ಸದಸ್ಯ:Bathish100/sandbox

ವಿಕಿಪೀಡಿಯ ಇಂದ
Jump to navigation Jump to search

ನಾನು ಯಾರೆಂಬ ಪ್ರಶ್ನೆಗೆ ನೀಡಬಲ್ಲ ಉತ್ತರ ಅತ್ಯಂತ ಅಸಂಬದ್ಧವೆಂದು ನಾನು ಯಾವಾಗಲೂ ಭಾವಿಸುತ್ತೇನೆ. ಈ ಪ್ರಶ್ನೆಯ ಉತ್ತರ ಇನ್ನೊಬ್ಬರಿಂದ ವ್ಯಕ್ತವಾಗಬೇಕೆ ಹೊರತು ನನ್ನ ಮಾತಿನಲ್ಲಲ್ಲ. ಆದರೂ ಅನಿವಾರ್ಯವಾದ ಕಾರಣ ನಾನು ನನ್ನನ್ನು ಪರಿಚಯಿಸುತ್ತೇನೆ, ಹೆಸರು ಇಬ್ರಾಹೀಂ ಬಾತೀಷ್,. ಬಾತಿಷ್ ಎಂಬುದು ನ್ಯೂ ಜನರೇಷನ್ ಪ್ರಭಾವದಿಂದ ಬಂದ ಹೆಸರಾದರೂ, ಇಬ್ರಾಹೀಂ ಎನ್ನುವುದು ನನ್ನ ತಾತನಿಂದ ಬಳುವಳಿಯಾಗಿ ಬಂದ ಏಕಮಾತ್ರ ಆಸ್ತಿ. ನನ್ನೂರು ಕಲ್ಲಡ್ಕ ಸಮೀಪದ ಗೋಳ್ತಮಜಲು. ಹಸನಬ್ಬ ಮತ್ತು ಫಾತಿಮಾ ನನ್ನ ತಂದೆ ತಾಯಿ, ನನ್ನ ಹೆತ್ತವರಿಗೆ ನಾಲ್ಕು ಮಕ್ಕಳಿದ್ದು, ನಾನೇ ಕೊನೆಯವನು, ಒಬ್ಬ ಅಣ್ಣ, ಇಬ್ಬರು ಅಕ್ಕಂದಿರು ಇದ್ದಾರೆ. ಜೊತೆಗೆ ೫ ವರ್ಷಗಳ ಹಿಂದೆ ಮನೆಗೆ ಬಲಗಾಲಿಟ್ಟು ಬಂದ ಅತ್ತಿಗೆ ಹಾಗೂ ೨ ಮಕ್ಕಳು ಸದ್ಯ ಮನೆಯಲ್ಲಿದ್ದಾರೆ. ನನ್ನ ಪ್ರಾಥಮಿಕ ಶಿಕ್ಷಣ ಸರಕಾರಿ ಶಾಲೆಯಲ್ಲಿ ನಡೆಯಿತು. ಈಗಿನ ಹಾಗೆ ಅಡುಗೆಕೋಣೆಯಲ್ಲಿ ವ್ಯಾನ್ ಹತ್ತಿ ಕ್ಲಾಸ್ ರೂಂನಲ್ಲಿ ಇಳಿಯುವ ದೌರ್ಭಾಗ್ಯ ನಮಗಿರಲಿಲ್ಲ, ನಾವು, ಪ್ರಕೃತಿ, ಗುಡ್ಡ, ಮರಗಳು, ಕಾಡಿದರೂ ತಣ್ಣನೆ ಭಾವಮೂಡಿಸುವ ಮುಂಗಾರುಮಳೆಯನ್ನು ಸವಿಯುತ್ತಾ ಬೆಳೆದವರು. ನನ್ನ ಪ್ರೌಢಶಾಲಾ ಶಿಕ್ಷಣ ಕೂಡಾ ಕನ್ನಡ ಶಾಲೆಯಲ್ಲೇ ಆಯಿತು. ಆಮೇಲೆ, ಪಿಯು ಕಾಲೇಜು ನನ್ನ ಶೈಕ್ಷಣಿಕ ಬದುಕಿನ ಅತ್ಯಂತ ಕಠಿಣ ಸವಾಲೆಂದೇ ಹೇಳಬಹುದು. ಹೊಸ ವಿಷಯಗಳ ಕಲಿಯುವ ಬಗ್ಗೆ ಮೊದಲೇ ಹೆದರಿಕೆಯಿದ್ದ ನಾನು ಇಂಗ್ಲಿಷ್ ಮಾಧ್ಯಮಕ್ಕೆ ಸೇರಿದ್ದು, ವಾಂತಿ ಮಾಡುವವನ ಬಾಯಿಗೆ ಕಡುಬು ತುರುಕಿದಂತಾಯಿತು, ಮೊದ ಮೊದಲು ಉಪನ್ಯಾಸಕರ ಪಾಠವನ್ನು ಬಾಯಿಬಿಟ್ಟು ನೋಡುತ್ತಿದ್ದ ನಾನು, ನಂತರ ಅಲ್ಪಸ್ವಲ್ಪ ಅಡ್ಜಸ್ಟ್ ಆದೆ. ಕೊನೆಗೆ ಅಂತಿಮ ಪರೀಕ್ಷೆಯಲ್ಲಿ ೭೭ ಶೇ. ಅಂಕ ಗಳಿಸಿ ಉತ್ತೀರ್ಣನಾದೆ. ಇದೀಗ ಪದವಿ ಶಿಕ್ಷಣಕ್ಕಾಗಿ ಅಲೋಶಿಯಸ್ ಕಾಲೇಜು ಸೇರಿ ಆಗಿದೆ. ಗೊತ್ತಿಲ್ಲ ಇಲ್ಲಿನ ಪಯಣ ಹೇಗಿದೆ ಎಂದು..ಕಾದು ನೋಡಲು ಕಾತರನಾಗಿದ್ದೇನಷ್ಟೆ...