ಸದಸ್ಯ:Bhuvanasr/sandbox

ವಿಕಿಪೀಡಿಯ ಇಂದ
Jump to navigation Jump to search

ನಾಡು ಎಂಬುದಕ್ಕೆ ಪ್ರಾಂತ್ಯ ,ರಾಜ್ಯ ,ದೇಶ ಎಂಬ ಅರ್ಥಗಳಿವೆ. ಕರ್ನಾಟಕದ ರಾಷ್ಟ್ರಕವಿ ಕುವೆಂಪು ಈ ನಾಡನ್ನು "ಭಾರತ ಜನನಿಯ ತನುಜಾತೆ" ಎಂದಿದ್ದಾರೆ. ಕರ್ನಾಟಕಕ್ಕೆ ೨೫೦೦ ವರ್ಷಗಳ ಇತಿಹಾಸವಿದೆ. ಕರ್ನಾಟಕ ಎಂಬ ಹೆಸರು ಕರ್ಣ ಮತ್ತು ನಾಟಕ

ಎಂಬ ಎರಡು ಮೂಲ ಜನಾಂಗದವರಿಂದ ಬಂತೆಂಬ ವಾದವಿದೆ . ಕರುನಾಡು ಎಂದರೆ ಎತ್ತರದ ಭೂಪ್ರದೇಶ  ಎಂಬ ಅಭಿಪ್ರಾಯವಿದೆ. ಯಾವುದೇ ರೀತಿಯಿಂದ ನೋಡಿದರೂ ಸಹ ಕರ್ನಾಟಕ ಭಾರತದ "ಮಕುಟ ಮಣಿ " ಎಂದೇ ಹೇಳಬಹುದು. ರಾಜ್ಯದ ಪಶ್ಚಿಮದುದ್ದಕ್ಕೂ ಹಬ್ಬಿರುವ ಸಹ್ಯಾದ್ರಿ ಬೆಟ್ಟದ ಸಾಲು ಹಲವಾರು ಜೀವನದಿಗಳಿಗೆ ಉಗಮ ಸ್ಥಾನವೆನಿಸಿದೆ.

ರಾಷ್ಟ್ರಕೂಟರ ಚಕ್ರವರ್ತಿ ಅಮೋಘವರ್ಷ ನೃಪತುಂಗನ ಆಸ್ಥಾನ ಕವಿಯಾಗಿದ್ದ.ಈ ಭೂಪ್ರದೇಶವನ್ನು "ಕನ್ನಡ " ಎಂಬುದಾಗಿಯೇ ಗುರ್ತಿಸಿರುವುದು ಗಮನಾರ್ಹ. ಈ ಕರ್ನಟಕವನ್ನು ಅನೇಕ ರಾಜಮನೆತನದವರು ಆಳಿದ್ದಾರೆ.ಗಂಗ ,ಕದಂಬ, ಚಾಲುಕ್ಯ,ರಾಷ್ತ್ರಕೂಟ, ಯದವ , ಹೊಯ್ಸಳ ,ವಿಜಯನಗರ, ಮೈಸೂರು, ಇತ್ಯಾದಿ. ಈಗಿನ ಕರ್ನಾಟಕವು ೧೯೫೬ ನವೆಂಬರ್ ೧ ರಂದು ಭಾಷಾವಾರು ರಾಜ್ಯ ಮರುವಿಂಗಡಣೆಯ ಅನ್ವಯ ರೂಪಗೊಂಡ ಓಂದು ರಾಜ್ಯವಾಗಿದೆ.