ಸದಸ್ಯ:Basava230513/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಂಕೋಲೆ ಸಂ : ವಿಷಘ್ನ ಹಿಂ : ಅಕೊಲ್ ಮ : ಅಂಕೋಲ್ ಗು : ಓಂಕಲ ತೆ : ಅಂಕೋಲರುಲ ತ : ಆಲಂಗೀ ವರ್ಣನೆ ಮುಳ್ಳುಗಳಿರುವ, ಚೂಪಾದ ಎಲೆಗಳಿರುವ, ನುಣುಪಾದ ಕಾಂಡವುಳ್ಳ 5-10 ಮೀಟರು ಎತ್ತರ ಬೆಳೆಯುವ ಮರ. ಮರದ ತಿರುಳು ಹಾಗೂ ರೆಂಬೆಗಳು ಮಾಸು ಬಿಳುಪಾಗಿರುವುವು. ಇದರ ತಿರುಳು ಒಗರು ಹಾಗೂ ವಾಂತಿಯನ್ನುಂಟು ಮಾಡುವುದು. ಮರದ ಒಳಭಾಗ ಕೆಂಪಾಗಿರುವುದು. ಬಲಿತ ಮರದ ಮೇಲಿನ ಕವಲುಗಳಲ್ಲಿ ಮುಳ್ಳುಗಳಿರುವುದಿಲ್ಲ. ಸಾಮಾನ್ಯವಾಗಿ ಗುಂಪು ಗುಂಪಾಗಿ ಬೆಳೆಯುವುದು. ಒಂದೊಂದು ಸಾರಿ ಒಂಟಿಯಾಗಿ ಸುಮಾರು ಗಾತ್ರದ ಮರವಾಗುವುದು. ಮಾರ್ಚಿ ತಿಂಗಳಿಂದ ಮೇ ತಿಂಗಳವರೆಗೂ ಹೂ, ಕಾಯಿ ಬಿಡುತ್ತದೆ. ಮಲಗುವ ಮಂಚಕ್ಕೆ ಈ ಮರದ ಕಾಲುಗಳನ್ನು ಹಾಕುವುದರಿಂದ ಮಾಯ ಮಂತ್ರ, ಭೂತ ಪ್ರೇತದ ಕೆಟ್ಟ ಪರಿಣಾಮವಾಗುವುದಿಲ್ಲವೆಂದು ಕೆಲವು ಗಿರಿಜನರು ನಂಬುತ್ತಾರೆ. ಸರಳ ಚಿಕಿತ್ಸೆಗಳು ಈ ಮರದ ಬೇರು ಮತ್ತು ಬೇರಿನ ತೊಗಟೆ ಚರ್ಮ ವ್ಯಾಧಿಗಳಲ್ಲಿ, ಕ್ರಿಮಿ ಜ್ವರ ಮತ್ತು ವಿಷ ಪರಿಹಾರದಲ್ಲಿ ಉಪಯೋಗಿಸುವರು. ಗಿರಿಜನರು ಈ ಮರದ ಬೇರನ್ನು ಅಫೀಮಿನ ವಿಷ ಪರಿಹಾರಕ್ಕಾಗಿ ಬಳಸುವರು.

ಕೈ ಮಸುಕಿನಲ್ಲಿ ಮೂರು ಗ್ರಾಂ ಅಂಕೋಲೆ ಮರದ ಬಲಿತ ಬೇರಿನ ಸಿಪ್ಪೆಯನ್ನು ಮೂರು ಟೀ ಚಮಚ ನಿಂಬೆ ಹಣ್ಣಿನ ರಸದಲ್ಲಿ ತೇದು ಬೆಳಿಗ್ಗೆ ಒಂದೇ ಸಾರಿ ಕುಡಿಸುವುದು. ಇದರಿಂದ ಕೈಮುಸುಕಿನ ಕೆಟ್ಟ ಪರಿಣಾಮ ಪರಿಹಾರವಾಗುವುದು. ಅಂಕೋಲ ಮರದ ಬಲಿತ ಬೇರನ್ನು ನೀರಿನಲ್ಲಿ ತೇದು ಕಾಲು ಟೀ ಚಮಚ ಗಂಧವನ್ನು ಹಾಲಿನಲ್ಲಿ ಕದಡಿ ಕುಡಿಸುವುದು.

ಅಫೀಮಿನ ವಿಷದಲ್ಲಿ 

ಬಲಿತ ಅಂಕೋಲೆ ಮರದ ಸೇಗಿರುವ ಕೊರಡನ್ನು ನೀರಿನಲ್ಲಿ ತೇದು, 2 1/2 ಗ್ರಾಂ ನಷ್ಟು ಗಂಧವನ್ನು ನೀರಿನಲ್ಲಿ ಕದಡಿ ಕುಡಿಸುವುದು. ಅಫೀಮಿನ ವಿಷದ ಅಮಲನ್ನು ಇಳಿಸಿ ಸ್ವಸ್ಥಗೊಳಿಸಿವುದು. ಮಕ್ಕಳ ಒಣಕೆಮ್ಮು ಮತ್ತು ಕ್ಷಯ ಬಲಿತ ಅಂಕೋಲೆ ಮರದ ಕೊರಡನ್ನು ನೀರಿನಲ್ಲಿ ತೇದು ತಾಯಿಗೆ ( ಮಗುವಿಗೆ ಒಂದು ತೊಟ್ಟು ) ಹೊತ್ತಿಗೆ ಕಾಲು ಟೀ ಚಮಚದಷ್ಟು ಕುಡಿಸುವುದು. ಗೂರಲಿಗೆ 20 ಗ್ರಾಂ ಕಾಳು ಮೆಣಸಿನ ಚೂರ್ಣ, 40 ಗ್ರಾಂ ಮೋಡಿ ಬೇರಿನ ಚೂರ್ಣ ಮತ್ತು 20 ಗ್ರಾಂ ಅಂಕೋಲೆ ಮರದ ಫಲದ ಚೂರ್ಣ, ಇವೆಲ್ಲವನ್ನು ಕಲ್ಪತ್ತಿನಲ್ಲಿ ಹಾಕಿ ನಯವಾಗಿ ಚೂರ್ಣ ಮಾಡಿಕೊಳ್ಳುವುದು. ವೇಳೆಗೆ 1 ಗ್ರಾಂನಷ್ಟು ಚೂರ್ಣವನ್ನು ಜೇನುತುಪ್ಪದಲ್ಲಿ ಕೊಡುವುದು. ಹೀಗೆ ಪ್ರತಿನಿತ್ಯ ಎರಡು ಸಾರಿ ಕೊಡುವುದು. ಸರ್ಪದ ಕಚ್ಚಿದಲ್ಲಿ ಅಂಕೋಲೆ ಗಿಡದ ಬಲಿತ ಬೇರನ್ನು ನಿಂಬೆಹುಳ್ಳಿಯಲ್ಲಿ ತೇದು ಗಂಧವನ್ನು ನೆಕ್ಕಿಸುವುದು ಮತ್ತು ಸರ್ಪ ಕಚ್ಚಿರುವ ಜಾಗದಲ್ಲಿ ಸಹ ಲೇಪಿಸುವುದು. ಚೇಳಿನ ವಿಷದಲ್ಲಿ ಬಲಿತ ಅಂಕೋಲೆ ಬೇರನ್ನು ನೀರಿನಲ್ಲಿ ತೇದು ಚೇಳು ಕುಟುಕಿರುವ ಸ್ಥಳದಲ್ಲಿ ಲೇಪಿಸುವುದು.