ವಿಷಯಕ್ಕೆ ಹೋಗು

ಸದಸ್ಯ:AshlinG 164/WEP 2018-19

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಮರ್ ಸಿಂಘ್

ಅರ್ಜುನ ಪ್ರಶಸ್ತಿ

[ಬದಲಾಯಿಸಿ]

ಭಾರತದಲ್ಲಿ ಕ್ರೀಡ ಕ್ಷೇತ್ರಕ್ಕೆ ಅರ್ಜುನ ಪ್ರಶಸ್ತಿ ಅತಿ ದೊಡ್ಡ ಗೌರವ. ಅರ್ಜುನ ಪ್ರಶಸ್ತಿ ಯುವ ವ್ಯವಹಾರಗಳ ಸಚಿವಾಲಯ ಮತ್ತು ಭಾರತ ಸರ್ಕರದಿಂದ ಕೊಡಲಾಗುವುದು.ಕ್ರೀಡ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಗುರುತಿಸಲು ಕೊಡಲಾಗುವುದು. ೧೯೬೧ರಲ್ಲಿ ಪ್ರಶಸ್ತಿ ನೀಡುವುದು ಪ್ರಾರಂಭಿಸಿದರು, ಪ್ರಶಸ್ತಿಯು ಐದು ಲಕ್ಷ ನಗದು ಬೆಲೆ ಮತ್ತು ಕಂಚಿನ ಪ್ರತಿಮೆ ಒಳಗೊಂಡಿದೆ.

ಪರಿಚಯ

[ಬದಲಾಯಿಸಿ]

ಸೈಕ್ಲಿಂಗ್ ಕ್ಷೇತ್ರದಲ್ಲಿ ಅರ್ಜುನ ಪ್ರಶಸ್ತಿಯನ್ನು ಕೇವಲ ಮೂರು ಜನ ಪಡೆದಿದ್ದಾರೆ ಅದರಲ್ಲಿ ೧೯೭೫ರಲ್ಲಿ ಅಮರ್ ಸಿಂಘ್ ಮೊದಲಿಗರಾಗಿದ್ದು ನಂತರ ೧೯೭೮ರಲ್ಲಿ ಎಮ್ ಮಹಾಪತ್ರ ಹಾಗೂ ೧೯೮೩ರಲ್ಲಿ ಎ ಆರ್ ಅರ್ಥ್ಮ ಪಡೆದಿದ್ದಾರೆ. ಅಮರ್ ಸಿಂಗ್ ಅವರು ಭಾರತದಲ್ಲಿ ಪ್ರಸಿದ್ಧ ವ್ಯಕ್ತಿಯಲ್ಲ ಏಕೆಂದರೆ ಸೈಕ್ಲಿಂಗ್ ಜನಪ್ರಿಯ ಕ್ರೀಡೆಯಾಲ್ಲ,ಭಾರತದಲ್ಲಿ ಸೈಕ್ಲಿಂಗ್ಗೆ ಹೆಚ್ಚಿನ ಉತ್ತೇಜನ ನೀಡಲಾಗಿಲ್ಲ. ಸೈಕ್ಲಿಂಗ್ ಸ್ಪರ್ಧಾತ್ಮಕ ದೈಹಿಕ ಚಟುವಟಿಕೆಯಾಗಿದೆ, ಅಮರ್ ಸಿಂಘ್ ಭಾರತದಲ್ಲಿ ಅತ್ಯುತ್ತಮ ಸೈಕ್ಲಿಸ್ಟ್ ರೇಸರ್ಗಳಲ್ಲಿ ಒಬ್ಬರು,ಅವರು ಕ್ರೀಡಾ ಆಡಳಿತದಲ್ಲಿ ಪದವೀಧರರಾಗಿದ್ದಾರೆ ಮತ್ತು ಅವರು ಸೈಕ್ಲಿಂಗ್ ತರಬೇತುದಾರರಾಗಿದ್ದು ಲಾಜಿಸ್ಟಿಕ್ಸ್ ಸ್ಥಳ ಕಾರ್ಯಾಚರಣೆಗಳಲ್ಲಿ ಬಹಳ ಸಕ್ರಿಯರಾಗಿದ್ದಾರೆ.ಅವರು ೧೯೮೩ ರಲ್ಲಿ ಸೈಕ್ಲಿಂಗ್ ತರಬೇತುದಾರರಾಗಿದ್ದರು,ಅವರು ವಿ ಐ ಎಸ್ ಕೋಚಿಂಗ್ ಡಿಪ್ಲೊಮಾ ಹಾಗೂ ಎಫ಼್ ಐ ಎ ಸಿ ಕೋಚಿಂಗ್ ಡಿಪ್ಲೊಮಾ ಹೊಂದಿದ್ದಾರೆ. ಅವರು ಕಾಮನ್ವೆಲ್ತ್ನ ಟಾಟಾ ಸ್ಟೀಲ್ ಸಂಘಟನಾ ಸಮಿತಿಯಿಂದ ಪ್ರಮಾಣಪತ್ರವನ್ನು ಹೊಂದಿದ್ದಾರೆ.

ಕೊಡುಗೆಗಳು

[ಬದಲಾಯಿಸಿ]

ಅವರು ಭಾರತದಲ್ಲಿ ಸೈಕ್ಲಿಂಗ್ ಕಲೆ ಸುಧಾರಿಸುವ ಉದ್ದೇಶ ಹೊಂದಿದ್ದಾರೆ, ತನ್ನ ವಿದ್ಯಾರ್ಥಿಯೊಬ್ಬನು ಅವರು ತಾಳ್ಮೆಯಿಂದಿರುತ್ತಾರೆ ಮತ್ತು ಬಹಳ ಸಮರ್ಪಿತ ವ್ಯಕ್ತಿ ಎಂದು ಹೇಳಿದ್ದಾನೆ,ಅವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ನಿಂದ ಸೈಕ್ಲಿಂಗ್ ಕೋಚಿಂಗ್ಗಾಗಿ ಒಂಭತ್ತು ತಿಂಗಳ ಡಿಪ್ಲೊಮಾದಲ್ಲಿದ್ದರು ಮತ್ತು ಶೇ.೭೭% ನಿಂದ ೧೯೮೩ರಲ್ಲಿ ಮುಗಿಸಿದರು.ಅವರು ಪ್ರಸ್ತುತ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಎರಡೂ ವಿವಿಧ ಆಟಗಳನ್ನು ನಡೆಸುತ್ತಿದ್ದಾರೆ,ಅವರು ಈಗ ಕೆನಡಾದಲ್ಲಿ ನೆಲೆಸಿದ್ದಾರೆ.ಅವರು ಜಮ್ಶೆಡ್ಪುರ್ ಟಾಟಾ ಸ್ಟೀಲ್ನಲ್ಲಿ ೨೦೦೨ ರವರೆಗೂ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದರು.ಅವರು ಯಾವಾಗಲೂ ಸೈಕ್ಲಿಂಗ್ಗೆ ವೈಭವವನ್ನು ತರಲು ಹೆಣಗಿದ್ದಾರೆ ಮತ್ತು ಜನರಿಗು ಹಾಗೆಯೇ ಮಾಡಲು ಪ್ರೇರೆಪಿಸಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]

[] []

  1. https://en.wikipedia.org/wiki/Amar_Singh_Sokhi
  2. https://www.hindustantimes.com/.../story-mosHEQI7cbfQTENCgYUBVN.html