ಸದಸ್ಯ:Baby Reshma/sandbox
ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯ
ಸರ್.ಎಂ.ವಿ ಎಂದು ಜನಪ್ರಿಯರಾಗಿದ್ದ ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯ ರವರು ಭಾರತದ ಗಣ್ಯ ಅಭಿಯಂತರರಲ್ಲಿ ಒಬ್ಬರು. ಇವರು ಮೈಸೂರು ಸಂಸ್ಥಾನದ ದಿವಾನರಾಗಿದ್ದರು. ಇವರು ಸಪ್ಟೆಂಬರ್ ೧೫, ೧೮೬೦ ಮುದ್ದೇನ ಹಳ್ಳಿ ಚಿಕ್ಕಬಳ್ಳಾಪುರದಲ್ಲಿ ಜನಿಸಿದರು. ವಿಶ್ವೇಶ್ವರಯ್ಯರವರ ತಂದೆ ಶ್ರೀನಿವಾಸ ಶಾಸ್ತ್ರಿ ಮತ್ತು ತಾಯಿ ವೆಂಕಟಲಕ್ಷಮ್ಮ. ತಂದೆ ಸಂಸ್ಕೃತ ವಿದ್ವಾಂಸರು.
೧೮೮೧ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪೂಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದರು. ೧೯೫೫ರಲ್ಲಿ ಭಾರತ ಸರ್ಕಾರದ ಅತ್ಯುಚ್ಛ ಗೌರವವಾದ "ಭಾರತ ರತ್ನ" ಲಭಿಸಿತು. ಸರ್.ಎಂ. ವಿಶ್ವೇಶ್ವರಯ್ಯನವರು ಭಾರತ ರತ್ನ ಪ್ರಶಸ್ತಿಪಡೆದ ಮೊದಲ ಕನ್ನಡಿಗರು.
ಇಂಜಿನಿಯರ್ ಕ್ಶೇತ್ರದಲ್ಲಿ ಇವರು ಸಲ್ಲಿಸಿರುವ ಅಪಾರ ಸೇವೆಯ ಸ್ಮರಣೆಗಾಗಿ ಇವರ ಜನ್ಮ ದಿನವನ್ನು ಭಾರತದಲ್ಲಿ ಪ್ರತೀ ವರ್ಷ ಇಂಜಿನಿಯರ್ಸ್ ದಿನವಾಗಿ ಆಚರಿಸಲಾಗುತ್ತದೆ.
ಎಪ್ರಿಲ್ ೧೪, ೧೯೬೨ ರಲ್ಲಿ ಇವರು ಮರಣ ಹೊಂದಿದರು. ಇವರು ತೀರಿದಾಗ ವಯಸ್ಸು ೧೦೧.