ಸದಸ್ಯ:D'Souza Ropson/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹವ್ಯಾಸಗಳು:

ನನ್ನ ಹೆಸರು ರೊಪ್ಸನ್ ಡಿಸೋಜ. ನಾನು ಪಾದುವ ಕಾಲೇಜು ಕಾಮರ್ಸ್ ಆಂಡ್ ಮ್ಯಾನೇಜ್ ಮೆಂಟ್ ಓದುತ್ತಿದ್ದೇನೆ. ನಾನು ಈಗ ನನ್ನ ಜೀವನದಲ್ಲಿ ಆಗಿರುವ ಸಂಗತಿಯನ್ನು ಹೇಳಲು ಇಚ್ಚಿಸುತ್ತೇನೆ.

ನಾನು ಮೊದಲು ಕಳಿಯುತ್ತಿದ್ದ ಶಾಲೆ ಯಾವುದೆಂದರೆ ದ‍‍ಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಸಿಹಿತ್ಲು. ಆಗ ನಾನು ಕೇವಲ ಓದುವುದರಲ್ಲಿ ಗಮನ ನೀಡುತ್ತಿದ್ದೆ. ಕೆಲವು ವರ್ಷದ ನಂತರ ನಾನು ಎಂಟನೇಯ ತರಗತಿಗೆ ಅಂಜುಮನ್ ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿದೆ. ಮೊದಲು ನನಗೆ ಓದುದರಲ್ಲಿ ಆಸಕ್ತಿ ಇತ್ತು. ಎಂಟನೇಯ ತರಗತಿಯಿಂದ ನನಗೆ ಓದುವುದರ ಜೊತೆಗೆ ಆಟ ಆಡುವ ಆಸಕ್ತಿ ಇತ್ತು. ನಾನು ಅಂದು ಆಟ ಆಡುತ್ತಿದ್ದ ಆಟ ಎಂದರೆ ವಾಲಿಬಾಲ್, ಕ್ರಿಕೆಟ್. ನನಗೆ ಅಂದು ಆ ಆಟ ತುಂಬಾ ಇಷ್ಟ ಪಡುತ್ತಿದ್ದೆ. ನಂತರ ನಾನು ಮುಂದಿನ ವಿದ್ಯಾಭ್ಯಾಸ ಪಡೆಯಲು ಪಾದುವ ಕಾಲೇಜಿಗೆ ಸೇರಿದೆ. ಇಲ್ಲಿಂದ ನನ್ನ ಜೀವನ ಬದಲಾಯಿತು. ನನಗೆ ಗೆಳೆಯರ ಪರಿಚಯವಾಯಿತು. ಕೆಲವು ಉದ್ದೇಶಗಳು ಬದಲಾದವು. ಆಗ ನನಗೆ ನಾಯಕತ್ವದ ಗುಣ ಬಂದಿತ್ತು.

ನನ್ನ ಜೀವನದಲ್ಲಿ ಹಲವಾರು ಯೋಚನೆಗಳು ಬಂದವು. ಭವಿಷ್ಯದಲ್ಲಿ ಗುರಿ ಮುಟ್ಟುವ ಕನಸು ಕಂಡೆ. ನಂತರ ನಾನು ವಿದ್ಯಾಭ್ಯಾಸ ಪೂರ್ಣಗೊಳಿಸಲು ಪಾದುವಾ ಕಾಲೇಜಿಗೆ ಸೇರಿದೆ ಈಗ ನಾನು ನನ್ನ ಹವ್ಯಾಸಗಳನ್ನು ತಿಳಿಸುವೆ,

ನನಗೆ ಚಿಕ್ಕವನಿರುವಾಗ ಚಿತ್ರಮಾಡುವ ಆಸೆ ಇತ್ತು. ನಂತರ ನನಗೆ ಕುಣಿಯುವ, ಬರೆಯುವ, ಮತ್ತು ಭಾಷಣ ಮಾಡುವ ಹವ್ಯಾಸ ಮೂಡಿತು. ಈಗ ನನಗೆ ಇದೆಲ್ಲವುದರ ಜೊತೆಗೆ ಆಟ ಆಡುವ ಹವ್ಯಾಸವು ಬಂದಿದೆ.

ನಮ್ಮಲ್ಲಿ ಯಾವುದಾದರೂ ಒಂದು ಒಳ್ಳೆಯ ಗುಣ ಅಡಗಿದೆ. ಅದನ್ನು ಹೊರತೆಗೆಯುವ ಹೊತ್ತು ಬರಬೇಕಾಗಿದೆ.