ಸದಸ್ಯ:Byalahalliyathjiraj/sandbox1
ಇರುಳಿಗರ ಕಣಿ
[ಬದಲಾಯಿಸಿ]ಮುನ್ನುಡಿ
[ಬದಲಾಯಿಸಿ]ಇರುಳಿಗರು ಬೆಂಗಳೂರು ಮತ್ತು ಮೈಸೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಡು ಬರುವ ಬುಡಕಟ್ಟು ಜನಾಂಗ.
ಇತಿಹಾಸ
[ಬದಲಾಯಿಸಿ]ಕನ್ನಡ, ತೆಲುಗು, ತಮಿಳು ಭಾಷೆಗಳ ಮಿಶ್ರಿತ ರೂಪವೊಂದು ಇವರ ಮಾತೃ ಭಾಷೆಯಾಗಿದೆ. ಕಾಡು ಸೋಲಿಗರೆಂದೂ ಇವರನ್ನು ಕರೆಯುತ್ತಾರೆ. ಕಣಿ ಹೇಳುವುದು ಇವರ ಒಂದು ಕಲೆಯಾಗಿದೆ. ಕಣಿ ಹೇಳುವ ಕಲಾವಿದ ಸಾಮಾನ್ಯವಾಗಿ ಆ ಜನಾಂಗದ ಮುಖ್ಯಸ್ಥನೇ ಆಗಿರುತ್ತಾನೆ. ಕಣಿ ಹೇಳುವ ದಿನದಂದು ಕಲಾವಿದ ಉಪವಾಸ ಇರುತ್ತಾನೆ. ಸ್ನಾನಮಾಡಿ, ದಟ್ಟಿ ಪಂಚೆಯನ್ನು ಕಟ್ಟಿಕೊಂಡು ಬರಿಮೈಲಿರುತ್ತಾನೆ. ಕಣಿ ಹೇಳುವಾಗ ದೇವರನ್ನು ಆವೇಶದಿಂದ ಧ್ಯಾನಿಸುತ್ತಾ, ತಮಟೆಯನ್ನು ಪಕ್ಕ ವಾದ್ಯವನ್ನಾಗಿಸಿಕೊಂಡು ಕಣಿ ಹೇಳುತ್ತಾನೆ. ಸಾಮಾನ್ಯವಾಗಿ ಜನರಿಗೆ ಕಷ್ಟ ಬಂದಾಗ ರಾತ್ರಿ ಸಮಯದಲ್ಲಿ ದೇವತೆಯ ಗುಡಿ ಮುಂದೆ ಜನ ಗುಂಪುಗೂಡಿದಾಗ ಕಣಿ ಹೇಳಲಾಗುತ್ತದೆ. ಇರುಳಿಗರಲ್ಲಿ ಕಣಿ ಹೇಳುವುದು ಒಂದು ಸಂಪ್ರದಾಯ. ಇದನ್ನು ದೇವರೇ ಮೈದುಂಬಿ ನಡೆಸುತ್ತಾನೆಂಬ ನಂಬಿಕೆ ಇದರಲ್ಲಿದೆ. ಶಾಸ್ತ್ರದ ಮೂಲಕ ಭವಿಷ್ಯ ನುಡಿದು ಶಾಂತಿಯನ್ನು ಸೂಚಿಸಲಾಗುತ್ತದೆ. ಕಣಿ ಹೇಳುವುದು ಮುಗಿದ ನಂತರ, ಕೊನೆಯಲ್ಲಿ ಮಾದೇವಮ್ಮ ದೇವತೆಯ ಪೂಜೆ ನಡೆಯುತ್ತದೆ. ಇದು ಇರುಳಿಗರ ಒಂದು ಆಚರಣೆ ಎಂದೂ ಕರೆಯಲಾಗುತ್ತಿದೆ..
ಉಲ್ಲೇಖ
[ಬದಲಾಯಿಸಿ]- ಹಿ.ಚಿ.ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ, ಪುಟ ಸಂಖ್ಯೆ ೨೩೭-೨೩೮,
- ಗೊ.ರು.ಚನ್ನಬಸಪ್ಪ, ಕರ್ನಾಟಕ ಜನಪದ ಕಲೆಗಳು,ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ ಬೆಂಗಳೂರು-೫೬೦೦೧೮, ಪುಟ ಸಂಖ್ಯೆ ೮-೯,