾಡುತ್ತದೆ.

ನಿಯಂತ್ರಣ[ಬದಲಾಯಿಸಿ]

 • ಧಾನ್ಯವನ್ನು ಬಿಗಿಯಾದ ಮುಚ್ಚಳ ಹೊಂದಿರುವ ಲೋಹದ ಡಬ್ಬಿಯಲ್ಲಿ ಇಡಬೇಕು.
 • ಅದನ್ನು ರೆಫ್ರಿಜರೇಟರ್ನಲ್ಲಿ ಶೇಖರಿಸಿಡಬೇಕು.
 • ಸಣ್ಣ ಪ್ರಮಾಣದಲ್ಲಿ ಕೊಂಡುಕೊಳ್ಳಬೇಕು.

ಉಲ್ಲೇಖಗಳು[ಬದಲಾಯಿಸಿ]

 1. "Sitophilus granarius (Linnaeus, 1758)". Integrated Taxonomic Information System. Retrieved September 6, 2012. 
 2. https://www.catseyepest.com/pest-library/pantry-pests/weevils/granary-weevil
 3. https://keys.lucidcentral.org/keys/v3/eafrinet/maize_pests/key/maize_pests/Media/Html/Sitophilus_granarius_(Linnaeus_1875)_-_Granary_Weevil.htm
 4. http://www.yourarticlelibrary.com/zoology/granary-weevil-distribution-and-life-cycle/24024