ಸದಸ್ಯ:Byalahalliyathjiraj/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಮ ಕಸ್ತೂರಿ (ಸಬ್‍ಜಾ)[ಬದಲಾಯಿಸಿ]

ಸಂ: ಮುಂಜರಕಿ ಹಿಂ: ಸಬ್‍ಜಾ, ಬೂಬಾಯ್ ಮ: ಸಬ್‍ಜಾ ಗು: ಸಬ್‍ಜಾ ತೆ: ಕರ್ಪೂರ ತುಲಸಿ ತ: ಕಪೂರಂ ತಲಸಿ

ವರ್ಣನೆ ಮನೆಗಳ ಮುಂದೆಅಲಂಕಾರಕ್ಕಾಗಿ ಮತ್ತು ಸುವಾಸನೆಗಾಗಿ ಬೆಳೆಸುತ್ತಾರೆ.ಎಲೆಗಳು ಹಸಿರಾಗಿದ್ದು ಸ್ವಲ್ಪ ಅಗಲವಾಗಿ ಇರುತ್ತವೆ. ತುಳಸಿ ಎಲೆಗಳನ್ನು ಹೋಲುತ್ತವೆ. ಮತ್ತು ಸ್ವಲ್ಪದೊಡ್ಡದಾಗಿರುತ್ತವೆ. ಹೂಗಳು ಬಿಳಿ ಮತ್ತು ಗುಲಾಬಿ ಬಣ್ಣಗಳನ್ನು ಹೊಂದಿರುತ್ತವೆ. ಹೂವು ಕಟ್ಟುವವರು ಹೂವಿನ ಮಧ್ಯೆ ಸೇರಿಸಿ ಮಾರುವರು. ಹೆಣ್ಣು ಮಕ್ಕಳು ತಲೆಯಲಿ ಮುಡಿಯುತ್ತಾರೆ. ಕಾಮಕಸ್ತೂರಿಯತೆನೆಯುಅತ್ಯಂತ ಸುವಾಸನೆಯನ್ನು ಪ್ರಸರಿಸುವುದು.

ಸರಳ ಚಿಕಿತ್ಸೆಗಳು ಮಲಬದ್ಧತೆ ಮತ್ತು ಮೂಲವ್ಯಾಧಿಗಳಲ್ಲಿ ಕಾಮಕಸ್ತೂರಿ ಬೀಜಗಳು ಗ್ರಂಥಿಗೆಅಂಗಡಿಯಲ್ಲಿದೊರೆಯುತ್ತವೆ. ಒಂದುಟೀ ಚಮಚ ಬೀಜಗಳನ್ನು ಒಂದು ಬಟ್ಟಲು ನೀರಿನಲ್ಲಿ ನೆನೆ ಹಾಕುವುದು.ಬೆಳಿಗ್ಗೆ ಈ ಬೀಜಗಳು ಲೋಳಿ ಸರದಂತೆಅಂಟುಅಂಟಾಗಿಉಬ್ಬಿರುತ್ತವೆ. ಇದರಲ್ಲಿ ಸ್ವಲ್ಪಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುವುದು.ಶರೀರಕ್ಕೆತಂಪು ನೀಡುವುದು.

ಗಂಟಲು ಬೇನೆ ಕಾಮಕಸ್ತೂರಿಯ ಹಸಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ, ಜೇನುತುಪ್ಪದಲ್ಲಿ ಬೆರೆಸಿ ನೆಕ್ಕುವುದು.

ಮೂಗಿನಿಂದ ನೀರು ಸುರಿಯುವುದು, ಶೀತ ಮತ್ತುಜ್ವರಕ್ಕೆ ಕಾಮಕಸ್ತೂರಿ ಎಲೆಗಳ ಕಷಾಯ ಮಾಡಿ 1/4 ಒಳಲೆ ಕಷಾಯಕ್ಕೆ ಸ್ವಲ್ಪಜೇನು ಸೇರಿಸಿ ಕುಡಿಸುವುದು.

ಬೇಸಿಗೆಯಲ್ಲಿ ತಂಪಾದ ಶರಬತ್ತು ಒಂದುಟೀ ಚಮಚ ಬೀಜಗಳನ್ನು ಒಂದು ಬಟ್ಟಲು ನೀರಿನಲ್ಲಿರಾತ್ರಿ ವೇಳೆಯಲ್ಲಿ ನೆನೆಹಾಕುವುದು.ಸ್ವಲ್ಪ ಸಕ್ಕರೆ, ಮಂಜುಗಡ್ಡೆಪುಡಿ ಮತ್ತುಒಂದುಚಿಟಿಕೆಕೇಸರಿಬಣ್ಣ ಹಾಕಿ, ತಂಪಾದ ಪಾನೀಯತಯಾರಿಸುವುದು.ಇದನ್ನು ಸೇವಿಸುವುದರಿಂದ ಬಾಯಾರಿಕೆ ಶಮನವಾಗುವುದು.

ರಕ್ತಬೇಧಿಗೆ ಒಂದುಟೀ ಚಮಚ ಕಸ್ತೂರಿ ಬೀಜವನ್ನುಒಂದು ಬಟ್ಟಲುತಣ್ಣೀರಿಗೆ ಬೆರೆಸಿ ನುಣ್ಣಗೆರುಬ್ಬಿ ಶೋಧಿಸಿ ಸೇವಿಸುವುದು.

ಅಜೀರ್ಣ ಮತ್ತು ಹೊಟ್ಟೆಯ ಬಾಧೆಗೆ ಕಾಮಕಸ್ತೂರಿಗಿಡದ ಹೂಗಳನ್ನು ನೀರಿನಲ್ಲಿಅರೆದು ಶೋಧಿಸಿ, ಸ್ವಲ್ಪಜೇನು ಕೂಡಿಸಿ ಸೇವಿಸುವುದು.ಒಂದು ವೇಳೆಗೆ ಅರ್ಧಟೀ ಚಮಚ ರಸ ಸಾಕಾಗುವುದು.