ಸದಸ್ಯ:Byalahalliyathjiraj/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಡು ಮೆಣಸು[ಬದಲಾಯಿಸಿ]

ಸಂ: ಕಂಚನ

ಹಿಂ: ಜಂಗ್ಲಿ ಮಿರ್ಚ್

ಮ: ಕಂಚನ

ಗು: ಕಂಚನ

ತೆ: ಕೊಂಡ ಕಸಿಂದ

ತ: ಮಿಳಕರಣೈ

ವರ್ಣನೆ[ಬದಲಾಯಿಸಿ]

ಪೊದೆ, ಕಾಂಡ ಮತ್ತು ಶಾಖೆಗಳಲ್ಲಿ ಮುಳ್ಳುಗಳು ಇರುತ್ತವೆ. ಪ್ರತಿ ಶಾಖೆಯಲ್ಲೂ ಮೂರು ಮೂರು ತಿಳಿ ಹಸಿರು ಬಣ್ಣದ ಚಿಕ್ಕಚಿಕ್ಕ ಪತ್ರೆಗಳು ಇರುತ್ತವೆ. ಎಲೆಗಳ ಕೆಳಗಡೆಯೂ ಸಹ ಚಿಕ್ಕಚಿಕ್ಕ ಮುಳ್ಳುಗಳಿರುತ್ತವೆ. ಮುಳ್ಳುಗಳು ಕೆಳಗಡೆ ಬಾಗಿರುತ್ತವೆ. ಎಲೆಯತೊಟ್ಟು ಮತ್ತು ಕಾಂಡ ಕೂಡುವ ಕಡೆ ಕಾಡು ಮೆಣಸಿನ ಕಾಯಿ ಬಿಡುತ್ತದೆ.ಕಾಯಿ ಮಣಿಯಂತೆ ಗುಂಡಾಗಿರುತ್ತದೆ.ಮತ್ತು ಹಣ್ಣಾದಾಗ ಹಳದಿ ಕಪ್ಪು ಬಣ್ಣಕ್ಕೆತಿರುಗುತ್ತದೆ.ಬೆಟ್ಟ ಗುಡ್ಡಗಳಲ್ಲಿ ವಿಷೇಶವಾಗಿ ಬೆಳೆಯುತ್ತದೆ.

ಸರಳ ಚಿಕಿತ್ಸೆಗಳು[ಬದಲಾಯಿಸಿ]

ಹಲ್ಲು ನೋವಿಗೆ[ಬದಲಾಯಿಸಿ]

ಕಾಡು ಮೆಣಸಿನ ಗಿಡದ ಕಾಯಿಗಳನ್ನು ಜಜ್ಜಿ ಕಷಾಯ ಮಾಡುವುದು.ತಣ್ಣದಾದ ಮೇಲೆ ಈ ಕಷಾಯದಜೊತೆಗೆ ಸ್ವಲ್ಪ ಅಡುಗೆಉಪ್ಪು ಸೇರಿಸಿ ಆಗಾಗ ಬಾಯಿ ಮುಕ್ಕಳಿಸುವುದು.

ಗುದಭ್ರಂಶದಲ್ಲಿ (ಅತಿ ಸಾರದಲ್ಲಿಗುದ ಹೊರಗೆ ಬರುವುದು)[ಬದಲಾಯಿಸಿ]

ಹಿಪ್ಪಲಿ ಬೇರು, ಶುಂಠಿ, ಕಾಡು ಮೆಣಸಿನ ಬೇರು, ಹಿಪ್ಪಲಿ ಬಿಡಾಲವಣ, ದಾಳಿಂಬೆ ಹಣ್ಣಿನ ಸಿಪ್ಪೆ, ಜೀರಿಗೆ, ಚಿತ್ರ ಮೂಲದತೊಗಟೆ ಮತ್ತು ಹಸೀ ಕೊತ್ತಂಬರಿ ಸೊಪ್ಪುತಲಾ 10ಗ್ರಾಂ ತೆಗೆದುಕೊಂಡುಚನ್ನಾಗಿಜಜ್ಜಿ ಸೌಟಿನಲ್ಲಿ ಕಾಯಿಸಿ ಹಿಂಡಿರಸತೆಗೆಯುವುದು.ತಣ್ಣಗಾದ ಮೇಲೆ ಬಟ್ಟೆಯಲ್ಲಿ ಸೋಸಿ ಪ್ರತಿ ದಿವಸ ಅರ್ಧಟೀ ಚಮಚ ಸೇವಿಸುವುದು.

ಬಲಹೀನತೆಯಲ್ಲಿ (ಅತಿಯಾದ ಜ್ವರದಲ್ಲಿ)[ಬದಲಾಯಿಸಿ]

ಐದು ಕಾಡು ಮೆಣಸಿನ ಕಾಯಿಗಳನ್ನು ಕಲ್ಪತ್ತಿನಲ್ಲಿ ಹಾಕಿ ಹಾಲು ಸೇರಿಸಿ ನುಣ್ಣಗೆ ಅರೆದು ರಸವನ್ನು ಬಟ್ಟೆಯಲ್ಲಿ ಸೋಸಿ ಸಕ್ಕರೆ ಬೆರೆಸಿ ಸೇವಿಸುವುದು.

ಕಸ ಮತ್ತು ಕೆಮ್ಮಿಗೆ[ಬದಲಾಯಿಸಿ]

ಕಾಡು ಮೆಣಸಿನ ಗಿಡದ ಬೇರನ್ನು ತಂದು ಸಿಪ್ಪೆಯನ್ನು ಬೇರ್ಪಡಿಸುವುದು.ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ ನಯವಾದ ಚೂರ್ಣ ಮಾಡುವುದು.ಈ ಸಿಪ್ಪೆಯ ನಯವಾದ ಚೂರ್ಣವನ್ನು ಜೇನು ಸೇರಿಸಿ ಸೇವಿಸುವುದು.

ವಾತದ ವ್ಯಾಧಿಗಳು, (ವಾಯು ನೋವು ಮತ್ತು ಸಂಧಿವಾತ)[ಬದಲಾಯಿಸಿ]

ಕಾಡು ಮೆಣಸಿನ ಗಿಡದ ಬೇರು ಮತ್ತು ಕಾಯಿಯನ್ನು ನುಣ್ಣಗೆಅರೆದು ತಿಲ ತೈಲದಲ್ಲಿ ಸೇರಿಸಿ ಚೆನ್ನಾಗಿ ಕಾಯಿಸುವುದು.ಎಣ್ಣೆಯು ತಣ್ಣಗಾದ ಮೇಲೆ ಶೋಧಿಸಿಕೊಂಡು ನೋವಿರುವ ಜಾಗದಲ್ಲಿ ಹಚ್ಚುವುದು.

ಅಜೀರ್ಣಕ್ಕೆ[ಬದಲಾಯಿಸಿ]

ಕಾಡು ಮೆಣಸಿನ ಗಿಡದಅರ್ಧ ಹಿಡಿಯಷ್ಟು ಹಸಿ ಎಲೆಗಳನ್ನು ನುಣ್ಣಗೆ ಅರೆದು ರಸವನ್ನು ತೆಗೆದು, ಅರ್ಧಟೀ ಚಮಚ ರಸವನ್ನು ದಿನಕ್ಕೆ ಒಂದುಸಾರಿ ಸೇವಿಸುವುದು.

ಅಗ್ನಿವೃದ್ಧಿ ಮತ್ತು ಕಾಸಹರ[ಬದಲಾಯಿಸಿ]

ಎರಡು ಚಿಟಿಕೆ ಕಾಡು ಮೆಣಸಿನ ಬೇರಿನ ಚೂರ್ಣವನ್ನು ನೀರಿನೊಂದಿಗೆ ಸೇವಿಸುವುದು.ಅಥವಾ ಸೈಂಧವ ಅವಣ 10 ಗ್ರಾಂ, ಹಿಪ್ಪಲಿ ಮೂಲ 20 ಗ್ರಾಂ, ಹಿಪ್ಪಲಿ 30 ಗ್ರಾಂ, ಕಾಡು ಮೆಣಸಿನ ಬೇರು 40 ಗ್ರಾಂ, ಚಿತ್ರಮೂಲ 50 ಗ್ರಾಂ, ಶುಂಠಿ 60 ಗ್ರಾಂ ಮತ್ತು ಅಳಲೆಕಾಯಿ 70 ಗ್ರಾಂ ಕೂಡಿಸಿ, ನುಣ್ಣಗೆ ಚೂರ್ಣ ಮಾಡುವುದು.ವೇಳೆಗೆ 2 1/2 ಗ್ರಾಂ, ಚೂರ್ಣವನ್ನು ನೀರಿನೊಂದಿಗೆ ಸೇವಿಸುವುದು.