ಸದಸ್ಯ:Deeksha suvarna s/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಧಾನಾಟ ರಾಧಾನಾಟ ಸಣ್ಣಾಟದ ಒಂದು ಪ್ರಕಾರ. ಮಹಾರಾಷ್ಟ್ರದ ತಮಾಶಾದಿಂದ ಪ್ರೇರಣೆ ಪಡೆದು ಕಳೆದು ಶತಮಾನದ ಉತ್ತರಾರ್ಧದಲ್ಲಿ ಹುಟ್ಟೆಕೊಂಡಿರುವಂತಹದ್ದು. ದಾಸರಾಟಗಳು ಮಾಯವಾಗುತ್ತಿದ್ದ ಕಾಲಕ್ಕೆ ಸಣ್ಣಾಟದಲ್ಲಿಯೇ 'ರಾಧಾನಾಟ' ಎಂಬ ಹೊಸ ಪ್ರಕಾರ ತಲೆಯೆತ್ತಿತ್ತು. ತಮಾಶಾದ ಚುಮಣಾ. ಗಲ್ಪೋಜಿ ಮತ್ತು ಸಖಾರಾಮ ತಾತ್ಯಾ ರಾಧಾನಾಟಕ್ಕೆ ಆಮದಾದ ಪಾತ್ರಗಳು. ದಾಸರಾಟದ ನಾಯಕ ಗೊಡ್ಡಿ ಭೀಮನ ಹೆಸರನ್ನೇ ಬದಲಾತಿಸಿ ರಾಧಾನಾತಕ್ಕೆ ಗಲ್ಪೋಜಿ ಎಂದು ಬಳಸಿಕೊಳ್ಳಲಾಗಿದೆ ಎಂಬ ಅಭಿಪ್ರಾಯಗಳಿವೆ. ದಾಸರಾಟ ಹಾಗೂ ತಮಾಶಾವನ್ನು ನೋಡಿದ ಕವಿ, ಎರಡು ಆಟಗಳನ್ನು ತುಲನಾತ್ಮಕವಾಗಿ ಗಮನಿಸಿ ರಾಧಾನಾಟವನ್ನು ರಚಿಸಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತ್ತಿಲ್ಲ ಎಂಬ ಅಭಿಪ್ರಾವೂ ಇದೆ. ರಾಧಾನಾಟವನ್ನು ಮೊದಲು ರಚಿಚಿದವ ಬೆಳಗಾಂವ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಸರಗಿ ಕುಂಬಾರ ಎಂದು ತಿಳಿಯುತ್ತದೆ. ಚಿಕ್ಕೋಡಿ ತಾಲೂಕಿನಲ್ಲಿ ಮರಾಠಿ ಭಾಷೆಯ ಜನ ಅಲ್ಲಲ್ಲಿ ಕಂಡುಬರುತ್ತಾರೆ. ಅಲ್ಲಿ ತಮಾಶಾ ಪ್ರದರ್ಶನವಾಗುತ್ತಿದ್ದು ಅವುಗಳನ್ನು ನೀಡಿ ಈತ ಅವುಗಳನ್ನು ಅನುಕರಣೆ ಮಾಡಿರುವ ಸಾಧ್ಯತೆ ಹೆಚ್ಚು. ಇವನು ರಚಿಸಿದ ಆಟಕ್ಕೆ 'ಬಸರಗಿ ಕುಂಬಾರನ ಆಟಕ್ಕೆ 'ಬಸರಗಿ ಕುಂಬಾರನ ಆಟ'ವೆಂದೇ ಕರೆಯುತ್ತಿದ್ದರು.ಇವನಿಗೆ ತುಳಸಿ ರಾಮಸಿಂಗ ಎಂಬ ಗುರುವಿದ್ದನೆಂದು ತಿಳಿಯುತ್ತದೆ. ಬಸರಗಿ ಕುಂಬಾರನ ತರುವಾಯ ಅನೇಕ ಕವಿಗಳು ರಾಧಾನಾಟ ರಚಿಸಿದ್ದಾರೆ.