ಸದಸ್ಯ:Chethan bajpe/sandbox
ಗೋಚರ
ನನ್ನ ಬರಹವನ್ನು ಓದುತ್ತಿರುವ ನಿಮಗೆಲ್ಲರಿಗು ಮೊದಲನೆಯದಾಗಿ ನನ್ನ ಹೆಸರನ್ನು ತಿಳಿಸ ಬಯಸುತ್ತೇನೆ. ತರಿಕಂಬಳ ಬಜ್ಪೆಯ ನಿವಾಸಿಯಾಗಿರುವ ನನ್ನ ಹೆಸರು ಚೇತನ್. ವಸಂತ್ ಮತ್ತು ಸರೋಜಿನಿ ನನ್ನ ತಂದೆ ತಾಯಿ. ಅತ್ತ ಹಳ್ಳಿಯೂ ಅಲ್ಲದ ಇತ್ತ ಪಟ್ಟಣವೂ ಅಲ್ಲದ ಊರು ನನ್ನದು. ಪರೊವೆಲ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಾನು ಹೈಸ್ಕೂಲ್ ಹಾಗೂ ಪಿಯು ಶಿಕ್ಷಣವನ್ನು ಸಂತ ಜೋಸೆಫ್ ಶಾಲೆಯಲ್ಲಿ ಮುಗಿಸಿದೆ. ಎಲ್ಲಾ ಹುಡುಗರಂತೆ ನನಗೂ ಶಿಕ್ಷಣಕ್ಕಿಂತಲೂ ಹೆಚ್ಚಾಗಿ ಕ್ರೀಡೆಯ ಮೇಲೆಯೆ ಒಲವು. ಹೈಸ್ಕೂಲ್ ಹಾಗೂ ಪಿಯು ಕಲಿಯುತ್ತಿದ್ದ ಸಂದರ್ಭ ಅನೇಕ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಜಯಿಸಿದ್ದೇನೆ. ಸಂತ ಜೋಸೆಫ್ ಕಾಲೇಜಿನಲ್ಲಿ ಪಿಯು ಶಿಕ್ಷಣ ನಡೆಸುತ್ತಿದ್ದ ಸಂದರ್ಭ ಅನೇಕ ಕಬಡ್ಡಿ ಕ್ರೀಡಾಕೂಟಗಳಲ್ಲಿ ಜಿಲ್ಲೆ ಹಾಗೂ ರಾಜ್ಯಮಟ್ಟದ ತಂಡಗಳಲ್ಲಿ ಭಾಗವಹಿಸಿದ್ದೇನೆ. ಇದೀಗ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಲ್ಲಿ ಪ್ರಥಮ ಬಿಎ ವ್ಯಾಸಂಗ ಮಾಡುತ್ತಿದ್ದು, ಆನಿಮೇಷನ್ ಕ್ಷೇತ್ರದಲ್ಲಿ ಸಾಧನೆ ಮಾಡುವುದು ನನ್ನ ಮಹದಾಸೆ.