ಸದಸ್ಯ:DEEKSHITHA K MLORE/ನನ್ನ ಪ್ರಯೋಗಪುಟ
ವಂಶವಾಹಿ
ಜೆನೆಟಿಕ್ಸ್ ಆಸಕ್ತಿದಾಯಕ ವಿಷಯವಾಗಿದೆ
ವಂಶವಾಹಿಯು ನ್ಯೂಕ್ಲಿಯೊಟೈಡ್‌ಗಳಿಂದ ಆದ ಡಿಎನ್ಎಯ ಒಂದು ನೆಲೆ (ಅಥವಾ ಪ್ರದೇಶ) ಮತ್ತು ಅನುವಂಶಿಕತೆಯ ಅಣ್ವಿಕ ಘಟಕ.:ಶಬ್ದಾರ್ಥಗಳು ಜೀವಿಯೊಂದು ತನ್ನ ಸಂತಾನಕ್ಕೆ ವಂಶವಾಹಿಗಳನ್ನು ಕೊಡುವುದು ಜೀವಿಯ ಅವಲೋಕಿಸ ಬಹುದಾದ ಗುಣಗಳನ್ನು ಅನುವಂಶಿಕವಾಗಿ ಕೊಡುವುದಕ್ಕೆ ಆಧಾರ. ಜೀವಿಯ ಬಹಳಷ್ಟು ಗುಣಗಳು ಹಲವು ವಂಶವಾಹಿಗಳು ಮತ್ತು ವಂಶವಾಹಿ-ಪರಿಸರದ ಅಂತರಕ್ರಿಯೆಯಿಂದ ಪ್ರಭಾವಿತವಾಗಿವೆ. ಕಣ್ಣಿನ ಬಣ್ಣ ಅಥವಾ ಅಂಗಾಗಳ ಸಂಖ್ಯೆಯಂತಹ ಕೆಲವೊಂದು ಅನುವಂಶಿಕ ಗುಣಗಳು ತಕ್ಷಣ ಕಾಣುತ್ತವೆ ಮತ್ತು ರಕ್ತದ ನಮೂನೆ, ನಿರ್ದಿಷ್ಟ ರೋಗದ ಅಪಾಯ ಅಥವಾ ಜೀವದ ಭಾಗವಾದ ಹಲವು ಸಾವಿರ ಮೂಲಭೂತ ಜೀವರಸಾಯನಿಕ ಪ್ರಕ್ರಿಯೆಗಳು ತಕ್ಷಣ ಕಾಣುವುದಿಲ್ಲ.
ವಂಶವಾಹಿಗಳ ಸರಣಿಯಲ್ಲಿ ಬದಲಾವಣೆ ಅಥವಾ ವ್ಯತ್ಯಯಗಳು ಉಂಟಾಗಬಹುದು. ಇದು ಭಿನ್ನವಾಗಿರುವ ಹಲವು ಅಲೆಲ್‌ಗಳಿಗೆ . ಈ ಅಲೆಲ್‌ಗಳು ತುಸು ಭಿನ್ನವಾದ ಪ್ರೋಟೀನ್‌ನ ಆವೃತ್ತಿಯನ್ನು ಸಂಕೇತಿಸುವ ಮೂಲಕ ಜೀವಿಯಲ್ಲಿ ಬೇರೆ ಬೇರೆ ಗುಣಗಳಿಗೆ ಕಾರಣವಾಗುತ್ತವೆ. ಅಲೆಲ್‌ಗಳು ನೈಸರ್ಗಿಕ ಆಯ್ಕೆಯ ಮೂಲಕ ಅಥವಾ ಯೋಗ್ಯವಾದ ಅಲೆಲ್‌ಗಳಷ್ಟೇ ಉಳಿದುಕೊಳ್ಳುವ ಮೂಲಕ ವಿಕಾಸವಾಗುತ್ತವೆ.
ಹೊಸ ವಿದ್ಯಮಾನಗಳನ್ನು ಕಂಡುಹಿಡಿದಂತೆ ವಂಶವಾಹಿಯ ವ್ಯಾಖ್ಯಾನವು ಹೆಚ್ಚು ಸುಧಾರಿಸುತ್ತಿದೆ. ಉದಾಹರಣೆಗೆ ವಂಶವಾಹಿಯನ್ನು ಸಂಕೇತಿಸುವ ಪ್ರದೇಶವು ಅದನ್ನು ನಿಯಂತ್ರಿಸುವ ಪ್ರದೇಶದಿಂದ ಬಹಳ ದೂರದಲ್ಲಿ ಇರಬಹುದು, ಮತ್ತು ಸಂಕೇತಿಸುವ ಪ್ರದೇಶವು ಹಲವು ಎಕ್ಸೋನ್‌ಗಳಾಗಿ ವಿಭಜಿತವಾಗಿರ ಬಹುದು. ಕೆಲವೊಂದು ವೈರಾಣುಗಳಲ್ಲಿ ಅನುವಂಶಿಕತೆಯ ಪದಾರ್ಥವಾಗಿ ಡಿಎನ್ಎ ಬದಲು ಆರ್‌ಎನ್ಎ ಇರುತ್ತದೆ. ಇನ್ನೂ ಕೆಲವು ವಂಶವಾಹಿ ಉತ್ಪಾದನೆಗಳು ಕಾರ್ಯನಿರ್ವಹಿಸುವ ಸಂಕೇತಗಳಲ್ಲದ ಆರ್‌ಎನ್ಎಗಳು ಆದ್ದರಿಂದ, ವಂಶವಾಹಿಯ ಆಧುನಿಕ ಕಾರ್ಯನುಕೂಲ ವ್ಯಾಖ್ಯಾನದ ಪ್ರಕಾರ ಅದೊಂದು ಪ್ರತ್ಯೇಕ, ಮುಂದಿನ ಪೀಳಿಗೆಗೆ ಕೊಡಬಹುದಾದ ಅನುವಂಶಿಕ ನೆಲೆ ಅಥವಾ ಜಿನೋಮ್ ಸರಣಿ ಮತ್ತು ಅದು ಕಾರ್ಯನಿರ್ವಹಿಸುವ ಉತ್ಪಾದನೆಯಾಗಿ ಪ್ರಕಟವಾಗುವ ಮೂಲಕವಾಗಲಿ ಅಥವಾ ವಂಶವಾಹಿ ಪ್ರಕಟವಾಗುವುದನ್ನು ನಿಯಂತ್ರಿಸುವ ಮೂಲಕವಾಗಲಿ ಜೀವಿಯ ಗುಣದ ಮೇಲೆ ಪರಿಣಾಮ ಬೀರುತ್ತದೆ