ಸದಸ್ಯ:Basava230513/ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈಶ್ವರಿ ಬಳ್ಳಿ ಸಂ : ನಕುಲಿ, ರುದ್ರಜಿಟಾ. ಹಿಂ : ಈಶ್ವರಿಮೂಲ್ ಗು : ರುಹಿಮೂಲ್ ಮ : ಸಪಾಸನ್ ತೆ : ದುಲಗವೇಲ ತ : ಪೆರಂಕಳಿಂಗ್ ವರ್ಣನೆ

ಸಾಮಾನ್ಯವಾಗಿ ಹಳ್ಳಿಗಾಡಿನ ಜನರಿಗೆ ಚಿರಪರಿಚಿತವಾಗಿರುವ ಮೂಲಿಕೆ ಮರಗಳಿಗೆ ಸುತ್ತಿಕೊಂಡು ಬೆಳೆಯುವ ಕಪ್ಪುಬಳ್ಳಿ ಎಲೆಗಳು ಉದ್ದವಾಗಿರುವುವು, ತಳದಲ್ಲಿ ಅಗಲವಾಗಿದ್ದು ತುದಿಯಲ್ಲಿ ಮೊನಚಾಗಿರುವುವು ಮತ್ತು ಮೃದುವಾಗಿರುವುವು. ಎಲೆ ಮತ್ತು ಕಾಂಡಕ್ಕೂ ಮಧ್ಯೆ ಹೂ ಗೊಂಚಲಿರುವುದು. ಹೂಗಳು ಚಿಕ್ಕವು ಮತ್ತು ಎರಡು ಅಥವಾ ಮೂರು ಇರುವುವು. ಅರಳಿದಾಗ ತಿಳಿನೇರಳೆ ಬಣ್ಣ ಹೊಂದಿರುವುವು. ಕೇಸರಗಳು ಆರು, ಬೀಜಗಳು ಚಪ್ಪಟೆ, ಅಂಡಾಕಾರವಾಗಿದ್ದು ಪುಕ್ಕಗಳನ್ನು ಹೊಂದಿರುವುವು. ಬೇರುಗಳಲ್ಲಿ ಸುಗಂಧ ತೈಲವಿರುವುದು.

ಸರಳ ಚಿಕಿತ್ಸೆಗಳು ಹಳೆಯ ಜ್ವರ ಕೆಮ್ಮು ಈಶ್ವರಿ ಬೇರಿನ ನಯವಾದ ಚೂರ್ಣವನ್ನು ಕಾಲು ಟೀ ಚಮಚದಷ್ಟನ್ನು ನೀರಿನಲ್ಲಿ ಹಾಕಿ, ಕಾಯಿಸಿ, ಕಷಾಯ ಮಾಡುವುದು, ತಣ್ಣಗಾದ ಮೇಲೆ ಶೋಧಿಸಿ 3-4 ಟೀ ಚಮಚದಷ್ಟು ದಿವಸಕ್ಕೆ ಎರಡು ವೇಳೆ ಸೇವಿಸುವುದು. ಮಲಬದ್ಧತೆ ಮೂಲವ್ಯಾಧಿ ಈಶ್ವರಿ ಬೇರು ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಸಮತೂಕ ಚೂರ್ಣಿಸಿ ಶೇಖರಿಸುವುದು, ಈ ನಯವಾದಚೂರ್ಣ 2 ರಿಂದ 2 1/2 ಗ್ರಾಂ ಸೇವಿಸಿದ ಮೇಲೆ ಬಿಸಿ ನೀರು ಕುಡಿಯುವುದು. ವಿಷಮ ಜ್ವರದಲ್ಲಿ ಶುದ್ಧವಾದ ಅರ್ಧ ಲೀಟರ್ ತಣ್ಣೀರಿನಲ್ಲಿ 15 ಗ್ರಾಂ ಈಶ್ವರಿಬೇರು ಜಜ್ಜಿ ಹಾಕಿ ನೆನಸಿಡುವುದು, ತಿಳಿಯಾದ ನೀರನ್ನು ಶೋಧಿಸಿ, ಒಂದೆರಡು ಟೀ ಚಮಚ ಪ್ರತಿದಿವಸ 4-5 ಸಾರಿ ಸೇವಿಸುವುದು. ಸನ್ನಿ ಜ್ವರಕ್ಕೆ ಎಲೆಗಳ ಕಷಾಯ ಮಾಡಿ ಸ್ವಲ್ಪ ಸ್ವಲ್ಪ ಕುಡಿಸುವುದು. ಸರ್ಪದ ವಿಷದಲ್ಲಿ ಹಸೀ ಎಲೆಗಳನ್ನು ತಂದು ಚನ್ನಾಗಿ ಜಜ್ಜಿ ಕಷಾಯ ಮಾಡಿ, ಕುಡಿಸುವುದು. ಸ್ತ್ರೀಯರ ಸೂತಕ ಸೂಲೆ ಮತ್ತು ಮುಟ್ಟಿನ ದೋಷ ಸ್ತ್ರೀಯರ ಮುಟ್ಟಿನ ದೋಷ ಪರಿಹಾರವಾಗಲು, ಈಶ್ವರೀಬೇರಿನ ನಯವಾದ ವಸ್ತ್ರಗಾಳಿತ ಚೂರ್ಣವನ್ನು ಕಡಿಮೆ ಪ್ರಮಾಣದಲ್ಲಿ ಬೆಲ್ಲ ಅಥವಾ ನಿಂಬೆಹಣ್ಣಿನ ರಸದ ಅನುಪಾನದೊಂದಿಗೆ ಸೇವಿಸುವುದು ( ಹೊತ್ತಿಗೆ ಎರಡು ಚಿಟಿಕೆ ). ಪ್ರಮಾಣ ಮೀರಿದರೆ, ವಾಂತಿ ಅಥವಾ ತಲೆಸುತ್ತು ಬರಬಹುದು. ಪ್ರಮಾಣ ಮೀರದಂತೆ ಎಚ್ಚರವಹಿಸುವುದು. ಹಾವಿನ ವಿಷಕ್ಕೆ 2 ಗ್ರಾಂ ಹಸಿ ಬೇರನ್ನು ತಂದು 2 ಗ್ರಾಂ ಮೆಣಸನ್ನು ಸೇರಿಸಿ ನುಣ್ಣಗೆ ಅರೆದು ನೀರಿನಲ್ಲಿ ಕದಡಿ ಕುಡಿಸುವುದು. ಗಾಯದ ಮೇಲೆ ಮಂದವಾಗಿ ಲೇಪಿಸುವುದು ಮತ್ತು ಮೂಗಿನ ಹೊಳ್ಳೆಗಳಿಗೆ ಹಾಕುವುದು. ( ಅಥವಾ ) ಈಶ್ವರೀಬೇರು, ಮಾವಿನ ವಾಟೆಯ ಸಿಪ್ಪೆ, ವೀಳೆದೆಲೆ ಮತ್ತು ಮೆಣಸನ್ನು ಸಮತೂಕ ಸೇರಿಸಿ ಚೆನ್ನಾಗಿ ಅರೆದು ನೀರಿನಲ್ಲಿ ಕದಡಿ ಕುಡಿಸುವುದು. ದೃಷ್ಟಿ ದೋಷ ಪರಿಹಾರ, ಇಷ್ಟ ಪ್ರಾಪ್ತಿಗಾಗಿ ಈಶ್ವರೀಬೇರಿನ ನಯವಾದ ಚೂರ್ಣ, ಸ್ವಲ್ಪ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ, ದೃಷ್ಟಿದೋಷ ಪರಿಹಾರವಾಗಿ ಇಷ್ಟ ಪ್ರಾಪ್ತಿಯಾಗುವುದೆಂದು ನಂಬಿಕೆಯಿದೆ. ಪ್ರಯತ್ನಸಿ, ಪರೀಕ್ಷಿಸಿ, ಪರಿಣಾಮಗಳನ್ನು ನೋಡುವುದು.