ರಾಜಶೇಖರ ಹತಗುಂದಿ
ಗೋಚರ
(ಸದಸ್ಯ:Beluru/ನನ್ನ ಪ್ರಯೋಗಪುಟ ಇಂದ ಪುನರ್ನಿರ್ದೇಶಿತ)
ರಾಜಶೇಖರ ಹತಗುಂದಿ
[ಬದಲಾಯಿಸಿ]ಡಾ|| ರಾಜಶೇಖರ ಹತಗುಂದಿಯವರು ಕನ್ನಡದ ಸಾಹಿತಿ ಮತ್ತು ಸಾಮಾಜಿಕ ಕಾರ್ಯಕರ್ತರು.
ಆರಂಭದ ಜೀವನ
[ಬದಲಾಯಿಸಿ]ಡಾ|| ರಾಜಶೇಖರ ಹತಗುಂದಿಯವರು ೨೬.೧೧.೧೯೬೬ರಂದು ಜನಿಸಿದರು. ಅವರ ತಂದೆ ಚಿತಾಂಬರರಾವ್. ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಅವರು ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. [೧]
ಸಾಹಿತ್ಯ ಮತ್ತು ಶೈಕ್ಷಣಿಕ ಚಟುವಟಿಕೆಗಳು
[ಬದಲಾಯಿಸಿ]ಕನ್ನಡದ ಹತ್ತಾರು ಸಾಹಿತ್ಯಿಕ ವಿಚಾರಗೋಷ್ಠಿಗಳಲ್ಲಿ ತಮ್ಮ ವಿಚಾರಗಳ ಪ್ರಬಂಧಗಳನ್ನು ಮಂಡಿಸಿರುವ ರಾಜಶೇಖರ ಹತಗುಂದಿಯವರು ಬೆಂಗಳೂರು ದೂರದರ್ಶನ, ಕರ್ನಾಟಕ ಸಾಹಿತ್ಯ ಅಕಾಡೆಮಿ ಮುಂತಾದ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಕನ್ನಡ ಸಾಹಿತ್ಯ, ಕೋಮು ಸೌಹಾರ್ದ ಕುರಿತಂತೆ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ಸಂಕಲನದಲ್ಲೂ ತಮ್ಮ ಸಾಹಿತ್ಯಿಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕೃತಿಗಳು
[ಬದಲಾಯಿಸಿ]- ಬುದ್ಧನ ನಾಡಿನಲ್ಲಿ (ಪ್ರವಾಸ ಕಥನ) ೧೯೯೮ (ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಪ್ರಕಟಣೆ)
- ಕಾಳ ಬೆಳುದಿಂಗಳ ಸಿರಿ (ಕಥಾ ಸಂಕಲನ) ೧೯೯೯ (ಲೋಹಿಯಾ ಪ್ರಕಾಶನ, ಬಳ್ಳಾರಿ)[೧]
- ಖ್ಯಾತ ಚಿತ್ರಕಲಾವಿದ ಸಾತಲಿಂಗಪ್ಪ ಪಾಟೀಲ ದುಧನಿ ಅವರ ಕುರಿತ ಜೀವನ ಚರಿತ್ರೆ, ೨೦೦೧ (ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು)
- ಇನ್ ದಿ ಲ್ಯಾಂಡ್ ಆಫ್ ಬುದ್ಧ (ಬುದ್ಧನ ನಾಡಿನಲ್ಲಿ ಪ್ರವಾಸ ಕಥನದ ಇಂಗ್ಲಿಷ್ ಆವೃತ್ತಿ) ೨೦೦೧ ವಸಂತ ಪ್ರಕಾಶನ, ಬೆಂಗಳೂರು)
- ಆಯ್ದ ಕತೆಗಳು (ಸಂಪಾದಿತ ಕೃತಿ) ೨೦೦೧ (ಸಿದ್ಧಲಿಂಗೇಶ್ವರ ಪ್ರಕಾಶನ, ಗುಲಬರ್ಗಾ) ಈ ಕೃತಿ ೨೦೦೧ ರಿಂದ ೫ ವರ್ಷಗಳ ಕಾಲ ಗುಲಬರ್ಗಾ ವಿ.ವಿ.ಯ ಬಿ.ಎಸ್‌ಸಿ. ಬೇಸಿಕ್-೧ಕ್ಕೆ ಪಠ್ಯಪುಸ್ತಕವಾಗಿತ್ತು.
- ಕಲಬುರ್ಗಿ ಜಿಲ್ಲಾ ದರ್ಶನ (ಸಂಪಾದಿತ ಕೃತಿ) ೨೦೦೫ (ಗುಲಬರ್ಗಾ ವಿ.ವಿ.ಯ ಪ್ರಸಾರಾಂಗದಿಂದ ಪ್ರಕಟಿತ ಕೃತಿ)
- ವಾರ್ಷಿಕ ಕತೆಗಳು (ಸಂಪಾದಿತ ಕೃತಿ) ೨೦೦೯ (ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಿತ ಕೃತಿ)
- ಮಹಿಳಾ ಸಾಂಸ್ಕೃತಿಕ ಮಾಲಿಕೆ (ಸಂಪಾದಿತ) ೨೦೦೯ (ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಿತ ಕೃತಿ)
- ಬಯಲ ಹುಡಿ (ಅಂಕಣ ಬರಹ)೨೦೦೯ (ಪಲ್ಲವ ಪ್ರಕಾಶನ, ಹೊಸಪೇಟೆ)
- ಎಡ ಹೊತ್ತಿನ ಪಯಣ (ಅಂಕಣ ಬರಹ) ೨೦೧೦(ಪಲ್ಲವ ಪ್ರಕಾಶನ, ಹೊಸಪೇಟೆ)
ಪ್ರಶಸ್ತಿಗಳು
[ಬದಲಾಯಿಸಿ]- ಗುಲ್ಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ - ೨೦೧೪
- ಕರ್ನಾಟಕ ಮಾಧ್ಯಮ ಅಕಾಡೆಮಿಯ ಗೌರವ ಪ್ರಶಸ್ತಿ - ೨೦೧೪[೨]
- ಮಡಿಕೇರಿಯಲ್ಲಿ ನಡೆದ ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಡು-ನುಡಿ ಸೇವೆಗಾಗಿ ಗೌರವ ಸನ್ಮಾನ - ೨೦೧೪
- ಗುಲ್ಬರ್ಗಾ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ - ೨೦೧೪
- `ಕಾಳ ಬೆಳುದಿಂಗಳ ಸಿರಿ' ಕತೆಗೆ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಎರಡನೇ ಬಹುಮಾನ -೧೯೯೭
- 'ಕಾಳ ಬೆಳುದಿಂಗಳ ಸಿರಿ' ಕತೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ದಿ. ಜಯತೀರ್ಥ ರಾಜ ಪುರೋಹಿತ ದತ್ತಿ ಕಥಾಸ್ಪರ್ಧೆಯಲ್ಲಿ `ಅತ್ಯುತ್ತಮ ಕತೆ' ಪ್ರಶಸ್ತಿ - ಚಿನ್ನದ ಪದಕ ಮತ್ತು ರೂ. ೨,೦೦೦/- ನಗದು - ೧೯೯೭
- `ಕಾಳ ಬೆಳುದಿಂಗಳ ಸಿರಿ' ಕಥಾ ಸಂಕಲನಕ್ಕೆ ಹುನಗುಂದ ಸಾರಂಗಮಠ ಪ್ರತಿಷ್ಠಾನದ ನಗದು ಬಹುಮಾನ - ೧೯೯೯
ನಿರ್ವಹಿಸಿದ ಹುದ್ದೆಗಳು
[ಬದಲಾಯಿಸಿ]- ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ನೇಮಕ (ಶ್ರೀ ಪುಂಡಲೀಕ ಹಾಲಂಬಿಯವರ ಅಧ್ಯಕ್ಷಾವಧಿ (೨೦೧೨-೨೦೧೫)
- ಕರ್ನಾಟಕ ಸರ್ಕಾರದ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯ (೨೦೦೧ -೨೦೦೫)
- ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ (೨೦೦೫-೨೦೦೮)
- ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ (೨೦೧೪ -೨೦೧೭)
- ಆರ್.ಆರ್.ಎಲ್.ಎಫ್. ಪುಸ್ತಕ ಆಯ್ಕೆ ಸಮಿತಿಯ ಸಹ ಸದಸ್ಯ (೨೦೦೧ -೨೦೦೫)
- ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಾರಾಂಗ ಆಯೋಜಿಸುವ ರಾಜ್ಯ ಮಟ್ಟದ ದಿ. ಜಯತೀರ್ಥ ರಾಜ ಪುರೋಹಿತ ದತ್ತಿ ಕಥಾ ಸ್ಪರ್ಧೆಯ ತೀರ್ಪುಗಾರನಾಗಿ ಹಲವಾರು ಬಾರಿ ಕಾರ್ಯ ನಿರ್ವಹಣೆ.
- ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪುಸ್ತಕ ಬಹುಮಾನ ಯೋಜನೆಗೆ ಮೌಲ್ಯಮಾಪಕನಾಗಿ ಕಾರ್ಯ ನಿರ್ವಹಣೆ.
- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸುವ ವಲಯ ಮಟ್ಟದ ಕಲಾ ಪ್ರತಿಭೋತ್ಸವದಲ್ಲಿ ತೀರ್ಪುಗಾರನಾಗಿ ಕಾರ್ಯ ನಿರ್ವಹಣೆ.
- ಗುಲಬರ್ಗಾ ವಿ.ವಿ. ಆಯೋಜಿಸುವ ಯುವ ಜನೋತ್ಸವ ಸ್ಪರ್ಧೆಯ ತೀರ್ಪುಗಾರನಾಗಿ ಕಾರ್ಯ ನಿರ್ವಹಣೆ.
- ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಲನಚಿತ್ರಗಳ ಸಬ್ಸಿಡಿ ಕಮಿಟಿ ಸದಸ್ಯ
- ಎರಡನೇ ಬಾರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ನೇಮಕ (ಡಾ. ಮನು ಬಳಿಗಾರ ಅವರ ಅಧ್ಯಕ್ಷಾವಧಿ (೨೦೧೬-)
- ಸಿಂಡಿಕೇಟ್ ಸದಸ್ಯ, ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯ, ಅಮರಕಂಟಕ (ಮಧ್ಯಪ್ರದೇಶ)[೩]