ವಿಷಯಕ್ಕೆ ಹೋಗು

ಸದಸ್ಯ:Clerissa m/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರೀಡೆ

[ಬದಲಾಯಿಸಿ]

ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ, ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ. ಅಲ್ಲದೇ ಇದಕ್ಕೆ ಬದ್ಧತೆ ಮತ್ತು ನ್ಯಾಯದ ಆಟದ ಅಗತ್ಯವಿರುತ್ತದೆ. ಇದರಲ್ಲಿ ವಿಜೇತನನ್ನು ವಸ್ತುನಿಷ್ಠ ಮಾರ್ಗಗಳಿಂದ ವ್ಯಾಖ್ಯಾನಿಸಬಹುದು. [note] ಇದನ್ನು ನಿಯಮಗಳ ಅಥವಾ ವಾಡಿಕೆಗಳ ಶ್ರೇಣಿಯಿಂದ ನಡೆಸಲಾಗುತ್ತದೆ. ಕ್ರೀಡೆಯಲ್ಲಿ ಫಲಿತಾಂಶವನ್ನು(ಗೆಲುವುಅಥವಾ ಸೋಲು) ನಿರ್ಧರಿಸುವಾಗ ದೈಹಿಕ ಸಾಮರ್ಥ್ಯಗಳು ಮತ್ತು ಸ್ಪರ್ಧಿಯ ಕೌಶಲಗಳು ಪ್ರಮುಖ ಅಂಶಗಳಾಗುತ್ತವೆ. ದೈಹಿಕ ಚಟುವಟಿಕೆ ಜನರ, ಪ್ರಾಣಿಗಳ ಮತ್ತು/ಅಥವಾ ಚೆಂಡುಗಳು ಮತ್ತು ಯಂತ್ರಗಳಂತಹ ವಿವಿಧ ವಸ್ತುಗಳ ಚಲನೆಯನ್ನು ಒಳಗೊಂಡಿರುತ್ತದೆ. ಇದಕ್ಕೆ ವಿರುದ್ಧವಾಗಿ ಇಸ್ಪೀಟೆಲೆಗಳ ಆಟ ಮತ್ತು ಬೋರ್ಡ್ ಆಟದಂತ ಆಟಗಳನ್ನು ಮನಸ್ಸಿಗೆ ಸಂಬಂಧಿಸಿದ ಕ್ರೀಡೆಗಳೆಂದು ಕರೆದರೂ ಹಾಗು ಕೆಲವನ್ನು ಒಲಿಂಪಿಕ್ ಕ್ರೀಡೆಗಳೆಂದು ಗುರುತಿಸಿದರೂ ಇವು ಕೇವಲ ಬುದ್ಧಿಶಕ್ತಿಯ ಕೌಶಲಗಳನ್ನು ಅಪೇಕ್ಷಿಸುತ್ತವೆ. ಜಾಗಿಂಗ್ ಮತ್ತು ಬೆಟ್ಟ ಹತ್ತುವಂತಹ ಸ್ಪರ್ಧಾತ್ಮಕವಲ್ಲದ ಚಟುವಟಿಕೆಗಳನ್ನು ಸಾಮಾನ್ಯವಾಗಿ ಮನರಂಜನೆಗಳು ಎಂದು ವರ್ಗೀಕರಿಸಲಾಗುವುದು. ಗೋಲುಗಳನ್ನು ಸ್ಕೋರ್ ಮಾಡುವ ಅಥವಾ ಗೆರೆಯನ್ನು ಮೊದಲು ದಾಟುವಂತಹ ದೈಹಿಕ ಪಂದ್ಯಗಳು ಕ್ರೀಡೆಯ ಫಲಿತಾಂಶವನ್ನು ನಿರ್ಧರಿಸುತ್ತವೆ. ಆದರೂ, ಡೈವಿಂಗ್ , ಕುದುರೆ ತರಬೇತಿ ಮತ್ತು ಫಿಗರ್ ಸ್ಕೇಟಿಂಗ್ ನಂತಹ ಕೆಲವು ಕ್ರೀಡೆಗಳಲ್ಲಿ ಕೌಶಲದ ಮಟ್ಟವನ್ನು ಉತ್ತಮವಾಗಿ ನಿರ್ಧರಿಸಲಾದ ಮಾನದಂಡಕ್ಕೆ ಅನುಗುಣವಾಗಿ ನಿರ್ಣಯಿಸಲಾಗುತ್ತದೆ. ಸೌಂದರ್ಯ ಸ್ಪರ್ಧೆ ಮತ್ತು ಶರೀರವರ್ಧನೆ ಪ್ರದರ್ಶನಗಳಂತಹ ಫಲಿತಾಂಶ ನಿರ್ಣಯಿಸುವ ಇತರ ಚಟುವಟಿಕೆಗಳಿಗೆ ಇದು ತದ್ವಿರುದ್ಧವಾಗಿರುತ್ತದೆ. ಈ ಚಟುವಟಿಕೆಗಳಲ್ಲಿ ಕೌಶಲವನ್ನು ತೋರಿಸಬೇಕಿಲ್ಲ ಮತ್ತು ಮಾನದಂಡವನ್ನು ಸರಿಯಾಗಿ ವ್ಯಾಖ್ಯಾನಿಸಿಲ್ಲ.ಸೋಲನ್ನು ಮತ್ತು ಸಾಧನೆಗಳನ್ನು ಕ್ರೀಡಾ ವಾರ್ತೆಯಲ್ಲಿ ವ್ಯಾಪಕವಾಗಿ ಪ್ರಸಾರಮಾಡುವಾಗ ಅತ್ಯಂತ ದೊಡ್ಡ ಮಟ್ಟದಲ್ಲಿ ಬಹುಪಾಲು ಕ್ರೀಡೆಗಳ ನಿಖರವಾದ ದಾಖಲೆಗಳನ್ನು ಇಡಲಾಗುತ್ತದೆ ಮತ್ತು ಪರಿಷ್ಕರಿಸಲಾಗುತ್ತದೆ. ಕ್ರೀಡೆಗಳನ್ನು ಹೆಚ್ಚಾಗಿ ಮೋಜಿಗಾಗಿ ಅಥವಾ ಉತ್ತಮ ದೈಹಿಕ ಸ್ಥಿತಿಯಲ್ಲಿರಲು ಜನರಿಗೆ ವ್ಯಾಯಾಮ ಬೇಕೆಂಬ ಸರಳವಾದ ಸತ್ಯಕ್ಕಾಗಿ ಆಡಲಾಗುತ್ತದೆ. ಅದೇನೇ ಆದರೂ, ವೃತ್ತಿಪರ ಕ್ರೀಡೆ ಮನರಂಜನೆಯ ಮುಖ್ಯ ಮೂಲವಾಗಿದೆ.ಅವುಗಳು ಯಾವಾಗಲೂ ಯಶಸ್ವಿಯಾಗದಿದ್ದರೂ ಕೂಡ ಕ್ರೀಡೆಗಳಲ್ಲಿ ಭಾಗವಹಿಸುವವರು ಉತ್ತಮ ಕ್ರೀಡಾಪಟುತ್ವ ಪ್ರದರ್ಶಿಸಬೇಕೆಂದು ನಿರೀಕ್ಷಿಸಲಾಗುತ್ತದೆ. ಅಲ್ಲದೇ ಪ್ರತಿಸ್ಪರ್ಧಿಗಳು ಮತ್ತು ಅಧಿಕಾರಿಗಳ ಜತೆ ಗೌರವದಿಂದ ವರ್ತಿಸಬೇಕು ಹಾಗು ಆಟದಲ್ಲಿ ಸೋತಾಗ ಗೆದ್ದವರಿಗೆ ಅಭಿನಂದಿಸಬೇಕೆಂಬ ನಡವಳಿಕೆಯ ನಿಯಮಗಳನ್ನು ಅನುಸರಿಸಬೇಕು.ಕ್ರೀಡಾಪಟುತ್ವಕ್ರೀಡಾಪಟುತ್ವ ನ್ಯಾಯದ ಆಟಕ್ಕಾಗಿ ಪ್ರಯತ್ನಿಸುವ ನಡವಳಿಕೆ, ತಂಡದ ಸದಸ್ಯರು ಮತ್ತು ಪ್ರತಿಸ್ಪರ್ಧಿಯ ಬಗ್ಗೆ ಆದರಣೆ ಹಾಗು ನೈತಿಕ ನಡವಳಿಕೆ ಮತ್ತು ಪ್ರಾಮಾಣಿಕತೆ ಹಾಗೂ ಗೆಲುವು ಅಥವಾ ಸೋಲಿನಲ್ಲಿ ಘನತೆಯಿಂದ ವರ್ತಿಸುವುದು.ಕ್ರೀಡಾಪಟುತ್ವ ಚಟುವಟಿಕೆಯನ್ನು ಅದರ ಸಲುವಾಗಿಯೇ ಅನುಭವಿಸುವ ಆಕಾಂಕ್ಷೆಯನ್ನು ಮತ್ತು ವಿಶಿಷ್ಟ ಲಕ್ಷಣಗಳನ್ನು ವ್ಯಕ್ತಪಡಿಸುತ್ತದೆ. ಕ್ರೀಡಾ ವರದಿಗಾರ ಗ್ರಾಂಟ್ ಲ್ಯಾಂಡ್ ರೈಸ್ "ನೀವು ಆಟವನ್ನು ಗೆಲ್ಲುತ್ತೀರ ಅಥವಾ ಸೋಲುತ್ತೀರಾ ಎನ್ನುವುದು ಮುಖ್ಯವಲ್ಲ ನೀವು ಆಟವನ್ನು ಹೇಗೆ ಆಡಿದಿರಿ ಎಂಬುದು ಮುಖ್ಯ" ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಆಧುನಿಕ ಒಲಿಂಪಿಕ್ ನ ಸಂಸ್ಥಾಪಕ ಪೈರ್ರೆ ದೆ ಕೊಬಾರ್ಟಿನ್ ವ್ಯಕ್ತಪಡಿಸಿದ ಒಲಿಂಪಿಕ್ ಸೂತ್ರಗಳು: "ಅತ್ಯಂತ ಮುಖ್ಯವಾಗಿರುವುದೆಂದರೆ... ಗೆಲ್ಲುವುದಲ್ಲ ಆದರೆ ಪಾಲ್ಗೊಳ್ಳುವುದು". ಇವು ಈ ಭಾವನೆಯ ವಿಶೇಷವಾದ ಅಭಿವ್ಯಕ್ತಿಗಳಾಗಿವೆ.ಕ್ರೀಡೆಗಳಲ್ಲಿ ಹಿಂಸೆ ನ್ಯಾಯವಾದ ಆಟದ ಎಲ್ಲೆ ಮೀರುವುದನ್ನು ಮತ್ತು ಉದ್ದೇಶಪೂರ್ವಕ ಆಕ್ರಮಣಶೀಲ ಹಿಂಸೆಯನ್ನು ಒಳಗೊಳ್ಳುತ್ತದೆ. ನಿಷ್ಠೆ, ಪ್ರಾಬಲ್ಯ, ಕೋಪ ಅಥವಾ ಸಂಭ್ರಮವನ್ನು ಪ್ರದರ್ಶಿಸುವ ಸಂದರ್ಭದಲ್ಲಿ ದಾರಿತಪ್ಪುವ ಕ್ರೀಡಾಪಟುಗಳು, ತರಬೇತುದಾರರು, ಅಭಿಮಾನಿಗಳು, ಮತ್ತು ಹೆತ್ತವರು ಕೆಲವೊಮ್ಮೆ ಜನರು ಮತ್ತು ಆಸ್ತಿಪಾಸ್ತಿಯ ಮೇಲೆ ಹಿಂಸಾತ್ಮಕ ನಡವಳಿಕೆ ತೋರಿಸುತ್ತಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ದೊಂಬಿ ಅಥವಾ ಪುಂಡಾಟಿಕೆಗಳು ಸಾಮಾನ್ಯವಾಗಿ ನಡೆಯುತ್ತಿರುವ ಸಮಸ್ಯೆಯಾಗಿವೆ.