ಸದಸ್ಯ:BinduMadhava95/ನನ್ನ ಪ್ರಯೋಗಪುಟ/1
ನಾ ಕಂಡ ಕರ್ನಾಟಕ
ಕರ್ನಾಟಕವು ಸಾಂಸ್ಕೃತಿಕ ಹಾಗು ವೈಚಾರಿಕತೆಯ ನೆಲಯೂ ಆಗಿದೆ. ಅಷ್ಟೇಅಲ್ಲದೆ ಈ ನಮ್ಮ ನಾಡು ಹಲವಾರು ಪರಂಪರೆಗಳನ್ನು ಕಂಡು ಅದನ್ನು ವಾಸ್ತುಶಿಲ್ಪದ ಮೂಲಕ ಪ್ರತಿಫಲಿಸುತ್ತದೆ. ಎಂದು ಇರದ ಆಸೆಯೊಂದು ನನ್ನಲ್ಲಿ ಒಮ್ಮೆ ಹುಟ್ಟಿತು. ಈ ನಾಡಿನ ಹಿರಮೆಯನ್ನು ತಿಳಿಯುವ ಬಯಕೆ ನನ್ನಲ್ಲಿ ಮೂಡಿತು. ಆದ್ದರಿಂದ ನಾನು ನನ್ನ ಹತ್ತು ದಿನಗಳ ರಜೆಯನ್ನು ಈ ನಮ್ಮ ವಿಶಾಲವಾದ ನಾಡನ್ನು ನೋಡಲು ಒಂದು ಸೋಲೋ ಟ್ರಿಪ್ಗೆ ಹೊರಟೆ. ಬೆಂಗಳೂರುನಿಂದ ಹೊರೆಟ ನಾನು ಕೆಂಪು ಬಸ್ಸೊಂದನ್ನು ಹತ್ತಿ ಸಕಲೇಶಪುರದಲ್ಲಿ ಇಳಿದೆ. ಅಲ್ಲಿ ನನಗೆ ಪರಿಚವಿದ್ದ ಒಬ್ಬರ ಮನೆಯಲ್ಲಿ ಉಳಿದೆ. ಅಲ್ಲಿ ಇದ್ದ ಮೂರೂ ದಿನದಲ್ಲಿ ನನ್ನ ಸಹ್ಯಾದ್ರಿ ಮಲೆಗಳ ಸಂಪನ್ನು ಕಂಡು ಬೆರಗಾದೆ.ಆ ದಟ್ಟ ಕಾಡು, ಅಲ್ಲಿನ ಜನ ಜೀವನ, ಅಲ್ಲಿನ ಆಚಾರ-ವಿಚಾರ ಇವೆಲ್ಲ ನನ್ನಲ್ಲಿ ಹೊಸ ಚಿಂತನೆಗಳ್ಳನು ಮೂಡಿಸಿತು. ಅಲ್ಲೇ ಏರುವ ಎತ್ತಿಹಿನಭುಜವೆಂಬ ಬೆಟ್ಟವನ್ನು ಹತ್ತಿದೆವು. ಅಲ್ಲಿ ನಾ ಕಂಡ ಅಮೋಘ ದ್ರಿಶ್ಯವನ್ನು ನಾನೆಂದು ಮರೆಯಲಾರೆ. ಎಲ್ಲೆಲ್ಲಿ ನೋಡಿದರು ಹರಿಸು ವರ್ಣ ಕಾಣುತಿತ್ತು. ತಂಪು ಗಾಳಿಯು ಬೀಸುತಿತ್ತು. ಹಲವಾರು ಪಕ್ಷಿಗಳು, ಅವುಗಳ ಗಾಯನ ಕೇಳಿ ಮನಸ್ಸು ತಂಪಾಯ್ತು. ಹೀಗೆ ಮೂರುದಿನಗಳು ಕಳೆದದ್ದು ಗೊತಾಗಲೇಎಲ್ಲ. ಅಲ್ಲಿಂದ ನನ್ನ ಪಯಣ ಮಂಗಳೂರುನತ್ತ ಸಾಗಿತು. ಬೆಟ್ಟ-ಗುಡ್ಡಗಳನ್ನೂ ನೋಡಿದ ಮೇಲೆ, ಸಮುದ್ರವನ್ನು ಕಾಣುವ ಆಸೆಯಾಯಿತು. ಸಮುದ್ರ ತೀರದಲ್ಲಿ ನಡೆದಾಡಿ ಮನಸ್ಸು ಹಗುರವಾಯಿತು. ಎರಡು ದಿನ ಮಂಗಳೂರಿನಲ್ಲಿ ಇದ್ದ ನಾನು, ಅಲ್ಲಿನ ಗೋಳಿ ಭಜೇ, ಕೆಂಪಕ್ಕಿ ಅನ್ನವನ್ನು ತಿಂದು; ಅಲ್ಲಿನ ದೇವಾಲಯಗಳನ್ನು ನೋಡಿದೆ. ಮರುದಿನ ನಾನು ತೀರ್ಥಹಳ್ಳಿಯ ಕಡೆ ಹೊರಟೆ. ನನ್ನನು ಅಲ್ಲಿ ಸೆಳದ ವಿಚಾರ ಅಲ್ಲಿ ನಡೆಯುವ ಎಳ್ಳು ಅಮವ್ಯಾಸೆ ಜ್ಯಾತ್ರೆ . ಪಟ್ಟಣದಲ್ಲಿ ಬೆಳೆದ ನನಗೆ ಊರಿನ ಆಚಾರ-ವಿಚಾರಗಳು ಅಚ್ಚರಿ ಮೂಡಿಸಿತು. ಅಲ್ಲಿ ನಾನು ಇದ್ದದು ಒಂದೇ ದಿನ. ಅಲ್ಲಿ ನಾ ಕಂಡ ವೈಭೋಗ ಅಮೋಘವಾದದ್ದು. ಮರುದಿನ ನಾನು ಮುಂಜಾನೆ ಎದ್ದು ಸಕ್ಕರೆಬೈಲುನತ್ತ ಹೊರಟೆ. ಅಲ್ಲಿ ಘಜಪಥವೇ ನೆಲೆಸಿತ್ತು. ಎಲ್ಲಿ ಆನೆಗಳನ್ನು ಪಳಗಿಸುತಾರೆ. ಮೈಸೂರು ದಸರಾದಲ್ಲಿ ಕಾಣುವ ಆನೆಗಳು ಎಲ್ಲಿಯೇ ಇರುತವೆ. ಮಧ್ಯನದ ವೇಳೆಗೆ ನಾನು ಕುಪ್ಪಳ್ಳಿ ಯಲ್ಲಿ ಇದ್ದೆ. ಎದು ನಮ್ಮ ರಾಷ್ಟ್ರ ಕವಿ ಕುವೆಂಪು ಹುಟ್ಟಿ ನೆಲೆದ ಜಾಗ. ಇಂದಿಗೂ ಅವರ ಮನೆ ಹಾಗು ಸಾಂಸ್ಕೃತಿಕ ಸ್ಮಾರಕ ಅಲ್ಲಿಯೇ ಇದೆ. ಇದನ್ನು ನೋಡಿ ನನ್ನ ತನು-ಮನ ಪುಳಕಿತವಾಯೀತು. ಎಲ್ಲಿಲ್ಲೂ ಕನ್ನಡದ ಕಂಪು, ಕುವೆಂಪುರವರ ಸಂಪು ಸೂಸುತಿತ್ತು. "ಓ ನನ್ನ ಚೇತನ ಆಗು ನೀ ಅನಿಕೇತನ" ಎಂಬ ಹಾಡು ನನ್ನ ಮನಸಿನಲ್ಲಿ ಹಾಡುತಿತ್ತು. ಇದೆಲ್ಲವನ್ನು ನೋಡಿ ಮರು ದಿನ ಬಾದಾಮಿಯತ್ತ ಹೊರೆಟೆನು. ಒಂದು ದಿನ ಪೂರ್ತಿ ಕೇವಲ ಬಾದಾಮಿ ಗುಹೆಗಳನ್ನೂ ನೋಡಿ ಕಾಲ ಕಳೆದೆನು. ಈ ವಿಸ್ಮಯ್ವನ್ನು ನೋಡಿ, ಹಿಂದಿನ ಕಾಲದ ವಾಸ್ತುಶಿಲ್ಪಿಗಳಿಗೆ ಪ್ರಣಾಮವನ್ನು ಮಾಡಿದೆನು. ಅಲ್ಲಿಂದ ನಾನು ಜೋಗದತ್ತ ಹೋದೆನು. ಇದೊಂದು ಅದ್ಭುತವೇ ಹೌದು. ಜೋಗದ ಜಲಪಾತವನ್ನು ನೋಡುತಾ ನನ್ನ ಕಣ್ಣು ತುಂಬಿ ಬಂತು. ಈ ಸೌಂದರ್ಯಧ ರಾಶಿಯಲ್ಲಿ ಮೈಮರೆತವರಲ್ಲಿ ನಾನು ಒಬ್ಬಳ್ಳು. ಜಾಗವನ್ನು ನೋಡಿ ಅಲ್ಲಿಂದ ಕೂರ್ಗ್ ಅತ್ತ ನನ್ನ ಪಯಣವನ್ನು ಸಾಗಿಸಿದೆ. ಇಲ್ಲಿ ನಾನು ರಾಜಾಸೇಥ್ ಅನ್ನು ನೋಡಿ, ಅಬ್ಬಿ ಜಲಾಯಶವನ್ನು ನೋಡಿ, ಸಂಜೆಯಹೊತ್ತಿಗೆ ಹಾರಂಗಿ ಅಣೆಕಟ್ಟನ್ನು ನೋಡಿಬಂದೆ. ನನ್ನ ಹತ್ತನೇಯ ದಿನ ನಾನು, ಬಯಲುಕುಪ್ಪೆಯಲ್ಲಿ ಇರುವ ಬುದ್ಧನ ದೇವಾಲಯವನ್ನು ನೋಡಿ ಪುನುಹ ಬೆಂಗಳೂರಿನತ್ತ ಹೊರಟೆ.
ಹೀಗೆ ನನ್ನ ಹತ್ತುದಿನಗಳ ಪ್ರವಾಸ ನನ್ನವು ಕರ್ನಾಟಕದ ಹಲವಾರು ಜಾಗಗಳು, ಊರುಗಳು , ಊಟಗಳ ಪರಿಚಯ ಮಾಡಿ ಇದರ ಜೊತೆಗೆ ನಮ್ಮ ನಾಡಿನ ಹಿರಿಮೆಯನ್ನು ಅರಿಯಲು ಸಹಾಯ ಮಾಡಿತು.