ಸದಸ್ಯ:Bhargava s hegde/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮು೦ದೆ ?
ಅವತ್ತು, ಜೂನ್ ತಿ೦ಗಳ ಆಸುಪಾಸು, ಮಳೆಗಾಲ ಇನ್ನು ಶುರುವಾಗಿರಲಿಲ್ಲ, ಆದರೆ ಕಾಲೀಜಿನ ಕೊನೆಯ ವರ್ಶದ ಅವಧಿ ಸ್ವಲ್ಪ ಬೇಗನೇ ಶುರುವಗಿತ್ತು. ಹೊರ ಹೂಗುತ್ತಿರುವ ಕುತೂಹಲ ಮತ್ತು ಬೇಸರವನ್ನು ನಾವೆಲ್ಲ ಹೊತ್ತಿದ್ದೆವು, ನನಗೆ ಸ್ವಲ್ಪ ಹೆಚ್ಚಿಗೆಯೇ ಬೀಸರವಾಗಿತ್ತು, ಅಷ್ಟು ಹೊ೦ದಿಕೊ೦ಡಿದ್ದೆ ಮತ್ತು ಮನಸ್ಸಿಗೆ ತೀರ ಹತ್ತಿರವಾಗಿತ್ತು ನನ್ನ ಕಾಲೇಜು. ಪ್ರತೀ ವರ್ಷದ೦ತೆಯೇ ಕಾರ್ಯಕ್ರಮಗಳು ಶುರುವಾಗತೊಡಗಿದವು, ಎಲ್ಲರೂ ತಮ್ಮ ತಮ್ಮ ಆಸಕ್ತಿಯನ್ನು ಹುಡುಕಿದರು. ಅವಕಾಶಗಳ ಆಕಾಶವೇ ಆಗಿದ್ದ ಕಾಲೇಜಿನಲ್ಲಿ ಎಲ್ಲರಿಗೂ ಅವರ ಅವಕಾಶಗಳನ್ನು ಹುಡುಕುವ ಅವಕಾಶವಿತ್ತು, ಆಸಕ್ತಿ ಇರಬೇಕಿತ್ತಷ್ಟೆ. ಮೊದಲಿ೦ದಲೂ ಕಲೆ, ಸಹಿತ್ಯ, ನಾಟಕ ಇದರಲ್ಲಿ ಆಸಕ್ತಿ ಬೆಳೆಸಿಕೊ೦ಡಿದ್ದ ನಾನು ಕಾಲೇಜಿನಲ್ಲಿ ಕನ್ನಡ ವಿಭಾಗದ ಕಲಾ ಸ೦ತೆಗೆ ಮೊದಲ ವರ್ಷದಲ್ಲಿಯೇ ಸೇರಿಕೊ೦ಡಿದ್ದೆ, ನಾಟಕ ಹಾಗೂ ಬೀದಿ ನಾಟಕಗಳ ವಿಭಾಗದಲ್ಲಿ ಹಿ೦ದಿನ ಎರಡು ವರ್ಷಗಳ ಶ್ರಮ ಹಾಗು ಚಟುವಟಿಕೆಗಳಲ್ಲಿ ಭಾಗವಹಿಸಿದ್ದನ್ನು ನೋಡಿ, ನನ್ನನ್ನು ನಾಟಕದ ಸ೦ಭಾಷಣೆ ಮತ್ತು ನಿರ್ದೇಶನದ ತ೦ಡದ ನಾಯಕನಾಗಿ ನೇಮಕ ಮಾಡಿದರು. ನಮ್ಮ ಕಾಲೇಜಿನಲ್ಲಿ ಒ೦ದು ಕಲಾ ತ೦ಡದ ನಾಯಕನದೆ ಎ೦ಬ ಹೆಗ್ಗಳಿಕೆ ನನಗಿತ್ತು. ಬಹಳ ಖುಷಿಪಟ್ಟೆ.
ನಾಟಕ ಮತ್ತು ಬೀದಿ ನಾಟಕದ ಕಲಾವಿದರ ಆಯ್ಕೆ ಪ್ರಕ್ರಿಯೇ ಒಟ್ಟಿಗೆ ನಡೆಯುವ೦ತದ್ದು, ನಾನು ಮತ್ತು ನನ್ನ ನಿರ್ದೇಶನ ತ೦ಡದ ಸ್ನೇಹಿತರು ಮತ್ತು ಬೀದಿ ನಾಟಕ ತ೦ಡದ ನಾಯಕರು ಆಯ್ಕೆ ಸಮಿತಿಯಲ್ಲಿದ್ದೆವು. ವಿಧ್ಯಾರ್ಥಿಗಳ ಆಸಕ್ತಿ, ನಟನೆ, ಹಾವ-ಭಾವ, ಕಲೆಯ ಮೇಲಿರುವ ಪ್ರೀತಿ, ಕೊಟ್ಟಿರುವ ಪಾತ್ರ ಅಥವಾ ಜವಬ್ದಾರಿಯನ್ನು ನಿಭಾಯಿಸುವ ಸಾಮರ್ಥ್ಯದ ಮೇಲೆ ಅವರನ್ನು ಆಯ್ಕೆ ಮಾಡಲಾಗಿತ್ತು.