ಸದಸ್ಯ:Chandana priya.v/sandbox
ಕಂಪ್ಯೂಟರುಗಳಿಗೆ ೫೦೦೦ ವರ್ಷಗಳ ಇತಿಹಾಸವಿದೆ. 'ಅಬಾಕಸ್' ಆತ್ಯಂತ ಪ್ರಾಚೀನ ಯಾಂತ್ರಿಕ ಕಂಪ್ಯೂಟರ್.ಬಹುಶಃ ಚೀನಾದಲ್ಲಿ ಕಂಡುಹಿಡಿದ ಈ ಕಂಪ್ಯೂಟರಿಗೆ ಮರದ ಚೌಕಟ್ಟಿದ್ದು,ಹತ್ತು ಸರಳುಗಳಿರುತ್ತಿದ್ದವು.ಒಂದೊಂದು ಸರಳಿನಲ್ಲೂ ಸರಿದಾಡಬಲ್ಲ ಹತ್ತು ಮರದ ಮಣಿಗಳಿದ್ದು, ಈ ಸರಳುಗಳು ಬಿಡಿ,ಹತ್ತು,ನೂರು,ಸಾವಿರ ಮುಂತಾದ ಸ್ಥಾನವನ್ನು ಸೂಚಿಸುತ್ತಿದ್ದವು.ಈ ಮಣಿಗಳನ್ನು ಮೇಲೆ ಕೆಳಗೆ ಚಲಿಸಿ ಗುಣಿಸಲಾಗುತ್ತಿತ್ತು.ನೋಡಲು ಮಕ್ಕಳ ಆಟಿಗೆಯಂತೆ ಕಾಣಿಸುವ 'ಅಬಾಕಸ್'
ಬಳಸಿ ಪೂರ್ಣಾಂಕಗಳನ್ನು ಕೂಡುವುದು, ಕಳೆಯುವುದು,ಗುಣಿಸುವುದು,ಭಾಗಿಸುವುದು ಸಾಧ್ಯವಿತ್ತು.ಇಂದಿಗೂ ಮಲೇಶಿಯಾ,ಇಂಡೋನೇಶಿಯಾ ಮೊದಲಾದ ಪೂರ್ವದೇಶಗಳಲ್ಲಿ,ರಷಿಯಾದಲ್ಲಿ,ಇದನ್ನು ಬಳಸುವವರಿದ್ದಾರೆ.೧೯೮೩ರಷ್ಟು ಇತ್ತೀಚೆಗೆ
,ಜಪಾನಿನಲ್ಲಿ ೨೦ ಲಕ್ಷ 'ಅಬಾಕಸ್'ಗಳು ತಯಾರಾಗುತ್ತಿದ್ದವು. ಮೊಟ್ಟ ಮೊದಲ 'ಡಿಜಿಟಲ್ ಕಂಪ್ಯೂಟರ್'ನ ವಿನ್ಯಾಸ ಮಾಡಿದವನು ಚಾರ್ಲ್ಸ್ ಬ್ಯಾಬೇಜ್ ಎಂಬ ಆಂಗ್ಲ ವಿನಿ ಮತ್ತು ಗಣಿತ. ಈತ 'ಪ್ರೋಗ್ರಾಮ್' ಮಾಡಬಲ್ಲ ಕಂಪ್ಯೂಟರುಗಳ ವಿನ್ಯಾಸವನ್ನು ೧೮೩೪ರಲ್ಲಿ ರಚಿಸಿದ.ಒಂದು ನಿರ್ದಿಷ್ಟ ಕೆಲಸವನ್ನು
ಮಾಡಲು ಕಂಪ್ಯೂಟರಿಗೆ ನೇಡವ ಆಗಳ,ನಿರ್ದೇಶನಗಳ ಸಂಕಲನಕ್ಕೆ 'ಫ್ರೋಗ್ರಾಮ' ಎನ್ನುತ್ತೇವೆ.ಬ್ಯಾಬೇಜ್ ೨೦ ವರ್ಷಗಳ ಹಿಂದೆ ಕಂಡು ಹಿಡಿದ 'ಕೂಡುವ ಯಂತ್ರ'ದ ಮುಂದುವರಿಕೆಯಾಗಿ 'ಅನಲಿಟಿಕಲ್ ಎಂಜಿನ್ ರೂಪುಗೊಂಡಿತ್ತು.ಇದು ಗಣಿತದ
ಸಮಸ್ಯೆಗಳನ್ನು ತೂತು ಕೊರೆದ ಕಾರ್ಡುಗಳಿಂದ ಓದಬಲ್ಲದಿತ್ತು.ನಂತರ ಅವನ್ನು ಗುಣಿಸಿ ಹೇಳುತ್ತಿತ್ತು.ಈ ಯಂತ್ರಕ್ಕೆ ಕಾರ್ಯ ನಿರ್ದೇಶಗಳನ್ನು ಆಡಾ ಎಂಬ ಗಣಿತ ಬರೆದಿದ್ದಳು.ಈ ಬಗೆಯಲ್ಲಿ ಈಕೆ ಪ್ರಪಂಚದ ಮೊಟ್ಟಮೊದಲ ಕಂಪ್ಯೂಟರ್ ಫ್ರೋಗ್ರಾಮರ್ ಎನಿಸಿಕೊಂಡಳು.ಆದರೆ ಬ್ಯಾಬೇಜನ ವಿಚಾರಗಳು ಅತನ ಕಾಲಕ್ಕಿಂತ ತುಂಬಾ ಮುಂದೋಡಿದ್ದವು.ಆ ಕಾಲದಲ್ಲಿ ಅಂಥಾ 'ಅನಲಿಟಿಕಲ್ ಎಂಜಿನ್' ಅನ್ನು ಪೂರ್ಣ ರೀತಿಯಲ್ಲಿ ತಯಾರಿಸಲು ಬೇಕಾದ ತಾಂತ್ರಿಕತೆ ಲಭ್ಯವಿರಲಿಲ್ಲ.ಹಾಗಾಗಿ ಅದನ್ನೆಂದೂ ತಯಾರಿಸಲಾಗಲಿಲ್ಲ .ಅದೃಷ್ಟಕ್ಕೆ ಬ್ಯಾಬೇಜನ ನೋಟು ಪುಸ್ತಕಗಳು ಹಾಳಾಗದೆ,ಮರೆತು ಹೋಗಿದ್ದ ಈ ವಿನ್ಯಾಸ ೧೯೩೭ರಲ್ಲಿ ಆಕಸ್ಮಿಕವಾಗಿ ಮತ್ತೆ ಬೆಳಕಿಗೆ ಬಂತು.