ಸದಸ್ಯ:Byalahalliyathjiraj/ನನ್ನ ಪ್ರಯೋಗಪುಟ3

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೇದಿಗೆ[ಬದಲಾಯಿಸಿ]

ಸಂ: ಕೇಥಕಿ

ಹಿಂ: ಕೇವುಡ

ಮ: ಕೈಥಾ

ಗು:ಕೇಟಕಿ

ತೆ: ಮೊಗಿಲ್

ತ: ಥಾಜಾಯ್

ವರ್ಣನೆ[ಬದಲಾಯಿಸಿ]

ನೀರಿನ ಆಸರೆ ಇರುವ ಕಡೆ ಬೆಳೆಯುವ ಗಿಡ. ಎಲೆಗಳು ಉದ್ದವಾಗಿದ್ದು ಗರಿ ಆಕಾರದಲ್ಲಿ ಚೂಪಾಗಿರುತ್ತವೆ. ಎಲೆಯ ಅಂಚಿನಲ್ಲಿ ಮುಳ್ಳುಗಳು ಇರುತ್ತವೆ. ಸುವಾಸನೆಯುಳ್ಳ ಹಳದಿ ಬಣ್ಣದ ಹೂವುಗಳು ಬಿಡುತ್ತವೆ, ಇದನ್ನು ಹೆಣ್ಣು ಮಕ್ಕಳು ತಲೆಯಲ್ಲಿ ಮುಡಿಯುತ್ತಾರೆ.

ಸರಳ ಚಿಕಿತ್ಸೆಗಳು[ಬದಲಾಯಿಸಿ]

ತಲೆನೋವು, ಶ್ವಾಸಕೋಶಗಳ ತೊಂದರೆಯಲ್ಲಿ[ಬದಲಾಯಿಸಿ]

ಕೇದಿಗೆ ಹೂಗಳನ್ನು ತಂದು ಎಳ್ಳೆಣ್ಣೆಯಲ್ಲಿ ಹಾಕಿ, ಮುಂದಾಗ್ನಿಯಿಂದ ಕಾಯಿಸುವುದು, ಎಣ್ಣೆತಣ್ಣಗಾದ ಮೇಲೆ ಬಟ್ಟೆಯಲ್ಲಿ ಶೋಧಿಸಿ ಸಂಗ್ರಹಿಸುವುದು, ತಲೆನೋವಿನಲ್ಲಿ ಹಣೆಗೆ ಹಚ್ಚುವುದು ಮತ್ತು ಶ್ವಾಸಕೋಶಗಳ ತೊಂದರೆಯಲ್ಲಿ ಎದೆಗೆ ಸವರುವುದು.ಈ ಎಣ್ಣೆಯನ್ನುಇಡೀ ಶರೀರಕ್ಕೆ ಹಚ್ಚುವುದರಿಂದ ನರಗಳು ಉತ್ತೇಜನಗೊಂಡು ಸೋಮಾರಿತನ ಮತ್ತು ಜಡತ್ವ ಪರಿಹಾರವಾಗುವುದು.

ಸರ್ಪದ ವಿಷಕ್ಕೆ[ಬದಲಾಯಿಸಿ]

ಸರ್ಪಕಚ್ಚಿದಾಗ ಪ್ರಥಮಚಿಕಿತ್ಸೆಯಾಗಿ ಈ ಉಪಚಾರ ಪರಿಣಾಮಕಾರಿ. ಬಲಿತ ಬೇರುತಂದು ನೀರಿನಲ್ಲಿ ತೇದು, ಸರ್ಪಕಚ್ಚಿರುವ ಕಡೆ ಪಟ್ಟು ಹಾಕುವುದು.ಮತ್ತು ಅರ್ಧ ಟೀ ಚಮಚ ನೀರಿನಲ್ಲಿ ಕದಡಿ ಕುಡಿಯುವುದು.

ಉದರ ಶೂಲೆ[ಬದಲಾಯಿಸಿ]

ಕೇದಿಗೆ ಗಿಡದ ಹೂವಿನ ಹಳದಿ ಎಲೆಗಳನ್ನು ತಂದು, ನೆರಳಲ್ಲಿ ಒಣಗಿಸಿ ಸುಟ್ಟು ಬೂದಿ ಮಾಡುವುದು.ಈ ಬೂದಿಯ ಕಾಲು ಟೀಚಮಚದಷ್ಟನ್ನು ನೀರಿನಲ್ಲಿಕದಡಿಜೇನುತುಪ್ಪ ಮತ್ತುತುಪ್ಪ ಸೇರಿಸಿ ಕುಡಿಸುವುದು.

ಸದಾಚಾರ[ಬದಲಾಯಿಸಿ]

ತಾಂಬೂಲದ ಎಲೆಯ ಮೂಲವನ್ನು ಉಪಯೋಗಿಸುವುದರಿಂದ ವ್ಯಾಧಿಯೂ, ತುದಿಯನ್ನು ಉಪಯೋಗಿಸುವುದರಿಂದ ಪಾಪ ಸಂಭವವೂ, ನರಗಳ ಉಪಯೋಗದಿಂದ ಅಗ್ನಿನಾಶವೂ, ಹಳೆಯದಾದ ಎಲೆಗಳ ಉಪಯೋಗದಿಂದ ಆಯುಃಕ್ಷೀಣತೆಯೂ ಉಂಟಾಗುವುವು.