ಸದಸ್ಯ:Charmady chethana/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಫ್ಯಾಷನ್ ಸೀರೆ

ನೋಡಲು ಸುಂದರವಾದ ಡಿಫರೆಂಟ್ ಡಿಸೈನ್ಸ್, ಆಕರ್ಷಕ ಕಲರ್ಸ್ ಹೊಂದಿರುವ ಫ್ಯಾನ್ಸಿ ಸೀರೆಗಳು ಇಂದಿನ ಫ್ಯಾಷನ್ ಯುಗದ ಮಹಿಳೆಯರ ಮನಕ್ಕೆ ಒಪ್ಪುವ ರೀತಿಯಲ್ಲಿ ದೊರೆಯುತ್ತಿದೆ. ಇತ್ತೀಚೆಗೆ ಸಣ್ಣ ಪುಟ್ಟ ಫಂಕ್ಷನ್‍ನಿಂದ ಹಿಡಿದು ದೊಡ್ಡ ಮದುವೆ ರಿಸೆಪ್ಷನ್ ವರೆಗಿನ ವಿವಿಧ ಕಾರ್ಯಕ್ರಮಗಳಿಗೆ ರೇಷ್ಮೆ ಸೀರೆಗಳ ಸ್ಥಳವನ್ನು ಇವು ಆವರಿಸುತ್ತಿವೆ. ಇವು ಕುಂದನ್, ಚಮಕಿ, ಮಲ್ಟಿ ಕಲರ್, ಬೀಡ್ಸ್ ಬಳಸಿದ ಡಿಫರೆಂಟ್ ಡಿಸೈನ್‍ಗಳಲ್ಲಿ ದೊರೆಯುತ್ತದೆ. ಫ್ಯಾನ್ಸಿಯಾಗಿರುವ ರೇಶ್ಮೆ ಸೀರಗಳು ಹೆಚ್ಚು ಪ್ರಿಯವಾಗುತ್ತಿದೆ.

ಸಿಂಪಲ್ ಡಿಸೈನ್, ಕಡಿಮೆ ಬೆಲೆಯಿಂದ ಹಿಡಿದು ಉತ್ತಮ ಕ್ವಾಲಿಟಿಯ ಸಾವಿರಾರು ರೂಪಾಯಿಗಳ ವರೆಗಿನ ಸೀರೆಗಳು ದೊರೆಯುತ್ತದೆ. ಸೀರೆಯ ಒಡಲಲ್ಲಿ ಹೆಚ್ಚು ವಕ್ಸ್ ಇರುವ ಸೀರೆಗಳು ಕಾಲೇಜು ಕನ್ಯೆಯರಿಗೆ ಗ್ರಾಂಡ್ ಲುಕ್ ನೀಡುತ್ತದೆ.ಬಾರ್ಡರ್ ಹೆವಿ ಡಿಸೈನ್ ಇದ್ದರೆ ಉಡಲು ಸ್ವಲ್ಪ ಕಡಿಮೆ ಡಿಸೈನ್ ಇರುವ ಸೀರೆಗಳ ಆಯ್ಕೆ ಮಧ್ಯಮ ವಯಸ್ಸಿನವರಿಗೆ ಸೂಕ್ತ.

ಕಾಲಕ್ಕೆ ತಕ್ಕ ಹಾಗೆ ಬದಲಾವಣೆಗೊಳ್ಳುವುದರಲ್ಲಿ ಫ್ಯಾಷನ್ ಕೂಡಾ ಒಂದು. ದಿನನಿತ್ಯ ಹೊಸಹೊಸ ಫ್ಯಾಷನ್‍ಗಳು ಕಣ್ಣಿಗೆ ಬೀಳುವುದಂತೂ ಸತ್ಯ. ಅದರಲ್ಲೂ ಇಂದು ನಮಗೆ ಫ್ಯಾಷನ್ ಆಗಿ ಕಂಡದ್ದು ನಾಳೆ ಮಾಯವಾಗಿ ಬಿಡುತ್ತದೆ. ಅದರಲ್ಲೂ ಮುಖ್ಯವಾಗಿ ಉಡುಗೆಯ ವಿಷಯಕ್ಕೆ ಬಂದರೆ ಟ್ರೆಂಡ್‍ಗೆ ತಕ್ಕಂತೆ ಫ್ಯಾಷನ್ ಬಟ್ಟೆಗಳನ್ನು ಗಮನಿಸಬಹುದು. ಬಟ್ಟೆಗಳ ಮೇಲೆ ಪುರುಷರಿಗಿಂತಲೂ ಮಹಿಳೆಯರಿಗೆ ವಿಶೆಷವಾದ ಒಲವು. ಬದಲಾಗುವ ಫ್ಯಾಷನ್‍ಗಳನ್ನು ಸಂತೋಷದಿಂದ ಸ್ವೀಕರಿಸುವ ಸ್ತ್ರೀಯರು ಕಾಲಕ್ಕೆ ತಕ್ಕಂತೆ ಬದಲಾಗುವ ಫ್ಯಾಷನ್‍ಗಳಿಗೆ ಬಲು ಬೇಗನೇ ಹೊಂದಿಕೊಳ್ಳುತ್ತಾರೆ.

ಇಂದಿಗೂ ಸಿನಿಮಾಗಳಲ್ಲಿ ಹಳೆಯ ಹುಡುಗಿಯ ಚಿತ್ರಣ ತರಬೇಕೆಂದಿದ್ದರೆ ಅಲ್ಲಿನ ಕ್ಯಾಸ್ಟೂಮ್‍ಗಳನ್ನು ಗಮನಿಸಿದಾಗ ಫ್ಯಾನ್ಸಿ ಸೀರೆಗಳ ಬಳಕೆ ಕಂಡು ಬರುತ್ತದೆ. ಅಂದರೆ ಪ್ರಸ್ತುತ ದಿನಗಳಲ್ಲಿ ಮಹಿಳೆಯರಿಗೆ ಇಂತಹ ಸೀರೆಗಳೇ ಮಾಡರ್ನ್ ರೀತಿಯ ಲುಕ್ ಕೊಡುತ್ತದೆ. ಹಿಂದಿನ ಕಾಲದಲ್ಲಿ ಬಳಸುತ್ತಿದ್ದಂತಹ ಫ್ಯಾನ್ಸಿ ಸೀರೆಗಳಲ್ಲಿ ವಿಭಿನ್ನತೆ ಅನ್ನೊದು ಅಷ್ಟೊಂದು ಇರಲಿಲ್ಲ.ವಿನ್ಯಾಸಗಳಲ್ಲಿ ಅಂದಿಗಿಂತ ಇಂದು ಭಿನ್ನತೆಯನ್ನು ಕಾಣಲು ಸಾಧ್ಯ.

ಮದುವೆ ಹಬ್ಬ ಹರಿದಿನಗಳು ಬಂದರೆ ಸಾಕು. ಒಂದು ವಾರದಿಂದಲೇ ತಯಾರಿ ನಡೆಯುತ್ತದೆ. ಇಂತಹ ಸಂಭ್ರಮದ ದಿನದಂದು ಸುಮಂಗಲಿಯರು, ಹೆಣ್ಣುಮಕ್ಕಳು, ಸಾಕ್ಷಾತ್ ಲಕ್ಷ್ಮಿಯ ಅವತಾರವನ್ನೇ ತಾಳುತ್ತಾರೆ. ಇಂತಹ ವಿಶೇಷ ದಿನದಂದು ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಹೆಚ್ಚಾಗಿ ಫ್ಯಾನ್ಸಿ ಸೀರೆಗಳನ್ನೆಉಡುತ್ತಾರೆ.

ಫ್ಯಾನ್ಸಿ ಸೀರೆಮದುವೆ ಮನೆಗಳಲ್ಲಿ ಮಿಂಚುವ ಬಟ್ಟೆ. ಬೇರೆ ಮಾದರಿಯ ಸೀರೆಗಳು ಕಾಮನಾಗಿ ಕಾಣಸಿಗುತ್ತದೆ. ಫ್ಯಾನ್ಸಿ ಸೀರೆಯ ಸ್ಪೆಶಲ್ ಕ್ವಾಲಿಟಿ ಏನೆಂದರೆ ನಮಗೆ ಬೇಕಾದ ರೀತಿ ಉಡಬಹುದು. ಅದನ್ನು ನಾವು ಉಡುವುದರ ಮೇಲಿರುತ್ತದೆ ಅದರ ಅಂದ ಚಂದ. ಕಾಟನ್ ಸೀರೆಯಂತೆ ಟ್ರೆಡೀಶನಲ್ ಲುಕ್ ಬರುತ್ತದೆ.ಸ್ವಲ್ಪ ಮಾಡರ್ನ್ ಆಗಿ ಬೇರೆ ಬೇರೆ ರೀತಿಯಲ್ಲಿ ಉಟ್ಟುಕೊಂಡರೆ ಡಿಫರೆಂಟ್ ಲುಕ್ ಬರುತ್ತದೆ. ಹಿಂದೆಲ್ಲ ಕಾಟನ್ ಸೀರೆಗಳೇ ಹೆಚ್ಚಾಗಿದ್ದವು. ಆದರೆ ಇಂದು ಫ್ಯಾನ್ಸಿ ಹಾಫ್ ಸೀರೆಯಿಂದ ಹಿಡಿದು ಫ್ಯಾನ್ಸಿ ಸೀರೆಗಳು ಕೂಡಾ ಹೆಚ್ಚು ಫೇಮಸ್ ಆಗಿದೆ. ಉಡುವಾಗ ಬೇಕಾದ ರೀತಿಯಲ್ಲಿ ಇದು ಕೂರುತ್ತದೆ. ಮದುವೆ ಫಂಕ್ಷನ್ ಹಾಗೂ ಹಬ್ಬ ಹರಿದಿನಗಳಲ್ಲಿ ಫ್ಯಾನ್ಸಿ ಸೀರೆ ಹೆಚ್ಚು ಸುಟೇಬಲ್.

ಫ್ಯಾನ್ಸಿ ಸೀರೆಯ ಅಂದ ಹೆಚ್ಚಿಸುವುದಕ್ಕೆ ಅದರ ರವಿಕೆಯ ಸ್ಟಿಚಿಂಗ್ ಸ್ಟೈಲ್‍ನ ಕುರಿತು ಗಮನ ಹರಿಸುವುದು ಬಹಳ ಅಗತ್ಯ. ಯಾಕೆಂದರೆ ಅದಕ್ಕೆ ಸೀರೆಗೆ ಹೊಲಿಸುವ ರವಿಕೆಯಿಂದ ಅದರ ಅಂದವನ್ನು ಹೆಚ್ಚಿಸಲು ಸಾಧ್ಯ. ಸೀರೆಗೆ ಮ್ಯಾಚಿಂಗ್ ಮಣಿ, ಕಾಯಿಗಳನ್ನು ಸೇರಿಸಿ ಅಲ್ಲಲ್ಲಿ ಸ್ಟಿಚ್ ಮಾಡಿದರೆ ಸಿಂಪಲಾಗಿದ್ದ ಫ್ಯಾನ್ಸಿ ಸೀರೆಯು ಗ್ರ್ಯಾಂಡ್ ಲುಕ್ ಕೊಡುತ್ತದೆ.

ಇಂತಹ ಫ್ಯಾನ್ಸಿ ಸೀರೆಗೆ ಕೊಂಚ ದುಬಾರಿಯೇ ಆಗಿರುತ್ತದೆ.ಆದರೆ ಮದುವೆ ಹಾಗೂ ಇತರ ಸಮಾರಂಭದ ಬಟ್ಟೆಗಾಗಿ ಸಾಮಾನ್ಯ ಎಲ್ಲರೂ ಹಣ ವ್ಯಯಿಸುವುದರಿಂದ ಇಂತಹ ಫ್ಯಾನ್ಸಿ ಸೀರೆಗಳನ್ನು ಕೊಂಡುಕೊಳ್ಳುವವರು ಹೆಚ್ಚು ಜನ. ಗ್ರ್ಯಾಂಡ್ ಫ್ಯಾನ್ಸಿ ಸೀರೆಧರಿಸಿದವರನ್ನು ಮದುವೆ ಮನೆಯಲ್ಲಿ ಸೌಂದರ್ಯದ ಕೇಂದ್ರಬಿಂದುವಾಗಿಸಬಲ್ಲದು. ಮದುವೆಯಾದ ಹುಡುಗಿರು ಹೆಚ್ಚಾಗಿ ಕಾಟನ್ ಸೀರೆಯನ್ನು ಬಿಟ್ಟರೆ ಇಂತಹ ಫ್ಯಾನ್ಸಿ ಸೀರೆಯನ್ನೇ ಹೆಚ್ಚಾಗಿ ಉಟ್ಟುಕೊಳ್ಳುವುದುಂಟು.

ಕಾಟನ್ ಸೀರೆಗಳನ್ನು ಉಡುವಾಗ ಅದರ ನೆರಿಗೆ ಸರಿಪಡಿಸುವುದಕ್ಕೆ ಪರದಾಡಬೇಕಾಗುತ್ತದೆ. ಮದುವೆಯಾದ ಹೊಸತರದಲ್ಲಿ ಅದೆಷ್ಟೋ ಸ್ತ್ರೀಯರಿಗೆ ಸೀರೆ ಉಡಲು ಬರುವುದಿಲ್ಲ. ಅಂತಹ ಸಂದರ್ಭದಲ್ಲಿ ಫ್ಯಾನ್ಸಿ ಸೀರೆಯನ್ನು ಖರಿದಸಿದರೆ ಅದನ್ನು ಸುಲಭವಾಗಿ ಉಡಲು ಸಾಧ್ಯವಾಗುತ್ತದೆ. ಇಂತಹ ಸೀರೆಗಳಲ್ಲಿ ನಡೆಯುವಾಗ ನೆರಿಗೆ ಮುಗ್ಗರಿಸುತ್ತದೆ ಎನ್ನುವ ಭಯ ಇಲ್ಲ. ಫ್ಯಾನ್ಸಿ ಸೀರೆಗಳಿಗೆ ಸೊಂಟದ ಪಟ್ಟಿ ಇಲ್ಲದಿದ್ದರೂ ಅದು ಸುಂದರವಾಗಿ ಕಾಣಿಸುತ್ತದೆ. ಶರೀರದ ಬಣ್ಣಕ್ಕೆ ಒಪ್ಪುವಂತೆ ಬಟ್ಟೆಯ ಕಲರ್ ಆರಿಸಿಕೊಂಡರೆ ಸುಂದರವಾಗಿರುತ್ತದೆ.

ವರಮಹಲಕ್ಷ್ಮೀಯಂತಹ ಹಬ್ಬ ಹರಿದಿನಗಳಿಗೆ ಫ್ಯಾನ್ಸಿ ಸೀರೆಗೆ ಹೆಚ್ಚಿನ ಮಹತ್ವ ಕೊಡಬೇಡಿ ಅದರ ¨ದಲು ಜರಿ ಸೀರೆಗೆ ಹೆಚ್ಚು ಆಧ್ಯತೆ ನೀಡಿ ಎಂದು ಹೇಳುವವರಿದ್ದಾರೆ. ಆದರೆ ಜರಿ ಸೀರೆಗಳನ್ನು ಉಟ್ಟಾಗ ಆಗುವುದಕ್ಕಿಂತ ಹೆಚ್ಚಿನ ಲುಕ್ ಫ್ಯಾನ್ಸಿ ಸೀರೆಗಳಲ್ಲಿ ಪಡೆಯಬಹುದು ಎಂಬುದನ್ನು ಗಮನಿಸಬೇಕು. ಇಷ್ಟ ಪಟ್ಟ ಸೀರೆಯನ್ನು ಖರಿದೀಸಬಹುದು ಆದರೆ ಅದರ ಕ್ವಾಲಿಟಿಯ ಕಡೆಗೆ ಗಮನ ಹರಿಸುವುದು ಬಹಳ ಸೂಕ್ತ.

ಯುವತಿಯರಿಗೆ ಫ್ಯಾನ್ಸಿ ಸೀರೆ:

ಹಿಂದೆ ಲಂಗ ದಾವಣಿ ಎಂದು ಕರೆಯುತ್ತಿದ್ದಂತಹ  ಸಾಂಪ್ರದಾಯಿಕ ಸೀರೆಯು ಇಂದು ಹಾಫ್ ಸ್ಯಾರಿಯಾಗಿ ಬದಲಾಗಿದೆ. ಆದರೆ ಈ ಹಾಫ್ ಸ್ಯಾರಿಯಂತೆ ಹೋಲುವ ಫ್ಯಾನ್ಸಿ ಸೀರೆಗಳು ಮಾರುಕಟ್ಟೆಗೆ ಬಂದಿದೆ. ಇದು ಉಟ್ಟಾಗ ನೋಡಲು ಹಾಫ್ ಸ್ಯಾರಿಯಂತೆ ಕಾಣುತ್ತದೆ. ಇಂತಹ ಸೀರೆಗಳಲ್ಲಿ ಎರಡಕ್ಕಿಂತ ಹೆಚ್ಚು ಬಣ್ಣ ಇರುತ್ತದೆ. ಅರ್ಧ ಭಾಗ ಒಂದು ಬಣ್ಣದಲ್ಲಿದ್ದರೆ ಇನ್ನುಳಿದ ಅರ್ಧ ಭಾಗ ಇನ್ನೊಂದು ಬಣ್ಣದಿಂದ ಕೂಡಿರುತ್ತದೆ.ಇದು ನೋಡಲು ಬಹಳ ಆಕರ್ಷಿಣಿಯವಾಗಿ ಇರುತ್ತದೆ. ಇಂತಹ ಸೀರೆಯನ್ನು ವಿಭಿನ್ನ ಶೈಲಿಯಲ್ಲಿ ಉಡಬಹುದು. ಸೀರೆಯನ್ನು ಬಲ ಬದಿಗೆ ಸೆರಗು ಹಾಕಿದಾಗ ಒಂದು ಲುಕ್ ಕಂಡರೆ, ಅದೇ ಸೀರೆಯ ಸೆರಗನ್ನು ಒಂದು ಬದಿಗೆ ಇಳಿ ಬಿಟ್ಟರೆ ಮಾಡರ್ನ್ ಲುಕ್ ಬರುತ್ತದೆ.

ಪುಟಾಣಿ ಮಕ್ಕಳಿಗೆಫ್ಯಾನ್ಸಿ ಸೀರೆ:

ಮನೆಯಲ್ಲಿ ಅಂತ್ತಿಂದಿತ್ತ ಓಡಾಡುವ ಪುಟಾಣಿ ಹೆಣ್ಣು ಮಕ್ಕಳಿಗಾಗಿ ಫ್ಯಾನ್ಸಿ ಸೀರೆಗಳಿವೆ. ಇದು ಮಕ್ಕಳ ಮೆರುಗನ್ನು ಇನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಸಣ್ಣ ಮಕ್ಕಳಿಗೆ ಬಣ್ಣ ಬಣ್ಣದ ರವಿಕೆಯನ್ನು ಉಡಿಸಿ, ತಲೆಗೆ ಒಂದಿಷ್ಟು ಮಲ್ಲಿಗೆ ಹೂವನ್ನು ಮುಡಿಸಿದರೆ ಅವರು ಪುಟಾಣಿ ಲಕ್ಷ್ಮೀಯಂತೆ ಕಾಣಿಸುತ್ತಾರೆ. ಇದರಿಂದ ಬೇರೆ ಉಡುಗೆಯನ್ನು ತೊಟ್ಟ ಮಕ್ಕಳಿಗಿಂತ ಆಕರ್ಷಕವಾಗಿ ಕಾಣಲು ಸಹಕಾರಿಯಾಗುತ್ತದೆ.

ನಾವು ಫಿಲಂ, ಜಾಹಿತಾತು, ಮಾಧ್ಯಮಗಳಲ್ಲಿ ಫ್ಯಾನ್ಸಿ ಸೀರೆಯಲ್ಲಿನ ವಿಭಿನ್ನ ಶೈಲಿಯನ್ನು ಗಮನಿಸಬಹುದು. ಅವರಂತೆಯೇ ನಾವು ಸುಂದರವಾಗಿ ಕಾಣಲು ಅಂತಹ ಸಾರಿಯನ್ನು ಕೊಂಡುಕೊಳ್ಳಲು ಹೋಗುವುದಿದೆ. ಸಿಗದೆ ಹೋದಾಗ ಅಸೂಯೆ ಪಡುತ್ತಾ ಸುಮ್ಮನೆ ಕೂರುವುದಿದೆ. ಬಟ್ಟೆಗಳ ವಿಷಯದಲ್ಲಿ ಪುರುಷರನ್ನು ಹೋಲಿಸಿದರೆ ಮಹಿಳೆಯರು ತಲೆಕೆಡಿಸಿಕೊಳ್ಳುವುದೇ ಹೆಚ್ಚು. ಇದು ಸತ್ಯ ಸಂಗತಿ ಕೂಡ. ಫ್ಯಾನ್ಸಿ ಸೀರೆಗೆ ಬೇಕಾದ ಬಳೆ, ಸೊಂಟ ಪಟ್ಟಿ, ಕಿವಿಯೋಲೆ, ನೆಕ್ಲೇಸ್, ಉಂಗುರ, ಫ್ಯಾನ್ಸಿ ಚಪ್ಪಲ್ ಹಾಗೂ ನೆತ್ತಿಬೊಟ್ಟನ್ನು ಮ್ಯಾಚಿಂಗ್‍ಗಾಗಿ ಬಳಸಲಾಗುತ್ತದೆ. ಈ ರೀತಿ ಬಳಕೆ ಮಾಡುವುದರಿಂದ ಸೀರೆಯ ಲುಕ್ ಮತ್ತಷ್ಟು ಹೆಚ್ಚುತ್ತದೆ.