ವಿಷಯಕ್ಕೆ ಹೋಗು

ಸದಸ್ಯ:Ashithapoojary

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                ಕುಂಭಕಗಳು (ಸಿರಾಮಿಕ್ಸ್)

ಕುಂಭಕಗಳೆಂದರೆ ಮಡಕೆ ಕುಡಿಕೆಗಳು ಕುಂಭಜ ಎಂಬುದು ದ್ರೋಣರ ಹೆಸರು ಸಿರಾಮಿಕ್ಸ್ ಎಂಬ ಪದವನ್ನು ಸುಟ್ಟಿ ಮಣ್ಣಿನ ಮಡಕೆ ಎಂಬುದರ್ಥ. ಸಿರಿಮೋಸ್ ಎಂಬ ಗ್ರೀಕ್ ಪದದಿಂದ ಪಡೆಯಲಾಗಿದೆ. ಹಿಂದಿನ ಕಾಲದಲ್ಲಿ ಸಿರಾಮಿಕ್ಸ್ ಎಂದರೆ ಗಡಿಗೆ ಎಂದು ತಿಳಿಯಕೊಳ್ಳಲಾಗುತ್ತಿತ್ತು, ಅವುಗಳನ್ನು ಮಣ್ಣಿನಿಂದ ಇಲ್ಲವೇ ಮಣ್ಣಿನಲ್ಲಿ ಇತರ ವಸ್ತುಗಳನ್ನು ಬೆರೆಸಿ, ಬೆಂಕಿಯಲ್ಲಿ ಕಾಯಿಸಿ ತಯರಿಸಲಾಗುತ್ತಿತ್ತು. ಈ ರೀತಿ ತಯಾರಿಸಿದ ವಸ್ತುಗಳು ಕಚ್ಚಾ ರೂಪದಲ್ಲಿದ್ದು ರಂದ್ರಯುಕ್ತವಾಗಿರುತ್ತಿದ್ದವು. ನುಣುಪಾದ ರಂದ್ರರಹಿತವಾದ ಸಿರಾಮಿಕ್ಸ್ ಗಳನ್ನು ಗ್ಲೇಜೆಂಗ್ ಮೂಲಕ ತಯಾರಿಸಲಾಗುತ್ತಿದೆ. ಸಜಲಿ ಪೇಡಿಯನ್ನು ಫಿಲ್ಲರ್ಗಳೊಂದಿಗೆ ಬೆರೆಸಿ, ಕಾಸಿ, ನಯಗೊಳಿಸಲಾಗುತ್ತದೆ. ಕುಂಭಗಳನ್ನು ಈಗ ಗೃಹ ಉಪಯೋಗಿ, ಕೈಗಾರಿಕೆ, ಗೃಹನಿರ್ಮಾಣ, ಕಲಾಕೃತಿ ವಸ್ತುಗಳಾಗಿಯು ಪರಿಗಣಿಸಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಹೊಸ ಕುಂಭಕಗಳನ್ನು ಅತ್ಯಾಧುನಿಕ ಕುಂಭಕ ತಂತ್ರಜ್ಞಾನ ಸಾಮಾಗ್ರಿಗಳಾಗಿ ಅಭಿವೃದ್ಧಿಪಡಿಸಲಾಗಿದೆ. ಉದಾಹರಣೆಗೆ ಅರೆವಾಂಕಕ ವಸ್ತುಗಳ ತಯರಿಕೆಯಲ್ಲಿ ಇವುಗಳ ಪಾತ್ರ ಇದೆ.

ಉಪಯೋಗಗಳು ೧. ವಿದ್ಯುತ್ ಹರಿಯದಂತೆ ತಡೆಯುವ ಉತ್ತಮ ಲಕ್ಷಣ ಕುಂಭಕಗಳಿಗಿದೆ. ೨. ಕುಂಭಕಗಳು ವಿದ್ಯುತ್ ಅವಾಪಕಗಳು. ೩. ವಿದ್ಯುತ್ ಸಲ್ಕರಣೆಗಳ ಉಪಯುಕ್ತ ಭಾಗವಾಗಿದೆ. ೪. ಸ್ಟೀಲ್ ಬಾಲ್ ಬೇರಿಂಗ್ ಗಳ ಬದಲಾಗಿ ಕುಂಭ ಬಾಲ್ ಬೇರಿಂಗ್ ಗಳನ್ನು ಬಳಸಬಹುದು. ೫. ಕುಂಭಕಗಳನ್ನು ಬಳಸಿ ಅನಿಲ ಟಬೈನ್ ಇಂಜಿನ್ ಗಳ ಬಿಡಿ ಭಾಗಗಳನ್ನು ಉತ್ಪಾದಿಸುವ ಕರ್ಯ ಪ್ರಗತಿಯಲ್ಲಿವೆ. ೬. ಕೃತಕ ಹಲ್ಲುಗಳನ್ನು ಅಳವಡಿಸುವುದು ಮತ್ತು ಕೃತಕ ಮೂಳ ತಯರಿಕೆಯಲ್ಲಿ ಬಳಕೆ. ೭. ಕುಂಭಕಗಳನ್ನು ಕರ ಕುಶಲ ವಸ್ತುಗಳು, ಗೃಹ ಉಪಯೋಗಿ, ಗೃಹ ನಿರ್ಮಾಣ ಕಲಾಕೃತಿಗಳಲ್ಲಿ ಬಲಸಲಾಗುತ್ತದೆ.