ಸದಸ್ಯ:Chandrakala 1910360

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
        ' ಕೃಷ್ಣಾ ನದಿ ಜಲ ವಿವಾದ'

ಮಹಾರಾಷ್ಟ್ರದ ಮಹಾಬಲೇಶ್ವರ ಬೆಟ್ಟಗಳಲ್ಲಿ ಹುಟ್ಟುವ ಕೃಷ್ಣಾ ನದಿ ಮಹಾರಾಷ್ಟ್ರ ,ಕರ್ನಾಟಕ ಮತ್ತು ಆಂಧ್ರಗಳಲ್ಲಿ ಸುಮಾರು 1400 ಕಿ.ಮಿ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ. ಈ ನದಿಗೆ 1969 ರಲ್ಲಿ ಬಿಜಾಪುರ ಜಿಲ್ಲೆಯ ಬಸವನಾಬಗೇವಾಡಿ ತಾಲೂಕಿನ ಆಲಮಟ್ಟಿ ಗ್ರಾಮದ ಬಳಿ ಆಣೆಕಟ್ಟನ್ನು ನಿರ್ಮಿಸಲಾಯಿತು. ಅದೇ ರೀತಿ ಉತ್ತರ ಕರ್ನಾಟಕ ಜಿಲ್ಲೆಗಳಿಗೆ ನಿರೋದಗಿಸುವ ನಾರಾಯಣಪುರ ಜಲಾಶಯವನ್ನು ನಿರ್ಮಿಸಲಾಗಿದೆ. ಅವುಗಳ ಜಲ ಸಂಗ್ರಹಣಾ ಸಾಮರ್ಥ್ಯ ಕ್ರಮವಾಗಿ 29.73 ಮತ್ತು 30.69TMCಗಳು. ಆಂಧ್ರ ಕೃಷ್ಣ ನದಿ ನೀರಿನ ಗರಿಷ್ಠ ಬಳಕೆಗಾಗಿ ಧ್ವನಿ ಎತ್ತಿತು. ಹೀಗಾಗಿ ಕೃಷ್ಣಾ ನದಿ ನೀರಿನ ಹಂಚಿಕೆಗಾಗಿ ಮೂರು ರಾಜ್ಯಗಳ ನಡುವೆ ವಿವಾದ ಉಂಟಾಯಿತು. ಇದಕ್ಕೆ ಪರಿಹಾರ ಸೂಚಿಸಲು ಕೇಂದ್ರ ಸರ್ಕಾರ 1969ರಲ್ಲಿ ನಾರಾಯಣಮೂರ್ತಿ ಆರ್.ಎಸ್ ಬಚಾವತ್ ಅಧ್ಯಕ್ಷತೆಯಲ್ಲಿ ನ್ಯಾಯಮಂಡಳಲಿಯನ್ನು ರಚಿಸಿತು. ಅದರ ವರದಿಯೂ ಕೃಷ್ಣಾ ನದಿಯ ನೀರನ್ನು ಮಹಾರಾಷ್ಟ್ರ 565TMC, ಕರ್ನಾಟಕ 695TMC ಹಾಗೂ ಆಂಧ್ರಪ್ರದೇಶ 800TMC ನೀರನ್ನು ಪ್ರತಿವರ್ಷ ಮೇ 31,2000 ಇಸವಿಯವರೆಗೂ ಉಪಯೋಗಿಸಿಕೊಳ್ಳ ಬಹುದು ಎಂದು ಶಿಫಾರಸು ಮಾಡಿತ್ತು. ಅಲ್ಲದೆ ಆಲಮಟ್ಟಿ ಜಲಾಶಯ ನಿರ್ಮಾಣಕ್ಕೆ ಅನುಮತಿಸಿತು.173TMC ನೀರು ಸಂಗ್ರಹಿಸಲು ಆಲಮಟ್ಟಿಯ ಈಗಿನ ಎತ್ತರ ಸಾಕಾಗದೆಂದು ಹೇಳಿ ಕರ್ನಾಟಕ ಅದರ ಎತ್ತರವನ್ನು 524 ಮೀಟರ್ಗೆ ಹೆಚ್ಚಿಸಲು ನಿರ್ಧರಿಸಿತು. ಎತ್ತರ 509 ಮೀಟರ್ ನಿರ್ಮಿಸಿ ಅದರ ಮೇಲೆ 15 ಮೀಟರ್ ಎತ್ತರದ ಕ್ರಿಸ್ಟ್ ಗೇಟ್ ಗಳನ್ನು ನಿರ್ಮಿಸಿ 512 ವರೆಗೆ ನೀರು ಸಂಗ್ರಹಿ ಸಂಗ್ರಹಿಸಿಕೊಳ್ಳಲು ಯೋಚಿಸಿತು. ಆಂಧ್ರ ಆಲಮಟ್ಟಿ ಅಣೆಕಟ್ಟಿನ ಎತ್ತರದ ಬಗ್ಗೆ ಆಕ್ಷೇಪಿಸಿತು. ಅದು ಎತ್ತರ 516 ಮೀಟರ್ಗಳನ್ನು ಮೀರಬಾರದೆಂದು ಮೀರಿದರೆ ಬಚಾವತ್ ತೀರ್ಪಿನ ಉಲ್ಲಂಘನೆಯಾಗುತ್ತದೆ ಎಂದು ಹೇಳಿತು. ಹೀಗಾಗಿ ಅಣೆಕಟ್ಟಿನ ನಿರ್ಮಾಣ ಕಾರ್ಯ ನಿಂತಿತು. 1994ರಲ್ಲಿ ಆಂಧ್ರ ಕಾಮಗಾರಿ ನಿಲ್ಲಿಸುವಂತೆ ತಿಳಿಸಿತು.1996 ರಲ್ಲಿ ಎತ್ತರ ಏರಸದಂತೆ ಕೇಂದ್ರದ ಸಂಯುಕ್ತರಂಗ ಸರಕಾರಕ್ಕೆ ಆದೇಶಿಸಿತ್ತು. ತಪ್ಪಿದಲ್ಲಿ ತೆಲುಗುದೇಶಂ ಎಂಪಿಗಳ ಬೆಂಬಲವನ್ನು ವಾಪಸು ಪಡೆಯುವುದಾಗಿ ಬೆದರಿಕೆ ಒಡ್ಡಿತು. ವಿವಾದವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಒಯ್ಯಲಾಯಿತು. ಏಪ್ರಿಲ್ 2000ರಲ್ಲಿ ನ್ಯಾಯಾಲಯ ಅಣೆಕಟ್ಟಿನ ಎತ್ತರ 519 ಮೀಟರ್ಎ ತ್ತರಕ್ಕೆ ನಿರ್ಮಿಸಿಕೊಳ್ಳಲು ಅನುಮತಿ ನೀಡಿತ್ತು. ಆಲಮಟ್ಟಿ ಅಣೆಕಟ್ಟಿಗೆ ಸಂಬಂಧಿಸಿದಂತೆ ಕೃಷ್ಣಾ ಮೇಲ್ದಂಡೆ ಯೋಜನೆ ಹೋರಾಟ ಸಮಿತಿ ಸೇರಿದಂತೆ ಅನೇಕ ಸಂಘಟನೆಗಳು ಬಂದ್ ಸತ್ಯಾಗ್ರಹ ನಡೆಸಿ ಪ್ರತಿಭಟಿಸಿದರೂ ಸಮಸ್ಯೆ ತಿಳಿಯಾಗಿಲ್ಲ. ಆಲಮಟ್ಟಿ ಅಣೆಕಟ್ಟು ನಿರ್ಮಾಣದಿಂದಾಗಿ 136 ಗ್ರಾಮಗಳು 21,290 ಭೂ ಪ್ರದೇಶ ನೀರಿನಲ್ಲಿ ಮುಳುಗಡೆಯಾಗಿದೆ.1.80 ಲಕ್ಷ ಜನ ನಿರಾಶ್ರಿತರಾಗಿದ್ದಾರೆ. ಆಲಮಟ್ಟಿ ಹಿನ್ನೀರಿನಿಂದ ಬಾಗಲಕೋಟೆ ಮುಳುಗಡೆಯಾದ್ದರಿಂದ ಸುಮಾರು 12,000 ಕುಟುಂಬಗಳು ನಿರಾಶ್ರಿತವಾಗಿವೆ. ಹೀಗೆ ಅಣೆಕಟ್ಟೆಗಳ ಎತ್ತರ ಹೆಚ್ಚಿದರೆ ಇಂತಹ ನಷ್ಟವಾಗುವುದಲ್ಲದೆ ನೀರನ್ನು ಬೇರೆಯವರ ಬಿಡಬೇಕಾಗುತ್ತದೆ, ಅವರು ಯಾವ ಭೂಮಿ ಕಳೆದುಕೊಳ್ಳದೆ ನೀರನ್ನು ಪಡೆಯುತ್ತಾರೆ ಆದ್ದರಿಂದ ಅಗತ್ಯಗಳಿಗೆ ತಕ್ಕಂತೆ ಎತ್ತರ ಅಣೆಕಟ್ಟುಗಳನ್ನು ಕಟ್ಟಿಕೊಳ್ಳುವುದರಿಂದ ತನಗೆ ಅಲ್ಲದೆ ಇತರ ರಾಜ್ಯದ ಜನರಿಗೆ ಒಳ್ಳೆಯದಾಗುತ್ತದೆ ಎಂದು ರೈತರ ಮಕ್ಕಳು ನಾವೆಲ್ಲ ತಿಳಿಯಬೇಕು.

ಜಲವಿವಾದಗಳು ಇಂದು ರಾಜಕೀಯ ಸ್ವರೂಪ ಪಡೆದುಕೊಂಡಿರುವುದರಿಂದ ಪರಿಹಾರ ಕಾಣದಾಗಿವೆ,ಆದ್ದರಿಂದ ಕೇಂದ್ರ ಸರ್ಕಾರದ ಸಂವಿಧಾನ ಚೌಕಟ್ಟಿನಲ್ಲಿ ಅವನು ಬಗೆಹರಿಸಿಕೊಳ್ಳುವುದು ಸೂಕ್ತ .ಅವುಗಳಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಮಾಡುವುದು ಸರಿಯಲ್ಲ.ಸುಪ್ರೀಂಕೋರ್ಟ್ ಮೊದಲಾದ ನ್ಯಾಯ ಮಂಡಳಿಗಳು ಸಹ ಶೀಘ್ರವಾಗಿ ತೀರ್ಮಾನ ಕೈಗೊಂಡರೆ,ಜಲವಿವಾದಗಳ ಬಗೆಹರಿಸಿಕೊಳ್ಳಬಹುದು ರಾಷ್ಟ್ರದ ಏಕತೆ ಮತ್ತು ಸಮಗ್ರತೆ ಕಾಪಾಡಬಹುದು ಪರಸ್ಪರ ಮಾತುಕತೆ ಒಪ್ಪಂದಗಳ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ ಅಂದರೆ ನೀರಿನಲ್ಲಿ ಮಾನವೀಯತೆ ಹರಿಯಬೇಕೆ ಹೊರತು ರಾಜಕೀಯವಲ್ಲ.