ಸದಸ್ಯ:Carol Sheona
ನನ್ನ ಹೆಸರು ಕ್ಯಾರಲ್ ಶೀಯೋನಾ ಆನ್ಸ್ಲ್ಮ್.ನನ್ನ ಊರು ಮಂಗಳೂರು. ೨೫ ಸೆಪ್ಟೆಂಬರ್ ೧೯೯೭ ರಂದು ನನ್ನ ಜನ್ಮದಿನ. ನಾನು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ. ನಾನು ಪ್ರಥಮ ಬಿ ಎಸ್ ಸಿ ಓದುತ್ತಿದ್ದೇನೆ. ನನ್ನ ವಿಷಯಗಳು, ಅಂಕಿಅಂಶ, ಗಣಕಶಾಸ್ತ್ರ, ಗಣಿತ.ನಾನು ಕಾರ್ಮೆಲ್ ಇಂಗ್ಲಿಷ್ ಶಾಲೆಯಲ್ಲಿ ನನ್ನ ಪ್ರಾರ್ಥಮಿಕ ಶಿಕ್ಷಣ ಮತ್ತು ಸೇಂಟ್ ಆನ್ಸನಲ್ಲಿ ನನ್ನ ಪ್ರೌಢಶಾಲ ವಿಧ್ಯಾಭ್ಯಾಸವನ್ನು ಪೂರ್ಣಗೊಳಿಸಿದೆ. ನಾನು ಸೇಂಟ್ ಆಗ್ನೆಸ್ ಪಿಯು ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪೂರ್ಣಗೊಳಿಸಿದೆ. ನಮ್ಮ ಮನೆಯಲ್ಲಿ ನಾವು ನಾಲ್ಕು ಜನರು. ನಾನು, ನನ್ನ ಪೋಷಕರು ಮತ್ತು ನನ್ನ ಹಿರಿಯ ಸಹೋದರ. ನನ್ನ ತಂದೆ ಹೆಸರು ರಿಚರ್ಡ್ ಆನ್ಸ್ಲ್ಮ್, ಅವರು ಎಲೆಕ್ಟ್ರಾನಿಕ್ ಟೆಕ್ನಿಶಿಯನ್,ನನ್ನ ತಾಯಿ ಪೆಟ್ರೀಶಿಯಾ ಆನ್ಸ್ಲ್ಮ್ ಅವರು ಗೃಹಿಣಿ,ನನ್ನ ಅಣ್ಣ ಸಾಫ್ಟವೇರ್ ಇಂಜಿನಿಯರ್. ನನ್ನ ಮನೆಯ ಸುತ್ತ ತುಂಬಾ ಹಸಿರಿದೆ, ಅದಕ್ಕೆ ನನ್ನ ಮನೆಯ ಹೆಸರು 'ಗ್ರೀನ್ ಕಾಟೇಜ್'. ನನ್ನ ವಿದ್ಯಾಭ್ಯಾಸವನ್ನು ಬಹಳ ಆಸಕ್ತಿಯಿಂದ ಮಾಡುತ್ತಿದ್ದೇನೆ. ನನ್ನ ಬಿಡುವಿನ ಸಮಯದಲ್ಲಿ ಅನೇಕ ಹವ್ಯಾಸಗಳನ್ನು ಹೊಂದಿದ್ದೇನೆ. ಅದರಲ್ಲೆ ಕಥೆ ಪುಸ್ತಕ ಓದುವುದು, ತೋಟಗಾರಿಕೆ, ವೀಡಿಯೋ ಆಟಗಳು, ಸಂಗೀತ, ಸಿನಿಮಾನೋಡುವುದು ಇತ್ಯಾದಿ. ಸಂಗೀತ ನನ್ನ ನೆಚ್ಚಿನ ಹವ್ಯಾಸ. ಹಾಡು ಕೇಳುವುದು ಮತ್ತು ವಾದ್ಯ ನುಡಿಸುವುದು ನನಗೆ ಪ್ರಿಯ. ನಾನು ಗಿಟಾರ್ ನುಡಿಸುವುದನ್ನು ಅಭ್ಯಾಸ ಮಾಡಿದ್ದೇನೆ. ನನಗೆ ಪ್ರಾಣಿ ಪಕ್ಷಿಗಳೆಂದರೆ ತುಂಬಾ ಪ್ರೀತಿ. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಓದುವ ಮೂಲಕ ಈ ಕನ್ನಡ ವಿಕಿಪೀಡಿಯಾದ ಕುರಿತು ತಿಳಿಯುವ ಅವಕಾಶ ದೊರೆತಿದೆ. ಇದಕ್ಕೆ ನಾನು ಸಂತೋಷಿಸುತ್ತೇನೆ. ನಾನು ಕೊಡುವ ಅಲ್ಪ ಕಾಣಿಕೆಯಿಂದ ಇತರರಿಗೆ ಒಳಿತಾಗಲೆಂದು ಬಯಸುತ್ತೇನೆ. ಧನ್ಯವಾದಗಳು