ಸದಸ್ಯ:Chandini m.m/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                          ಗೋಕರ್ಣ – ದೇವಾಲಯ ಮತ್ತು ಬಿಳೀಯ ಮರಳಿನ ಸ್ಥಳ

=== ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಗೋಕರ್ಣವು ಒಂದು ಪುಣ್ಯ ಕ್ಷೇತ್ರವಾಗಿರುವುದಲ್ಲದೆ ಅಲ್ಲಿರುವ ಸುಂದರ ಸರೋವರದಿಂದ ಪ್ರವಾಸೀ ತಾಣವಾಗಿ ಪ್ರಸಿದ್ಧಿ ಹೊಂದಿದೆ. ಈ ಸ್ಥಳವು ಎರಡು ನದಿಗಳಾದ ಅಗನಾಶಿನಿ ಮತ್ತು ಗಂಗಾವಳಿಯ ಸಂಗಮದ ಸಾನಿಧ್ಯದಲ್ಲಿದ್ದು ಆ ನದಿಗಳು ಒಂದಾಗುವ ಆಕಾರವು ಗೋವಿನ ಕಿವಿಯ ಆಕಾರವನ್ನು ಹೊಂದಿರುವ ಕಾರಣ ಈ ಸ್ಥಳಕ್ಕೆ ಗೋಕರ್ಣ ಎಂಬ ಹೆಸರು ಬಂದಿದೆ. ಗೋಕರ್ಣದಲ್ಲಿನ ಮಹಾಬಲೇಶ್ವರ ಶಿವನ ದೇವಾಲಯವು ದೇಶದ ಎಲ್ಲ ಹಿಂದೂ ಭಕ್ತರಿಗೂ (ಹೆಚ್ಚಾಗಿ ಶಿವನ ಆರಾಧಕರಿಗೆ) ಇದನ್ನು ಪುಣ್ಯ ಸ್ಥಳವಾಗಿ ಮಾಡಿದೆ. ಈ ದೇವಾಲಯದ ಉಲ್ಲೇಖನವನ್ನು ತಮಿಳು ಕವಿಗಳಾದ ಅಪ್ಪಾರ್ ಮತ್ತು ಸಂಬಂದಾರ್ ರವರ ರಚನೆಗಳಲ್ಲಿ ಕಾಣಬಹುದು. ಇವರ ಕೀರ್ತನೆಗಳು ತುಳು ನಾಡಿನ ಒಡೆಯನ ಹೊಗಳಿಕೆಗೆ ಸಾಕ್ಷಿಯಾಗಿವೆ. ಈ ಸ್ಥಳವು ಮೂಲವಾಗಿ ವಿಜಯನಗರ ಅರಸರಾದ ಕದಂಬರ ಆಳ್ವಿಕೆಯಲ್ಲಿದ್ದ ಇದನ್ನು ನಂತರದಲ್ಲಿ ಪೋರ್ಚುಗೀಸರು ಆಕ್ರಮಿಸಿಕೊಂಡರು.

ಇತಿಹಾಸದ ಸಣ್ಣ ಮೆಲುಕು

ಗೋಕರ್ಣದಲ್ಲಿನ ಮಹಾಬಲೇಶ್ವರ ದೇವಾಲಯದಲ್ಲಿರುವ ಶಿವಲಿಂಗವನ್ನು ರಾವಣನು ಇಲ್ಲಿಗೆ ತಂದನೆಂಬುದು ನಂಬಿಕೆ. ಆತನಲ್ಲಿ ವಿಶೇಷ ಶಕ್ತಿಯನ್ನು ತುಂಬುವುದಲ್ಲದೆ ಆತನನ್ನು ಅತ್ಯಂತ ಬಲಿಷ್ಠವಾಗಿಸಬಲ್ಲ ಲಿಂಗವಾದ ಆತ್ಮಲಿಂಗವನ್ನು ಆತ ಪಡೆದು ತಂದಿದ್ದನು. ಈಗಾಗಲೇ ದುಷ್ಟನಾಗಿದ್ದ ರಾಜನು ಮತ್ತಷ್ಟು ಬಲಿಷ್ಠನಾಗಬಾರದೆಂಬ ಕಾರಣದಿಂದ ದೇವತೆಗಳು ಗಣೇಶನ ಸಹಕಾರದೊಂದಿಗೆ ಆತ ಲಿಂಗವನ್ನು ಇಲ್ಲಿಯೇ ಬಿಡುವಂತೆ ತಂತ್ರ ಹೂಡಿದರು. ಮಹಾಬಲೇಶ್ವರ ದೇವಾಲಯವನ್ನು ಹೊರತುಪಡಿಸಿ ಇತರೆ ಗಮನ ಸೆಳೆಯುವ ದೇವಾಲಯಗಳಾದ ಮಹಾ ಗಣಪತಿ ದೇವಾಲಯ, ಭದ್ರಕಾಳಿ ದೇವಾಲಯ, ವರದರಾಜ ದೇವಾಲಯ ಮತ್ತು ವೆಂಕಟರಮಣ ದೇವಾಲಯಗಳೂ ಇಲ್ಲಿವೆ. ಗೋಕರ್ಣದಲ್ಲಿನ ಸಮುದ್ರ ತೀರ ಮತ್ತು ಮರಳಿನ ಪ್ರದೇಶಗಳು ಗೋಕರ್ಣವು ಅತ್ಯಂತ ವೇಗವಾಗಿ ಪ್ರಿಯವಾಗುತ್ತಿರುವ ಪ್ರವಾಸಿ ತಾಣವಾಗಿದ್ದು ಗೋವಾದ ಅನೇಕ ಸಮುದ್ರ ತೀರಗಳನ್ನು ಹಿಮ್ಮೆಟ್ಟಿಸುವಂತಹ ಸುಂದರವಾದ ಹಲವು ಕರಾವಳಿ ಪ್ರದೇಶಗಳನ್ನು ಹೊಂದಿದೆ. ಕುಡ್ಲೆ ಸಮುದ್ರ ತೀರ, ಗೋಕರ್ಣ ತೀರ, ಅರ್ಧ ಚಂದಿರ ಸಮುದ್ರ ತೀರ, ಪ್ಯಾರಾಡೈಸ್ ತೀರ ಹಾಗೂ ಓಂ ಸಮುದ್ರ ತೀರಗಳು ಇಲ್ಲಿರುವ ಐದು ಪ್ರಮುಖ ಪ್ರದೇಶದ ಆಕರ್ಷಣೆಗಳಾಗಿವೆ. ಈ ಪಟ್ಟಣದ ಪ್ರಮುಖ ಸಮುದ್ರ ತೀರವಾದ ಗೋಕರ್ಣ ತೀರದಲ್ಲಿ ಭಕ್ತಾದಿಗಳು ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಸೇರುತ್ತಾರೆ. ಕುಡ್ಲೆ ಕರಾವಳಿ ಪ್ರದೇಶವು ಅತ್ಯಂತ ದೊಡ್ಡ ತೀರವಾಗಿದ್ದು ಸೂಕ್ತ ಸಮಯವಾದ ನವೆಂಬರ್ ನಿಂದ ಫೆಬ್ರವರಿಯಲ್ಲಿ ಜನಭರಿತವಾಗಿರುತ್ತದೆ. ಇಲ್ಲಿ ಗಮನಿಸಬೇಕಾದ ಮುಖ್ಯ ವಿಷಯವೆಂದರೆ ಇದು ಈಜುವುದಕ್ಕೆ ಬಹಳ ಅಪಾಯಕಾರಿ ಸ್ಥಳವಾಗಿದೆ. ಓಂ ಸಮುದ್ರ ತೀರವು ಹಿಂದೂಗಳ ಚಿಹ್ನೆ ಯಾದ ಓಂ ಆಕಾರದಲ್ಲಿರುವ ಸುಂದರವಾದ ಕರಾವಳಿ ರೇಖೆಯನ್ನು ಹೊಂದಿದೆ. ಈ ಬ್ರಹತ್ ಚಿಹ್ನೆಯ ಸುತ್ತಾಕಾರ ಸಣ್ಣ ಕೊಳವನ್ನು ನಿರ್ಮಿಸಿದ್ದು ಇದು ಈಜು ಬಾರದ ಜನರಿಗೂ ಜಳಕ ಮಾಡಲು ಸುರಕ್ಷಿತ ಸ್ಥಳವಾಗಿದೆ. ಹಾಫ್ ಮೂನ್ ಸಮುದ್ರ ತೀರವು ಓಂ ತೀರದಿಂದ ಕೇವಲ 20 ನಿಮಿಷಗಳ ನಡಿಗೆಯ ಅಂತರದಲ್ಲಿದ್ದು ಇಲ್ಲಿಗೆ ತಲುಪಲು ನೀವು ಸಣ್ಣ ಗುಡ್ಡೆಯ ಮಾರ್ಗವಾಗಿ ಸಾಗಿ ತಲುಪಬೇಕು. ಪ್ಯಾರಾಡೈಸ್ ಸಮುದ್ರ ತೀರವು ಕಲ್ಲು ಬಂಡೆಗಳಿಂದ ಕೂಡಿದ ಕರಾವಳಿ ಪ್ರದೇಶವಾಗಿದ್ದರೂ ಪ್ರಶಾಂತ ಮತ್ತು ಚೆಲುವಿನ ಸ್ಥಳವೆನಿಸಿದೆ. ಇದೇ ಕಾರಣದಿಂದ ತನ್ನ ಹೆಸರನ್ನು ಪಡೆದಿದೆ. ಸಮುದ್ರದ ಅಲೆಗಳು ಸತತವಾಗಿ ಬಂಡೆಗಳಿಗೆ ಜೋರಾಗಿ ಅಪ್ಪಳಿಸುವುದರಿಂದ ಈ ಸ್ಥಳವು ಈಜುಗಾರರಿಗೆ ಸೂಕ್ತವಲ್ಲ. ಗೋಕರ್ಣವು ಅಸಾಧಾರಣ ಸ್ಥಳಗಳಲ್ಲಿ ಒಂದಾಗಿದ್ದು ಪುಣ್ಯಕ್ಷೇತ್ರದ ಜೊತೆಗೆ ಸಮಯ ಕಳೆಯ ಬಯಸುವ ಪ್ರವಾಸಿಗರನ್ನು ಸುಲಭವಾಗಿ ಆಕರ್ಷಿಸುತ್ತದೆ. ಸುಂದರವಾದ ದೇವಾಲಯಗಳು ಮತ್ತು ಆಕರ್ಷಣೀಯ ಸಮುದ್ರ ತೀರಗಳು ಗೋಕರ್ಣವನ್ನು ಗಮನಾರ್ಹ ಪ್ರವಾಸೀ ತಾಣವನ್ನಾಗಿ ಮಾಡಿವೆ.

===




                                                         ಡಿ.ವಿ.ಜಿ. (ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ)


=== ಹೊಸಗನ್ನಡದ ನಿರ್ಮಾಪಕರಲ್ಲಿ ಮುಖ್ಯವಾಗಿ ಗಮನಿಸಬೇಕಾದ ಒಂದು ಹೆಸರು ಡಿ.ವಿ.ಜಿ.ಯವರದು(1887-1975). ಈ ಕಾವ್ಯನಾಮದಿಂದಲೇ ಅವರು ಪ್ರಸಿದ್ಧರು. ಅವರ ಪೂರ್ತಿ ಹೆಸರು ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ. ಕೋಲಾರ ಜಿಲ್ಲೆಯ ದೇವನಹಳ್ಳಿ ಅವರ ಹುಟ್ಟೂರು. ಬಾಲ್ಯವಿದ್ಯಾಭ್ಯಾಸದ ಅನಂತರ ಉದ್ಯೋಗವನ್ನರಸಿ ಬೆಂಗಳೂರಿಗೆ ಬಂದ ಅವರು ಸ್ವಾಧ್ಯಾಯದಿಂದಲೇ ಬಹಳ ದೊಡ್ಡ ವಿದ್ವಾಂಸರಾದರು. ಧೀಮಂತ ಪತ್ರಿಕೋದ್ಯೋಗಿಯಾಗಿ, ಚಿಂತಕರಾಗಿ, ಕವಿಗಳಾಗಿ, ನಾಟಕಕಾರರಾಗಿ, ಅನುವಾದಕರಾಗಿ, ವಿಮರ್ಶಕ-ವಿಶ್ಲೇಷಕರಾಗಿ ಕನ್ನಡದ ನವೋದಯಕಾಲದಲ್ಲಿ ಅವರು ಸಲ್ಲಿಸಿದ ಸೇವೆ ವಿಶಿಷ್ಟವಾದುದು. ಕನ್ನಡ, ಸಂಸ್ಕೃತ, ಇಂಗ್ಲಿಷ್-ಈ ಮೂರು ಭಾಷೆಗಳಲ್ಲೂ ಅವರು ಪ್ರವೀಣರಾಗಿದ್ದು ತಮಿಳು ತೆಲುಗುಗಳನ್ನೂ ಚೆನ್ನಾಗಿ ಬಲ್ಲವರಾಗಿದ್ದರು. ಡಿ.ವಿ.ಜಿ ಯವರ ಮಂಕುತ್ತಿಮ್ಮನ ಕಗ್ಗ, ಮರುಳಮುನಿಯನ ಕಗ್ಗ-ಇವು ವಿಶಿಷ್ಟ ಮಾದರಿಯ ಪದ್ಯರಚನೆಗಳಾಗಿದ್ದು ಭಾರತದ ಪ್ರಾಚೀನಚಿಂತನೆಗಳನ್ನೂ ಪಾಶ್ಚಾತ್ಯಚಿಂತನ-ಮಾರ್ಗಗಳನ್ನು ಆಧುನಿಕಜೀವನಮೌಲ್ಯಗಳನ್ನೂ ಸಂಯೋಜಿಸಿದ ಸಮನ್ವಯರೂಪದ ಬರ- ವಣಿಗೆಗಳಾಗಿವೆ. ಶ್ರೀಮದ್ಭಗವದ್ಗೀತಾತಾತ್ಪರ್ಯ ಅಥವಾ ಜೀವನಧರ್ಮಯೋಗ ಎಂಬ ಅವರ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿರುತ್ತದೆ. ನಿವೇದನ, ಅಂತಃಪುರಗೀತೆಗಳು, ಶ್ರಂಗಾರಮಂಗಳಂ, ಶ್ರೀರಾಮಪರೀಕ್ಷಣಂ, ಶ್ರೀಕೃಷ್ಣಪರೀಕ್ಷಣಂ ಮೊದಲಾದುವು ಅವರ ಪದ್ಯಕೃತಿ-ಗಳು. ಉಮರನ ಒಸಗೆ ಎಂಬುದು ಉಮರ್ ಖಯಾಮನ ರುಬಾಯತುಗಳ ಅನುವಾದ. (ಈ ಕೃತಿ ಫಿಟ್ಸ್ ಜೆರಾಲ್ಡನ ಇಂಗ್ಲಿಷ್ ಅನುವಾದವನ್ನು ಆಧರಿಸಿದೆ) ಜ್ಞಾಪಕಚಿತ್ರಶಾಲೆಯ ಹಲವು ಸಂಪುಟಗಳು ಅವರ ಸ್ಮರಣೆಯಲ್ಲಿದ್ದ ಹಿರಿಯರು, ಸಾಹಿತಿಗಳು, ದಿವಾನರು, ಸಾರ್ವಜನಿಕರು, ಕಲಾವಿದರು ಮೊದಲಾದವರ ವ್ಯಕ್ತಿಚಿತ್ರಣಗಳು, ಸಾಹಿತ್ಯಶಕ್ತಿ, ಜೀವನಸೌಂದರ್ಯ ಮತ್ತು ಸಾಹಿತ್ಯ ಮುದಲಾದ ಕಾವ್ಯತತ್ತ್ವ ವಿಶ್ಲೇಷಣೆಯ ಕೃತಿಗಳನ್ನೂ, ಮ್ಯಾಕ್ ಬೆತ್, ತಿಲೋತ್ತಮೆ, ಕನಕಾಲುಕಾ ಮೊದಲಾದ ಅನುವಾದ ನಾಟಕಕೃತಿಗಳನ್ನೂ, ವೃತ್ತಪತ್ರಿಕೆ, ಇಂಡಿಯದ ಭಾಷಾ ಪ್ರಶ್ನೆ, ಸಂಸ್ಕೃತಿ, ಸಾರ್ವಜನಿಕದಲ್ಲಿ ಸಾತ್ತ್ವಿಕ, ಬಾಳಿಗೊಂದು ನಂಬಿಕೆ, ಮೊದಲಾದ ಹಲವು ವೈಚಾರಿಕಕೃತಿಗಳನ್ನೂ ಅವರು ರಚಿಸಿದ್ದಾರೆ. ಡಿ.ವಿ.ಜಿ. ಯವರ ಕೃತಿಗಳ ಕುರಿತು ಹಲವು ಲೇಖನಗಳು, ಪುಸ್ತಕಗಳು ಹೊರಬಂದಿವೆ. ಕಗ್ಗಗಳಿಗೆ ವ್ಯಾಖ್ಯಾನರೂಪದ ಕೃತಿಗಳು ಪ್ರಕಟಗೊಂಡಿವೆ. ಅವರ ಜೀವನ ಮತ್ತು ಕೃತಿಗಳ ಪರಿಚಯರೂಪದ ಹೊತ್ತಗೆಗಳು ರಚಿತವಾಗಿವೆ. ಅವರ ವ್ಯಕ್ತಿತ್ವದ ಪೂರ್ಣಪರಿಚಯವಾಗಲು ಅವರಿಗೆ ಆಪ್ತರಾಗಿದ್ದ ಡಿ. ವಿ. ವೆಂಕಟರಮಣನ್ ಅವರ ‘ವಿರಕ್ತರಾಷ್ಟ್ರಕ ಡಿವಿಜಿ’ ಎಂಬ ಕೃತಿಯನ್ನು ನೋಡಬಹುದು. ಗೋಪಾಲಕೃಷ್ಣ ಗೋಕಲೆಯವರ ವೈಚಾರಿಕ ಮಾರ್ಗ, ಡಿವಿಜಿಯವರಿಗೆ ತುಂಬಾ ಆಪ್ತವಾಗಿತ್ತು. ಗೋಖಲೆಯವರ ಹೆಸರಿನಲ್ಲಿ ‘ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’ ಎಂಬ ಹೆಸರಿನಲ್ಲಿ ಒಂದು ಸಂಸ್ಥೆಯನ್ನು ಬೆಂಗಳೂರಿನಲ್ಲಿ ಕಟ್ಟಿ ಅದಕ್ಕಾಗಿ ತಮ್ಮ ಕೊನೆಯುಸಿರಿನ ವರೆಗೆ ಡಿವಿಜಿಯವರು ಶ್ರಮಿಸಿದ್ದರು. ಆ ಸಂಸ್ಥೆಯು ಇಂದೂ ಡಿವಿಜಿಯವರ ವಿಚಾರಗಳನ್ನಿರಿಸಿಕೊಂಡು ಕಾರ್ಯಪ್ರವೃತ್ತವಾಗಿದೆ. ಡಿವಿಜಿಯವರ ಮರಣಾನಂತರ ಅವರ ಎಲ್ಲ ಕೃತಿಗಳನ್ನು ಹನ್ನೊಂದು ಸಂಪುಟಗಳಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದ್ದು ಇತ್ತೀಚಿಗೆ ಅವು ಪುನರ್ಮುದ್ರಣಗೊಂಡಿವೆ. ಪ್ರಸ್ತುತ ಪ್ರಬಂಧವನ್ನು ಈ ಮಾಲಿಕೆಯ ಹತ್ತನೆಯ ಸಂಪುಟದಿಂದ ಎತ್ತಿಕೊಳ್ಳಲಾಗಿದೆ.

===