ಸದಸ್ಯ:Crizmariasen/sandbox
ನಿಖೊಲಸ್ ಡಿರ್ಕ್ಸ್
ಆರಂಭಿಕ ಜೀವನ ಮತ್ತು ವಿದ್ಯಾಭ್ಯಾಸ
[ಬದಲಾಯಿಸಿ]ಡಿರ್ಕ್ಸ್ ಅವರು ಇಲಿನಾಯ್ಸ್ ನಲ್ಲಿ ಹುಟ್ಟಿ,ನ್ಯೂ ಹೆವನ್ ನಲ್ಲಿ ಬೆಳೆದರು. ತನ್ನ ತಂದೆ ಜೆ ಎಡ್ವರ್ಡ್ ಡಿರ್ಕ್ಸ್ ಯೇಲ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಅವರ ತಂದೆಗೆ ೧೯೬೩ ರಲ್ಲಿ ಒಂದು ಫುಲ್ಬ್ರೈಟ್ ವಿದ್ಯಾರ್ಥಿ ವೇತನ ಸಿಕ್ಕಾಗ ,ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಕಲಿಯಲು ಅವಕಾಶ ದೊರಕಿತು. ಡಿರ್ಕ್ಸ್ ಕುಟುಂಬವು ಮದರಾಸಿಗೆ ಸ್ಥಳಾಂತರಗೊಂಡಿತು .ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಭಾರತೀಯ ಸಂಸ್ಕೃತಿಯ ಮೇಲೆ ಆಸಕ್ತಿ ಮೂಡಿತು. ಅವರು (ಸಾಮಾಜಿಕ ಅಧ್ಯಯನ ಕಾಲೇಜ್) ೧೯೭೨ ರಲ್ಲಿ ವೆಸ್ಲೆಯನ್ ಯೂನಿವರ್ಸಿಟಿಯಿಂದ ಬಿಎ ಪಡೆದು,ಚಿಕಾಗೋ ಯೂನಿವರ್ಸಿಟಿಯಿಂದ ೧೯೭೪ ರಲ್ಲಿ ಎಂ.ಎ(ಇತಿಹಾಸ) ಮತ್ತು ೧೯೮೧ ರಲ್ಲಿ ಪಿ. ಹೆಚ್. ಡಿ. (ಇತಿಹಾಸ ಮತ್ತು ಮಾನವಶಾಸ್ತ್ರಜ್ಞ) ಪಡೆದರು. ಅಲ್ಲಿ ಅವರಿಗೆ ಐತಿಹಾಸಿಕ ಮಾನವಶಾಸ್ತ್ರಜ್ಞರಾದ ಬರ್ನಾರ್ಡ್ ಕೊಹ್ನ್ ಎನ್ನುವವರ ಪ್ರಭಾವವಾಯಿತು . ಈ ಅವಧಿಯಲ್ಲಿ ಅವರು ಆಗಾಗ್ಗೆ ದಕ್ಷಿಣ ಭಾರತಕ್ಕೆ ಸಂಶೋಧನಾ ಉದ್ದೇಶಗಳಿಗಾಗಿ ಬರುತ್ತಿದ್ದರು. .
ವೃತ್ತಿ ಜೀವನ
[ಬದಲಾಯಿಸಿ]ಕ್ಯಾಲಿಫೊರ್ನಿಯಾ ತಂತ್ರಜ್ಞಾನ ಸಂಸ್ಥೆಯ ಮತ್ತು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಬೋಧನೆಯ ನಂತರ ೧೯೯೭ರಲ್ಲಿ ಕೊಲಂಬಿಯಾದತ್ತ ತೆರಳಿ ಅಲ್ಲಿನ ವಸಾಹತುಪೂರ್ವ ಮತ್ತು ವಿಭಿನ್ನ-ಶಿಸ್ತು ಗಳನ್ನೂ ಆಯ್ದುಕೊಂಡು ಸಂಶೋಧನೆ ನಡೆಸಿದರು. ಅವರು ಸೆಪ್ಟೆಂಬರ್ ೨೦೦೪ ರಲ್ಲಿ ಕಲೆ ಮತ್ತು ವಿಜ್ಞಾನಗಳ ಕೊಲಂಬಿಯಾ ಶಿಕ್ಷಕರ ಉಸ್ತುವಾರಿ ಉಪಾಧ್ಯಕ್ಷರಾಗಿ ನೇಮಕವಾದರು. ಡಿರ್ಕ್ಸ್ 'ಬ್ರಿಟೀಷ್ ವಸಾಹತು ನಿಯಮದ ಪರಿಣಾಮ'ಗಳನ್ನು ಆಧಾರವಾಗಿರಿಸಿ ದಕ್ಷಿಣ ಏಷ್ಯಾದ ಇತಿಹಾಸ ಹಾಗೂ ಸಂಸ್ಕೃತಿಯ ಕುರಿತಾಗಿ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ . ಅವನ ಅತ್ಯಂತ ಪ್ರಸಿದ್ಧ ಕೃತಿಗಳಲ್ಲೊಂದಾದ 'ದಿ ಹೋಲೋ ಕ್ರೌನ್ : ಎಥಿನೊಹಿಸ್ಟೊರಿ ಆಫ್ ಎನ್ ಇಂಡಿಯನ್ ಕಿಂಗ್ಡಮ್' (೧೯೮೭), 'ಕ್ಯಾಸ್ಟೆಸ್ ಆಫ್ ಮೈಂಡ್' (೨೦೦೧) ಮತ್ತು 'ದಿ ಸ್ಕ್ಯಾಂಡಲ್ ಆಫ್ ಎಂಪೈರ್' (೨೦೦೬). ಈ ಕೃತಿಗಳಲ್ಲಿ ಇವರು ಭಾರತ ಉಪಖಂಡದ ಮೇಲಿನ ಬ್ರಿಟಿಷ್ ಅಧಿಕಾರದ ಪರಿಣಾಮಗಳು ಮತ್ತು ಬ್ರಿಟಿಷರ ವಸಾಹತುಗಳಿಂದ ಬ್ರಿಟಿಷರ ಮೇಲಿನ ಪ್ರಭಾವಗಳ ಕುರಿತು ಆಧುನೀಕೃತ ಸಂಶೋಧನೆ ನಡೆಸಿದ್ದಾರೆ. ನವೆಂಬರ್ ೨೦೧೨ ರಲ್ಲಿ, ಡಿರ್ಕ್ಸ್ ಬರ್ಕ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕುಲಪತಿಯಾಗಿ ಆಯ್ಕೆಯಾದರು. ನವೆಂಬರ್ ೨೭, ೨೦೧೨ರಂದು, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಯುಸಿ ಬರ್ಕಲಿಯ ಮುಂದಿನ ಚಾನ್ಸೆಲರನಾಗಿ ಡಿರ್ಕ್ಸ್ ಅವರನ್ನು ಘೋಷಿಸಿತು. ನಂತರ ಇವರು ೨೦೧೩ ಜೂನ್ ೧ ರಂದು ಅಲ್ಲಿನ ಅಧಿಕಾರ ವಹಿಸಿಕೊಂಡರು. ಡಿರ್ಕ್ಸ್ ರವರು ' ಯೂನಿವರ್ಸಿಟಿ ಆಫ್ ಪೀಪಲ್ಸ್ ಪ್ರೆಸಿಡೆಂಟ್ಸ್ ಕೋನ್ಸಿಲ್'ನಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ .ಅಲ್ಲಿ ಅವರು ವಿಶ್ವದಾದ್ಯಂತ ನೆಲೆಸಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸುಲಭವಾಗಿ ದೊರಕಿಸಿಕೊಡುವ ಮತ್ತು ಆನ್ಲೈನ್ ಶೈಕ್ಷಣಿಕ ಸಂಸ್ಥೆಗಳನ್ನು ಅಭಿವೃದ್ಧಿಗೊಳಿಸುವತ್ತ ಗಮನಹರಿಸುತ್ತಿದ್ದಾರೆ. .
ಬರ್ಕ್ಲಿಯಲ್ಲಿ ಕುಲಪತಿಯಾದ ಸಮಯ
[ಬದಲಾಯಿಸಿ]ನಿಕೋಲಸ್ ಡಿರ್ಕ್ಸ್ ಪ್ರಾಚೀನ ಭಾರತದ ಜಾತಿ ವ್ಯವಸ್ಥೆಯನ್ನು ಖಂಡಿಸಿ ಸಾಂಸ್ಕೃತಿಕ ಮೌಲ್ಯವನ್ನು ಪ್ರತಿಬಿಂಬಿಸುವ ಒಂದು ಏಕಾಂಗಿ ವ್ಯವಸ್ಥೆಯನ್ನು ಕುರಿತಂತೆ ಚಿಂತಿಸುತ್ತಾರೆ ಭಾರತೀಯ ಸಂಪ್ರದಾಯದ ಮೂಲಭೂತ ಅಭಿವ್ಯಕ್ತಿ ಮುಖ್ಯವಾಗಿ ಜಾತಿ. ಜಾತಿ ವೃತ್ತಿಯನ್ನು ನಿರೂಪಿಸುತ್ತದೆ; ಹತ್ತೊಂಬತ್ತನೇ ಶತಮಾನದ ಜನಗಣತಿ ಒಂದು ಗೀಳು. ಜಾತಿ ಆಧಾರಿತ ಚಳುವಳಿಗಳ ಉದಯವನ್ನು ಖಂಡಿಸುವ ಇವರು ಇಪ್ಪತ್ತನೆಯ ಶತಮಾನದಲ್ಲಿ ಜಾತಿ ರಾಜಕೀಯದ ಒಂದು ಅಸ್ತ್ರ. ಇತಿಹಾಸ ಆಧಾರವಾಗಿ ಜಾತಿ ಕಲ್ಪನೆಯನ್ನು ಬೆಳೆಸುತ್ತದೆ . ನಿಕೋಲಸ್ ಡಿರ್ಕ್ಸ್ ಜೂನ್ ೧ ರಂದು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಹತ್ತನೇ ಕುಲಾಧಿಪತಿಯಾದರು.