ಸದಸ್ಯ:Brunda S/sandbox
ಗೋಚರ
' ಭ್ರಷ್ಟಾಚಾರ
ಒಂದು ವರ್ಷದ ಅವಧಿಯಲ್ಲಿ ರಾಷ್ಟ್ರದೆಲ್ಲೆಡೆ ನಡೆದ ವಿಧ್ಯಮಾನಗಳು, ಅದು ಬ್ರಷ್ಟಾಚಾರ, ಸ್ವಜನ ಪಕ್ಷಪಾತ, ಜನರಿಂದ ದೂರವಾದ ಆತುರದ ನಿರ್ಧಾರಗಳು ಪ್ರಜ್ಞಾವಂತರನ್ನು ಚಿಂತೆಗೀಡು ಮಾಡಿದೆ. ಮಹಾತ್ಮಾ ಗಾಂಧಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಬಳಸಿದ ಸತ್ಯಾಗ್ರಹವೆನ್ನುವ ಬ್ಲಾಕ್ಮೈಲ್ಗಳ ಅಸ್ತ್ರವಾಗಿ ಮಾರ್ಪಟ್ಟಿದ್ದು ದುರಂತ. ಚಳುವಳಿಯ ಮೇಲೆ ಹಿಡಿತ ಸಾಧಿಸಲಾರದ ದೂರದೃಷ್ಟಿಯ ಕೊರತೆಯ ಅಣ್ಣಾ ಹೋರಾಟ ವಿಫಲವಾಯಿತು.ಕಪ್ಪು ಹಣದ ವಿರುದ್ಧದ ಬಾಬಾ ರಾಮ್ದೇವ್ ಆರ್ಭಟ ಕಾಂಗ್ರೆಸ್ ವಿರೋಧಿ ಆಂದೋಳನವಾಯಿತೇ ವಿನಾ ಕಪ್ಪು ಹಣದ ವಿರುದ್ಧ ಅಲ್ಲವೇಅಲ್ಲ ಎಂಬುದು ರಾಮ್ದೇವ್ ಜೊತೆ ಕೈಎತ್ತಿ ನಿಂತ ನಾಯಕಗಣ ಸಾಬೀತು ಪಡಿಸಿತು.ಕಪ್ಪು ಹಣ ಮತ್ತು ಬ್ರಷ್ಟಾಚಾರಿಗಳ ಪ್ರಭಾವದಿಂದಲೇ ಸಂಸತ್ತಿನಲ್ಲಿ ಕುಳಿತಿರುವ ಇವರ ನಾಟಕ ಜನಕ್ಕೆ ಅರ್ಥವಾಗುವುದಿಲ್ಲ ಎಂದು ತಿಳಿದಿರುವ ಇವರು ಮೂರ್ಖರಲ್ಲದೇ ಮತ್ತೇನೂ ಅಲ್ಲ. ದೇಶದ ಲೂಟಿಕೋರರ ಪರ ನ್ಯಾಯಾಲಯಗಳಲ್ಲಿ ವಕಾಲತ್ತು ವಹಿಸುವ ಜೇಟ್ ಮಲಾನಿಯವರಂತಹ ನ್ಯಾಯವಾದಿಗಳು ವೃತ್ತಿ ಧರ್ಮಕ್ಕಿಂತ ದೇಶದ ಧರ್ಮ ದೊಡ್ಡದೆಂದು ಅರಿಯದವರಾಗಿದ್ದಾರೆ. ರಾಷ್ಟ್ರದ ಜಮೀನುಗಳಲ್ಲಿ ದುಡಿವ ರೈತ, ಕಾರ್ಖಾನೆಗಳಲ್ಲಿ ದುಡಿವ ಕಾರ್ಮಿಕ ನಮ್ಮ ದಿನನಿತ್ಯದ ಕಾಯಕಗಳಲ್ಲಿ ದುಡಿವ ಅಸಂಖ್ಯಾತ ಬಡ ಹೆಣ್ಣು ಮಕ್ಕಳ ಸಲುವಾಗಿ, ಬ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಹೋರಾಟದ ನಾಟಕ ಮಾಡುತ್ತಿರುವ ನವ ಸತ್ಯಾಗ್ರಹಿಗಳಿಂದ ದೇಶವನ್ನು ಪಾರು ಮಾಡು.. ಭಾರತವು ಭ್ರಷ್ಟಾಚಾರ ಮುಕ್ತವಾಗಬೇಕೆಂಬುದು ನನ್ನ ಆಸೆ ಆಗಿದೆ. ಭ್ರಷ್ಟಾಚಾರವು ಬಡವರನ್ನು ಕಿತ್ತು ತಿನ್ನುತ್ತಿದೆ. ಭಷ್ಟಚಾರ ಮುಕ್ತ ಭಾರತವನ್ನಾಗಿ ಮಾಡುವುದು ನಮ್ಮ ಕೈಯಲ್ಲಿದೆ.