ವಿಷಯಕ್ಕೆ ಹೋಗು

ಸದಸ್ಯ:Brayan Monteiro/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗೇರಿ ಮಾಸ್ತರ ಮಾಸ್ತರರ ಹುಟ್ಟೂರು ಬೆಂಗೇರಿಯೇ (೨೩ ನವಂಬರ್ ೧೮೯೯ ರಂದು ಜನನ) ಈಗ ಅದು ಹುಬ್ಬಳ್ಳಿಯ ಒಂದು ಉಪನಗರ. ಅದೇ ಆರಂಭವಾಗಿದ್ದ ಧಾರವಾಡದ ಕರ್ನಾಟಕ ಕಾಲೇಜನ್ನು ಸೇರಿ ಮುಂದೆ ಎಂ.ಎ ಮುಗಿಸಿದರು. ಕನ್ನಡ ವಿಷಯದಲ್ಲಿ ಆಗಿನ ಕಾಲಕ್ಕೆ ಮುಮ್ಬೈ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಷಯವನ್ನು ತೆಗೆದುಕೊಂಡವರು ಬೆರಳೆಣಿಕೆಯಲ್ಲಿ ಇದ್ದವರು. ಬೆಂಗೇರಿಯವರು ಬಿ.ಟಿ ಯನ್ನು ಮುಗಿಸಿ, ೧೯೨೮ ರಲ್ಲಿ ಹಾವೇರಿಯ ಹೈಸ್ಕೂಲನ್ನು ಸೇರಿದರು. ಹೆಚ್ಚಿನ ವರ್ಷಗಳ ಕಾಲ ಹೆಡ್ ಮಾಸ್ತರರಾಗಿದ್ದರು.ನಿವೃತ್ತರಾದ ಮೇಲೆ (೧೯೫೮) ಹುಬ್ಬಳ್ಳಿಯಲ್ಲಿ ನೆಲೆಸಿದರು.ಆ ಅವಧಿಯಲ್ಲಿ ಅವರು ಪ್ರಪಂಚ , ಕರ್ನಾಟಭಾರತೀ , ಪರಿಷತ್ಪತ್ರಿಕೆ,ಮುಂಬೈ ವಿಶ್ವವಿದ್ಯಾಲಯದ ಜರ್ನಲ್ ಮುಂತಾದ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದರು. ಪುರಂದರದಾಸರ ಚತುಷ್ಯತ ಮಾನಸ್ತೋವಧ ಕಾಲಕ್ಕೆ ಅವರ ಹಾಡುಗಳನ್ನು ಪರಿಷೋಧಿಸಿ , ಶಾಸ್ತ್ರೀಯವಾಗಿ ಅನುಗೊಳಿಸಿ, ೧೯೬೫ ರಲ್ಲಿ ಧಾರವಾಢದಿಂದ ಪ್ರಕಟಿಸಲಾಯಿತು.’ ಬೆಂಗೇರಿಯವರ ಬರಹಗಳು’ ಎಂಬ ಗ್ರಂಥವನ್ನು ಧಾರವಾಡದ ಆಲೂರ ವೆಂಕಟರಾವ್ ಪ್ರತಿಷ್ಟಾನದವರು ಮುದ್ರಿಸಿ ಹೊರತಂದರು. ದಾಸರ ಕಾಲಾನುಕ್ರಮವನ್ನು ಅವರ ಪೀಳಿಗೆಯನ್ನು ೧೯೨೮ ರಷ್ಟು ಹಿಂದೆಯೇ ರೂಪಿಸಿದ್ದರಿಂದ ಬೆಂಗೇರಿಯವರೇ ಈ ವಿಷಯದಲ್ಲಿ ಮೊದಲಿಗರೆಂದು ಹೇಳಬಹುದು.ಆ ಕುರಿತು ಇಂಗ್ಲೀಷನಲ್ಲಿ ಪುಣೆಯ , ಭಂಡಾರ್‌ಕರ್ ಸಂಶೋಧನ ಸಂಸ್ಥೆಯ Annalssನಲ್ಲಿ ಲೇಖವನ್ನು ಪ್ರಕಟಿಸಿದ್ದರಿಂದ ಕನ್ನಡೇತರರಿಗೂ ದಾಸವಾ ಯದ ಮೇಲ್ಮೆಯನ್ನು ತಿಳಿಸಿಕೊಟ್ಟಂತಾಗಿದೆ. ಆದರೆ ಅವರ ಹೆಚ್ಚಿನ ಅಧ್ಯಯನ ನಮ್ಮ ನಾಡಿನ ಸಾಮಜಿಕ ಇತಿಹಾಸಕ್ಕೆ ಮೀಸಲಾಗಿದೆ. ಔತ್ತರೇಯ ದ್ರಾವಿಡ ಸಂಸ್ಕೃತಿಯಲ್ಲಿ ಕಂಡುಬರುವ ಮಾತ್ರೃ ಪ್ರಧಾನ ಕುಟುಂಬ ಪದ್ದತಿಯ ಮೇಲೆ ಅವರು ಸಾಕಷ್ಟು ಬೆಳಕನ್ನು ಚೆಲ್ಲಿದ್ದಾರೆ.ಅದರ್ ಪಡಿನೆಳಲನ್ನು ಭಗವದ್ಗೀತೆಯಲ್ಲಿ ಕಂಡಿದ್ದಾರೆ.ತಾಯಿಯ ಮಗ ಎಂಬ ನಾತೆಯಿಂದ ಅರ್ಜುನನು ಕೌಂತೇಯ ,ಪಾರ್ಥ ಎಂದೇ ಹೆಚ್ಚು ಬಾರಿ ಸಂಬೋಧಿಸಿದ್ದು(೬೮%)ಇನ್ನೇನನ್ನು ತೋರಿಸೀತು? ಈ ಬಗೆಯ ಲೆಕ್ಕವನ್ನು ಒದಗಿಸಿ , ಪಾಂಡವರು ಮಾತೃ ಪದಪ್ರಧಾನರೆಂದು ವಿವರಿಸಿದ ರೀತಿ ವಿನೂತನವಾದದ್ದು.ಅದರಂತೆ ದಶರತನ ಮಕ್ಕಳಲ್ಲಿ ಲಕ್ಷಣನನ್ನು ‘ಸೌಮಿತ್ರಿ’ (ಸುಮಿತ್ರೆಯ ಮಗ)ಎಂದೇ ಹೆಚ್ಚು ಸಲ ಕರೆದಿದ್ದರ ಔಚಿತ್ಯವನ್ನು ಒಮ್ಮೆ ಅವರು ನನಗೆ ವಿವರಿಸಿದ್ದರು ಶಬ್ಧಗಳ ಮೂಲಕವೂ ಅವರು ಸಾಮಜಿಕ ಇತಿಹಾಸದ ಎಳೆಗಳನ್ನು ನೂತಿದಾರೆ.ಆ ಅಸ್ಥೆಯು ಮುಂದೆ ಅವರನ್ನು ಪದಕೋಶ (Word Index),ಪದಪ್ರಯೋಗಕೋಶ(Concordance) ಗಳ ರಚನೆಯತ್ತ ಕೋಡೊಯ್ದಿತು.ಅವರ ‘ ಭಗವದ್ಗೀತೆಯ ನವಕೋಶ’ ಈ ಸರದಿನಲ್ಲಿ ಬರುತ್ತದೆ. ಅದೇ ವೇಳೆಗೆ ಅಂದರೆ ೧೯೮೫ರಲ್ಲಿ ಅವರ ಪ್ರಕೃತ ಕನ್ನಡ ಪದಕೋಶವು ಹೊರಬಂದಿದೆ. (ಬೆಂಗಳೂರಿನ ಶಾರದಾ ಪ್ರಕಟನಾಲಯದವರ ಪ್ರಕಟಣೆ) ನಮಗೆ ಸಂಸ್ಕೃತ ಜನ್ಮ ‘ತದ್ಭವ’ಗಳ ಚೆನ್ನಾದ ಪರಿಚಯವಿದೆ. ಆದರೆ ಕನ್ನಡ ಶಬ್ಧ ಭಂಡಾರವು ಪ್ರಾಕೃತ ಮೂಲದ ‘ತದ್ಭವ’ಗಳಿಂದಲೂ ಸಮೃದ್ಧಗೊಂಡದ್ದರ ಸ್ಪಷ್ಟ ಕಲ್ಪನೆ ನಮಗೆ ಇಲ್ಲ. ಬೆಂಗೇರಿಯವರು ಮಧ್ಯಯುಗೀನ ಕಾವ್ಯಗಳಲ್ಲಿ ಬಂದ ಆ ಬಗೆಯ ಒಂದು ಸಾವಿರದಷ್ಟು ಶಬ್ದಗಳನ್ನು ಗುರುತಿಸಿ ಈ ಕೋಶದಲ್ಲಿ ಕೊಟ್ಟಿದ್ದಾರೆ. ಪದಕೋಶ, ಪದಪ್ರಯೋಗ ಕೋಶಗಳಂತಹ ತಲೆ ಬೇಸರದ ಕೆಲಸ ಸಾಹಿತ್ಯ ಕ್ಷೇತ್ರದಲ್ಲಿ ಬೇರೊಂದಿಲ್ಲ. ಕಾರ್ಯೋತ್ಸಾಹದ ಯುವಕರೂ ದಣಿದು ಹೋಗುವರು. ಮೇಲ್ಕಂಡ ಕೋಶಗಳನ್ನು ಬೆಂಗೇರಿಯವರು ತಮ್ಮ ೮೦ನೆಯ ವಯಸ್ಸನ್ನು ದಾಟಿದ ಮೇಲೆ ಕೈಗೆತ್ತಿಕೊಂಡಿದ್ದು ನಮ್ಮನ್ನು ದಿಗಿಲುಗೊಳಿಸಿತು. ಸಾಲದ್ದಕ್ಕೆ ಅವರಿಗೆ ಆಗ ದೃಷ್ಟಿಮಾಂದ್ಯವೂ ಸೇರಿತ್ತು.