ಸದಸ್ಯ:BASAYYA HOSURMATH

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಆರಂಭಿಕ ಸಂವಹನ ವ್ಯವಸ್ಥೆ

ಅರಿಸ್ಟಾಟಲ್‍ರು ಹೇಳುವಂತೆ ಮೂಲತಃ ಮಾನವ ಸಮಾಜ ಜೀವಿ.  ಸಮಾಜವನ್ನು ಹೊರತುಪಡಿಸಿ ಜೀವಿಸಲು ಸಾಧ್ಯವಿಲ್ಲ.  ಸಮಾಜದಲ್ಲಿ ಬದುಕಲು ಸಹಕಾರ, ಸೌಹಾದ್ರ್ಯ ಅತೀ ಅವಶ್ಯಕ.  ದಿನನಿತ್ಯದ ತನ್ನ ಅನಿಸಿಕೆ, ಅಭಿಪ್ರಾಯ ಆಕಾಂಕ್ಷೆ ಮತ್ತು ಅವಶ್ಯಕತೆಗಳನ್ನು ಪೂರೈಸಲು ವ್ಯಕ್ತಪಡಿಸುವುದು ಅವಶ್ಯಕವಾಗಿದೆ.  ಅವುಗಳನ್ನು ವ್ಯಕ್ತಪಡಿಸಲು ಸಂವಹನ ಅತೀ ಅವಶ್ಯಕವಾಗಿದೆ.  ಆರಂಭದಲ್ಲಿ ಅಶಾಬ್ದಿಕ ಅಂದರೆ ಸನ್ನೆ, ಸಂಜ್ಞೆ, ಸಂಕೇತಗಳ ಮೂಲಕ ಸಂವಹನ ಎರ್ಪಡಿಸಲಾಗುತ್ತಿತ್ತು. ಕಿರುಚುವುದರ ಮೂಲಕ, ಆಂಘಿಕ ಭಾಷೆಯ ಮೂಲಕ ವಿಷಯಗಳನ್ನು ಹಂಚಿಕೊಳ್ಳಲಾಗುತ್ತಿತ್ತು.  ಕಾಲಕಾಲಕ್ಕೆ ತಕ್ಕಂತೆ ಸಂವಹನ ಸಾಧನಗಳನ್ನು ಆವಿಷ್ಕರಿಸಿ ಸಂವಹನ ಹಂತ-ಹಂತವಾಗಿ ಬದಲಾಗುತ್ತಾ ಬಂದಿದೆ. 

ರಾಜ ಮಹಾರಾಜರುಗಳ ಕಾಲದಲ್ಲಿ ಕೆತ್ತನೆಗಳು, ಶಿಲ್ಪಕಲೆಗಳು, ಗುಹಾಲಯಗಳು, ಶಾಸನಗಳ ಮೂಲಕ ಸಂವಹನ ಎರ್ಪಡಿಸಲಾಗುತ್ತಿತ್ತು.  ಪ್ರಾಚೀನ ಗ್ರೀಸ್ ಮತ್ತು ಈಜಿಪ್ಟನಲ್ಲಿ ಪದಗಳ ಕಲ್ಪನೆಯನ್ನು ಕಾಣುತ್ತೆವೆ.  ಕಾಮ್ಯಾನ ಮೊಹಿಲಾ(ಈಗಿನ ಉಕ್ರೇನ್) ನಾಗರಿಕತೆ ಅಂದರೆ ಕ್ರಿ.ಪೂ.10,000 ಅವಧಿಯಲ್ಲಿ ‘ಪೆಟ್ರೊಗ್ಲಿಪ್ಸ್’ ಕಲ್ಪನೆ ನೋಡಿದಾಗ ಸಂವಹನ ವ್ಯವಸ್ತೆಯನ್ನು ಅರ್ಥೈಸಿಕೊಳ್ಳಬಹುದು. ಪ್ರಸ್ತುತ ಆಫ್ರೀಕಾ ಮತ್ತು ಓಸೇನಿಯಾಗಳಲ್ಲಿ ಈ ಕಲ್ಲಿನ ಕೆತ್ತನೆಯ ಈ ಪೆಟ್ರೊಗ್ಲಿಪ್ಸ್ ಕುರುಹುಗಳನ್ನು ಕಾಣುತ್ತೇವೆ. ‘ಪೆಟ್ರಾ’ ಅಂದರೆ ಕಲ್ಲು, ಗ್ಲಿಫೇನ್ ಅಂದರೆ ‘ಕೊರೆಯುವುದು’ ಎಂದರ್ಥ.  ಚಿತ್ರಕಲೆಗೆ ಕಲ್ಲಿನ ಹರಳುಗಳು, ಸಂಕೇತಗಳಿಗೆ ಕಟ್ಟಿಗೆಗಳನ್ನು ಬಳಸಿರುವುದನ್ನು ಕೂಡಾ ಕಾಣುತ್ತೇವೆ. ನಂತರ ‘ಪಿಕ್ಟೊಗ್ರಾಮ್’ ಕಲ್ಪನೆ ಯಾವುದೇ ವಿಷಯವನ್ನು ತಿಳಿಸಲು ಚಿತ್ರಗಳ ಮೂಲಕ ಸಂವಹನ ಎರ್ಪಡಿಸುವುದಾಗಿದೆ.  ಕ್ರಿ.ಪೂ. 6000-5000 ಅವಧಿಯಲ್ಲಿ ಈ ಪಿಕ್ಟೊಗ್ರಾಮ ಸಂವಹನ ಕಲ್ಪನೆಯನ್ನು ಪ್ರಾಚೀನ ಸುಮೇರಿಯನ್, ಈಜಿಪ್ಟ್, ಚೈನಾ ನಾಗರಿಕತೆಗಳಲ್ಲಿ ಕಾಣುತ್ತೇವೆ. ಕಾಲಾನಂತರ ಈ ನಾಗರಿಕತೆಗಳಲ್ಲಿ ‘ಈಡಿಯೋಗ್ರಾಮ್’ ಕಲ್ಪನೆಯೊಂದಿಗೆ ಯಾವುದೇ ವಿಷಯಗಳಿಗೆ ಕಲ್ಪನಾತ್ಮಕ ಸಂಕೇತಗಳನ್ನು ಬಳಸಿದ್ದನ್ನು ಇಲ್ಲಿ ಮರೆಯುವಂತಿಲ್ಲ.  ತಾಮ್ರ ಯುಗದ ಅಂತ್ಯದ ಅವಧಿಯಲ್ಲಿ ಬರವಣಿಗೆ ಪರಿಚಯದ ಕುರುಹುಗಳನ್ನು ಕಾಣುತ್ತೇವೆ.  ಈಜಿಪ್ಟ, ಚೈನಾ ಮತ್ತು ಸಿಂಧೂ ನಾಗರಿಕತೆಗಳಲ್ಲಿಯೂ ಕೂಡಾ ಬರವಣಿಗೆ ಕಲ್ಪನೆಯನ್ನು ಕಾಣಬಹುದಾಗಿದೆ. 

ವೇಧಗಳ ಕಾಲದಲ್ಲಿಯೂ ಅಕ್ಷರ ಬಳಕೆಯನ್ನು ಹೇರಳವಾಗಿ ಕಾಣುತ್ತೇವೆ.  ಬರವಣಿಗೆ ರೂಪದಲ್ಲಿ ಈಗಲೂ ಕೂಡಾ ಲಭ್ಯವಿರುವ ‘ಯಜುರ್ವೇದ ಸಂಹಿತಾ’, ‘ಮಂತ್ರ’, ‘ಅಶ್ವಮೇಧ’, ‘ವೇದಾಂಗ ಜೋತಿಷ್ಯ’ ‘ಶುಶೃತ ಸಂಹಿತಾ’ ಈ ರೀತಿ ಹಲವಾರು ಅಂಶಗಳು ಅಕ್ಷರದ ಬಳಕೆಯ ಕುರುಹುಗಳಾಗಿವೆ.  ಋಗ್‍ವೇದ ಕಾಲದಲ್ಲಿಯೂ ಕೂಡಾ ಬೇಹುಗಾರಿಕೆ ಕಲ್ಪನೆಯನ್ನು ಕಾಣಬಹುದಾಗಿದೆ.  ಆ ವೇಳೆಯಲ್ಲಿ ಸಮಾಜದಲ್ಲಿರುವ ಕೆಟ್ಟ ಜೀವಿಗಳನ್ನು ಹೊರಹಾಕಲು, ಸಮಾಜದ ಸ್ವಾಸ್ಥ್ಯಕ್ಕಾಗಿ ಬೇಹುಗಾರಿಕೆಯ ಕಲ್ಪನೆ ಕಾಣುತ್ತೆವೆ. ರಾಮಾಯಣ, ಮಹಾಭಾರತ, ಮನುಸ್ಮøತಿ, ಕೌಟಿಲ್ಯನ ಅರ್ಥಶಾಸ್ರ್ತ ಮತ್ತು ಸ್ಮøತಿಗಳಲ್ಲಿಯೂ ಈ “ಸ್ಪ್ಯಾಸ್” ಅಂದರೇ ಬೇಹುಗಾರಿಕೆಯ ಕುರುಹುಗಳನ್ನು ಕಾಣಬಹುದು.

ಕ್ರಿ.ಪೂ.26ನೇ ಶತಮಾನದಲ್ಲಿ ಸುಮೇರಿಯನ್ ನಾಗರೀಕತೆಯಲ್ಲಿ ಅಕ್ಕಾಡಿಯನ್ ಭಾಷೆಯ ಬಳಕೆಯನ್ನು ಕಾಣುತ್ತೇವೆ.  ರಾಜ ಮಹಾರಾಜರ ಕಾಲದಲ್ಲಿ ಸಂವಹನಕ್ಕಾಗಿ ಹಲವಾರು ಪ್ರಾಣಿ-ಪಕ್ಷಿಗಳನ್ನೂ ಕೂಡಾ ಬಳಸಲಾಗುತ್ತಿದ್ದೆಂದು ಐತಿಹಾಸಿಕ ಅಧ್ಯಯನಗಳಿಂದ ತಿಳಿದುಬಂದಿದೆ. ಕ್ರಿ.ಶ. 11ನೇ ಶತಮಾನದಲ್ಲಿ ಹದ್ದುಗಳನ್ನು ಸಂವಹನ ವಾಹಕ ವಾಗಿ ಬಳಸಿರುವುದನ್ನು ಪ್ರಾಚೀನ ಈಜಿಪ್ಟ್ ನಾಗರೀಕತೆಯಲ್ಲಿ ಕಾಣಬಹುದು.  ಪರ್ಷಿಯನ್ಸ್, ರೋಮನ್ಸ್ ಮತ್ತು ಗ್ರೀಕರು ಈ ಹದ್ದುಗಳನ್ನು ಮತ್ತು ಪಾರಿವಾಳಗಳನ್ನು ಸಂವಹನದ ವಾಹಕವಾಗಿ ಬಳಸಿರುವುದನ್ನು ಕಾಣಬಹುದು.  ಬರವಣಿಗೆಗೆ ಎಲೆಗಳನ್ನು, ಕಲ್ಲುಗಳನ್ನು, ಗುಹೆಗಳನ್ನು ಬಳಸಿರುವುದು ಆಕರ್ಷಣೀಯ.  ಅದರ ಜೋತೆಗೆ ಪರಿಣಾಮಕಾರಿ ಸಂವಹನಕ್ಕಾಗಿ ಸಂಗೀತವನ್ನು ಬಳಸಲಾಗುತ್ತಿತ್ತು. ಮೋಘಲ್‍ರ ಕಾಲದ ಬಾಬರ್, ಅಕ್ಬರ್, ಶೇರ್ ಷಾ ಸೂರಿ ಆಡಳಿತ ಅವಧಿಯಲ್ಲಿ ಅಂಚೆ ವ್ಯವಸ್ಥೆಯ ಕೊಡುಗೆಗಳನ್ನು ಇಲ್ಲಿ ಸ್ಮರಿಸಬಹುದು.  ಭಾರತೀಯ ಅಂಚೆ ವ್ಯವಸ್ಥೆಯ ಪರಿಚಯದ ಕೀರ್ತಿ ಶೇರ್ ಷಾ ಸೂರಿಗೆ ಸಲ್ಲುತ್ತದೆ.  ಪ್ರಾಚೀನ ಕಾಲದ ಸುದ್ದಿಗಳು, ಬದಲಾವಣೆಗಳು, ಆಡಳಿತದ ವಿಷಯಗಳ ವರ್ಗಾವಣೆಯಲ್ಲಿ ಈ ಅಂಚೆ ವ್ಯವಸ್ಥೆ ಪ್ರಮುಖ ಪಾತ್ರ ವಹಿಸಿತ್ತು.  ಪರ್ಷಿಯನ್ ರಾಜ ಕುತುಬುದ್ದಿನ್ ಐಬಕ್ ಕೇವಲ ನಾಲ್ಕು ವರ್ಷ (1206-1210) ಆಳ್ವಿಕೆ ಮಾಡಿದರೂ ಅವನ ಅವಧಿಯಲ್ಲಿ ಈ ಮಾಹಿತಿದಾರ ಅಂಚೆ ವ್ಯವಸ್ಥೆಯನ್ನು ಪರಿಚಯಿಸಿದನು.  ನಂತರದ ಅವಧಿಯಲ್ಲಿ ಇದು ‘ಡಾಕ್ ಚೌಕೀಸ್’ಗಳಿಂದ ಬದಲಾಯಿಸಲಾಯಿತು.  ಅಂದರೆ ಕುದುರೆಗಳು ಮತ್ತು ಪಾದಚಾರಿಗಳಿಂದ ಸೇವೆಯನ್ನು ಅತ್ತುತ್ತಮಗೊಳಿಸಲಾಯಿತು.  1541-45ರ ಅವಧಿಯಲ್ಲಿ ರಾಜ ಶೇರ್ ಷಾ ಸುರಿ ಕುರುರೆಗಳನ್ನು ಈ ಸೇವೆಗೆ ಬಳಸಿ ಅಂಚೆ ವ್ಯವಸ್ಥೆಯನ್ನು ಇನ್ನೂ ಅತ್ಯುತ್ತಮ ಸೇವೆಯಾಗಿಸಿದ.  ಅಕ್ಬರ್‍ನ ಅವಧಿಯಲ್ಲಿ(1542-1605) ಒಂಟೆಗಳನ್ನು ಈ ಸಂವಹನ ಸಾಧನವಾಗಿ ಬಳಸಿರುವುದನ್ನು ಕಾಣುತ್ತೇವೆ.  ರಾಜ 1ನೇ ಡೇರಿಯಸ್‍ನ ಕಾಲದಲ್ಲಿ ಅತ್ಯುತ್ತಮ ಅಂಚೆ ಸೇವೆ ಹಾಗೂ ಸಂಪರ್ಕಕ್ಕಾಗಿ 1677 ಮೈಲ್(2699 ಕಿ.ಮೀ.) ರಾಜಮಾರ್ಗ ನಿರ್ಮಿಸಿರುವುದನ್ನು ಕ್ರಿ.ಪೂ. 5ನೇ ಶತಮಾನದಲ್ಲಿ ಕಾಣುತ್ತೇವೆ.  ಈ ರಾಜ ಮಾರ್ಗ ’ಸುಸಾ’ ಮತ್ತು ‘ಸಾರ್ಡಿಸ್’ ನಡುವೆ ಸಂಪರ್ಕ ಕಲ್ಪಿಸುವ ವ್ಯವಸ್ಥೆಯಾಗಿತ್ತು.  ಕುದುರೆಗಳನ್ನು ಪ್ರಮುಖ ಸಾರಿಗೆ ಸಾಧನಗಳಾಗಿ ಬಳಸಲಾಗಿತ್ತು.

  ಮೌರ್ಯರ ಕಾಲದಲ್ಲಿ ಸಾಮ್ರಾಜ್ಯದಲ್ಲಿ ಬದಲಾಗುತ್ತಿರುವ ಚಟುವಟಿಕೆಗಳ ಮಾಹಿತಿಯನ್ನು ಪಡೆಯಲು ಬೇಹುಗಾರರ ಗುಂಪುಗಳನ್ನು ಬಳಸಲಾಗಿತ್ತು.  ಬೇಹುಗಾರಿಕೆ ವ್ಯವಸ್ಥೆಯ ಪ್ರಮುಖ ಉದ್ದೇಶ ಆಂತರಿಕ ಮತ್ತು ಬಾಹ್ಯ ಭದ್ರತೆಯನ್ನು ಕಾಪಾಡುವುದಾಗಿತ್ತು.  ಇಲ್ಲಿ ಹಲವಾರು ವರ್ಗದ ವ್ಯಕ್ತಿಗಳನ್ನು ಮಾಹಿತಿದಾರರಾಗಿ ನೇಮಕ ಮಾಡಲಾಗುತ್ತಿತ್ತು.  ವಿವಿಧ ಕ್ಷೇತ್ರಗಳ ವ್ಯಕ್ತಿಗಳನ್ನು ಸಮಾಜದ ಎಲ್ಲ ರೀತಿಯ ಮಾಹಿತಿಗಳನ್ನು ಸಂಗ್ರಹಿಸಲು ನೇಮಕ ಮಾಡಲಾಗುತ್ತಿತ್ತು.  ವಿದ್ಯಾರ್ಥಿಗಳು, ರೈತರು, ಕೂಲಿ ಕೆಲಸಗಾರರು, ವ್ಯಾಪಾರಸ್ತರು ಹೀಗೆ ಸಾಮ್ರಾಜ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸಲು ಈ ರೀತಿ ಬೇಹುಗಾರಿಕಾ ಸಂವಹನ ಬಳಸಲಾಗುತ್ತಿತ್ತು ಎಂಬುದನ್ನು ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಕಾಣುತ್ತೇವೆ. ಈ ಬೇಹುಗಾರರು ಯಾವುದೇ ವೇಳೆಯಲ್ಲಿ ಸಾಮ್ರಾಜ್ಯದ ರಾಜನನ್ನು ಬೇಟಿ ಮಾಡಿ ಮಾಹಿತಿಯನ್ನು ನೀಡುವ ವ್ಯವಸ್ಥೆಯನ್ನು ಕಾಣುತ್ತೇವೆ.

 ಔರಂಜೇಬ್‍ನ(1618-1707) ಕಾಲದಲ್ಲಿ ಪತ್ರಿಕೆಗಳಿಗೆ ಅತ್ಯುನ್ನತವಾದ ಪ್ರಾಶಸ್ಥ್ಯವನ್ನು ಕೋಡಲಾಗಿತ್ತು.  ಕೆಲವು ಮೂಲಗಳ ಪ್ರಕಾರ ಪತ್ರಿಕೆಗಳಿಗೆ ಔರಂಗಜೇಬ್ ಕೊಟ್ಟ ಸ್ವಾತಂತ್ರ್ಯವೇ ಅವನ ಅವನತಿಗೆ ಕಾರಣ ಎನ್ನುವ ವಿಮರ್ಶೆಗಳನ್ನು ನಿರ್ಲಕ್ಷಿಸುವಂತಿಲ್ಲ. ಇದರೊಂದಿಗೆ ಸಂವಹನದ ಪ್ರಮುಖ ಮಾಧ್ಯಮವಾಗಿ ಶಾಸನಗಳನ್ನು ಕಾಣುತ್ತೇವೆ.  ಪ್ರಾಚೀನ ಭಾರತೀಯ ಇತಿಹಾಸದ ಕುರುಹುಗಳಲ್ಲಿ ಶಾಸನಗಳು ಪ್ರಮುಖವಾದವುಗಳು.  ಆಯಾ ಕಾಲಕ್ಕೆ ತಕ್ಕಂತೆ ರಾಜ-ಮಹಾರಾಜರುಗಳ ಸಾಧನೆಗಳು, ಸಾಮಾಜಿಕ ಅಂಶಗಳು, ನೈತಿಕ ಮೌಲ್ಯಗಳು, ಧಾರ್ಮಿಕ ಅಂಶಗಳು, ಆರ್ಥಿಕ ಅಂಶಗಳು, ದಂಡಯಾತ್ರೆಗಳು ಹೀಗೆ ಹಲವಾರು ಅಂಶಗಳನ್ನು ಪ್ರಕಟಪಡಿಸುವಲ್ಲಿ ಈ ಶೀಲಾ ಶಾಸನಗಳು, ಶೀಲಾ ಕಂಬಗಳ ಶಾಸನಗಳ ಬಳಕೆಯನ್ನು ಗಮನಿಸಬಹುದು. ಸಂಸ್ಕøತ, ಪಾಲಿ ಮತ್ತು ಅಶಾಬ್ದಿಕ ಬರವಣಿಗೆಯ ಶಾಸನಗಳು ಬರವಣಿಗೆಯ ಪ್ರಮುಖ ಸಂವಹನದ ಕುರುಹುಗಳಾಗಿವೆ. ಶಾಸನಗಳು, ಕಂಬಗಳಷ್ಟೇ ಅಲ್ಲದೆ ಗೋಡೆಗಳು, ಕಲ್ಲುಬಂಡೆಗಳು, ತಾಳೆಗರಿ ಮತ್ತು ಇನ್ನೀತರ ವಸ್ತುಗಳನ್ನು ಬರವಣಿಗೆಗಾಗಿ ಬಳಸಲಾಗುತ್ತಿತ್ತು.

ಪ್ರಾಚೀನ ಉತ್ತರ ಅಮೇರಿಕಾ ಮತ್ತು ಚೈನಾ ಬುಡಕಟ್ಟು ಜನಾಂಗಗಳು ಯಾವುದೇ ಅವಘಡಗಳ ಮುನ್ನೇಚ್ಚರಿಕೆ ಮಾಹಿತಿಗಾಗಿ ಬೆಂಕಿಯ ಉಗಿಯನ್ನು ಸಂವಹನದ ಸಂಕೇತವಾಗಿ ಬಳಸಿದ ಉದಾಹರಣೆಯನ್ನು ಇಲ್ಲಿ ಸ್ಮರಿಸಬಹುದು. ಅಮೇರಿಕಾದಲ್ಲಿ 19ನೇ ಶತಮಾನದ ಮದ್ಯ ಭಾಗದಲ್ಲಿ ಮಾಹಿತಿ ಮತ್ತು ವಸ್ತುಗಳ ವರ್ಗಾವಣೆಗಾಗಿ ಮಾನವ ಮತ್ತು ಕುದುರೆಗಳನ್ನು ಬಳಸುತ್ತಿದ್ದರು.  ಪ್ರಾಚೀನ ಭಾರತದಲ್ಲಿಯೂ ಕೂಡ ಇಂತಹ ಕುದುರೆಗಳು, ಮಾನವ, ಹಡಗು ಮತ್ತು ಇನ್ನಿತರ ಸಾಧನಗಳನ್ನು ಸಂವಹನಕ್ಕಾಗಿ ಬಳಸಿರುವುದನ್ನು ಕಾಣುತ್ತೇವೆ. 

 ಭಾರತಕ್ಕೆ ಯುರೋಪಿಯನ್ನರ ಆಗಮನಕ್ಕೂ ಮುಂಚೆ ಅಂಚೆ ಸೇವೆಯನ್ನು ನಾವು ಭಾರತದಲ್ಲಿ ಕಾಣುತ್ತೇವೆ.  ಅಂಚೆ ಸೇವೆಯು ಕೂಡಾ ಸಂವಹನದ ಒಂದು ಪ್ರಮುಖವಾದ ಅಂಶವಾಗಿದೆ.  ಭಾರತದಲ್ಲಿ ಅಂಚೆ ಕಛೇರಿ ಸೇವೆ ಪ್ರಾರಂಭವಾದದ್ದು 1837ರಲ್ಲಿ.  ಬ್ರಿಟೀಷ ಆಡಳಿತ ಅವಧಿಯ ಪರಿಣಾಮಕಾರಿ ಸಂವಹನದ ಮಾಧ್ಯಮ ಅಂಚೆ ವ್ಯವಸ್ಥೆಯಾಗಿದೆ. 20ನೇ ಶತಮಾನದ ಪ್ರಾರಂದವರೆಗೂ ಕೂಡಾ ನಾವು ನಗರ ಮತ್ತು ಸಾರ್ವಜನಿಕ ಮಾಹಿತಿಗಳಿಗಾಗಿ ನಿವೇಧಕರುಗಳನ್ನು ಬಳಸುವುದನ್ನು ನೋಡಿದ್ದೇವೆ. 

ಹೀಗೆ ಪ್ರಸ್ತುತ ನಾವು ಯಾವುದೇ ವೇಳೆಯಲ್ಲಿ ಯಾವುದೇ ವ್ಯಕ್ತಿಗೆ ಸಮಯ ಮತ್ತು ಅಂತರದ ಸಮಸ್ಯೆಯಿಲ್ಲದೆಯೆ ಮಾಹಿತಿಯನ್ನು ವರ್ಗಾಯಿಸುವ ಅತ್ಯುನ್ನತವಾದ ಆಧುನಿಕ ತಂತ್ರಜ್ಞಾನ ಲಭ್ಯವಿದ್ದರೂ ಕೂಡ ಪ್ರಾಚೀನ ಸಂವಹನ ವ್ಯವಸ್ಥೆಯ ಬೆಳವಣಿಗೆಯ ಅರಿವು ಅತೀ ಅವಶ್ಯಕವಾಗಿದೆ.