ಸದಸ್ಯ:Byalahalliyathjiraj/ನನ್ನ ಪ್ರಯೋಗಪುಟ1
ಕಾಡು ಬಿಕ್ಕೆ ಗಿಡ (ಡಿಕ್ಕಾಮಲಿ)
[ಬದಲಾಯಿಸಿ]ಸಂ: ನಡಿಹಿಂಗು
ಹಿಂ: ಡಿಕಾಮಿಲಿ
ಮ: ಡಿಕಾಮಿಲಿ
ಗು: ಡಿಕಾಮಿಲಿ
ತೆ: ಕರಿಂಗ, ಕಂಬಿಲ್
ತ: ಮಂಜಿಬಿಕ್ಕಿ
ವರ್ಣನೆ
[ಬದಲಾಯಿಸಿ]ಸಣ್ಣ ಪೊದೆ ಬಲವಾದ ಶಾಖೆಗಳಿರುವುವು. ತಿರುಳು ನುಣುಪು ಮತ್ತು ಹಸಿರು-ಹಳದಿ ಮಿಶ್ರಿತ ವರ್ಣದ್ದು. ಹಸಿರು ಒರಟಾದ ಎಲೆಗಳು ಮತ್ತು ಎಲೆಗಳ ಕೆಳಗಡೆ ನಯವಾದ ರೋಮಗಳಿರುತ್ತವೆ. ಕಾಯಿಗಳು ಹಸಿರಾಗಿದ್ದು ಗಿಡ್ಡದಾಗಿರುವುವು. ಹಣ್ಣಾದಾಗ ಹಸಿರು-ಹಳದಿ ವರ್ಣದಲ್ಲಿರುವುದು. ಒಳಗಡೆ ಗಟ್ಟಿಯಾದ ಬೀಜಗಳು ಮತ್ತು ಸಿಹಿಯಾದ ತಿರುಳಿರುವುದು.ಈ ಹಣ್ಣನ್ನು ತಿನ್ನುತ್ತಾರೆ ಮತ್ತು ಹಳ್ಳಿಯವರು ಕುಕ್ಕೆಗಳಲ್ಲಿ ತಂದು ಮಾರುತ್ತಾರೆ.ಈ ಗಿಡದಿಂದ ಸುರಿಯುವ ಹಾಲಿಗೆ ಅಹಿತಕರ ವಾಸನೆಯಿರುತ್ತದೆ.ಇದಕ್ಕೆ ಬಿಕ್ಕೆಬಂಕೆಯೆನ್ನುತ್ತಾರೆ.ಇದರಲ್ಲಿ ಗಾರ್ಡಿಸಿನ್ ಮತ್ತು ಡಿಕಾನೆಲಿ ಎಂಬ ಎರಡು ಬಗೆಯ ಅಂಟಿರುವುದು.
ಸರಳ ಚಿಕಿತ್ಸೆಗಳು
[ಬದಲಾಯಿಸಿ]ಜಂತು ಹುಳಕ್ಕೆ
[ಬದಲಾಯಿಸಿ]ಬಿಕ್ಕೆಗಿಡದ ಬಂಕೆಯನ್ನು ನೀರಿನಲ್ಲಿ ಕರಗಿಸಿ ಇದರಲ್ಲಿ ಶುಭ್ರವಾದ ಅರಳೆಯ ಬತ್ತಿಯನ್ನು ತೋಯಿಸಿ, ಮಲದ್ವಾರದಲ್ಲಿ ಧರಿಸುವುದು. ಜಂತು ಹುಳಗಳು ಸಾಯುವುವು ಮತ್ತು ಮಲದೊಡನೆ ಬಿದ್ದು ಹೋಗುವುವು.
ವಾಸಿಯಾಗದೆ ಉಳಿದ ಹಳೇ ಹುಣ್ಣುಗಳಿಗೆ
[ಬದಲಾಯಿಸಿ]ಬಹುಕಾಲದಿಂದ ವಾಸಿಯಾಗದೆ ಇರುವ ಹುಣ್ಣುಗಳಿಗೆ ಇದು ದಿವ್ಯಔಷಧಿ. ಈ ಗಿಡದ ಬಂಕೆಯ ಮುಲಾಮು ಮಾಡಿಗಾಯದ ಮೇಲೆ ಹಚ್ಚುವುದು.ಕೆಡುಕಿಲ್ಲದ ಉತ್ತಮವಾದ ಔಷಧಿ. ಶೀಘ್ರವಾಗಿ ಹಳೇ ಹುಣ್ಣುಗಳು ವಾಸಿಯಾಗುವುವು.
ವ್ರಣಗಳಲ್ಲಿ ಹುಳುಗಳು
[ಬದಲಾಯಿಸಿ]ಕೆಲವು ಹಳೇ ಮತ್ತು ಬಹುಕಾಲದಿಂದ ವಾಸಿಯಾಗದ ವ್ರಣಗಳಲ್ಲಿ ಹುಳುಗಳು ಬೀಳುತ್ತವೆ. ಈ ಗಿಡದ ಬಂಕೆಯಲ್ಲಿ ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಹಚ್ಚುವುದು. ಹುಳುಗಳು ಸಾಯುತ್ತವೆ. ಮತ್ತು ವ್ರಣಗಳು ವಾಸಿಯಾಗುತ್ತವೆ. ಇದರಿಂದ ವ್ರಣಗಳ ಮೇಲೆ ನೊಣಗಳು ಸೇರುವುದಿಲ್ಲ. ಹಾಗಾಗಿ ವಿಷ ಕ್ರಿಮಿಗಳಿಂದ ವ್ರಣ ಕೊಳೆಯದಂತೆ ರಕ್ಷಿಸುವುದು.
ಹೊಟ್ಟೆಯಲ್ಲಿ ಹುಳುಗಳು
[ಬದಲಾಯಿಸಿ]1 ಗ್ರಾಂ ಈ ಗಿಡದಗೋಂದನ್ನು ಹರಳೆಣ್ಣೆಯಲ್ಲಿ ಬೆರೆಸಿ ಸೇವಿಸುವುದು.ಆಥವಾ ಈ ವನಮೂಲಿಯ 5 ಗ್ರಾಂ ಸೊಪ್ಪನ್ನು ನೀರಿನಲ್ಲಿ ಹಾಕಿ ಕಾಯಿಸಿ ಕಷಾಯ ಮಾಡಿಕುಡಿಸುವುದು.
ಒಣ ಕೆಮ್ಮು
[ಬದಲಾಯಿಸಿ]ಬಿಕ್ಕೆಗಿಡದ ಸೊಪ್ಪು ಮತ್ತು ಬನ್ಸ್‍ಗಿಡದ ಎಲೆಗಳ ಅಷ್ಟಾಂಷ ಕಷಾಯ ಮಾಡಿ ದಿನಕ್ಕೆ ಎರಡು ವೇಳೆ ಕುಡಿಸುವುದು.
ಮೂಲವ್ಯಾಧಿಗೆ
[ಬದಲಾಯಿಸಿ]ಈ ಗಿಡದ ಬಂಕೆಯನ್ನುಕೊಬ್ಬರಿಎಣ್ಣೆಯಲ್ಲಿ ಕಲಸಿ ಮೂಲದ ಮೂಳೆಗಳಿಗೆ ಲೇಪಿಸುವುದು.ಸುವರ್ಣಗೆಡ್ಡೆ ಸಾರು, ಪಲ್ಯ ಸೇವಿಸುವುದು. ಈ ಮೂಲಿಕೆಯ ಕ್ರಿಮಿನಾಶಕ ಗುಣದ ಬಗ್ಗೆ ಸಂಶೋಧನೆ ನಡೆಯುತ್ತಿದೆ.
ಸದಾಚಾರ
[ಬದಲಾಯಿಸಿ]ರಾತ್ರಿ ಪ್ರಥಮ ಜಾವದೊಳಗೆ ಭೋಜನವನ್ನು ಮಾಡತಕ್ಕದ್ದು; ಸ್ವಲ್ಪ ಕಡಿಮೆಯಾಗಿ ಉಣ್ಣಬೇಕು; ಮತ್ತು ಜೀರ್ಣಕ್ಕೆ ಕಷ್ಟವಾದ ಪದಾರ್ಥವನ್ನು ವರ್ಣಿಸಬೇಕು.