ಸದಸ್ಯ:BHASKARA D/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧]

ಜನಪದ ಮತ್ತು ಮಹಿಳೆ. ಸಾಮಾನ್ಯ ಜನರು ಆಡುವಂತಹ ಪದವೇ ಜನಪದ ಎನ್ನುವಂತಹದಾಗಿದೆ. ಜನಪದ ಮೂಲತಃ ಮನುಷ್ಯರು ಒಂದು ಕಡೆ ನೆಲೆನಿಂತು ಬದುಕಿನ ಕ್ರಮವನ್ನು ಅನುಸರಿಸುವಾಗ ಪ್ರಾರಂಭವಾಗಿದೆ. ಅವರು ತಮ್ಮ ಯಾವುದೇ ಕಾರ್ಯಚಟುವಟಿಕೆಯನ್ನು ಮಾಡುವಾಗ ನುಡಿದಂತ ಪದಗಳಾಗಿವೆ. ಜನಪದವು ಮೌಖಿಕ ಪರಂಪರೆಯಲ್ಲಿ ಬೆಳೆದುದಾಗಿದೆ. ಇಲ್ಲಿ ಹೆಚ್ಚಿನದಾಗಿ ಮಹಿಳೆ ಕೇಂದ್ರಬಿಂದುವಾಗಿ ಕಂಡುಬಂದು ಅವಳ ಸುತ್ತಾ ಜನಪದ ಸಂಬಂಧವನ್ನು ಹೊಂದಿದೆ. ಮಹಿಳೆ ತನ್ನ ಜೀವನದ ಅನುಭವವನ್ನು ತಾನು ಮಾಡುವ ಕೆಲಸಗಳಾದ,ಮುಂಜಾನೆ ಏಳುವ ಹೊತ್ತಿನಿಂದ ಸಂಪ್ರದಾಯಗಳು,ನಂಬಿಕೆಗಳನ್ನು ಪ್ರಾರಂಭಿಸುವಳು.ಅವಳು ಮನೆ ತಾರಿಸುವಾಗ,ರಂಗೋಲಿ ಬಿಡುವಾಗ, ಭತ್ತ ಕುಟ್ಟುವಾಗ,ಬೀಸುಕಲ್ಲಿನಿಂದ ದವಸ,ಧಾನ್ಯ ಅರೆಯುವಾಗ,ಮಗು ಮಲಗಿಸುವಾಗ, ಹಾಡುತ್ತಾಳೆ ಮತ್ತು ಕಥೆ,[೨],ಗಾದೆ,ಒಗಟು ಮುಂತಾದವನ್ನು ಕಟ್ಟುವಂತಹದಾಗಿದೆ. ಈ ಜನಪದ ಮಹಿಳಾ ಕೇಂದ್ರವಾಗಿದೆ ಎನ್ನುವಾಗ ಮಾತೃಪ್ರಧಾನತೆ ಅಂಶಗಳನ್ನು ಹೆಚ್ಚಿನದಾಗಿ ಕಾಣುತ್ತೇವೆ.ಅಂದರೆ ಗ್ರಾಮೀಣ ಪ್ರದೇಶದಲ್ಲಿ ಗ್ರಾಮದದೇವಾಲಯಗಳು ಬಹುತೇಕ ಮಾತೃದೇವತೆಗಳೇ ಆಗಿರುವುದಾಗಿದೆ.


ಉಲ್ಲೇಖಗಳು[ಬದಲಾಯಿಸಿ]

<references>

  1. ಜನಪದ
  2. http://www.nammakannadanaadu.com/karnataka-janapada/janapada-songs.php