ವಿಷಯಕ್ಕೆ ಹೋಗು

ಸದಸ್ಯ:Benson pais/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾಯು ಮಾಲಿನ್

[ಬದಲಾಯಿಸಿ]

ಮನುಷ್ಯರಿಗೆ ಅಥವಾ ಇತರ ಜೀವಿಗಳಿಗೆ ಹಾನಿ ಅಥವಾ ತೊಂದರೆಯುಂಟುಮಾಡುವ, ಸ್ವಾಭಾವಿಕ ಪರಿಸರಕ್ಕೆ ಹಾನಿಯನ್ನುಂಟುಮಾಡುವ ರಾಸಾಯನಿಕಗಳು ಸೂಕ್ಷ್ಮ ಕಣಗಳ ವಸ್ತು, ಅಥವಾ ಜೈವಿಕ ಸಾಮಗ್ರಿಗಳು ಭೂಮಿಯ ವಾತಾವರಣಕ್ಕೆ ಸೇರಿಕೊಳ್ಳುವುದಕ್ಕೆ ವಾಯು ಮಾಲಿನ್ಯ ಎಂದು ಹೆಸರು.ವಾತಾವರಣವು ಒಂದು ಸಂಕೀರ್ಣ ಚಲನಶೀಲ ಸ್ವಾಭಾವಿಕ ಅನಿಲರೂಪದ ವ್ಯವಸ್ಥೆಯಾಗಿದ್ದು, ಭೂಮಿಯ ಮೇಲಿನ ಜೀವಜಾಲಕ್ಕೆ ಪೂರಕವಾಗಿ ನಿಲ್ಲಲು ಅದು ಅತ್ಯಂತ ಅಗತ್ಯವಾಗಿರುತ್ತದೆ.ವಾಯು ಮಾಲಿನ್ಯದ ಕಾರಣದಿಂದ ಉಂಟಾಗುವ ವಾಯುಮಂಡಲ ಓಝೋನ್ ಬರಿದಾಗುವಿಕೆಯು, ಮಾನವನ ಆರೋಗ್ಯವಷ್ಟೇ ಅಲ್ಲದೇ ಭೂಮಿಯ ಪರಿಸರ ವ್ಯವಸ್ಥೆಗಳು ಒಂದು ಅಪಾಯವಾಗಿ ಪರಿಣಮಿಸುತ್ತದೆ ಎಂಬುದನ್ನು ಬಹಳ ಹಿಂದೆಯೇ ಗುರುತಿಸಲಾಗಿದೆ. ಮನುಷ್ಯರಿಗೆ ಮತ್ತು ಪರಿಸರಕ್ಕೆ ಹಾನಿಯನ್ನುಂಟುಮಾಡಬಲ್ಲ ಗಾಳಿಯಲ್ಲಿನ ವಸ್ತುವೊಂದಕ್ಕೆ ವಾಯು ಮಾಲಿನ್ಯಕಾರಕ ಎಂದು ಹೆಸರು. ಮಾಲಿನ್ಯಕಾರಕಗಳು ಘನರೂಪದ ಕಣಗಳು, ದ್ರವರೂಪದ ಸಣ್ಣಹನಿಗಳು ಅಥವಾ ಅನಿಲಗಳ ಸ್ವರೂಪದಲ್ಲಿರಬಹುದು. ಇವೆಲ್ಲದರ ಜೊತೆಗೆ ಅವು ಸ್ವಾಭಾವಿಕ ಅಥವಾ ಮಾನವ ನಿರ್ಮಿತವಾಗಿಯೂ ಇರಬಹುದು.ಮಾಲಿನ್ಯಕಾರಕಗಳನ್ನು ಪ್ರಾಥಮಿಕ ಅಥವಾ ದ್ವಿತೀಯಕಗಳೆಂದು ವರ್ಗೀಕರಿಸಬಹುದು.ಅಗ್ನಿಪರ್ವತದ ವಿಸ್ಫೋಟದಿಂದ ಹೊರಬಂದ ಬೂದಿ, ಮೋಟಾರು ವಾಹನವು ಹೊರಬಿಟ್ಟ ಗಾಳಿಯಿಂದ ಬಂದ ಇಂಗಾಲದ ಮಾನಾಕ್ಸೈಡ್ ಅನಿಲ ಅಥವಾ ಕಾರ್ಖಾನೆಗಳಿಂದ ಬಿಡುಗಡೆ ಮಾಡಲ್ಪಟ್ಟ ಗಂಧಕದ ಡೈಯಾಕ್ಸೈಡ್- ಈ ರೀತಿಯಲ್ಲಿ ಒಂದು ಪ್ರಕ್ರಿಯೆಯಿಂದ ನೇರವಾಗಿ ಹೊರಹೊಮ್ಮಿರುವ ವಸ್ತುಗಳನ್ನು ಸಾಮಾನ್ಯವಾಗಿ ಪ್ರಾಥಮಿಕ ಮಾಲಿನ್ಯಕಾರಕಗಳು ಎನ್ನಲಾಗುತ್ತದೆ. ದ್ವಿತೀಯಕ ಮಾಲಿನ್ಯಕಾರಕಗಳು ನೇರವಾಗಿ ಹೊರಹೊಮ್ಮಿದ ವಸ್ತುಗಳಲ್ಲ.ಪ್ರಾಥಮಿಕ ಮಾಲಿನ್ಯಕಾರಕಗಳು ತಿಕ್ರಿಯಿಸಿದಾಗ ಅಥವಾ ಪರಸ್ಪರ ಕ್ರಿಯೆಯಲ್ಲಿ ತೊಡಗಿದಾಗ ಅವು ವಾಯುವಿನಲ್ಲಿ ರೂಪುಗೊಳ್ಳುತ್ತವೆ. ನೆಲದ ಮಟ್ಟದಲ್ಲಿರುವ ಓಝೋನ್, ದ್ವಿತೀಯಕ ಮಾಲಿನ್ಯಕಾರಕವೊಂದಕ್ಕೆ ಉದಾಹರಣೆಯಾಗಬಲ್ಲದು. ದ್ಯುತಿರಾಸಾಯನಿಕ ಹೊಗೆಯ ಮಂಜನ್ನು ಉಂಟುಮಾಡುವ ಅನೇಕ ದ್ವಿತೀಯಕ ಮಾಲಿನ್ಯಕಾರಕಗಳಲ್ಲಿ ಇದು ಒಂದಾಗಿದೆ.ಕೆಲವೊಂದು ಮಾಲಿನ್ಯಕಾರಕಗಳು ಪ್ರಾಥಮಿಕ ಮತ್ತು ದ್ವಿತೀಯಕ ಸ್ವರೂಪಗಳೆರಡರಲ್ಲಿಯೂ ಇರುತ್ತವೆ ಎಂಬುದನ್ನಿಲ್ಲಿ ಗಮನಿಸಬೇಕು. ಅಂದರೆ ಅವು ನೇರವಾಗಿಯೂ ಹೊರಹಾಕಲ್ಪಟ್ಟಿರುತ್ತವೆ ಮತ್ತು ಇತರ ಪ್ರಾಥಮಿಕ ಮಾಲಿನ್ಯಕಾರಕಗಳಿಂದಲೂ ಸಹ ರೂಪುಗೊಂಡಿರುತ್ತವೆ.ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ನಲ್ಲಿನ ಪರಿಸರ ವಿಜ್ಞಾನ ಎಂಜಿನಿಯರಿಂಗ್ ಕಾರ್ಯಕ್ರಮವು ಹೇಳುವಂತೆ ಸಂಯುಕ್ತ ಸಂಸ್ಥಾನದಲ್ಲಿ ಸಂಭವಿಸುತ್ತಿರುವ ಸುಮಾರು ಶೇಕಡಾ ೪ರಷ್ಟು ಸಾವಿಗೆ ವಾಯುಮಾಲಿನ್ಯವೇ ಕಾರಣವಾಗಿದೆ.