ಸದಸ್ಯ:Chethan Kumar B K/ನನ್ನ ಪ್ರಯೋಗಪುಟ3

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಕುಟುಂಬ[ಬದಲಾಯಿಸಿ]

ಕ್ರೈಸ್ಟ್ ಕಾಲೇಜಿನಲ್ಲಿ ತೆಗೆದ ಚಿತ್ರ
ಚೇತನ್ ಕುಮಾರ್

ನನ್ನ ಹೆಸರು ಚೇತನ್ ಕುಮಾರ್ ಬಿ ಕೆ ನಾನು ೨೭-೦೯-೧೯೯೯ರ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವಾಪಟ್ಟಣ ಎಂಬ ಹಳ್ಳಿಯಲ್ಲಿ ಜನಿಸಿದೆ. ನನ್ನ ತಂದೆಯ ಹೆಸರು ಕುಮಾರ್ ಬಿ ವಿ ಮತ್ತು ನನ್ನ ತಾಯಿಯ ಹೆಸರು ಜಯಲಕ್ಷ್ಮಿ ಬಿ ಎನ್, ನನ್ನ ತಂದೆಯ ವೃತ್ತಿ ಟೈಲರ್ ಮತ್ತು ನನ್ನ ತಾಯಿ ಗೃಹಿಣಿ. ನನ್ನ ತಂದೆಯು ಬೆಂಗಳೂರಿನಲ್ಲಿ ಬಂದು ನೆಲೆಸಿದ್ದರಿಂದ ನಾನು ಬೆಂಗಳೂರಿನಲ್ಲೇ ಬೆಳೆದೆ ಆದರೆ ನನಗೆ ಒಂದು ವರ್ಷ ತುಂಬುವವರೆಗೆ ನಾನು ಬೆಳೆದಿದೆಲ್ಲ ನಮ್ಮ ಊರಿನಲ್ಲೇ. ನಾನು ಹುಟ್ಟಿದಾಗ ಗುಂಡುಗುಂಡಾಗಿ ಇದ್ದೆ ಮತ್ತು ನನ್ನನು ಊರಿನಲ್ಲಿದ್ದ ಅಕ್ಕಪಕ್ಕದ ಮನೆಯವರು ನನ್ನನು ಎತ್ತುಕೊಂಡು ಆಟವಾಡಿಸುತ್ತಿದ್ದರು ಎಂದು ನನಗೆ ಊರಿಗೆ ಒದಾಗಲ್ಲೆಲ್ಲ ಅವರನ್ನು ತೋರಿಸಿ ಹೇಳುತ್ತಿರುತ್ತಾರೆ.

ವಿದ್ಯಾಭ್ಯಾಸ[ಬದಲಾಯಿಸಿ]

ನನ್ನ ತಾಯಿಯೆ ನನ್ನ ಮೊದಲ ಗುರು ಮತ್ತು ನನ್ನ ಮನೆಯೆ ನನ್ನ ಮೊದಲ ಪಾಠಶಾಲೆ. ನಾನು ಮೊಟ್ಟಮೊದಲು ಸೇರಿದ ಶಾಲೆಯ ಹೆಸರು ಎ.ವಿ.ಎಸ್ ಕಾನ್ವೆಂಟ್, ಈ ಶಾಲೆಯಲ್ಲಿ ನಾನು ಎರಡನೇ ತರಗತಿಯತನಕ ಓದಿದೆ, ನನಗೆ ನೆನಪಿರುವ ಹಾಗೆ ಆ ಶಾಲೆಯಲ್ಲಿ ನನಗೆ ಮೊದಲ ಗುರು ಅಥವಾ ಶಿಕ್ಷಕಿಯ ಹೆಸರು ಸುರೇಖಾ. ಆ ಶಾಲೆಯ್ಲಲಿ ಕಳೆದ ಕ್ಷಣಗಳನ್ನು ಈಗಲೂ ಮರೆಯಲು ಸಾಧ್ಯವಿಲ್ಲ ಮತ್ತೆ ಆ ಶಾಲೆಯಲ್ಲಿ ಓದುತ್ತಿದ್ದಾಗ ಇದ್ದ ಗೆಳೆಯರು ಈಗಲು ಸಹ ಪರಿಚಯವಿದೆ ನಂತರ ನಾನು ಮೂರನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಬೆಂಗಳೂರಿನ ಬಿ.ಟಿ.ಎಂ ಲೇಔಟ್ನಲ್ಲಿರುವ ಶಾಂತಿನಿಕೇತನ್ ಟ್ರಸ್ಟ್ ಸ್ಕೂಲ್ ಎಂಬ ಶಾಲೆಯಲ್ಲಿ ಮುಗಿಸಿದೆ. ನಾನು ಎಂಟನೇ ತರಗತಿಯವರೆಗೂ ಓದಿನಲ್ಲಿ ಆಸಕ್ತಿಯಿರಲಿಲ್ಲ. ಎಂಟನೇ ತರಗತಿಯಿಂದ ನನ್ನ ಓದಿನ ಆಸಕ್ತಿ ಬೆಳೆಯಿತು ನಂತರ ನಾನು ಓದಿನಲ್ಲಿ ಆಸಕ್ತಿ ತೋರಿಸಿದೆ ಅದರ ಫಲವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡ ೯೩.೭೬% ಪಡೆದೆ, ನಾನು ಈ ಶಾಲೆಯಲ್ಲಿ ಕಳೆದ ನೆನಪುಗಳನ್ನು ಮತ್ತು ಗೆಳೆಯರ ಜೊತೆ ಸೇರಿ ಕಳೆದ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. ನಾವು ಶಿಕ್ಷಕರಿಲ್ಲದಿದ್ದನು ಗಮನಿಸಿ ನಮ್ಮ ತರಗತಿಯ ಕೊಠಡಿಯಲ್ಲಿ ಕಬ್ಬಡಿ ಯಾಟವನ್ನು ಆಟವಾಡುತ್ತಿದೆವು.ಕೆಲವು ಶಿಕ್ಷಕರು ನಮ್ಮ ಕಾಟವನ್ನು ತಾಳಲಾರದೆ ನಮ್ಮ ತರಗತಿಗೆ ಬರುತ್ತಿರಲಿಲ್ಲ ಮತ್ತು ನಮ್ಮ ತರಗತಿಯ ಬಗ್ಗೆ ಇತರೆ ಶಿಕ್ಷಕರಿಗೆ ಹೇಳುತ್ತಿದ್ದರು. ಈಗ ಆ ಶಿಕ್ಷಕರನ್ನು ಕಂಡರೆ ನಮಗೆ ಶಾಲೆಯ ನೆನಪಾಗುತ್ತದೆ ಮಾತು ಶಾಲೆಯಲ್ಲಿ ಮಾಡುತ್ತಿದ್ದ ತುಂಟಾಟಗಳು ನೆನಪಾಗುತ್ತದೆ. ನಾವು ಈಗಲೂ ಆ ಶಾಲೆಯ ನೆನಪನ್ನು ಮರೆಯಲು ಸಾಧ್ಯವಿಲ್ಲ, ನಾವು ಈಗಲೂ ಶಾಲೆಗೆ ಒದಾಗಲೆಲ್ಲ ಆ ಶಿಕ್ಷಕರನ್ನು ನೋಡಿ ಮಾತನಾಡಿಸಿಕೊಂಡು ಬರುತ್ತಿದ್ದೆವು. ಆ ಶಾಲೆಯಲ್ಲಿ ಮಾಡಿದ ತರಲೆ ತುಂಟಾಟಗಳು ,ಸ್ನೇಹಿತರೊಂದಿಗೆ ಸೇರಿ ಮಾಡಿದ ಮೊದಲ ಜಗಳವನ್ನು ಮರೆಯಲು ಸಾಧ್ಯವಿಲ್ಲ. ನಾನು ಶಾಲೆಯಲ್ಲಿ ಹುಡುಗಿಯರನ್ನು ಮಾತನಾಡಿಸಲು ಹೆದರುತ್ತಿದ್ದೆ ಆದರೆ ನನಗೆ ಈ ಶಾಲೆಯಲ್ಲಿ ಒಂದು ಒಳ್ಳೆಯ ಗೆಳತಿ ಸಿಕ್ಕಿದಳು. ನನಗೆ ಶಾಲದಿನಗಳಲ್ಲಿ ಯಾವುದೇ ಪ್ರಶಸ್ತಿಗಳು ದೊರಕಲಿಲ್ಲ.

ಕ್ರೈಸ್ಟ್ ಯೂನಿವರ್ಸಿಟಿ[ಬದಲಾಯಿಸಿ]

ಕ್ರೈಸ್ಟ್ ಯೂನಿವರ್ಸಿಟಿ

ಎಸ್.ಎಸ್.ಎಲ್.ಸಿ ಮುಗಿಸಿದ ನಂತರ ಕ್ರೈಸ್ಟ್ ಜ್ಯೂನಿಯರ್ ಕಾಲೇಜಿನಲ್ಲಿ ಆರ್ಜಿ ಹಾಕಿದೆ ನಂತರ ಕ್ರೈಸ್ಟ್ ಕಾಲೇಜಿಗೆ ಸೇರಿಕೊಂಡೆ,ಅಲ್ಲಿ ನನಗೆ ಇಬ್ಬರು ಒಳ್ಳೆಯ ಗೆಳೆಯರು ಪರಿಚಯರಾದರು ನಾವು ಸದಾ ಜೊತೆಯಲ್ಲಿಯೇ ಇರುತ್ತಿದ್ದೆವು. ಅವರಿಬ್ಬರು ನನ್ನನ್ನು ಸದಾ ರೀಗಿಸುತ್ತಿದ್ದರು. ನಾವು ಊಟಮಾಡಲು ಜೊತೆಗೆ ಹೋಗುತ್ತಿದ್ದೆವು ನಾವು ಯಾವಾಗಲೂ ಜೊತೆಗೆ ಇರುತ್ತಿದ್ದೆವು. ನಂತರ ಮೂರುಜನ ಒಟ್ಟಿಗೆ ಕ್ರೈಸ್ಟ್ ಕಾಲೇಜಿನಲ್ಲಿ ಡಿಗ್ರಿಗೆ ಆರ್ಜಿ ಹಾಕಿದೆವು ನಮ್ಮ ಸದೃಷ್ಟಕ್ಕೆ ನಾವು ಮೂವರಿಗೂ ಕಾಲೇಜಿನಲ್ಲಿ ಸೀಟುಸಿಕ್ಕಿತು ಆದರೆ ನಾವು ಮೂರು ಜನ ಬೇರೆ ಬೇರೆ ವಿಭಾಗಕ್ಕೆ ಸೇರಿದೆವು, ಆದರು ನಾವು ಮೂವರು ಸದಾ ಒಟ್ಟಿಗೆ ಇರುತ್ತೇವೆ. ಎರಡು ವರ್ಷಗಳ ಕಾಲ ಕ್ರೈಸ್ತನಲ್ಲಿ ಓದಿದ್ದರಿಂದ ನನಗೆ ಕಾಲೇಜಿನ ರೀತಿ ನೀತಿಗೆ ಒಂದಿಕೊಳ್ಳಲು ಬಹಳ ಸಮಯವೇನು ಬೇಕಾಗಿರಲಿಲ್ಲ.

ಇಷ್ಟ[ಬದಲಾಯಿಸಿ]

ಕನ್ನಡ ಭಾವುಟ

ಇನ್ನು ನನ್ನ ಬಗ್ಗೆ ಹೇಳಬೇಕೆಂದರೆ ನನಗೆ ಕನ್ನಡವೆಂದರೆ ತುಂಬ ಇಷ್ಟ ಕ್ರೈಸ್ತ ಕಾಲೇಜಿನಲ್ಲಿ ಕನ್ನಡ ಶಬ್ಧ ಕೇಳಿದ ತಕ್ಷಣ ನನಗೆ ಹೆಮ್ಮೆ ಮತ್ತು ಮೈರೋಮಾಂಚನಗೊಳ್ಳುತ್ತದೆ.ನನಗೆ ನನ್ನ ಸ್ನೇಹಿತರೊಂದಿಗೆ ಮೈದಾನದಲ್ಲಿ ಆಡುವುದೆಂದರೆ ಬಹಳ ಇಷ್ಟ. ನಾನು ಮುಂದೆ ಚೆನ್ನಾಗಿ ಓದಿ ಒಳ್ಳೆಯ ಕೆಲಸವನ್ನು ಪಡೆದು ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬುದು ನನ್ನ ಆಸೆ.

ಆಸೆ[ಬದಲಾಯಿಸಿ]

ನನಗೆ ಮತ್ತೊಂದು ದೊಡ್ಡ ಆಸೆಯೆಂದರೆ ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸುವುದು, ನನಗೆ ಚಲನಚಿತ್ರಗಳಲ್ಲಿ ಹಾಸ್ಯನಟನಾಗಬೇಕೆಂಬ ಆಸಿಯಿದೆ. ನನಗೆ ಹಾಸ್ಯನಟನಾಗಬೇಕೆಂಬ ಆಸೆಯು ಹುಟ್ಟಿದ್ದು ಕುರಿ ಪ್ರತಾಪ್ ಮತ್ತು ಚಿಕ್ಕಣ್ಣನಂತಹ ಹಸ್ಯನಟರ ಅಭಿನಯವನ್ನು ಕಂಡು ನನಗೆ ಅವರಂತೆ ಒಬ್ಬ ಹಾಸ್ಯಕಲಾವಿದನಾಗಬೇಕೆಂಬ ಆಸೆ ಬೆಳೆಯಿತು. ನನ್ನ ಸ್ನೇಹಿತರು ನನ್ನನ್ನು ಸದಾ ಆ ಆಸೆಯನ್ನು ಎಚ್ಚುಮಾಡುತ್ತಿದ್ದಾರೆ, ನಾನು ಉಪೇಂದ್ರ ಮತ್ತು ವಾಟಾಳ್ ನಾಗರಾಜ್ ರವರ ಮಿಮಿಕ್ರಿ ಮಾಡಿದರೆ ಎಲ್ಲರು ಅದನ್ನು ಕೇಳಿ ನನ್ನನ್ನು ಪ್ರೋತ್ಸಾಹಿಸುತ್ತಾರೆ.ಇನ್ನು ನಾನು ರಾಜಾದಿನಗಳಲ್ಲಿ ನಮ್ಮ ಅಂಗಡಿಗೆ ಹೋಗಿ ನನ್ನ ತಂದೆಗೆ ಕೆಲಸದಲ್ಲಿ ಸಹಾಯಮಾಡುತ್ತೇನೆ. ಅವರು ಅಂಗಡಿಯಲ್ಲಿ ಇಲ್ಲದಿದ್ದರೂ ನಾನೊಬ್ಬನೇ ಅಂಗಡಿಯನ್ನು ನಿಬಾಯಿಸುವ ಶಕ್ತಿಯಿದೆ. ಆದ್ದರಿಂದ ನಾನು ಎಮ್ಮೆಯಿಂದ ನನ್ನ ತಂದೆ ತಾಯಿಗೆ ನಾನು ಒಳ್ಳೆಯ ಮಗನೆಂದು ಏಳಿಕೊಳ್ಳುವ ಹೆಮ್ಮೆಯಿದೆ.