ಸದಸ್ಯ:Chitrap389/ನನ್ನ ಪ್ರಯೋಗಪುಟindian sale of goods act
ಇಂಡಿಯನ್ ಸೇಲ್ ಆಪ್ ಗೂಡ್ಸ್ ಆಕ್ಟ್-೧೯೩೦( ಭಾರತೀಯ ಮಾರಾಟ ಸರಕು ಕಾಯಿದೆ) ಈ ಕಾಯ್ದೆಯು ಸಹ ಇಂಡಿಯನ್ ಕಾಂಟ್ರಾಕ್ಟ್ ಕಾಯಿದೆ ರೀತಿಯದೆ. ಇಂಡಿಯನ್ ಸೇಲ್ ಆಪ್ ಗೂಡ್ಸ್ ಆಕ್ಟ್ ಜುಲೈ ೧,೧೯೩೦ ರಂದು ಅಸ್ಥಿತ್ವಕ್ಕೆ ಬಂದಿದೆ.ಈ ಒಪ್ಪಂದದ ಪ್ರಕಾರ ಮಾರಾಟಗಾರ ಸರಕನ್ನು ವರ್ಗಾವಣೆ ಮಾಡಲು ಅಥವಾ ಅದರ ಮಾಲೀಕತ್ವವನ್ನು ಖರೀದಿದಾರನಿಗೆ ಹಣ ತೆಗೆದುಕೊಂಡು ವರ್ಗಾಯಿಸಲು ಒಪ್ಪುತ್ತಾನೆ.ಈ ಕಾಯಿದೆಯು ಜಮ್ಮು ಕಾಶ್ಮೀರ ಬಿಟ್ಟು ಬೇರೆ ಎಲ್ಲಾ ರಾಜ್ಯಗಳಲ್ಲಿಯೂ ಅನ್ವಯವಾಗುತ್ತದೆ.[೧]
ವ್ಯಾಖ್ಯಾನ
[ಬದಲಾಯಿಸಿ]"ಸರಕುಗಳ ವ್ಯವಹಾರದ ವಿಭಾಗದ 4 (1) ರ ಪ್ರಕಾರ, ಮಾರಾಟದ ಒಪ್ಪಂದವು ಮಾರಾಟಗಾರನು ಸರಕುಗಳ ಶೀರ್ಷಿಕೆ ಅಥವಾ ಮಾಲೀಕತ್ವವನ್ನು ಖರೀದಿದಾರರಿಗೆ ವರ್ಗಾವಣೆ ಮಾಡುವ ಮೂಲಕ ಅಥವಾ ಸ್ಥಿರ ಬೆಲೆಗೆ ಅದನ್ನು ವರ್ಗಾಯಿಸಲು ಒಪ್ಪಂದ ಮಾಡಿಕೊಳ್ಳುತ್ತದೆ"
1. ಖರೀದಿದಾರ- ಖರೀದಿದಾರನು ಸರಕುಗಳನ್ನು ಕೊಳ್ಳುವ ಅಥವಾ ಕೊಳ್ಳಲು ಒಪ್ಪಿಕೊಳ್ಳುವ ವ್ಯಕ್ತಿ.
2.ಮಾರಟಗಾರ- ಮಾರಾಟಗಾರ ಸರಕುಗಳನ್ನು ಮಾರುವ ಅಥವಾ ಮಾರಲು ಒಪ್ಪುವ ವ್ಯಕ್ತಿಯು.
3.ಸರಕು- ಹಣವನ್ನು ಹೊರತುಪಡಿಸಿ ಎಲ್ಲಾ ರೀತಿಯ ಚಲಿಸುವ ವಸ್ತುಗಳು.
4.ಈಗ ಅಸ್ಥಿತ್ವದಲ್ಲಿರುವ ಸರಕುಗಳು - ಮಾರಾಟದ ಒಪ್ಪಂದದ ಸಮಯದಲ್ಲಿ ಇರುವ ಸರಕುಗಳು.
5.ಭವಿಷ್ಯದ ಸರಕುಗಳು- ಒಪ್ಪಂದದ ನಂತರ ಮಾರಾಟಗಾರರಿಂದ ತಯಾರಿಸಲ್ಪಟ್ಟ / ತಯಾರಿಸಬೇಕಾದ ಸರಕು.
6. ನಿರ್ದಿಷ್ಟ ಸರಕುಗಳು- ಒಪ್ಪಂದದ ಸಮಯದಲ್ಲಿ ಮಾರಲು ಒಪ್ಪುವ ವಸ್ತುಗಳು.
ಒಪ್ಪಂದದಲ್ಲಿ ಕಡ್ಡಾಯವಾಗಿ ಇರಬೇಕಾದ ಅಂಶಗಳು
[ಬದಲಾಯಿಸಿ]೧.ಇಬ್ಬರು ವ್ಯಕ್ತಿಗಳು- ಮಾರಟದ ಒಪ್ಪಂದ ಮಾಡಿಕೊಳ್ಳಲು ಮಾರಟಗಾರ ಹಾಗು ಖರೀಧಿದಾರ ಇರಬೇಕು.
೨.ಸರಕು- ಮಾರಟ ಮಾಡಲು ಸರಕಿರಬೇಕು ಮತ್ತು ಆ ವಸ್ಥುವು ಹಣವಾಗಿರಬಾರದು ಹಾಗು ಅದು ಚಲಿಸುವ ವಸ್ತುವು ಆಗಿರಬೇಕು.
೩.ಹಣ- ಮಾರಾಟ ಮಾಡುತ್ತಿರುವ ಹಣವನ್ನು ನಾವು ಒಪ್ಪಂದದಲ್ಲಿ ತಿಳಿಸಬೇಕು.
೪.ಮಾನ್ಯ ಒಪ್ಪಂದದ ಅಗತ್ಯ ಅಂಶಗಳು- ಒಪ್ಪಂದದಲ್ಲಿ ಮಾನ್ಯ ಒಪ್ಪಂದದ ಪ್ರತಿಯೊಂದು ಅಂಶವು ಇರಬೇಕು.ಇಲ್ಲವೆಂದಲ್ಲಿ ಅದು ಮೋಸವಾಗುತ್ತದೆ.
ಪಾವತಿಸದ ಮಾರಾಟಗಾರ ಮತ್ತು ಅವರ ಹಕ್ಕುಗಳು
[ಬದಲಾಯಿಸಿ]ಪಾವತಿಸದ ಮಾರಟಗಾರ ನೆಂದರೆ ೧.ಸರಕನ್ನು ಆಗಲೇ ಖರೀದಿದಾರನಿಗೆ ಕೊಟ್ಟಿದ್ದರು ಇನ್ನೂ ಹಣ ಮಾರಟಗಾರನಿಗೆ ಬಂದಿಲ್ಲವೆಂದರೆ ಅವನನ್ನು ಪಾವತಿಸದ ಮಾರಟಗಾರ ಎನ್ನುತ್ತೇವೆ. ೨. ಖರೀದಿದಾರ ಕೊಟ್ಟಿರುವ ಬ್ಯಾಂಕ್ ಚೆಕ್ ಬ್ಯಾಂಕ್ನಲ್ಲಿ ಬೌಂನ್ಸ್ ಆದರೆ ಮಾರಟಗಾರ ಪಾವತಿಸದ ಮಾರಟಗಾರನಾಗುತ್ತಾನೆ. ಪಾವತಿಸದ ಮಾರಟಗಾರನ ಹಕ್ಕುಗಳು ೧) ಸರಕುಗಳಿಗೆ ಸಂಭಂದ ಪಟ್ಟ ಹಕ್ಕುಗಳು ೨)ಖರೀದಿದಾರನ ವಿರುದ್ದ ಸಂಭಂದ ಪಟ್ಟ ಹಕ್ಕುಗಳು ೧) ಸರಕುಗಳಿಗೆ ಸಂಭಂದ ಪಟ್ಟ ಹಕ್ಕುಗಳು ಅ.ಸರಕು ವರ್ಗಾವಣೆಯಾಗಿದ್ದರೆ
- ಸರಕು ಸಾಗಣೆಯಲ್ಲಿಯೇ ತಡೆಯಬಹುದು.
- ಸರಕನ್ನು ಮತ್ತೆ ಮಾರುವ ಹಕ್ಕಿದೆ.
ಆ.ಸರಕು ವರ್ಗಾವಣೆಯಾಗಿರದಿದ್ದರೆ
- ಸರಕನ್ನು ತನ್ನ ಬಳಿಯೇ ಇಟ್ಟುಕೊಳ್ಳಬಹುದು.
೨)ಖರೀದಿದಾರನ ವಿರುದ್ದ ಸಂಭಂದ ಪಟ್ಟ ಹಕ್ಕುಗಳು
- ಬೆಲೆಗೆ ಮೊಕದ್ದಮೆಯನ್ನು ಹೂಡಬಹುದು.
- ಆಗಿರುವ ಹಾನಿಗೆ ಮೊಕದ್ದಮೆಯನ್ನು ಹೂಡಬಹುದು.
- ಆಗಿರುವ ಹಾನಿಗೆ ಬಡ್ಡಿ ಸಮೇತ ಹಣವನ್ನು ವಾಪಸ್ ಪಡೆಯಬಹುದು.[೨]