ಸದಸ್ಯ:Avin Anthony SJ

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ಆವಿನ್ ಆಂತೋಣಿ. ನಾನು ಹುಟ್ಟಿದ್ದು ೦೩ ಆಗಸ್ಟ್ ೧೯೯೫. ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ನನ್ನ ಜನನವಾಯಿತು. ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಅಭ್ಯಾಸವನ್ನು ಸಂತ ಜೋಸೇಫರ ಶಾಲೆ, ಆನೇಕಲ್ ನಲ್ಲಿ ಮುಗಿಸಿದೆ. ಪದವಿ ಪೂರ್ವ ಶಿಕ್ಷಣವನ್ನು ಸಂತ ಜೋಸೇಫರ ಪದವಿ ಪೂರ್ವ ಕಾಲೇಜು, ಬೆಂಗಳೂರಿನಲ್ಲಿ ಕಲಿತೆನು. ನಂತರ ಗುರುನಿಲಯಕ್ಕೆ ಸೇರಿ ಎರಡು ವರ್ಷಗಳನ್ನು ಪ್ರಾರ್ಥನೆ, ಧ್ಯಾನ, ಹಾಗು ಇನ್ನಷ್ಟು ವಿಚಾರಗಳನ್ನು ಅಭ್ಯಸಿಸಿದೆ. ಆಂಗ್ಲ ಭಾಷೆಯನ್ನು ಇನ್ನಷ್ಟು ಹೆಚ್ಚಾಗಿ ಕಲಿಯಲು ‌‌‍‍ಕ್ಸೇವಿಯರ್ ಟ್ರೈನಿಂಗ್ ಕಾಲೇಜಿನಲ್ಲಿ ಕಲಿತೆನು. ನಂತರ ಬಿ. ಎ. ಪದವಿಗೋಸ್ಕರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ ಸೇರಿದೆ. ಪ್ರಸ್ತುತ ನಾನು ದ್ವಿತೀಯ ಬಿ. ಎ. ಅಲ್ಲಿ, ರಾಜ್ಯ ಶಾಸ್ತ್ರ, ಸಮಾಜ ಶಾಸ್ತ್ರ,ಹಾಗೂ ಕನ್ನಡ ಐಚ್ಚಿಕ ವಿಷಯಗಳನ್ನು ಕಲಿಯುತ್ತಿದ್ದೇನೆ.

ನನ್ನ ಹವ್ಯಾಸಗಳು ಛಾಯಾ ಚಿತ್ರಗಳನ್ನು ತೆಗೆಯುವುದು, ಸಣ್ಣ ಚಲನಚಿತ್ರಗಳನ್ನು ತಯಾರಿಸುವುದು, ಸಂಗೀತದಲ್ಲಿ ಕೀ ಬೋರ್ಡ್, ಗಿಟಾರ್, ಹಾಗೂ ತಬಲವನ್ನು ನುಡಿಸುತ್ತೇನೆ. ಆಟೋಟಗಳಲ್ಲಿ ಬಾಸ್ಕೆಟ್ ಬಾಲ್, ಹಾಗೂ ಕಬ್ಬಡ್ಡಿ ಆಟಗಳಲ್ಲಿ ಪರಿಣತಿಯನ್ನು ಹೊಂದಿದ್ದೇನೆ. ಬಿಡುವಿದ್ದ ಸಮಯದಲ್ಲಿ ಕವನಗಳನ್ನು,ಕಥೆಗಳನ್ನು ರಚಿಸುತ್ತೇನೆ.