ಸದಸ್ಯ:Chaithra05/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನಂತನಾಥ ಸ್ವಾಮಿ ಬಸದಿ, ನೆಲ್ಲಿಕಾರು

ಸ್ಥಳ[ಬದಲಾಯಿಸಿ]

ಈ ಬಸದಿಯು ಮಂಗಳೂರು ತಾಲೂಕು ನೆಲ್ಲಿಕಾರು ಗ್ರಾಮದಲ್ಲಿದೆ. ಬಸದಿಯ ಎದುರು ಶ್ರಾವಕರ ಮನೆಗಳಿವೆ. ಈ ಬಸದಿಗೆ ಹತ್ತಿರದಲ್ಲಿರುವ ಬಸದಿ ಚೆಂಡೆ ಬಸದಿ. ಸುಮಾರು ೩ ಕಿ. ಮೀ. ದೂರದಲ್ಲಿದೆ. ಈ ಬಸದಿಗೆ ಬರುವ ಕುಟುಂಬದ ಮನೆಗಳು ೪೫. ಇವರು ಆಗಾಗ ಬರುತ್ತಿರುತ್ತಾರೆ. ಬಸದಿ ಕಾರ್ಕಳದ ಶ್ರೀ ಮಠಕ್ಕೆ ಸೇರಿದೆ. ಕಾರ್ಕಳದಿಂದ ಬಜಗೋಳಿ ನಂತರ ನೆಲ್ಲಿಕಾರು, ನಾರಾವಿ, ಗುರುವಾಯನಕೆರೆಗೆ ಹೋಗುವ ಹೆದ್ದಾರಿಯ ಬದಿಯಲ್ಲಿದೆ.

ಆಡಳಿತ[ಬದಲಾಯಿಸಿ]

ಶಿಲಾಮಯ ಮೇಲ್ಭಾಗ ಹಂಚಿನ ಮಹಡಿಯಿಂದ ಕೂಡಿದೆ. ಸದ್ರಿ ಬಸದಿಯನ್ನು ಪಣಪೀಲು ಅರಮನೆಯ ವಂಶಸ್ಥರು ನಡೆಸುತ್ತಿದ್ದಾರೆ. ಅನುವಂಶೀಯ ಮೊಕ್ತೇಸರರು ಶ್ರೀಮತಿ ಕಮಲಾವತಿಯಮ್ಮ, ಆಡಳಿತ ಮೊಕ್ತೇಸರರು ಶ್ರೀ ಎಂ. ನಾಭಿರಾಜ ಶೆಟ್ಟಿ. ಬಸದಿಯ ಇಂದ್ರರ ಹೆಸರು ಶ್ರೀ ಸುದರ್ಶನ ಇಂದ್ರರು ಮತ್ತು ಶ್ರೀ ಪ್ರಸನ್ನ ಇಂದ್ರರು, ಬಸದಿಯನ್ನು ಪಣಪೀಲು ಅರಮನೆ ಪೂರ್ವಿಕರು ಕಟ್ಟಿಸಿರುತ್ತಾರೆ.

ಇತಿಹಾಸ[ಬದಲಾಯಿಸಿ]

ಸುಮಾರು ೧೫ನೇ ಶತಮಾನದಲ್ಲಿ ಮೂಡಬಿದ್ರೆ ಹೋಬಳಿ ಕೊನ್ನಾರ ಮಾಗಣೆಯಲ್ಲಿ ಪಣಪೀಲು ಅರಮನೆ ಇದೆ. ಇತ್ತೀಚೆಗೆ ಬಸದಿಯು ಜೀರ್ಣೋದ್ಧಾರಗೊಂಡಿದೆ. ಸುಮಾರು ೧೫ನೇ ಶತಮಾನ ಪೂರ್ವದಲ್ಲಿ ಕಲ್ಯಾಣ ಕೀರ್ತಿ ಎಂಬ ನಿರ್ಗ್ರಂಥ ಮುನಿಗಳು ನೆಲ್ಲಿಕಾಯಿ ಇರುವಂತೆ ಕಾಡಿನ ಮಧ್ಯದಲ್ಲಿ ಧ್ಯಾನಕ್ಕೆ ಕುಳಿತ ಸಂದರ್ಭದ ಬ್ರಾಹ್ಮೀ ಮುಹೂರ್ತದಲ್ಲಿ ಶ್ವೇತ ಅಶ್ವವನ್ನೇರಿ ಬಂದಂತ ಒಬ್ಬ ಯುವಕ ( ಬ್ರಹ್ಮಯಕ್ಷ ) ಸದ್ರಿ ಮುನಿಗಳಿಗೆ ಆದೇಶ ನೀಡಿದ ವಾಕ್ಯ ( ಈ ಕಾಡಿನ ಮಧ್ಯ ಭಾಗದಲ್ಲಿ ೨ ಬೃಹದಾಕಾರದ ಹುತ್ತಗಳು ಇವೆ. ಇದನ್ನು ಕೇಳಿಸಿದಲ್ಲಿ ನಿಮಗೆ ಭಗವಂತನ ದರ್ಶನ (ಬಿಂಬ) ಮತ್ತು ಇನ್ನೊಂದು ಹುತ್ತದಲ್ಲಿ ನನ್ನ ಅತಿಶಯ ಇದೆ ಎಂಬ ಕನಸು ಮುನಿಗಳಿಗೆ ಕಂಡಿರುತ್ತದೆ. ಇದನ್ನರಿತ ಕೊನ್ನಾರ ಸೀಮೆಯ ಕೊನ್ನಾರ ಅರಸರು (ಪಣಪೀಲು ಅರಮನೆ) ಇಲ್ಲಿಯ ಶ್ರಾವಕ ಬಂಧುಗಳು ಪೂಜ್ಯ ಮುನಿಗಳ ಆದೇಶ ಮೇರೆಗೆ ಅತಿಶಯ ಇರುವಂತ ಜಾಗವನ್ನು ಜೀರ್ಣೋದ್ಧಾರಗೊಳಿಸಿದರು. ಅಂದಿನಿಂದ ಅಮಲಕಾಪುರ (ನೆಲ್ಲಿಕಾರು) ಎಂದು ಪ್ರಸಿದ್ದಿಗೊಂಡಿದೆ.

ದೈವ[ಬದಲಾಯಿಸಿ]

ಬಸದಿಗೆ ಮೇಗಿನ ನೆಲೆ ಇದೆ. ಅಲ್ಲಿ ಚಂದ್ರಪ್ರಭ ತೀರ್ಥಂಕರ ಪಂಚಲೋಹದ ಮೂರ್ತಿ ಇದೆ. ಪೂಜೆ ನಡೆಯುತ್ತಿದೆ. ಸದ್ರಿ ಬಸದಿಯಲ್ಲಿ ೨೪ ತೀರ್ಥಂಕರರ ಕಂಚಿನ ಮೂರ್ತಿಗಳಿವೆ. ಕರಿಶಿಲೆಯ ಪದ್ಮಾವತಿಯಮ್ಮ ಮೂರ್ತಿ ಇದೆ. ಶ್ರೀ ಬ್ರಹ್ಮದೇವರ ಮೂರ್ತಿ, ಶ್ರೀ ಸರಸ್ವತಿ ಮೂರ್ತಿ ಇದೆ. ಮಾನಸ್ತಂಭ ಇಲ್ಲ.

ಆವರಣ[ಬದಲಾಯಿಸಿ]

ಬಸದಿಯ ಬದಿಯಲ್ಲಿ ಪಾರಿಜಾತ ಹೂವಿನ ೧ ಗಿಡ ಇದೆ. ಅಂಗಳದಲ್ಲಿ ಯಾವುದೇ ಹೂವಿನ ಗಿಡಗಳಿಲ್ಲ. ಬಸದಿಯನ್ನು ಪ್ರವೇಶಿಸುವಾಗ. ಸಿಗುವ ಎಡ-ಬಲ ಬದಿಗಳಲ್ಲಿರುವ ಗೋಪುರವನ್ನು ಭಕ್ತಾದಿಗಳು ಕುಳಿತುಕೊಳ್ಳಲು ಉಪಯೋಗಿಸುತ್ತಾರೆ. ಕಾರ್ಯಲಯ ಇದೆ. ಹಿಂದೆ ಇಲ್ಲಿ ಶ್ರೀ ಅನಂತಕೀರ್ತಿ ಮುನಿಗಳು ಇದ್ದರು. ಇದಕ್ಕೆ ತಾಗಿಕೊಂಡು ಮುನಿವಾಸ ಈ ಕೋಣೆ ಇದೆ. ಚಾತುರ್ಮಾಸಗಳು ನಡೆಯುತ್ತ ಇದೆ. ದ್ವಾರಪಾಲಕರ ಚಿತ್ರಗಳಿವೆ. ಇತರ ಚಿತ್ರಗಳು ಇವೆ. ಪ್ರಾರ್ಥನಾ ಮಂಟಪದಲ್ಲಿ ಜಯಗಂಟೆ, ಜಾಗಟೆಗಳನ್ನು ತೂಗಿ. ಹಾಕಲಾಗಿದೆ. ಗಂಧಕುಟಿ ತೀರ್ಥಂಕರ ಮಂಟಪದಲ್ಲಿದೆ. ಗಂಧಕುಟಿಯ ಎಡಭಾಗದಲ್ಲಿ ಮರದ ಗೂಡಿನ ಒಳಗೆ ಅಮ್ಮನವರ ಮೂರ್ತಿ ಇದೆ. ಇಲ್ಲಿರುವ ಜಿನಬಿಂಬಗಳ ಪೀಠಗಳಲ್ಲಿ ಹಳೆಗನ್ನಡದ ಅಸ್ಪಷ್ಟ ಬರವಣಿಗೆ ಇದೆ. ಶ್ರೀ ಅನಂತನಾಥ ಸ್ವಾಮಿಯ ಮೂರ್ತಿ ಕಪ್ಪುಶಿಲೆ, ೩ ಅಡಿ ಎತ್ತರ ರ‍್ಯಂಕಾಸನ ಭಂಗಿಯಲ್ಲಿದೆ. ಬಲಭಾಗದ ನೈಋತ್ಯ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ, ತ್ರಿಶೂಲ, ನಾಗರ ಕಲ್ಲುಗಳು ಇದೆ. ಬಲಿಕಲ್ಲುಗಳು ಇವೆ. ನಿತ್ಯಪೂಜೆ ಸಲ್ಲುತಾ ಇದೆ. ಬಸದಿಯ ಸುತ್ತಲೂ ಪ್ರಾಕಾರಗೋಡೆ ಇದೆ. ಇದನ್ನು ಮುರಕಲ್ಲಿನಿಂದ ಕಟ್ಟಲಾಗಿದೆ. ಆಫೀಸು ಇದೆ. ದೊಡ್ಡ ಹಾಲ್ ಇದೆ.

ವಿಧಿ-ವಿಧಾನ[ಬದಲಾಯಿಸಿ]

ದಿನಾಲೂ ಅಭಿಷೇಕ ಪೂಜಾದಿಗಳು ನಡೆಯುತ್ತಿದೆ. ಮೂರು ಹೊತ್ತಿನಲ್ಲೂ ಪೂಜೆ ನಡೆಯುತ್ತಿದೆ. ಪದ್ಮಾವತೀ ದೇವಿ ಮೂರ್ತಿಯು ಪೂರ್ವಾಭಿಮುಖವಾಗಿದೆ. ಇಲ್ಲಿ ನಿತ್ಯ ಶೋಡಷೋಪಚಾರಗಳಿಂದ ಪೂಜೆ ನಡೆಯುತ್ತಿದೆ. [೧]

ಆಚರಣೆಗಳು[ಬದಲಾಯಿಸಿ]

ಬಸದಿಯಲ್ಲಿ ವಾರ್ಷಿಕ ರಥೋತ್ಸವ, ವಿಶೇಷ ಹಬ್ಬಗಳು, ದೀಪೋತ್ಸವ, ಅನಂತನೋಂಪಿ ಇತ್ಯಾದಿ ನಡೆಯುತ್ತದೆ.

ಭೇಟಿ[ಬದಲಾಯಿಸಿ]

ಈ ಬಸದಿಗೆ ಶ್ರೀ ವರ್ಧಮಾನ ಸಾಗರ ಮುನಿಗಳು, ಶ್ರೀ ನಿಜಾನಂದ ಮುನಿಗಳು, ಶ್ರವಣಬೆಳಗೊಳ, ಹೊಂಬುಜ, ಮೂಡಬಿದ್ರೆ, ಕಾರ್ಕಳ ಮಠಗಳ ಭಟ್ಟಾರಕರು, ಧರ್ಮಸ್ಥಳದ ಧರ್ಮಾಧಿಕಾರಿಗಳು ಭೇಟಿ ನೀಡಿರುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೩೦೧-೩೦೨.