ಸದಸ್ಯ:Ashwitha.acharya 27/sandbox
ಕಣ ಭೌತಶಾಸ್ತ್ರ
ಪ್ರಾಥಮಿಕ ಕಣಗಳ ಮಾದರಿ ಕಣ ಭೌತಶಾಸ್ತ್ರವು ವಸ್ತುವಿನ ಮೂಲಕಣಗಳ ರಚನೆ ಹಾಗೂ ವಿಕಿರಣಗಳ ಕುರಿತ ಸಂಶೋಧನೆಯ ಭೌತಶಾಸ್ತ್ರದ ವಿಭಾಗ. ವಿಜ್ಞಾನಿಗಳು ವಸ್ತುವಿನ ಮೂಲಕಣಗಳಾದ ಪ್ರೋಟಾನ್, ನ್ಯೂಟ್ರಾನ್ ಹಾಗೂ ಎಲೆಕ್ಟ್ರಾನ್ ಇನ್ನೂ ಮೂಲಭೂತ ಕಣಗಳಿಂದ ಮಾಡಲ್ಪಟ್ಟಿರುವುದನ್ನು ಅರಿತು ಅದರ ಕುರಿತ ಹೆಚ್ಚಿನ ತಿಳುವಳಿಕೆಗಾಗಿ ಹಲವಾರು ಸಂಶೋಧನೆಗಳಲ್ಲಿ ತೊಡಗಿರುತ್ತಾರೆ. ವಿಜ್ಞಾನದ ಈ ಭಾಗ ಈಗ ಅಗಾಧ ಪ್ರಮಾಣದಲ್ಲಿ ಬೆಳೆಯುತ್ತಿದೆ. ಪರಮಾಣುವು ಮೂಲಭೂತವಾಗಿ ೨ ಕಣಗಳಿಂದ ಕೂಡಿದೆ.
ನ್ಯುಕ್ಲಿಯಾನ್ ಎಲೆಕ್ಟ್ರಾನ್ ನ್ಯುಕ್ಲಿಯಾನ್ ಇದು ಮಧ್ಯ ಭಾಗದಲ್ಲಿದ್ದು ಎಲೆಕ್ಟ್ರಾನ್ಗಳಿಗೆ ಹೋಲಿಸಿದಾಗ ಹೆಚ್ಚಿನ ದ್ರವ್ಯರಾಶಿ ಹೊಂದಿದೆ.ಇದು ಪ್ರೊಟಾನ್ ಮತ್ತು ನ್ಯುಟ್ರಾನ್ ಗಳಿಂದಾಗಿದೆ. ಪ್ರೊಟಾನ್ ಧನ ವಿದ್ಯುತ್ ಅವೇಶವನ್ನು ಹೊಂದಿದ್ದರೆ ನ್ಯುಟ್ರೊನ್ ವಿದ್ಯುತ್ ಅವೇಶ ರಹಿತವಾಗಿವೆ. ಎಲೆಕ್ಟ್ರಾನ್ಗಳು ನ್ಯುಕ್ಲಿಯಾನ್ನನ್ನು ಸುತ್ತುತ್ತವೆಯಾದರೂ ಇವು ಋಣ ವಿದ್ಯುತ್ ಅವೇಶವನ್ನು ಹೊಂದಿವೆ.
ಕ್ರಮೇಣವಾಗಿ ಪ್ರೊಟಾನ್ ಮತ್ತು ನ್ಯುಟ್ರಾನ್ಗಳ ರಚನೆ ಹೆಚ್ಚು ಕ್ಲಿಷ್ಟ ಎಂಬುದು ಅರಿವಾಯಿತು.ಈ ಪ್ರೊಟಾನ್ ಮತ್ತು ನ್ಯುಟ್ರಾನ್ ಗಳು ಕ್ವಾರ್ಕ್ ಗಳೆಂಬ ಮೂಲಕಣಗಳಿಂದಾಗಿವೆ. ಒಟ್ಟೂ ೬ ಬಗೆಯ ಕ್ವಾರ್ಕ್ ಗಳಿವೆ.ಅವು
ಅಪ್,ಡೌನ್,ಸ್ಟ್ರೆಂಜ್,ಚಾರ್ಮ್,ಟಾಪ್,ಬಾಟಮ್. ಪ್ರೊಟಾನ್ ಅಪ್,ಅಪ್,ಡೌನ್ ಎಂಬ ಕ್ವಾರ್ಕ್ ಗಳಿಂದಾಗಿದೆ. ನ್ಯುಟ್ರಾನ್ ಅಪ್,ಡೌನ್,ಡೌನ್ ಎಂಬ ಕ್ವಾರ್ಕ್ ಗಳಿಂದಾಗಿದೆ.