ಸದಸ್ಯ:Babu1940451/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೆವನಹಲ್ಲಿ ಕೊಟೆ

ಚಿಕ್ಕಬಳ್ಳಾಪುರ[ಬದಲಾಯಿಸಿ]

ಚಿಕ್ಕಬಳ್ಳಾಪುರ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು. ಮುಂಚೆ ಕೋಲಾರ ಜಿಲ್ಲೆಯಲ್ಲಿನ ಒಂದು ತಾಲೂಕು ಆಗಿದ್ದ ಇದು ೨೦೦೮ ರಲ್ಲಿ ಜಿಲ್ಲಾ ಅಡಳಿತ ಕೇಂದ್ರವಾಯಿತು. ಈ ಜಿಲ್ಲೆಗೆ ಸರ್. ಎಮ್. ವಿಶ್ವೇಶ್ವರಯ್ಯ ಜಿಲ್ಲೆ ಎಂದು ನಾಮಕರಣ ಮಾಡುವ ಅಪೇಕ್ಷೆ ಜನರಲ್ಲಿದೆ. ಇಲ್ಲಿಗೆ ಹತ್ತಿರ ಇರುವ ನಂದಿ ದೇವಸ್ಥಾನ ಬಹಳ ಪ್ರಾಚೀನ ದೇವಸ್ಥಾನ. ಇಲ್ಲಿ ಶಿವನ ಲಿಂಗಗಳೆರಡು ಇವೆ. ಗಂಗ, ಕದಂಬರಿಗಿಂತ ಹಳೆಯ ಶಿಲಾಶಾಸನಗಳನ್ನು ಇಲ್ಲಿ ನಾವು ಕಾಣಬಹುದು. ಅಂಗ್ಲರಲ್ಲಿನ ಪ್ರಮುಖರಾದ ಲಾರ್ಡ ಕಾರ್ನ್ವಾಲಿಸ್ ಸಹ ಇಲ್ಲಿ ಕೆಲವು ದಿನ ಇದ್ದ ಎನ್ನುವ ಶಾಸನಗಳನ್ನು ಕಾಣಬಹುದು. ಇಲ್ಲಿಗೆ ಸಮೀಪ (೨೫ ಕಿ.ಮಿ.) ಇರುವ ಮಾಕಿರೆಡ್ಡಿಪಲ್ಲಿಯಲ್ಲಿ ಮುತರಾಯಸ್ವಾಮಿ ದೇವಸ್ಥಾನವು ಸಹ ಬಹಳ ಪ್ರಾಚೀನವಾದ ದೇವಸ್ಥಾನ. ಇಲ್ಲಿ ಶ್ರೀರಾಮ ನವಮಿಯ ದಿನ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ನಂದಿ ಬೆಟ್ಟ ಇಲ್ಲಿಯ ಪ್ರಮುಖ ಗಿರಿಧಾಮ.ಆವಲಬೆಟ್ಟ ಪ್ರಸಿದ್ಧ ಸ್ಥಳ. ಚಿಕ್ಕಬಳ್ಳಾಪುರ ಮೆಣಸಿನಕಾಯಿ ತುಂಬ ಪ್ರಸಿದ್ಧಿ. ಇಲ್ಲಿನ ರೈತ ಸಮುದಾಯ ಬಹಳ ಪ್ರಗತಿ ಪರ ರೈತರನ್ನು ಹೊಂದಿದೆ.
ನಂದಿ ಬೆಟ್ಟ

ಚಿಕ್ಕಬಳ್ಳಾಪುರ ಪಟ್ಟಣದ ಸುತ್ತಮುತ್ತಲೂ ಹಲವಾರು ಪ್ರಾಕೃತಿಕ, ಐತಿಹಾಸಿಕ ಮತ್ತು ಮಾನವ ನಿರ್ಮಿತ ಅನೇಕ ಪ್ರೇಕ್ಷಣೀಯ ಸ್ಥಳಗಳು ಇವೆ. ಚಿಕ್ಕಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಬರುವ ಪ್ರಸಿದ್ಧ ನಂದಿ ಬೆಟ್ಟದಲ್ಲಿರುವ ಭೋಗ ನಂದೀಶ್ವರ ದೇವಸ್ಥಾನಕ್ಕೆ ಹಲವಾರು ಭಕ್ತರು ಮತ್ತು ಪ್ರವಾಸಿಗರು ಬರುತ್ತಾರೆ. ಅಲ್ಲದೇ ಇಲ್ಲಿರುವ ಯೋಗ ನಂದೀಶ್ವರ ದೇವಸ್ಥಾನಕ್ಕೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

ಚಿಕ್ಕಬಳ್ಳಾಪುರ ಪಟ್ಟಣದಿಂದ 12 ಕಿ.ಮೀ. ದೂರದಲ್ಲಿರುವ ವಿವೇಕಾನಂದ ಜಲಪಾತ ಮಳೆಗಾಲದಲ್ಲಿ ಮೈದುಂಬಿಕೊಂಡು ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಜಯನಗರ ಕಾಲದ ವಾಸ್ತುಶೈಲಿಯಲ್ಲಿ ನಿರ್ಮಾಣಗೊಮಡ ರಂಗಸ್ಥಳದಲ್ಲಿರುವ ಭಗವಾನ್ ವಿಷ್ಣು ದೇವಸ್ಥಾನವಿದೆ. ಕಪ್ಪು ಕಲ್ಲಿನಲ್ಲಿ ವಿಶೇಷ ಚಿತ್ರಗಳೊಂದಿಗೆ ಕೆತ್ತಲ್ಪಟ್ಟ ಈ ದೇವಸ್ಥಾನವು ವಿಶೇಷವಾಗಿದೆ.

ನಂದಿ ಬೆಟ್ಟ ಅಥವಾ ನಂದಿ ದುರ್ಗ ಒಂದು ಪುರಾತನ ಕಾಲದ ಕೋಟೆ, ಇದು ಭಾರತದ ದಕ್ಷಿಣಭಾಗದಲ್ಲಿರುವ ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇರುವ ಗಿರಿಧಾಮ. ಚಿಕ್ಕಬಳ್ಳಾಪುರ ಪಟ್ಟಣದಿಂದ ೧೦ ಕಿ.ಮಿ ದೂರದಲ್ಲಿ ಹಾಗು ಬೆಂಗಳೂರು ನಗರದಿಂದ ಸುಮಾರು ೪೫ ಕಿ.ಮಿ ದೂರದಲ್ಲಿದೆ. ಈ ಬೆಟ್ಟವು ಮೂರು ಪಟ್ಟಣಗಳ ಮಧ್ಯೆ ನೆಲೆಸಿದೆ.


  • ಭೋಗ ನಂದೀಶ್ವರ ದೇವಸ್ಥಾನ
    ನಂದಿ ಬೆಟ್ಟದ ಹೆಸರಿನ ಮೂಲದ ಬಗ್ಗೆ ಹಲವಾರು ಕಥೆಗಳಿವೆ. ಚೋಳರ ಕಾಲದಲ್ಲಿ, ನಂದಿ ಬೆಟ್ಟವನ್ನು ಆನಂದ ಗಿರಿ ಎಂದು ಕರೆಯಲಾಗುತ್ತಿತ್ತು, ಅದರ ಅರ್ಥ ಸಂತೋಷದಿಂದ ಕೂಡಿದ ಬೆಟ್ಟ ಎಂದಾಗಿತ್ತು. ಮತ್ತೊಂದು ಶಾಸನದ ಪ್ರಕಾರ ಪುರಾತನ ಕಾಲದ ಸುಮಾರು ೧೦೦೦ ವರ್ಷಗಳ ಹಿಂದಿನ ನಂದಿ ದೇವಾಲಯ ಬೆಟ್ಟದ ಮೇಲೆ ಇರುವುದರಿಂದ ಬೆಟ್ಟಕ್ಕೆ ನಂದಿ ಬೆಟ್ಟ ಎಂಬ ಹೆಸರು ಬಂದಿದೆ. ಪುರಾತನ ಕಾಲದ ಶಿವ ಮತ್ತು ಪಾರ್ವತಿಯರ ದೇವಾಲಯ ಈ ಬೆಟ್ಟವನ್ನು ಮತ್ತಷ್ಟು ಸುಂದರಗೊಳಿಸಿದೆ.
  • ಯೋಗ ನಂದೀಶ್ವರನೆಂಬ ತಪಸ್ಸಿಯು ತಪಸ್ಸು ಮಾಡಿದ ನಂತರ ಬೆಟ್ಟಕ್ಕೆ ಈ ಹೆಸರು ಬಂತೆಂದು ಇನ್ನೊಂದು ಕಥೆ ಹೇಳುತ್ತದೆ. ಆಡಳಿತಗಾರನಾಗಿದ್ದ ಟಿಪ್ಪು ಸುಲ್ತಾನನು ಕೋಟೆ ಕಟ್ಟಿರುವುದರಿಂದ, ನಂದಿಯು ನಂದಿದುರ್ಗ(ಕೋಟೆ) ಎಂಬ ಹೆಸರಿನಿಂದ ಕರೆಯಲ್ಪಟ್ಟಿತ್ತು. ಈ ಬೆಟ್ಟವು ನಿದ್ರಿಸುತ್ತಿರುವ ವೃಷಭ(ನಂದಿ) ದಂತೆ ಕಾಣುವುದರಿಂದ ಬಹುಶಃ ಈ ಬೆಟ್ಟಕ್ಕೆ ನಂದಿ ಬೆಟ್ಟ ಎಂಬ ಹೆಸರು ಬಂದಿರಬಹುದು.




thumb| ಸರ್.ಎಂ.ವಿಶ್ವೇಶ್ವರಯ್ಯ|261x261px


ಚಿತ್ರಾವತಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನ, ಎಲ್ಲೋಡೆ ಶ್ರೀ ಲಕ್ಷ್ಮೀ ಆದಿನಾರಾಯಣ ದೇವಸ್ಥಾನ ಮತ್ತು ಕಂದಾವರ ಕೆರೆ ಇಲ್ಲಿರುವ ಇನ್ನಿತರ ಸುಂದರ ತಾಣಗಳು.ಆವಲಬೆಟ್ಟ ಗಿರಿಧಾಮ.

ಇಲ್ಲಿರುವ ಬೆಟ್ಟಗಳಲ್ಲಿ ಸಾಹಸಿಗಳು ರಾಕ್ ಕ್ಲೈಂಬಿಂಗ್ ಮೌಂಟೇನಯರಿಂಗ್ ಮುಂತಾದ ಸಾಹಸಕ್ರೀಡೆಗಳಲ್ಲಿ ತೊಡಗಿಕೊಳ್ಳಬಹುದು. ಕರ್ನಾಟಕದ ರಾಜಧಾನಿ ಬೆಂಗಳೂರು ಚಿಕ್ಕಬಳ್ಳಾಪುರಕ್ಕೆ ಹತ್ತಿರದಲ್ಲಿರುವುದರಿಂದ ರೈಲು ಮತ್ತು ರಸ್ತೆ ಮೂಲಕ ಬರುವ ಪ್ರವಾಸಿಗರಿಗೆ ತುಂಬಾ ಅನುಕೂಲಕರವಾಗಿದೆ


ವಿಶ್ವೇಶ್ವರಯ್ಯನವರು ಜನಿಸಿದ್ದು ಸೆಪ್ಟೆಂಬರ್ 15,1860 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬಲ್ಲಿ ಬ್ರಾಹ್ಮಣ ಕುಟುಂಬದಲ್ಲಿ. ವಿಶ್ವೇಶ್ವರಯ್ಯನವರ ತಂದೆ 'ಶ್ರೀನಿವಾಸ ಶಾಸ್ತ್ರಿ', ತಾಯಿ 'ವೆಂಕಟಲಕ್ಷ್ಮಮ್ಮ'. ಅವರ ಪೂರ್ವಜರು ಈಗಿನ ಆಂದ್ರಪ್ರದೇಶದ 'ಮೋಕ್ಷಗುಂಡಂ' ಎಂಬ ಸ್ಥಳದಿಂದ ವಲಸೆ ಬಂದು ಮುದ್ದೇನಹಳ್ಳಿಯಲ್ಲಿ ವಾಸವಾಗಿದ್ದ ಕಾರಣ ಅವರ ಹೆಸರಿನೊಡನೆ ಮೋಕ್ಷಗುಂಡಂ ಸೇರಿಕೊಂಡಿದೆ. ವಿಶ್ವೇಶ್ವರಯ್ಯ ನವರ ತಂದೆ ಸಂಸ್ಕೃತ ವಿದ್ವಾಂಸರು; ಧರ್ಮ ಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರೂ ಆಗಿದ್ದರು. ಅವರು ೧೫ ವರ್ಷದವರಿರುವಾಗಲೆ ತಂದೆಯು ನಿಧನರಾದರು. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. ೧೮೮೧ ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.

ಮಡಿವಾಳ ಕೆರೆ
           ನನ್ನ ಹೆಸರು ಬಾಬು.ಆರ್ .ನನ್ನ ಜನನ 31 10 2001 . ನಾನು ಹುಟ್ಟಿ ಬೆಳೆದಿದ್ದು "ಮಡಿವಾಳ, ಬೆಂಗಳೂರು". ನನ್ನ ಮೂಲತಹ "ಹಿರೇನಹಳ್ಳಿ ಗ್ರಾಮ, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ". ನನ್ನ ಪ್ರಾರ್ಥಮಿಕ ಶಿಕ್ಷಣವನ್ನು "ರೆಡ್ಡಿ ಜನ ಸಂಘ ಶಾಲೆಯಲ್ಲಿ" ಮಾಡಿದ್ದೇನೆ. ನನ್ನ ಪ್ರೌಢಶಿಕ್ಷಣವನ್ನು "ದಿ ಪ್ಯಾರಡೈಸ್ ರೆಸಿಡೆನ್ಸಿಯಲ್ ಶಾಲೆ"ಯಲ್ಲಿ ಮುಗಿಸಿದ್ದೇನೆ. ನನ್ನ ಪದವಿಪೂರ್ವ ಶಿಕ್ಷಣವನ್ನು" ನ್ಯಾಷನಲ್ ಪಿಯು ಕಾಲೇಜ್ "ಬಸವನಗುಡಿ ಮುಗಿಸಿದ್ದೇನೆ. ನಾನು ಅಂಡ್ ಬಾಲ್,  ಡಾ ಜ್ಬಾಲ್ ಹಾಗೂ ಕೊಕ್ಕೋ ಆಡುತ್ತೇನೆ.  ನಾನು ಕ್ರೀಡೆಯಲ್ಲಿ "ನಮ್ಮ ರಾಜ್ಯವನ್ನು ಮತ್ತು ನಮ್ಮ ದೇಶವನ್ನು ಪ್ರತಿನಿಧಿಸಿದ "ನಾನು ಮೊದಲ ಬಾರಿ ನನ್ನ ರಾಜ್ಯವನ್ನು ಪ್ರತಿನಿಧಿಸಿದ್ದು 2.1 2016 ತೆನಾಲಿ ಆಂಧ್ರದಲ್ಲಿ ಆಡಿದ್ದೇನೆ. ನಾನು ಒಟ್ಟು 4 ಬಾರಿ ರಾಜ್ಯವನ್ನು ಪ್ರತಿನಿಧಿಸಿದ್ದು ಮತ್ತು ಒಂದು ಬಾರಿ ನಮ್ಮ ದೇಶವನ್ನು 26 1 2018 ರಲ್ಲಿ ಪೋಕ್ರ ನೇಪಾಲದಲ್ಲಿ ಪ್ರತಿನಿಧಿಸಿದ್ದೆ ಅದರಲ್ಲಿ ನಾನು ಮೊದಲ ಸ್ಥಾನವನ್ನು ಗಳಿಸಿದೆ. ಅದನ್ನು ಕಂಡ ನಮ್ಮ ದೇಶದ ಮತ್ತು ರಾಜ್ಯದ ಪತ್ರಿಕೆಗಳು ನನ್ನನ್ನು ಅವರ ಪತ್ರಿಕೆಗಳಲ್ಲಿ ಗೌರವಿಸಿದರು. ಬರೀ ಪತ್ರಿಕೆಗಳಲ್ಲದೆ ನಮ್ಮ ನಾಯಕರು ಸಹ ಪ್ರೋತ್ಸಾಹಿಸಿದರು.


                 ನನಗೆ ನಾಯಕನಾಗಬೇಕೆಂಬ ಆಸೆ ಆದ್ದರಿಂದಲೇ ನನ್ನ ಶಾಲೆಯಲ್ಲಿ  "ಕಲ್ಚರಲ್ ಸೆಕ್ರೆಟರಿ"  ಆಗಲೂ ಸ್ನೇಹಿತರು ಹಾಗೂ ಶಿಕ್ಷಕರು ನಿಲ್ಲಿಸಿ ಎಲೆಕ್ಷನ್ ಅಲ್ಲಿ ಗೆಲ್ಲಿಸಿದರು. ಕಾಲೇಜಿನಲ್ಲಿ ನನ್ನ ಕ್ರೀಡೆಯ ಬೆಳವಣಿಗೆಯನ್ನು ಕಂಡ ಶಿಕ್ಷಕರು ನನ್ನನ್ನು "ಸ್ಪೋರ್ಟ್ ಸೆಕ್ರೆಟರಿ" ಆಗಿ ಪ್ರೋತ್ಸಾಹಿಸಿದರು.   ನಾನು ಹತ್ತನೇ ತರಗತಿಯಲ್ಲಿ 87 ಪರ್ಸೆಂಟೇಜ್ ಮತ್ತು ಪಿಯು ಅಲ್ಲಿ 75 ಪರ್ಸೆಂಟೇಜ್ ಗಳಿಸಿ ಪಾಸಾಗಿದೆ. ಈಗ ನನ್ನ ಶಿಕ್ಷಣವನ್ನು "ಕ್ರೈಸ್ಟ್ ಯೂನಿವರ್ಸಿಟಿ" ಕಾಲೇಜಿನಲ್ಲಿ "ಬಿಎಸ್ಸಿ ಪಿಸಿಎಂ"ಏನು ಮಾಡುತ್ತಿದ್ದೇನೆ. ನನಗೆ ಒಟ್ಟು 5 ಭಾಷೆಗಳು ಬರುತ್ತದೆ ಕನ್ನಡ,  ತೆಲುಗು, ತಮಿಳು,  ಹಿಂದಿ ಮತ್ತು ಇಂಗ್ಲೀಷ್. ಇದನ್ನೆಲ್ಲ ಸಾಧಿಸಲು ಕಾರಣ ನನ್ನ ತಂದೆ ತಾಯಿ. ನನ್ನ ತಂದೆ "ಹೆಚ್ ವಿ ರವೀಂದ್ರ "ಹಾಗೂ ನನ್ನ ತಾಯಿ "ಆರ್ ರತ್ನಮ್ಮ". ನನಗೆ ಇಬ್ಬರು ಅಕ್ಕಂದಿರು ಮೊದಲ ಅಕ್ಕ " ಬೆಂಗಳೂರು ಗೋರ್ಮೆಂಟ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ" ಮತ್ತು ಎರಡನೆಯ ಅಕ್ಕ "ಬಿಎಂಎಸ್ ಲಾ ಕಾಲೇಜಲ್ಲಿ ವಿದ್ಯಾರ್ಥಿನಿ". ನಾನು ನಮ್ಮ ದೇಶದ ಮೂಲೆ ಮೂಲೆಯಲ್ಲಿ ಕೂಡ ಓಡಾಡಿದ್ದೇನೆ "ಕರ್ನಾಟಕ,  ತಮಿಳುನಾಡು,  ಕೇರಳ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಡೆಲ್ಲಿ,  ರಾಜಸ್ಥಾನ್,  ಛತ್ತಿಸ್ಗರ್" ಆದ್ದರಿಂದಲೇ ನಮ್ಮ ದೇಶದ ಪ್ರತಿಯೊಂದು ಹವ್ಯಾಸಗಳು ನನಗೆ ಗೊತ್ತು. 
                 
               ನನಗೆ ಮುಂದೆ "ಐಎಎಸ್" ಮಾಡಬೇಕೆಂಬ ಆಸೆ ಆದ್ದರಿಂದಲೇ ನಾನು ಅದಕ್ಕಾಗಿ ಈಗಿನಿಂದಲೇ ಓದಲು ಪ್ರಾರಂಭಿಸಿದ್ದೇನೆ ಇದನ್ನು ಕಂಡ ನಮ್ಮ ಪೋಷಕರು ಕೂಡ ಓದಲು ಪ್ರೋತ್ಸಾಹಿಸುತ್ತಿದ್ದಾರೆ. ನನಗೆ ಸುಮ್ಮನೆ ಇರಲು ಇಷ್ಟವಿಲ್ಲ ಆದ್ದರಿಂದಲೇ ನನ್ನನ್ನು ಯಾವುದಾದರೂ ಒಂದು ವಿಭಾಗದಲ್ಲಿ ನನ್ನ ಸಾಧನೆಗಳು ಅಥವಾ ನನ್ನ ನೂರುಪಟ್ಟು ನನ್ನನ್ನು ನಾನು ಒಡಗಿ ಕೆಲಸವನ್ನು ಮಾಡಲು ಇಷ್ಟಪಡುತ್ತೇನೆ. ನನ್ನ ಹವ್ಯಾಸಗಳು "ಗಾಡಿ ಓಡಿಸುವುದು, ಆಟವಾಡುವುದು, ಬುಕ್ ಓದುವುದು,  ಟಿವಿ ನೋಡುವುದು, ಮತ್ತು ಹಾಡುಗಳನ್ನು ಕೇಳುವುದು ".ನಾನು  ನನ್ನನ್ನು ಈಗ ನಾಟಕರಂಗ ಕಡೆ ತೊಡಗಿಸಲು ಪ್ರಯತ್ನಿಸುತ್ತಿದ್ದೇನೆ. ಇದು ನನ್ನ ಬಗ್ಗೆ ಕಿರು-ಪರಿಚಯ.

ಇಂತಿ ನಿಮ್ಮ ಪ್ರೀತಿಯ/-

     ಬಾಬು.ಆರ್

ReplyForward