ವಿಷಯಕ್ಕೆ ಹೋಗು

ಸದಸ್ಯ:Bharath1810145

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Be who you are and let everyone love that person.
ನನ್ನ ವಿವರಣೆ:  ನನ್ನ ಹೆಸರು ಭರತ್ . ನಾನು ಜೂನ್ ೦೭ ೧೯೯೯ರಂದು ಬೆಂಗಳೂರಿನ ವಾಣೀವಿಲಾಸ ಎಂಬ ಆಸ್ಪತ್ರೆಯಲ್ಲಿ ಹುಟ್ಟಿದೆ . ನನ್ನ ತಂದೆ ಏಳುಮಲೈ , ತಾಯಿ ಕಮಲರವರಿಗೆ ಮೊದಲನೆಯ ಮಗ . ನಾನು ಹುಟ್ಟಿದ ಕ್ಷಣವೇ ನನ್ನ ತಂದೆ ತಾಯಿಯರ ಮತ್ತು ಅಜ್ಜಿ ತಾತಂದಿರು ಬಹಳ ಸಂತೋಷಪಟ್ಟರು .                                                                 
                                                                                                                                                     
 
ವಿದ್ಯಾಭ್ಯಾಸ:  ನಾನು ನನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೇಟ್ರಿಯೋಟ್  ವಿಧ್ಯಾನಿಕೇತನ್  ಶಾಲೆಯಲ್ಲಿ ಮುಗಿಸಿದೆ . ನಾನು ೫ನೇ ತರಗತಿಯಲ್ಲಿ ವಿಧ್ಯಾಭ್ಯಾಸ  ಮಾಡುತ್ತಿರುವಾಗ ಸಂಗೀತ ಕಛೇರಿಯಲ್ಲಿ ಮೊದಲನೆಯ ಸ್ಥಾನ ಪಡೆದೆ . ನನ್ನ ತಂದೆ ತಾಯಿಂದಿರು ನನ್ನ ಎಸ್ . ಎಸ್ . ಎಲ್ . ಸಿ . ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸುತ್ತೇನೆ  ಎಂದು ನಿರೀಕ್ಷೆ ಇಟ್ಟಿದ್ದರು . ಆದರೆ ನಾನು ಶೇಖಡ ೬೧ ಗಳಿಸಿದೆನು . ನನ್ನ ಹವ್ಯಾಸ ಕ್ರಿಕೆಟ್ ಆಗಿತ್ತು . ಶಾಲೆ ಗೆಳೆಯರೊಂದಿಗೆ ದಿನನಿತ್ಯ ಕ್ರಿಕೆಟ್ ಆಡುವುದು ಬಹಳ ಸಂತೋಷವಾಗಿತ್ತು . ೧೦ನೇ ತರಗತಿಯಲ್ಲಿ ಕಡಿಮೆ ಅಂಕಗಳು ಪಡೆದಿದ್ದರಿಂದ ದ್ವಿತೀಯ ಪಿಯುಸಿನಲ್ಲಿ ಹೆಚ್ಚು ಅಂಕಗಳು ಪಡೆಯಬೇಕೆಂಬ ಗುರಿ ಇತ್ತು . ನಾನು ನನ್ನ ಪಿಯುಸಿಯನ್ನು ಸೆಂಟ್ ಫ್ರಾನ್ಸಿಸ್ ಕಾಲೇಜಿನಲ್ಲಿ ಓದ ತೊಡಗಿದೆ . ಕಾಲೇಜಿಗೆ ಸೇರಿದ ಮೊದಲು ಎರಡು ತಿಂಗಳು ಅಲ್ಲಿನ ಪರಿಸರ ಹಾಗು ಗೆಳೆಯರೊಂದಿಗೆ ಹೊಂದಿಕೊಳ್ಳಲು ಕಷ್ಟವಾಗಿತ್ತು . ಎರಡು ಮೂರು ತಿಂಗಳು ಕಳೆದ ನಂತರ ಒಳ್ಳೆಯ ಗೆಳೆಯರು ದೊರಕಿದರು . ಅದರಿಂದ ನನಗೆ ಪ್ರತಿದಿನ ಕಾಲೇಜಿಗೆ ಹೋಗಲು ಬಹಳ ಇಷ್ಟವಾಗಿತ್ತು ಹಾಗೂ ಓದಲು ಕುತೂಹಲ ಬಂದಿತು . ನಾನು ಪ್ರಥಮ ಪಿಯುಸಿನಲ್ಲಿ ಇರುವಾಗ ಗೆಳೆಯರೆಲ್ಲರೂ ಸೇರಿ ಒಂದು ನೃತ್ಯ ಪ್ರದರ್ಶನ ಕೊಟ್ಟಿದ್ದೇವೆ . ಅದರಲ್ಲಿ ಎರಡನೆಯ ಸ್ಥಾನ ಗಳಿಸಿದ್ದೆವು . ಈ ನೃತ್ಯ ಪ್ರದರ್ಶನ ಕೊಡುವ ಮೊದಲು ನಮ್ಮೆಲ್ಲರಿಗೂ ವೇದಿಕೆಯ ಹೆದರಿಕೆ ಬಹಳ ಇತ್ತು . ಅದರ ನಂತರ ಭಯ ಕಡಿಮೆಯಾಗಿತ್ತು . ಪ್ರಥಮ ಪಿಯುಸಿನಲ್ಲಿ ೪೨೦ ಅಂಕಗಳು ಪಡೆದು ದ್ವಿತೀಯ ಪಿಯುಸಿಗೆ ಮುಂದುವರೆಸಿದೆ . ನಾನು ಮೊದಲು ಹೇಳಿದಂತೆಯೇ ದ್ವಿತೀಯ ಪಿಯುಸಿನಲ್ಲಿ ಹೆಚ್ಚು ಅಂಕಗಳು ಪಡೆಯಲೇ ಬೇಕೆಂಬ ಗುರಿ ಇಂದ ಓದಿದೆ . ನಂತರ ಕ್ರೈಸ್ಟ್ ಕಾಲೇಜಿನ ವಿರುದ್ಧ ಚರ್ಚೆಯಲ್ಲಿ ಭಾಗವಹಿಸಿ ಮೊದಲ ಸ್ಥಾನ ಗಳಿಸಿದೆ . ನೃತ್ಯದಲ್ಲೂ ಭಾಗವಹಿಸಿ ಮೊದಲ ಸ್ಥಾನ ಗಳಿಸಿದೆ . ದ್ವಿತೀಯ ಪಿಯುವಿನ ತರಗತಿಯು ಬಹಳ ಒಂದಾಣಿಕೆಯಾಗಿತ್ತು . ನಾನು ದ್ವಿತೀಯ ಪಿಯುಸಿನಲ್ಲಿ ಶೇಕಡ ೮೪ ಗಳಿಸಿದೆನು . ಇದಾದ ನಂತರ ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸಲು ಕ್ರೈಸ್ಟ್ ಯೂನಿವೆರ್ಸಿಟಿಗೆ ಸೇರಿದೆ . ಮೊದಲನೆಯ ಸೆಮೆಸ್ಟರ್ನಲ್ಲಿ ಯಾರ ಜೊತೆಯೂ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ . ಆ ಇಡೀ ಸೆಮೆಸ್ಟರ್ ಹೆದರಿಕೆಯಿಂದಲೇ ಮುಗಿಯಿತು . ಎರಡನೆಯ ಸೆಮೆಸ್ಟರ್ ಬಹಳ ಸರಳವಾಗಿ ನಡೆಯುತ್ತಿದೆ. 

ನನ್ನ ಶಕ್ತಿ: ನನಗೆ ನೆನಪಿನ ಶಕ್ತಿ ಹೆಚ್ಚು . ಜೊತೆಗಿರುವ ಸ್ನೇಹಿತರನ್ನು ಬೇಗನೆ ಅರ್ತ ಮಾಡಿಕೊಳ್ಳುತ್ತೇನೆ . ಇದೆ ನನ್ನ ಬಲವೆಂದು ಹೇಳಬಹುದು. ಮೊದಲ ಮಗನಾಗಿ ಹುಟ್ಟಿದ್ದರಿಂದ ನನಗೆ ಕರ್ತವ್ಯ ಸ್ವಲ್ಪ ಹೆಚ್ಚಾಗಿ ಇತ್ತು . ಈ ಕಾರಣಕ್ಕಾಗಿಯೇ ಚೆನ್ನಾಗಿ ಓದಿ ಒಂದು ಒಳ್ಳೆಯ ಕೆಲಸ ಮಾಡಬೇಕೆಂದು ನನ್ನ ಆಸೆ .