ಸದಸ್ಯ:BHUVANESHWARI 2240747

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ





















































































































ಇಂದಿನ ಶುಭಾಶಯಗಳು!!

ನನ್ನ ಹೆಸರು ಭುವನೇಶ್ವರಿ. ನನಗೆ ಈ ಹೆಸರು ಇಟ್ಟಿದ್ದು ನನ್ನ ಅಪ್ಪ. ಆ ಕಥೆ ಸ್ವಲ್ಪ ರೋಚಕವೇ ಸರಿ. ನಾನು ನನ್ನ ಅಮ್ಮನ ಒಳಗೆ ಇದ್ದಾಗಲೇ ನಮ್ಮ ಅಪ್ಪ ದೇವರಿಗೆ ಹರಕೆ ಹೊತ್ತು ಅವರ ಕಾರಿನ ಮೇಲೆ ಭುವನೇಶ್ವರಿ ಎಂದು ಹಾಕಿಸಿದರು ಏಕೆಂದರೆ ನಾನು ಅವರ ಕನಸಿನ ಮಗಳು. ನಾನು ಬೆಂಗಳೂರಿನಲ್ಲಿ ೧೯ ನೇ ಜನವರಿ ೨೦೦೪ರಲ್ಲಿ ಜನಿಸಿದೆ. ನಾನು ನಮ್ಮ ಮನೆಯ ಹಿರಿ ಮಗಳಾಗಿದ್ದು ನನಗೆ ಒಬ್ಬಳು ಪುಟ್ಟ ತಂಗಿ ಇದ್ದಾಳೆ. ಅವಳ ಹೆಸರು ಹರ್ಷಿತಾ, ಆದರೆ ಅವಳ ಹೆಸರಿಗೆ ವಿರುದ್ಧವಾಗಿ ಇರುತ್ತಾಳೆ. ನಾನು ಇಲ್ಲಿ ಒಂದು ಹಾಸ್ಯಾಸ್ಪದ ಸಂಗತಿಯನ್ನು ಹೇಳಬಯಸುತ್ತೇನೆ. ನನ್ನ ಪೋಷಕರು ನಾನು ಒಬ್ಬಳೇ ಮಗಳು ಸಾಕೆಂದು ನಿರ್ಧರಿಸಿದ್ದರು. ಆಗ ನನ್ನನ್ನು ಅಕ್ಕ ಎಂದು ಕರಿಯುವವರು ಯಾರು ಇಲ್ಲವೆಂದು ಹಠ ಮಾಡಿ ಬೀದಿಯಲ್ಲಿ ಸಿಕ್ಕ ಸಿಕ್ಕ ಮಕ್ಕಳನ್ನೆಲ್ಲ ಮನೆಗೆ ನನ್ನ ತಂಗಿ ಅಂತ ಕರೆದುಕೊಂಡು ಹೋಗುವ ಎಂದು ಅಳುತಿದ್ದೆ. ಹಾಗಾಗಿ ನನಗೋಸ್ಕರ ನನ್ನ ತಂಗಿ ಬಂದಳು. ನನಗೆ ಗೊತ್ತು ಇದು ಬಹಳ ನಾಟಕೀಯವಾಗಿ ಇದೆ ಆದರೆ ಇದು ಸತ್ಯ.  ಇನ್ನು ನನ್ನ ತಂದೆ ತಾಯಿಯ ಹೆಸರು ಮಂಜುನಾಥ್ ಹಾಗೂ ಮಂಜುಳ. ನನ್ನ ಅಪ್ಪ ರೆಡ್ಡಿ ಮತ್ತು ಅಮ್ಮ ಗೌಡ ಆಗಿದ್ದು ನಮ್ಮ ಮಾತೃ ಭಾಷೆ ಕನ್ನಡ ಹಾಗೂ ನಾನು ಬೆಂಗಳೂರಿನ ಹುಡುಗಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.

ನಾನು ವಿಧ್ಯಾರ್ಥಿ ಜೀವನಕ್ಕೆ ಕಾಲಿಟ್ಟ ಸಮಯ ಅದು. ನನಗೆ ಶಾಲೆಗೆ ಹೋಗುವುದೆಂದರೆ ತುಂಬಾನೇ ಇಷ್ಟ ಇತ್ತು. ಅತ್ತ  ಎಲ್ಲಾ ಮಕ್ಕಳು ಶಾಲೆಗೆ ಹೋಗಲು ಅಳುತಿದ್ದರೆ, ಇತ್ತ ಶಾಲೆಗೆ ಹೋಗಲು ನನ್ನಂಥ ಖುಷಿಯಾಗಿ ಇದ್ದವಳು ಯಾರೂ ಇರಲಿಲ್ಲ ಅನ್ಸುತ್ತೆ. ಅಲ್ಲಿ ಇದ್ದ ಎಲ್ಲರಿಗೂ ಸ್ವತಃ ನನ್ನ ಪೋಷಕರಿಗೂ ಆಶರ್ಯವಾಗಿತ್ತು. ಅಂದು ನಾನು ಆದರ್ಶ ಮಗಳಾಗಿದ್ದೆ. ನಾನು ನನ್ನ  ಎಲ್. ಕೆ. ಜಿಯಿಂದ ಹತ್ತನೇ ತರಗತಿಯ ವರೆಗೆ ಮೇರಿ ಇಮ್ಮಾಕ್ಯೂಲೇಟ್ ಶಾಲೆಯಲ್ಲಿ ೧೨ ವರ್ಷಗಳು ಓದಿದೆ. ನಾನು ಓದಿನಲ್ಲಿ ಮುಂದಿದ್ದ ಕಾರಣ ಎಲ್ಲರೂ ನನನ್ನು ಮುದ್ದು ಮಾಡುತಿದ್ದರು. ನಾನು ಎಲ್ಲರ ಅಚ್ಚುಮೆಚ್ಚಾಗಿದ್ದೆ. ಅಲ್ಲಿ ನಾನು ನನ್ನ ಪ್ರೀತಿಯ ಗೆಳತಿಯರನ್ನು ಸಂಪಾದಿಸಿಕೊಂಡೆ. ಇದು ನನಗೆ ಹೆಮ್ಮೆಯ ವಿಷಯವಾಗಿದೆ. ನಾನು ಒಂಬತ್ತನೇ ತರಗತಿಯಲ್ಲಿ ಓದುತ್ತಿರುವಾಗ ಒಂದು ಮರೆಯಲಾಗದ ಘಟನೆ ಜರಗಿತು. ನಮ್ಮ ಮನೆಗೆ ಮೂರು  ಬೆಕ್ಕಿನ ಮರಿಗಳು ಬಂದು ಸೇರಿದವು. ಅವುಗಳೆಂದರೆ ನನಗೆ ತುಂಬಾ ಇಷ್ಟ. ಆದ್ದರಿಂದ ನಾನು ನನ್ನ ಹೆಚ್ಚಿನ ಸಮಯವನ್ನು ಅವುಗಳ ಜೊತೆ ಕಳೆಯುತ್ತಿದ್ದೆ. ಇದರ ಪರಿಣಾಮವಾಗಿ ನನಗೆ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂತು. ಆಗ ಕೋಪಗೊಂಡ ನನ್ನ ಪೋಷಕರು ಇದಕ್ಕೆಲ್ಲ ಆ ಬೇಕ್ಕುಗಳೆ ಕಾರಣವೆಂದು ಬೈದರು. ಇದರಿಂದ ಬೇಸರಗೊಂಡ ನಾನು ನನ್ನ ಮುದ್ದು ಮರಿಗಳಿಗೆ ಊಟ ಹಾಕಲಿಲ್ಲ ಹಾಗೂ ಹತ್ತಿರವೂ ಹೋಗಲಿಲ್ಲ. ಅಪ್ಪ ಅಮ್ಮ ಊಟ ಹಾಕಿದರೂ ಸಹ ೨ ದಿನದ ವರೆಗೂ ಅವುಗಳು ಊಟ ಮುಟ್ಟಲೇ ಇಲ್ಲ. ಇದರಿಂದ ಆಶ್ಚರ್ಯಗೊಂಡ ಎಲ್ಲರೂ ನನಗೆ ಅವುಗಳ ಬಳಿ ಹೋಗಿ ಮುದ್ದು ಮಾಡಲು ಹೇಳಿದರು. ಹಾಗೆಯೇ ನಾನು ಪ್ರತಿದಿನ ಸ್ವಲ್ಪ ಸಮಯ ಅವುಗಳ ಜೊತೆ ಕಳೆಯಲು ಹೇಳಿದರು. ಹೀಗೆಂದ ಮರುಕ್ಷಣವೇ ಹೋಗಿ ನನ್ನ ಬೆಕ್ಕಿನ ಮರಿಗಳು ಊಟ ಮಾಡಿದೆವು. ನಾನು ೧೦ನೆ ತರಗತಿಯಲ್ಲಿ ಬಹಳ ಚೆನ್ನಾಗಿ ಓದಿದ್ದೆ. ನನ್ನದು  ಐ.ಸಿ.ಎಸ್.ಇ. ಪಠ್ಯಕ್ರಮ ಆಗಿದ್ದರಿಂದ ನಾನು ೭ ವಿಷಯಗಳ ಪರೀಕ್ಷೆ ಬರೆದಿದ್ದೆ ಅಷ್ಟರಲ್ಲಿ  ಕೊರೋನ ಮಹಾಮಾರಿ ಶುರು ಆಗಿ ಲಾಕ್ ಡೌನ್ ಘೋಷಣೆ ಆಯ್ತು. ಆಗ ನಮ್ಮ ಬೇಕ್ಕುಗಳಿದ್ದುದ್ದರಿಂದ ನಮಗೆ ಸಮಯ ಕಳೆಯಲು ತುಂಬಾ ಸಹಾಯ ಆಯ್ತು. ಅದಾದ ನಂತರ ನನ್ನ ಫಲಿತಾಂಶ ಬಂತು. ನಾನು ೯೧.೨% ಗಳಿಸಿದ್ದು ಬಹಳ ಸಂತೋಷವಾಯಿತು. ನಾನು ಕ್ರೈಸ್ಟ್ ಜೂನಿಯರ್ ಕಾಲೇಜು ಸೇರಿಕೊಂಡೆ ಹಾಗೂ ವಿಜ್ಞಾನ ಆಯ್ಕೆಮಾಡಿದ. ನನಗೆ ವೈದ್ಯಳಾಗಬೇಕೆಂದು ಬಹಳ ಆಸೆ ಇತ್ತು. ನನ್ನ ಎರಡೂ ವರ್ಷ ಆನ್ ಲೈನ್ ನಲ್ಲೇ ಕಳೆದು ಹೋಯಿತು. ನಾನು ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ಆದರೆ ನನಗೆ ಬಂದ ಅಂಕಗಳಿಗೆ  ಸರ್ಕಾರಿ ಸೀಟು ಸಿಗುತ್ತಿರಲಿಲ್ಲ. ನಾನು ಒಂದು ವರ್ಷ ಮತ್ತೆ ಪ್ರಯತ್ನಿಸೋಣ ಎಂದು ಯೋಚಿಸಿದೆ...ಆದರೆ ಮತ್ತೆ ಅದೇ ರೀತಿ ಆದರೆ ಎನ್ನುವ ಭಯದಿಂದ ನಾನು ಆ ಆಲೋಚನೆಯನ್ನು ಬಿಟ್ಟೆ. ನಂತರ ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಬಿಎಸ್ಸಿ ( ಬಯೋಟೆಕ್, ಕೆಮಿಸ್ಟ್ರಿ, ಬೋಟನಿ) ಪದವಿ ಪಡೆಯಲು ಸೇರಿಕೊಂಡಿರುವೇನು.

ನನ್ನ ಹವ್ಯಾಸಗಳ ಬಗ್ಗೆ ಹೇಳುವುದಾದರೆ ನಾನು ನನ್ನ ಬಿಡುವಿನ ಸಮಯದಲ್ಲಿ ಗಿಟಾರ್ ನುಡಿಸುವುದು, ಹಾಡುವುದು, ಚಿತ್ರ ಬಿಡಿಸುವುದು, ಹೂದೋಟದ ಕೆಲಸ ಮಾಡುವುದು, ಹಾಗೆಯೇ ನಾನು ಪ್ರೀತಿ ಹಾಗೂ ಹಾಸ್ಯ ಕಾದಂಬರಿಗಳು ಓದುತ್ತೇನೆ. ಕೆಲವೊಮ್ಮೆ ಚಲನಚಿತ್ರಗಳನ್ನು ನೋಡುತ್ತೇನೆ. ಒಮ್ಮೊಮ್ಮೆ ಅಡುಗೆ ಸಹ ಮಾಡುತ್ತೇನೆ.

ಇದಿಷ್ಟು ನನ್ನ ಪರಿಚಯವಾಗಿತ್ತು. ಇದನ್ನು ತಾಳ್ಮೆಯಿಂದ ಓಡಿದಕ್ಕೆಗಿ ಧನ್ಯವಾದಗಳು.

ಶುಭ ದಿನ!!