ಸದಸ್ಯ:DIVYA FRANCIS D/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಯೋಲಾ ಗಾರ್ವಿನ್[ಬದಲಾಯಿಸಿ]

ಜೀವನ ಮತ್ತು ವೃತ್ತಿ ಜೀವನ[ಬದಲಾಯಿಸಿ]

ವಿಯೋಲಾರವರು ಜನವರಿ ೧ ೧೮೯೮ ರಂದು ಬೆನ್ವೆಲ್ ನಲ್ಲಿ ಹುಟ್ಟಿದರು. ಅವರು ಶನಿವಾರದಂದು ಹುಟ್ಟಿದರು. ಅವರು ಇಂಗ್ಲೀಷ್ ಕವಿ ಮತ್ತು ಸಾಹಿತ್ಯ ಸಂಪಾದಕಿಯಾಗಿ 'ದಿ ಅಬ್ಸರ್ವ್ವ್ರ್' ಎಂಬಲ್ಲಿ ಸಂಪಾದಕಿಯಾಗಿ ಕೆಲಸವನ್ನು ಮಾಡುತ್ತಿದರು. ಅವರ ತಂದೆಯ ಹೆಸರು ಜೆಮ್ಸ್ ಲೂಯಿಸ್ ಗಾರ್ವಿನ್. ಅವರ ತಾಯಿಹೆಸರು ಕ್ರಿಸ್ಟಿನಾ ಎಲೆನ್ ವಿಲ್ಸನ್. ಅವರ ಹಿರಿಯ ಸಹೋದರನಾದ ರೋಲ್ಯಾಂಡ್ ಗೆರಾರ್ಡ್ ಗಾರ್ವಿನ್ ನನ್ನು ಮೊದಲ ಮಹಾಯುದ್ದದಲ್ಲಿ ಕೊಲ್ಲಲಾಗಿತ್ತು. ವಿಯೋಲಾಗೆ ಇನ್ನೂ ಮೂರು ಸಹೋದರಿಯರು ಇದ್ದರು. ಅವರ ಹೆಸರು ಉನಾ, ಕ್ಯಾಥರೀನ್ ಮತ್ತು ಉರ್ಸುಲಾ.ವಿಯೋಲಾರವರು ಜೆಮ್ಸ್ ಲೂಯಿಸ್ ಗಾರ್ವಿನ್ ಅವರ ದೊಡ್ಡ ಮಗಳು. ದಕ್ಷಿಣ ಹ್ಯಾಂಪ್ಸ್ಟಡ್ ಶಾಲೆಯಲ್ಲಿ ಮತ್ತು ಸೊಮರ್ವ್ಲ ಕಾಲೇಜು ಆಕ್ಸ್ಫರ್ಡ್ನ ನಲ್ಲಿ ಕಲಿಕೆಯನ್ನು ಪಡೆದರು. ನಂತರ ಸಹಾಯಕ ಸಾಹಿತ್ಯ ಸಂಪಾದಕಿಯಾಗಿ 'ದಿ ಅಬ್ಸರ್ವ್ವ್ರ್' ನಲ್ಲಿ ಕೆಲಸ ಮಾಡಿದ್ದಾರೆ. ಆದರೆ ಅವರ ತಂದೆಯ ಒಪ್ಪಂದವನ್ನು ನವೀಕರಿಸದ ಕಾರಣ ಅದನ್ನು ೧೯೪೨ರಲ್ಲಿ ಬಿಟ್ಟು ಅವರು ಅದರಿಂದ ಹೊರ ಬರುವ ಪರಿಸ್ಥಿತಿ ಬಂತು. ಅವರು ಫ್ರೆಂಚ್ ಅನುವಾದಕಿಯಾಗಿ ಕೆಲಸ ಮಾಡಿದ್ದಾರೆ. ಉದಾಹರಣೆಗೆ ೧೯೩೦ರಲ್ಲಿ ಜಾಕ್ಯೂಸ್ ಚಾರ್ಡೋನ್ನೆ ಅವರ ಇವಾ, ೧೯೪೪ರಲ್ಲಿ ರೊಮೇನ್ ಗ್ಯಾರಿ ಫಾರೆಸ್ಟ್ ಆಫ್ ಆಂಗರ್, ೧೯೫೬ರಲ್ಲಿ ಕಾನ್ಸ್ಟಂಟಿನ್ ಡಿ ಗ್ರನ್ವಾಲ್ ಡ್ಸ್ ಪೀಟರ್ ದಿ ಗ್ರೆಟ್ ಗಳನ್ನು ಫ್ರೆಂಚ್ ನಲ್ಲಿ ಅನುವಾದಿಸಿದರು. ೧೯೨೦ ಮತ್ತು ೧೯೩೦ ಈ ಅವಧಿಯಲ್ಲಿ ಅವರಿಗೆ ಮತ್ತೆ ಮತ್ತೆ ಸಾಲದ ತೊಂದರೆ ಎದುರಾಯಿತು.ಫ್ರಾನ್ಸಿಸ್ ಥಾಂಪ್ಸನ್ ಅವರ "ದಿ ಮೇಕಿಂಗ್ ಆಫ್ ವಿಯೋಲಾ" ಮತ್ತು ವಿಯೋಲಾ ಮೆಯ್ನೆಲ್ ಗೆ ಅವಳನ್ನು ಹೆಸರಿಸಲಾಯಿತು. [2] [3]

ವೈವಾಹಿಕ ಜೀವನ[ಬದಲಾಯಿಸಿ]

೧೯೩೦ರ ಅವಧಿಯಲ್ಲಿರು ವಿಯೋಲಾರವರು ಹಂಬರ್ಟ್ ವೊಲ್ಫ್ ಎಂಬವರ ಜೊತೆ ಸಂಬಂಧದಲ್ಲಿ ಇದ್ದರು. ಹಂಬರ್ಟ್ ವೊಲ್ಫ್ ಅವರು ಸಹ ಒಬ್ಬ ಕವಿ ಆಗಿದ್ದರು. ಆದರೆ ಅವರ ಮದುವೆ ಬೇರೆಯವರ ಜೊತೆ ಮದುವೆ ಆಗಿತ್ತು.

ಪ್ರಕಟಣೆಗಳು[ಬದಲಾಯಿಸಿ]

ಅವರು ಮೂರು ಪುಸ್ತಕಗಳನ್ನು ಪ್ರಕಟ ಮಾಡಿದ್ದಾರೆ. ಅವುಗಳು ಯಾವುದೆಂದರೆ:

೧೯೨೨ರಲ್ಲಿ 'ಅಸ್ ಯು ಸೀ ಇಟ್'[ಬದಲಾಯಿಸಿ]

೧೯೨೬ರಲ್ಲಿ 'ಕಾರ್ನ್ ಇನ್ ಈಜಿಪ್ಟ್'[ಬದಲಾಯಿಸಿ]

೧೯೨೮ರಲ್ಲಿ 'ಡೆಡಿಕೆಶನ್'[ಬದಲಾಯಿಸಿ]

ರೋಬರ್ಟ್ ಇ ಹೋವರ್ಡ್ ಅವರು ವಿಯೋಲಾರವರ ದಿ ಹೌಸ್ ಆಫ್ ಸೀಸರ್ಯಿಂದ ಒಂದೆರಡು ಸಾಲುಗಳನ್ನು ತಮ್ಮ ಆತ್ಮಹತ್ಯಾ ಟಿಪ್ಪಣಿಯಲ್ಲಿ ಬಳಸಿದರು.


ಮರಣ[ಬದಲಾಯಿಸಿ]

ವಿಯೋಲಾರವರು ಜನವರಿ ೧೯೬೯ರಂದು ಮರಣ ಹೊಂದರು.

ಉಲ್ಲೇಖ[ಬದಲಾಯಿಸಿ]

https://en.wikipedia.org/wiki/Viola_Garvin

https://everipedia.org/wiki/Viola_Garvin/