ಸದಸ್ಯ:Chaithali C Nayak/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೀಲುಕುದುರೆ ಕುಣಿತ[ಬದಲಾಯಿಸಿ]

ಕೀಲು ಕುದುರೆ ಕುಣಿತವು ಒಂದು ಜನಪದ ಕಲೆಯಾಗಿದೆ.ಇದಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ.ಕೀಲು ಕುದುರೆಗೆ ಸಂಬಂಧಪಟ್ಟಂತಹ ಅನೇಕ ಜನಪದ ಕಥೆಗಳು ಇಂದಿಗೂ ಪ್ರಚಲಿತದಲ್ಲಿವೆ.

ವೇಷಭೂಷಣ[ಬದಲಾಯಿಸಿ]

ಕಲಾವಿದರು ರಾಜರಾಣಿಯಂತೆ ಕಿರೀಟ, ಭುಜಕೀರ್ತಿ, ಎದೆಹಾರ, ಸೊಂಟಕ್ಕೆ ಡಾಬು, ವೀರಗಚ್ಚೆ, ಮೀಸೆ, ಕಿವಿಗೆ ಲೋಲಾಕು ಇತ್ಯಾದಿಗಳನ್ನು ಧರಿಸುತ್ತಾರೆ. ಕೀಲು ಕುದುರೆಯನ್ನು ಬಿದಿರಿನ ದಬ್ಬೆ,ಮರದ ತಿರುಳು,ಕಾಗದದ ಗಂಜಿ ಮತ್ತು ಜೇಡಿಮಣ್ಣು ಬಳಸಿ ತಯಾರಿಸುತ್ತಾರೆ.ತಲೆ ಮತ್ತು ಕತ್ತಿನ ಭಾಗವನ್ನು ಚಿತ್ರಗಾರರು ಅಥವಾ ಕಲಾವಿದರು ಬಿಡಿಸುತ್ತಾರೆ.ಕುಣಿಯುವಾಗ ಮಾತ್ರ ಬಣ್ಣಗಳನ್ನು ಬಳಿದಿರುತ್ತಾರೆ. ಉಳಿದಂತೆ ದೇಹದ ಭಾಗವನ್ನು ಬಿಳಿ ಸ್ಯಾಟಿನ್ ವಸ್ತ್ರದಿಂದ ಇಳಿಬಿಟ್ಟಂತೆ ಮಾಡಿ ದೇಹಾಕಾರಕ್ಕೆ ಹೊದಿಸಿರುತ್ತಾರೆ.ಕೀಲು ಕುದುರೆಯನ್ನು ಕುಣಿವವನ ಸೊಂಟ ಭಾಗಕ್ಕೆ ಹಿಡಿಸುವಂತೆ ಮಾಡಿ ದೇಹಾಕಾರಕ್ಕೆ ಹೊಂದಿಸಿರುತ್ತಾರೆ. ಕುಣಿಯುವವನು ಸಾಧಾರಣವಾಗಿ ಮರಗಾಲು ಕಟ್ಟಿಕೊಂಡಿರುತ್ತಾನೆ. ಕೆಲವೊಮ್ಮೆ ಮರಗಾಲಿಲ್ಲದೆಯೂ ಕುಣಿಯುತ್ತಾರೆ.

ಕುಣಿತ[ಬದಲಾಯಿಸಿ]

ಕೀಲು ಕುದುರೆ ಕುಣಿಯುವವರು ತಮ್ಮ ವೇಷಭೂಷಣದ ಮೂಲಕ ಕುದುರೆಯ ಬಳಕೆ ಕೇವಲ ರಾಜಕುಟುಂಬಗಳೊಂದಿಗೆ ಮಾತ್ರ ಸೀಮಿತವಾಗಿದೆ ಎಂಬುವುದನ್ನು ತಿಳಿಸುತ್ತಾರೆ. ಕೈಯಲ್ಲಿ ಲಗಾಮು ಹಿಡಿದು ಕುದುರೆಯ ತಲೆ, ಬಾಲವನ್ನು ಮೇಲೆ ಕೆಳಗೆ ಆಡಿಸುತ್ತ ಕುಣಿಯುತ್ತಾರೆ.

ಸಾವಿರಾರು ಕೀಲು ಕುದುರೆ ಪ್ರದರ್ಶನಗಳನ್ನು ನೀಡಿದ ಕಲಾವಿದರ ಕಾಲು, ಸೊಂಟ ಭಾಗದ ಮೂಳೆಗಳೇ ಸವೆದು ಒಂದು ವಯಸ್ಸಿನ ನಂತರ ಅವರು ನಡಿಗೆಯ ಸುಖದಿಂದಲೇ ವಂಚಿತರಾಗುತ್ತಾರೆ. ನಾಗಸ್ವರ, ಡೋಲು, ತಮಟೆಗಳ ಹಿಮ್ಮೇಳದೊಂದಿಗಿನ ಕೀಲು ಕುದುರೆ ಕುಣಿತದಲ್ಲಿ ರಾಜನ ಪಾತ್ರಧಾರಿಗಳು ಇರುವಂತೆಯೇ ರಾಣಿಯರ ಪಾತ್ರಗಳೂ ಇದ್ದು ಗಂಡಸರೇ ಸ್ತ್ರೀವೇಷ ಧರಿಸುತ್ತಾರೆ. ಕೆಲವೊಮ್ಮೆಇದರೊಂದಿಗೆ ನವಿಲು ನೃತ್ಯವೂ ಸೇರಿಕೊಂಡಿರುತ್ತದೆ. ಕೊಡಗಿನಲ್ಲಿ ಇದನ್ನು ಪೋಯ್ ಕುದುರೆ ಎಂದು ಕರೆದರೆ ದಕ್ಷಿಣ ಕರ್ನಾಟಕದಲ್ಲಿ ‘ಕೀಲು ಕುದುರೆ’ ಎನ್ನುತ್ತಾರೆ. ಕೋಲಾರ, ಮೈಸೂರು, ಮಂಡ್ಯ, ಕೊಡಗು, ಬಳ್ಳಾರಿ ಜಿಲ್ಲೆಗಳಲ್ಲಿ ಇದು ಹೆಚ್ಚಿದ್ದರೂ ಮೂಲ ತಮಿಳುನಾಡೆಂದೇ ಹೇಳಬೇಕು.